TV9 Life Style Expo 2021: ಟಿವಿ9 ಆಯೋಜಿಸಿರುವ ಲೈಫ್‌ಸ್ಟೈಲ್‌ ಮೆಗಾ ಎಕ್ಸ್‌ಪೋಗೆ ಎಲ್ಲರಿಗೂ ಉಚಿತ ಪ್ರವೇಶ! ಬಂಪರ್‌ ಆಫರ್​​ಗಳು

ಟಿವಿ9 ಲೈಫ್‌ಸ್ಟೈಲ್‌, ಆಟೋಮೊಬೈಲ್‌ ಹಾಗೂ ಫರ್ನೀಚರ್‌ ಎಕ್ಸ್‌ಪೋಗೆ ಇಂದು ಮಧ್ಯಾಹ್ನ 2 ಗಂಟೆಗೆ ನಟಿ ಅದಿತಿ ಪ್ರಭುದೇವ ಚಾಲನೆ ನೀಡಲಿದ್ದಾರೆ. ಕೊವಿಡ್‌ ಮಾರ್ಗಸೂಚಿ ಪಾಲಿಸುತ್ತಾ ಟಿವಿ9 ಆಯೋಜಿಸಿರುವ ಈ ಮೆಗಾ ಎಕ್ಸ್‌ಪೋಗೆ ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ.

TV9 Life Style Expo 2021: ಟಿವಿ9 ಆಯೋಜಿಸಿರುವ ಲೈಫ್‌ಸ್ಟೈಲ್‌ ಮೆಗಾ ಎಕ್ಸ್‌ಪೋಗೆ ಎಲ್ಲರಿಗೂ ಉಚಿತ ಪ್ರವೇಶ! ಬಂಪರ್‌ ಆಫರ್​​ಗಳು
TV9 Life Style Expo 2021: ಟಿವಿ9 ಆಯೋಜಿಸಿರುವ ಲೈಫ್‌ ಸ್ಟೈಲ್‌ ಮೆಗಾ ಎಕ್ಸ್‌ಪೋಗೆ ಎಲ್ಲರಿಗೂ ಉಚಿತ ಪ್ರವೇಶ! ಬಂಪರ್‌ ಆಫರ್​ಗಳು
Updated By: ಸಾಧು ಶ್ರೀನಾಥ್​

Updated on: Aug 20, 2021 | 8:58 AM

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ವರ ಮಹಾಲಕ್ಷ್ಮೀ ಹಬ್ಬದ ದಿನವಾದ ಇಂದಿನಿಂದ ಮೂರು ದಿನಗಳ ಕಾಲ ಮೆಗಾ ಷಾಪಿಂಗ್ ಸಂಭ್ರಮ. ನಾಡಿನ ಹೆಮ್ಮೆಯ ಟಿವಿ ಚಾನೆಲ್​​ ಟಿವಿ9 ಪ್ರಾಯೋಜಿಸುತ್ತಿರುವ 5ನೆಯ ಅತಿ ದೊಡ್ಡ ಲೈಫ್‌ಸ್ಟೈಲ್‌, ಆಟೋಮೊಬೈಲ್ ಹಾಗೂ ಫರ್ನೀಚರ್‌ ಎಕ್ಸ್‌ಪೋ 2021 ಇದಾಗಿದೆ (TV9 Life Style Expo 2021).

ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನಲ್ಲಿರುವ ತ್ರಿಪುರವಾಸಿನಿ ಹಾಲ್‌ನಲ್ಲಿ ಇಂದಿನಿಂದ 3 ದಿನಗಳ ಕಾಲ (August 20th, 21st 22nd ) ಎಕ್ಸ್‌ಪೋ ಆಯೋಜಿಸಲಾಗಿದೆ. ಮೊಬೈಲ್ಸ್‌, ಟಿವಿ, ಎಸಿ ಸೇರಿ ಎಲೆಕ್ಟ್ರಾನಿಕ್ಸ್‌ ಉಪಕರಣಗಳು, ಗೃಹೋಪಯೋಗಿ ಸಲಕರಣೆಗಳ ಖರೀದಿ, ಮಾರಾಟಕ್ಕೆ ಭರ್ಜರಿ ಅವಕಾಶ ಕಲ್ಪಿಸಲಾಗಿದೆ.

ಲೈಫ್‌ಸ್ಟೈಲ್‌ ಸೇರಿದಂತೆ ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಟೂ ವೀಲರ್ಸ್‌, ಫೋರ್‌ ವೀಲರ್ಸ್‌ ಸೇರಿದಂತೆ ನೂರಾರು ಬ್ರ್ಯಾಂಡ್‌ ಕಂಪನಿಗಳು ಟಿವಿ9 ಎಕ್ಸ್‌ಪೋದಲ್ಲಿ (Tripuravasini at palace grounds) ಭಾಗವಹಿಸುತ್ತಿವೆ. ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಬಂಪರ್‌ ಆಫರ್‌ಗಳನ್ನೂ ನೀಡಲಾಗ್ತಿದೆ. ಟಿವಿ9 ಲೈಫ್‌ಸ್ಟೈಲ್‌, ಆಟೋಮೊಬೈಲ್‌ (TV9 Automobile Expo 2021) ಹಾಗೂ ಫರ್ನೀಚರ್‌ ಎಕ್ಸ್‌ಪೋಗೆ (TV9 Furniture Expo 2021) ಇಂದು ಮಧ್ಯಾಹ್ನ 2 ಗಂಟೆಗೆ ನಟಿ ಅದಿತಿ ಪ್ರಭುದೇವ ಚಾಲನೆ ನೀಡಲಿದ್ದಾರೆ. ಕೊವಿಡ್‌ ಮಾರ್ಗಸೂಚಿ ಪಾಲಿಸುತ್ತಾ ಟಿವಿ9 ಆಯೋಜಿಸಿರುವ ಈ ಮೆಗಾ ಎಕ್ಸ್‌ಪೋಗೆ ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ.

(TV9 Lifestyle Automobile Furniture Expo 2021 From 20th, 21st 22nd August at Palace Grounds)

Published On - 8:53 am, Fri, 20 August 21