ತತ್ವ್ ಚಿಂತನ್ ಐಪಿಒ ಹೂಡಿಕೆದಾರರ ಸಂಪತ್ತು ಲಿಸ್ಟಿಂಗ್ ದಿನವೇ ಡಬಲ್; 1083 ರೂ.ಗೆ ವಿತರಿಸಿದ್ದು ದಿನದ ಕೊನೆಗೆ 2310 ರೂ.

| Updated By: Srinivas Mata

Updated on: Jul 29, 2021 | 7:09 PM

2021ರಲ್ಲಿ ಲಿಸ್ಟಿಂಗ್ ಆದ ಕಂಪೆನಿಗಳಲ್ಲೇ ಅದ್ಭುತ ಗಳಿಕೆ ದಾಖಲಿಸಿದೆ ಸ್ಪೆಷಾಲ್ಟಿ ಕೆಮಿಕಲ್ ಕಂಪೆನಿ ತತ್ವ ಚಿಂತನ್ ಫಾರ್ಮಾ ಕೆಮ್. ಗುರುವಾರದಂದು (ಜುಲೈ 29, 2021) ತತ್ವ್​ ಚಿಂತನ್ ಈ ವರ್ಷದ ಮೂರನೇ ಕಂಪೆನಿಯಾಗಿದ್ದು, ಲಿಸ್ಟಿಂಗ್​ ದಿನವೇ ಹೂಡಿಕೆ ಸಂಪತ್ತು ದುಪ್ಪಟ್ಟಾಗಿದೆ. ಇತರ ಎರಡು ಕಂಪೆನಿಗಳೆಂದರೆ ಜಿಆರ್​ ಇನ್​ಫ್ರಾಪ್ರಾಜೆಕ್ಟ್ಸ್​ ಶೇ 108.7 ಹಾಗೂ ಇಂಡಿಗೋ ಪೇಂಟ್ಸ್ ಶೇ 109.31ರಷ್ಟು ಏರಿಕೆ ಆಗಿತ್ತು. ಬಿಎಸ್​ಇಯಲ್ಲಿ ತತ್ವ್ ಚಿಂತನ್ ಷೇರು ದಿನಾಂತ್ಯಕ್ಕೆ ರೂ. 2310.25ಕ್ಕೆ ಕೊನೆಯಾಗಿದೆ. ಈ ಷೇರನ್ನು ತಲಾ 1,083 […]

ತತ್ವ್ ಚಿಂತನ್ ಐಪಿಒ ಹೂಡಿಕೆದಾರರ ಸಂಪತ್ತು ಲಿಸ್ಟಿಂಗ್ ದಿನವೇ ಡಬಲ್; 1083 ರೂ.ಗೆ ವಿತರಿಸಿದ್ದು ದಿನದ ಕೊನೆಗೆ 2310 ರೂ.
ಲಾಭದ ನಗದು
Follow us on

2021ರಲ್ಲಿ ಲಿಸ್ಟಿಂಗ್ ಆದ ಕಂಪೆನಿಗಳಲ್ಲೇ ಅದ್ಭುತ ಗಳಿಕೆ ದಾಖಲಿಸಿದೆ ಸ್ಪೆಷಾಲ್ಟಿ ಕೆಮಿಕಲ್ ಕಂಪೆನಿ ತತ್ವ ಚಿಂತನ್ ಫಾರ್ಮಾ ಕೆಮ್. ಗುರುವಾರದಂದು (ಜುಲೈ 29, 2021) ತತ್ವ್​ ಚಿಂತನ್ ಈ ವರ್ಷದ ಮೂರನೇ ಕಂಪೆನಿಯಾಗಿದ್ದು, ಲಿಸ್ಟಿಂಗ್​ ದಿನವೇ ಹೂಡಿಕೆ ಸಂಪತ್ತು ದುಪ್ಪಟ್ಟಾಗಿದೆ. ಇತರ ಎರಡು ಕಂಪೆನಿಗಳೆಂದರೆ ಜಿಆರ್​ ಇನ್​ಫ್ರಾಪ್ರಾಜೆಕ್ಟ್ಸ್​ ಶೇ 108.7 ಹಾಗೂ ಇಂಡಿಗೋ ಪೇಂಟ್ಸ್ ಶೇ 109.31ರಷ್ಟು ಏರಿಕೆ ಆಗಿತ್ತು. ಬಿಎಸ್​ಇಯಲ್ಲಿ ತತ್ವ್ ಚಿಂತನ್ ಷೇರು ದಿನಾಂತ್ಯಕ್ಕೆ ರೂ. 2310.25ಕ್ಕೆ ಕೊನೆಯಾಗಿದೆ. ಈ ಷೇರನ್ನು ತಲಾ 1,083 ರೂಪಾಯಿಗೆ ವಿತರಿಸಲಾಗಿದ್ದು, ಅದಕ್ಕಿಂತ 1,227.25 ರೂಪಾಯಿ ಏರಿಕೆ ಆಗಿದೆ. ಇನ್ನು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಷೇರಿನ ಬೆಲೆ ಶೇ 113.50ರಷ್ಟು ಏರಿಕೆ ಆಗಿದ್ದು, ದಿನದ ಕೊನೆಗೆ 2,312.20 ರೂಪಾಯಿಯೊಂದಿಗೆ ವ್ಯವಹಾರ ಮುಗಿಸಿದೆ. ದಿನದ ಗರಿಷ್ಠ ಮಟ್ಟ ಶೇ 20ರಷ್ಟು ಮೇಲ್​ಸ್ತರದ ಮೊತ್ತವಾದ 2,534.20 ರೂಪಾಯಿ ಮುಟ್ಟಿತ್ತು.

ಎನ್​ಎಸ್​ಇಯಲ್ಲಿ ತತ್ವ್ ಚಿಂತನ್ 78.60 ಲಕ್ಷ ಈಕ್ವಿಟಿ ಷೇರುಗಳು ವಹಿವಾಟಾಗಿದ್ದು, ಬಿಎಸ್​ಇಯಲ್ಲಿ 8.99 ಲಕ್ಷ ಷೇರುಗಳು ಬಿಎಸ್​ಇಯಲ್ಲಿ ಕೈ ಬದಲಾಗಿವೆ. ಜುಲೈ 16ರಿಂದ 20ನೇ ತಾರೀಕಿನ ಮಧ್ಯೆ ಐಪಿಒ ಸಬ್​ಸ್ಕ್ರಿಪ್ಷನ್ ತೆರೆದಿತ್ತು. ಈಗ ಷೇರು ವಿತರಣೆಯಿಂದ ಸಂಗ್ರಹವಾದ 225 ಕೋಟಿ ರೂಪಾಯಿಯನ್ನು ದಹೇಜ್ ಉತ್ಪಾದನಾ ಫೆಸಿಲಿಟಿಯ ವಿಸ್ತರಣೆ ಮತ್ತು ವಡೋದರಾದಲ್ಲಿನ ಆರ್​ ಅಂಡ್ ಡಿ ಫೆಸಿಲಿಟಿಯನ್ನು ಮೇಲ್ದರ್ಜೆಗೆ ಏರಿಸುವುದಕ್ಕೆ ಬಳಸಲಾಗುತ್ತದೆ. ಈ ಕಂಪೆನಿಯು ಗುಜರಾತ್​ನ ಅಂಕ್ಲೇಶ್ವರ್ ಮತ್ತು ದಹೇಜ್​ನಿಂದ ಕಾರ್ಯ ನಿರ್ವಹಣೆ ಮಾಡುತ್ತದೆ.

ಈ ಕಂಪೆನಿಯಿಂದ ಯುಎಸ್​ ಮತ್ತು ನೆದರ್ಲೆಂಡ್ಸ್​ನಲ್ಲಿ ಮಾರ್ಕೆಟಿಂಗ್ ಹಾಗೂ ವಿತರಣಾ ಸಂಸ್ಥೆಗಳನ್ನು ಹೊಂದಲಾಗಿದೆ. ಇವುಗಳ ಮೂಲಕವಾಗಿ ಚೀನಾ, ಜರ್ಮನಿ, ಜಪಾನ್, ದಕ್ಷಿಣ ಆಫ್ರಿಕಾ ಹಾಗೂ ಯು.ಕೆ. ಸೇರಿದಂತೆ 25 ದೇಶಗಳು ಹಾಗೂ ದೇಶೀ ಬೇಡಿಕೆಯನ್ನು ಪೂರೈಸಲಾಗುತ್ತದೆ. ತತ್ವ ಚಿಂತನ್ ನಡೆಸುವಂಥದ್ದೇ ಉದ್ಯಮ ನಡೆಸುವಂಥವು ಮಾರುಕಟ್ಟೆಯಲ್ಲಿ ಎರಡು ಅಥವಾ ಮೂರು ಮಾತ್ರ ಇವೆ. ಆದ್ದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅವಕಾಶಗಳ ಅನ್ವೇಷಣೆ ಮತ್ತು ವಿಸ್ತರಣೆಗೆ ಬಹಳ ಸಾಧ್ಯತೆಗಳಿವೆ ಎನ್ನುತ್ತಾರೆ ವಿಶ್ಲೇಷಕರು.

ಇದನ್ನೂ ಓದಿ: Glenmark Life Sciences IPO: ಗ್ಲೆನ್​ಮಾರ್ಕ್​ ಲೈಫ್​ ಸೈನ್ಸಸ್ ಐಪಿಒ ಜುಲೈ 27ರಿಂದ ಆರಂಭ

(Investors Wealth Double In Tatva Chintan Chem Listing Rs 1083 Issue Price Become Rs 2310 On Day End)