
ಭಾರತ ಸೇರಿದಂತೆ ವಿಶ್ವದ ಇತರ ಕೆಲವು ಭಾಗಗಳಲ್ಲಿ ಮೆಟಾ ಒಡೆತನದ ಪ್ರಸಿದ್ಧ ಅಪ್ಲಿಕೇಷನ್ ಇನ್ಸ್ಟಾಗ್ರಾಮ್ (Instagram) ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾರತೀಯ ಕಾಲ ಮಾನದ ಪ್ರಕಾರ ಇಂದು ಬೆಳಗ್ಗೆ ಸುಮಾರು 07 ಗಂಟೆ ಹೊತ್ತಿಗೆ ಇನ್ಸ್ಟಾಗ್ರಾಮ್ ಡೌನ್ (Instagram Down) ಆಗಿದೆ ಎಂದು ವರದಿಯಾಗಿದೆ. ಡೌನ್ ಡಿಟೆಕ್ಟರ್ ವೆಬ್ ಸೈಟ್ ಪ್ರಕಾರ, ಇನ್ಸ್ಟಾಗ್ರಾಮ್ ಮಾರ್ಚ್ 09, 2023 ಮುಂಜಾನೆಯಿಂದ ಸಮಸ್ಯೆಗಳನ್ನು ಎದುರಿಸುತ್ತಿದೆ. ವಿಶ್ವದಲ್ಲಿ ಸುಮಾರು 81 ಪ್ರತಿಶತ ಇನ್ಸ್ಟಾಗ್ರಾಮ್ಬಳಕೆದಾರರು ತೊಂದರೆ ಅನುಭವಿಸುತ್ತಿದ್ದಾರೆ. 15 ಪ್ರತಿಶತ ಬಳಕೆದಾರರು ಇನ್ಸ್ಟಾಗ್ರಾಮ್ವೆಬ್ ಸೈಟ್ ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. 5 ಪ್ರತಿಶತ ಬಳಕೆದಾರರು ಲಾಗಿನ್ (Login) ಆಗಲು ಪರದಾಡುತ್ತಿದ್ದಾರಂತೆ.
ಡೌನ್ಡೆಕ್ಟರ್ ಹೇಳಿರುವ ಪ್ರಕಾರ, ಅಮೆರಿಕಾದಲ್ಲಿ ಸುಮಾರು 2,000 ಬಳಕೆದಾರರು ಮತ್ತು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಸುಮಾರು 1,000 ಬಳಕೆದಾರರು ಈ ಸಮಸ್ಯೆಗೆ ಒಳಗಾಗಿದ್ದಾರೆ. ಇದರ ಬಗ್ಗೆ ಇನ್ಸ್ಟಾಗ್ರಾಮ್ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ, ಆದರೆ ಟ್ವಿಟ್ಟರ್ನಲ್ಲಿ Instagram ಡೌನ್ ಟ್ರೆಂಡ್ ಆಗಿದೆ.
ಇನ್ಸ್ಟಾ ತೆರೆಯಲು ಪ್ರಯತ್ನಿಸಿದಾಗ ಪ್ಲಾಟ್ಫಾರ್ಮ್ ಕ್ರ್ಯಾಶ್ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಜನರು ಲಾಗಿನ್ ಮಾಡಲು ಸಹ ಸಾಧ್ಯವಾಗುತ್ತಿಲ್ಲ. ಪ್ರಪಂಚದ ಹಲವಾರು ಭಾಗಗಳಲ್ಲಿ ಇನ್ಸ್ಟಾಗ್ರಾಮ್ ಡೌನ್ ಆಗುತ್ತಿದ್ದಂತೆ, ಜನರು ಟ್ವಿಟ್ಟರ್ನಲ್ಲಿ ಮೇಮ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
Published On - 10:03 am, Thu, 9 March 23