ಕಂಪ್ಯೂಟರ್ ಚಿಪ್ ತಯಾರಿಸುವಂಥ ಕಂಪೆನಿಯಾದ ಇಂಟೆಲ್ ಇಂಕ್ನಿಂದ ಕೊವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳಲು ಉತ್ತೇಜಿಸುವ ಕಾರಣಕ್ಕೆ ಪ್ರೋತ್ಸಾಹಧನದ ಘೋಷಣೆ ಮಾಡಲಾಗಿದೆ. ಈಗಲೂ ಅನೇಕರಲ್ಲಿ ಕೊವಿಡ್- 19 ಲಸಿಕೆ ಹಾಕಿಸುವುದಕ್ಕೆ ಹಿಂಜರಿಕೆ ಇದ್ದು, ಅದನ್ನು ದೂರ ಮಾಡುವ ನಿಟ್ಟಿನಲ್ಲಿ ಭಾರತವೂ ಸೇರಿದಂತೆ ವಿಶ್ವದಾದ್ಯಂತ ಇರುವ ಎಲ್ಲ ಉದ್ಯೋಗಿಗಳಿಗೆ ಬುಧವಾರ 250 ಅಮೆರಿಕನ್ ಡಾಲರ್ (ಭಾರತದ ರೂಪಾಯಿ ಲೆಕ್ಕದಲ್ಲಿ 18,598) ಪ್ರೋತ್ಸಾಹಧನವನ್ನು ಘೋಷಣೆ ಮಾಡಲಾಗಿದೆ. ಅಂದಹಾಗೆ ಕೊರೊನಾದಿಂದ ಈ ತನಕ ಲಕ್ಷಾಂತರ ಮಂದಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇಂಟೆಲ್ ಕಾರ್ಪೋರೇಶನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ಯಾಂಟ್ ಗೆಲ್ಸಿಂಗರ್, ಬುಧವಾರ ಕಳುಹಿಸಿದ ಮೇಲ್‌ನಲ್ಲಿ, 2021ರ ಡಿಸೆಂಬರ್ಗೂ ಮೊದಲು ಲಸಿಕೆ ಹಾಕಿಸಿಕೊಳ್ಳುವ ಎಲ್ಲ ಉದ್ಯೋಗಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದು ಹೇಳಿದ್ದಾರೆ.
ಅಂದಹಾಗೆ ಇಂಟೆಲ್ಗೆ ಜಾಗತಿಕವಾಗಿ ಸುಮಾರು 1,10,000 ಉದ್ಯೋಗಿಗಳಿದ್ದಾರೆ. ಭಾರತದಲ್ಲಿ ಅದರ ಒಂದು ದೊಡ್ಡ ಭಾಗವನ್ನು ಹೊಂದಿದೆ. ಬೆಂಗಳೂರಿನಲ್ಲಿ ನಾಲ್ಕು ಮತ್ತು ಹೈದರಾಬಾದಿನಲ್ಲಿ ಒಂದು ಕ್ಯಾಂಪಸ್ ಇದೆ. ಕಂಪೆನಿಯು ಭೌಗೋಳಿಕವಾಗಿ-ನಿರ್ದಿಷ್ಟ ಉದ್ಯೋಗಿಗಳ ಸಂಖ್ಯೆಯನ್ನು ಹಂಚಿಕೊಳ್ಳದಿದ್ದರೂ ಭಾರತದ ಕಚೇರಿಗಳಲ್ಲಿ 7,000 ಉದ್ಯೋಗಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ. “ಇಂಟೆಲ್ಗೆ ಪ್ರಸ್ತುತ ಉದ್ಯೋಗಿಗಳಿಗೆ ಕೊವಿಡ್-19 ಲಸಿಕೆ ಹಾಕುವ ಅಗತ್ಯವಿಲ್ಲ. ಆದರೂ ನಿಮ್ಮಲ್ಲಿ ಈಗಾಗಲೇ ಲಸಿಕೆ ಪಡೆದಿರುವವರನ್ನು ನಾವು ಪ್ರಶಂಸಿಸುತ್ತೇವೆ. ಇತರರನ್ನು ಹಾಗೆ ಮಾಡಲು ಪ್ರೋತ್ಸಾಹಿಸಲು ಬಯಸುತ್ತೇವೆ. ಸ್ಥಳೀಯ ಕಾನೂನಿಗೆ ಒಳಪಟ್ಟು, ವರ್ಷಾಂತ್ಯದ ಮೊದಲು ಲಸಿಕೆ ಹಾಕಿಸಿಕೊಂಡ ನಿಮ್ಮಲ್ಲಿ ಧನ್ಯವಾದ ಹೇಳಲು ನಾವು ಈ ಕೆಳಗಿನವುಗಳನ್ನು ನೀಡುತ್ತೇವೆ,” ಎಂದು ಗೆಲ್ಸಿಂಗರ್ ಬರೆದಿದ್ದಾರೆ.
ಈ ಅಂಶವನ್ನು ಹಿಂದೂಸ್ತಾನ್ ಟೈಮ್ಸ್ ಸ್ವತಂತ್ರವಾಗಿ ದೃಢೀಕರಿಸಿದೆ. ಇಂಟೆಲ್ ಕಂಪೆನಿಯು 250 ಯುಎಸ್ಡಿ ನೀಡುತ್ತಿದೆ. ಇದು ಭಾರತದಲ್ಲಿ ಸರಿಸುಮಾರು 18,600 ರೂಪಾಯಿವರೆಗೆ ಆಗುತ್ತದೆ. ಈಗಾಗಲೇ ಲಸಿಕೆ ಹಾಕಿಸಿಕೊಂಡವರಿಗೆ ಅಥವಾ ಇನ್ನು ಮುಂದೆ ಹಾಕಿಸಿಕೊಂಡವರಿಗೆ ಈ ಮೊತ್ತವನ್ನು ನೀಡಲಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಇಂಟೆಲ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಪ್ರತಿಕ್ರಿಯೆಗಾಗಿ ಮಾಧ್ಯಮದಿಂದ ಪ್ರಯತ್ನಿಸಿದಾಗ ಇಂಟೆಲ್ ಸಂಪರ್ಕಿಸಲು ಸಾಧ್ಯವಾಗಿಲ್ಲ. ತನ್ನ ಬಳಿ ಒಂದು ಗಂಟೆಗೆ ಇಷ್ಟು ಎಂಬ ವೇತನದ ಒಪ್ಪಂದದ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳಿಗೆ ಇಂಟೆಲ್ ಕಂಪೆನಿಯು ಆಹಾರ ವೋಚರ್‌ಗಳ ರೂಪದಲ್ಲಿ 100 ಡಾಲರ್ (ಭೌಗೋಳಿಕವಾಗಿ-ಹೊಂದಿಕೊಂಡಂತೆ) ಮೊತ್ತವನ್ನು ನೀಡುತ್ತಿದೆ ಎಂದು ಜೆಲ್ಸಿಂಗರ್ ಮೇಲ್ ಹೇಳಿದೆ.
ಖಾಸಗಿ ಉದ್ಯಮಗಳ ಬೆಂಬಲದೊಂದಿಗೆ ಲಸಿಕೆ ವ್ಯಾಪ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಕರ್ನಾಟಕಕ್ಕೆ ಇಂಥ ಪ್ರೋತ್ಸಾಹಕವು ಒಂದು ಹೊಡೆತವಾಗಿದೆ. ಕರ್ನಾಟಕ ಸರ್ಕಾರವು ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳು (ಹೈ ನೆಟ್ವರ್ತ್ ಇಂಡುವಿಷ್ಯುವಲ್ಸ್) ಮತ್ತು ದೊಡ್ಡ ಸಂಸ್ಥೆಗಳನ್ನು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯ ಮೂಲಕ ಲಸಿಕೆಗಳ ಖರೀದಿಗಾಗಿ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಲು, ಕೊರೊನಾ ಮೂರನೇ ಅಲೆಯ ಸಮೀಪದಲ್ಲಿ ಅದರ ಪರಿಣಾಮವನ್ನು ತಗ್ಗಿಸಲು ಆಡಳಿತಕ್ಕೆ ನೆರವು ನೀಡುವಂತೆ ಮನವಿ ಮಾಡಿದೆ.
ಇದನ್ನೂ ಓದಿ: Microsoft: ಮೈಕ್ರೋಸಾಫ್ಟ್ ಪ್ರತಿ ಸಿಬ್ಬಂದಿಗೆ 1 ಲಕ್ಷ ರೂ.ಗೂ ಹೆಚ್ಚು ಬೋನಸ್ ಘೋಷಣೆ; ಇದಕ್ಕಾಗಿ 1480 ಕೋಟಿ ರೂ. ವೆಚ್ಚ