Bajaj Finserv: ಆರ್ಥಿಕ ಬೆಳವಣಿಗೆಯ ಹೊಸ ಅಲೆಗೆ ಹಣಕಾಸು ಪರಿವರ್ತನೆಯ ಶಕ್ತಿ- ಬಜಾಬ್ ಫಿನ್​ಸರ್ವ್

Bajaj Finserv Asset Management Ltd's Equity head Sorbh Gupta writes: ಭಾರತದ ಆರ್ಥಿಕ ಪರಿವರ್ತನೆಯಲ್ಲಿ BFSI ವಲಯವು ಪ್ರಮುಖವಾಗಿದೆ. ಕಳೆದ 5 ವರ್ಷಗಳಲ್ಲಿ ಸಾಲ ವಿತರಣೆಯಲ್ಲಿ 85% ಮತ್ತು UPI ವಹಿವಾಟಿನಲ್ಲಿ 5 ಪಟ್ಟು ಹೆಚ್ಚಳ ಡಿಜಿಟಲ್ ಬೆಳವಣಿಗೆಯನ್ನು ತೋರಿಸುತ್ತದೆ. ಸಾಂಪ್ರದಾಯಿಕ ಬ್ಯಾಂಕಿಂಗ್ ಮೀರಿ ಬೆಳೆದ ಈ ಕ್ಷೇತ್ರ, ಹೂಡಿಕೆದಾರರಿಗೆ ದೀರ್ಘಾವಧಿ ಸಂಪತ್ತು ಸೃಷ್ಟಿಸಲು ಉತ್ತಮ ಅವಕಾಶಗಳನ್ನು ನೀಡುತ್ತದೆ. ಬಜಾಜ್ ಫಿನ್‌ಸರ್ವ್‌ನ ಹೊಸ ಫಂಡ್ ಈ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಹಕಾರಿಯಾಗಿದೆ.

Bajaj Finserv: ಆರ್ಥಿಕ ಬೆಳವಣಿಗೆಯ ಹೊಸ ಅಲೆಗೆ ಹಣಕಾಸು ಪರಿವರ್ತನೆಯ ಶಕ್ತಿ- ಬಜಾಬ್ ಫಿನ್​ಸರ್ವ್
ಸೌರಭ್ ಗುಪ್ತ

Updated on: Nov 24, 2025 | 4:16 PM

ಭಾರತದ ಆರ್ಥಿಕ ಪರಿವರ್ತನೆಗೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ವಲಯವು ಪ್ರಮುಖ ಆಧಾರಸ್ತಂಭವಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಈ ಕ್ಷೇತ್ರವು ಬಂಡವಾಳ ಪಡೆಯಬಲ್ಲ, ಸಮಗ್ರ ಬೆಳವಣಿಗೆಗೆ ಪುಷ್ಟಿ ಕೊಡಬಲ್ಲ ಸಾಮರ್ಥ್ಯ ತೋರಿದೆ. ಭಾರತದ ದೀರ್ಘಾವಧಿ ಸಮೃದ್ಧಿಗೆ ಒಳ್ಳೆಯ ಬುನಾದಿ ಹಾಕಲು ನೆರವಾಗುತ್ತಿದೆ.

ಆದ್ಯತಾ ವಲಯಗಳಲ್ಲಿ ಸಾಲ ವಿತರಣೆಯಲ್ಲಿ ಗಣನೀಯವಾಗಿ ಏರಿಕೆ ಆಗಿರುವುದು ಪ್ರಗತಿಯ ಪ್ರಮುಖ ಸೂಚಕವಾಗಿದೆ. 2019ರಿಂದ 2024ರವರೆಗೂ ಸಾಲ ವಿತರಣೆ 23 ಲಕ್ಷ ಕೋಟಿ ರೂನಿಂದ 42.7 ಲಕ್ಷ ರೂಗೆ ಏರಿದೆ. ಐದು ವರ್ಷದಲ್ಲಿ ಸಾಲ ವಿತರಣೆಯಲ್ಲಿ ಶೇ. 85ರಷ್ಟು ಏರಿದೆ. ಬಂಡವಾಳ ಹರಿವು ಎಷ್ಟು ಮಹತ್ವ ಎಂದು ಸಂಖ್ಯೆಯಿಂದಷ್ಟೇ ಅಲ್ಲ, ಅದು ಉದ್ಯಮಶೀಲತೆ, ಕೃಷಿ, ಸಣ್ಣ ಉದ್ದಿಮೆಗಳ ಬೆಳವಣಿಗೆಗೆ ಎಂಥ ಉಪಯುಕ್ತ ಎಂಬುದರಿಂದ ತಿಳಿಯಬಹುದು. ಹಾಗೆಯೇ, ಯುಪಿಐ ವಹಿವಾಟು ಮೌಲ್ಯ 2020-21ರಲ್ಲಿ 41 ಲಕ್ಷ ಕೋಟಿ ರೂ ಇದ್ದದ್ದು 2024-25ರಲ್ಲಿ 236 ಲಕ್ಷ ಕೋಟಿ ರೂಗೆ ಏರಿದೆ. ಐದು ವರ್ಷದಲ್ಲಿ ಐದು ಪಟ್ಟು ಟ್ರಾನ್ಸಾಕ್ಷನ್ ಹೆಚ್ಚಾಗಿದೆ. ಕೋಟ್ಯಂತರ ಜನರ ಹಣಕಾಸು ಕಾರ್ಯಗಳ ಮೇಲೆ ತಂತ್ರಜ್ಞಾನ ಹೇಗೆ ಪ್ರಭಾವ ಬೀರುತ್ತಿದೆ ಎಂಬುದನ್ನು ತಿಳಿಯಬಹುದು.

ಈ ಯುಪಿಐ ಟ್ರಾನ್ಸಾಕ್ಷನ್ ಸಂಖ್ಯೆಯು ಕೇವಲ ಹಣಕಾಸು ವಹಿವಾಟುಗಳು ಮಾತ್ರವೇ ಅಲ್ಲ, ಜೀವನ ಗುಣಮಟ್ಟ ಸುಧಾರಿಸಬಲ್ಲಂತಹ ಸಬಲೀಕರಣ, ಅವಕಾಶ ಮತ್ತು ಶಕ್ತಿಯ ಸಂಕೇತವಾಗಿದೆ ಎಂದು ಬಜಾಜ್ ಫಿನ್​ಸರ್ವ್ ಅಸೆಟ್ ಮ್ಯಾನೇಜ್ಮೆಂಟ್ ಲಿಮಿಟೆಡ್​ನ ಈಕ್ವಿಟಿ ಮುಖ್ಯಸ್ಥರಾದ ಸೌರಭ್ ಗುಪ್ತ ಹೇಳುತ್ತಾರೆ.

ಸೋರಭ್ ಮುಂದುವರಿಸುತ್ತಾರೆ, BFSI ಕ್ಷೇತ್ರವು ಈಗ ಸಾಂಪ್ರದಾಯಿಕ ಬ್ಯಾಂಕಿಂಗ್‌ಗೆ ಮಾತ್ರ ಸೀಮಿತವಾಗಿಲ್ಲ. ಇದರಲ್ಲಿ ಈಗ ನಾನ್-ಬ್ಯಾಂಕಿಂಗ್ ಹಣಕಾಸು ಕಂಪನಿಗಳು, ವಿಮೆ, ಬಂಡವಾಳ ಮಾರುಕಟ್ಟೆ ಮತ್ತು ಆಸ್ತಿ ನಿರ್ವಹಣೆ (ಅಸೆಟ್ ಮ್ಯಾನೇಜ್ಮೆಂಟ್) ಸೇರಿವೆ. ಈ ಪ್ರತಿಯೊಂದೂ ಕೂಡ ಹಣಕಾಸು ಸ್ಥಿರತೆ ಮತ್ತು ದೀರ್ಘಕಾಲೀನ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ. ಬಲವಾದ ಆದಾಯ ವೃದ್ಧಿ ಮತ್ತು ಹೆಚ್ಚುತ್ತಿರುವ ಬಳಕೆಯಿಂದ ಬೆಂಬಲಿತವಾಗಿ ಆರ್ಥಿಕತೆ 2026 ಕಡೆಗೆ ಬಲವಾದ ವೇಗದಲ್ಲಿ ಸಾಗುತ್ತಿರುವಂತೆ, BFSI ಈ ಪರಿವರ್ತನೆಯ ಮುಂಚೂಣಿಯಲ್ಲಿ ಉಳಿಯುತ್ತದೆ ಎಂದು ಸೌರಭ್ ಗುಪ್ತಾ ಅವರು ಹೇಳುತ್ತಾರೆ.

ಸೌರಭ್ ಗುಪ್ತ ಅವರ ಪ್ರಕಾರ, ಬಿಎಫ್​ಎಸ್​ಐ ಸೆಕ್ಟರ್​ನ ದೀರ್ಘಕಾಲೀನ ಸಾಮರ್ಥ್ಯವನ್ನು ಬಳಸಿಕೊಳ್ಳಲು ರೂಪಿಸಲಾದ ಬಜಾಜ್ ಫಿನ್‌ಸರ್ವ್ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ನಿಧಿಗೆ ಒಂದು ಅವಕಾಶವನ್ನು ಇದು ಸೂಚಿಸುತ್ತದೆ. UPI ಅಳವಡಿಕೆ, ಡಿಜಿಟಲ್ ಸಾಲ, ಜನಧನ್ ಉಪಕ್ರಮಗಳು ಮತ್ತು NBFCಗಳು, ಮ್ಯೂಚುವಲ್ ಫಂಡ್ಗಳು ಮತ್ತು ವಿಮೆಯಲ್ಲಿ ಹೆಚ್ಚುತ್ತಿರುವ ಪಾಲ್ಗೊಳ್ಳುವಿಕೆಗಳಂತಹ ಮೆಗಾಟ್ರೆಂಡ್‌ಗಳಿಂದ ಬೆಂಬಲಿತವಾಗಿ, ಬಜಾಜ್ ಫಿನ್‌ಸರ್ವ್ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ನಿಧಿಯು ಹೆಚ್ಚಿನ ರಿಸ್ಕ್ ಟಾಲರೆನ್ಸ್ ಹೊಂದಿರುವ ಮತ್ತು ದೀರ್ಘಕಾಲೀನ ಸಂಪತ್ತು ಸೃಷ್ಟಿಸಲು ಬಯಸುವ ಹೂಡಿಕೆದಾರರಿಗೆ ವಿನ್ಯಾಸಗೊಳಿಸಲಾಗಿದೆ. ಬ್ಯಾಂಕಿಂಗ್, ಎನ್​ಬಿಎಫ್​ಸಿ, ಇನ್ಷೂರೆನ್ಸ್, ಕ್ಯಾಪಿಟಲ್ ಮಾರ್ಕೆಟ್ ಮಧ್ಯವರ್ತಿ, ಫಿನ್​ಟೆಕ್, ಅಸೆಟ್ ಮ್ಯಾನೇಜ್ಮೆಂಟ್ ಸೆಕ್ಟರ್​ಗಳಿಮದ 180-200 ಮೆಗಾಟ್ರೆಂಡ್ ಪ್ರಭಾವಿತ ಕಂಪನಿಗಳ ಪೈಕಿ 45-60 ಕಂಪನಿಗಳನ್ನು ಆಯ್ಕೆ ಮಾಡಿಕೊಂಡು ಅವುಗಳಲ್ಲಿ ಈ ಫಂಡ್ ಹೂಡಿಕೆ ಮಾಡುತ್ತದೆ.

ಕಂಪನಿಯು ತನ್ನದೇ ವಿಶೇಷವಾದ InQuBe ಹೂಡಿಕೆ ನೀತಿಯನ್ನು ಅನುಸರಿಸುತ್ತದೆ. ದತ್ತಾಂಶ ಹಾಗೂ ವರ್ತನೀಯ ಒಳನೋಟಗಳನ್ನು ಬಳಸುವ ಈ ನೀತಿಯನ್ನು ಬಳಸುವ ಕಂಪನಿಯ ಫಂಡ್ ಲಾಂಗ್-ಟರ್ಮ್ ಆಲ್ಫಾವನ್ನು ಪ್ರಸ್ತುತಪಡಿಸುವ ಗುರಿ ಹೊಂದಿದೆ. ಮನುಷ್ಯನ ತಿಳಿವಳಿಕೆ ಮತ್ತು ತಂತ್ರಜ್ಞಾನ ಪ್ರೇರಿತ ನಿರ್ಧಾರ ಜಾಣ್ಮೆ ಎರಡೂ ಕೂಡ ಈ ನೀತಿಯಲ್ಲಿ ಅಡಕವಾಗಿರುತ್ತದೆ.

ಭಾರತದ ನಾಮಿನಲ್ ಜಿಡಿಪಿ ವಿಸ್ತರಿಸಿದಂತೆ, ಮತ್ತು ಗೃಹ ಆಸ್ತಿ ಹೆಚ್ಚಿದಂತೆ ದೀರ್ಘಾವಧಿ ಸುಸ್ತಿರ ಮೌಲ್ಯ ವೃದ್ಧಿಯಲ್ಲಿ ಬಿಎಫ್​ಎಸ್​ಐ ಸೆಕ್ಟರ್ ಮುಂಚೂಣಿಯಲ್ಲಿ ನಿಲ್ಲುತ್ತದೆ. ನಿಯಮಗಳ ಸುಧಾರಣೆ, ಡಿಜಿಟಲ್ ಅಳವಡಿಕೆ ಮತ್ತು InQuBe ನಂತಹ ನಾವೀನ್ಯತೆಯ ಫಂಡ್ ಮ್ಯಾನೇಜ್ಮೆಂಟ್​ನಿಂದಾಗಿ ಬ್ಯಾಂಕಿಂಗ್ ಮತ್ತು ಫೈನಾನ್ಷಿಯಲ್ ಸರ್ವಿಸಸ್ ಸೆಕ್ಟರ್ ಹೂಡಿಕೆದಾರರಿಗೆ ಆಸ್ತಿ ವೃದ್ಧಿಗೆ ಪ್ರಮುಖ ಶಕ್ತಿ ಎನಿಸಿದೆ.

(ಗಮನಿಸಿ: ಇದು ಪ್ರಾಯೋಜಿತ ಲೇಖನ)