AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cognizant attrition: ಕಾಗ್ನಿಜಂಟ್ ಕಂಪೆನಿಯಿಂದ ಜೂನ್ ತ್ರೈಮಾಸಿಕದಲ್ಲಿ ಕೆಲಸ ಬಿಟ್ಟವರ ಪ್ರಮಾಣ ಶೇ 31ಕ್ಕೆ

ಕಾಗ್ನಿಜಂಟ್ ಕಂಪೆನಿ ಹೇಳಿರುವ ಪ್ರಕಾರ, ಅದರ ತ್ರೈಮಾಸಿಕದ ವಾರ್ಷಿಕ attrition (ಕೆಲಸ ಬಿಡುವವರ) ಪ್ರಮಾಣ ಎರಡನೇ ತ್ರೈಮಾಸಿಕದಲ್ಲಿ ದಾಖಲೆಯ ಶೇ 31ರಷ್ಟು ತಲುಪಿದೆ. ಕಳೆದ ತ್ರೈಮಾಸಿಕದಲ್ಲಿ ಈ ಪ್ರಮಾಣ ಶೇ 21ರಷ್ಟಿತ್ತು. ಆದರೆ ಭಾರತದಲ್ಲಿ ಜೂನಿಯರ್ ಮತ್ತು ಮಿಡ್- ಸೀನಿಯರ್ ಹಂತದ ಸಾವಿರಾರು ಸಿಬ್ಬಂದಿ ಉದ್ಯೋಗವನ್ನು ಬಿಡುವುದು ಜಾಸ್ತಿ ಆಗಿದೆ. ಅಮದ ಹಾಗೆ ಎಲ್ಲ ಐ.ಟಿ. ಸರ್ವೀಸಸ್ ಕಂಪೆನಿಗಳಲ್ಲೂ ಜೂನ್ ತ್ರೈಮಾಸಿಕದ ಕೊನೆಯ ಲೆಕ್ಕಾಚಾರದಲ್ಲಿ ಕೆಲಸ ಬಿಡುವವರ ಪ್ರಮಾಣ ಜಾಸ್ತಿ ಆಗಿದೆ. ಆ ಕಾರಣಕ್ಕೆ ಎಂಜಿನಿಯರಿಂಗ್ ಪ್ರತಿಭೆಗಳು, […]

Cognizant attrition: ಕಾಗ್ನಿಜಂಟ್ ಕಂಪೆನಿಯಿಂದ ಜೂನ್ ತ್ರೈಮಾಸಿಕದಲ್ಲಿ ಕೆಲಸ ಬಿಟ್ಟವರ ಪ್ರಮಾಣ ಶೇ 31ಕ್ಕೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jul 30, 2021 | 10:23 AM

Share

ಕಾಗ್ನಿಜಂಟ್ ಕಂಪೆನಿ ಹೇಳಿರುವ ಪ್ರಕಾರ, ಅದರ ತ್ರೈಮಾಸಿಕದ ವಾರ್ಷಿಕ attrition (ಕೆಲಸ ಬಿಡುವವರ) ಪ್ರಮಾಣ ಎರಡನೇ ತ್ರೈಮಾಸಿಕದಲ್ಲಿ ದಾಖಲೆಯ ಶೇ 31ರಷ್ಟು ತಲುಪಿದೆ. ಕಳೆದ ತ್ರೈಮಾಸಿಕದಲ್ಲಿ ಈ ಪ್ರಮಾಣ ಶೇ 21ರಷ್ಟಿತ್ತು. ಆದರೆ ಭಾರತದಲ್ಲಿ ಜೂನಿಯರ್ ಮತ್ತು ಮಿಡ್- ಸೀನಿಯರ್ ಹಂತದ ಸಾವಿರಾರು ಸಿಬ್ಬಂದಿ ಉದ್ಯೋಗವನ್ನು ಬಿಡುವುದು ಜಾಸ್ತಿ ಆಗಿದೆ. ಅಮದ ಹಾಗೆ ಎಲ್ಲ ಐ.ಟಿ. ಸರ್ವೀಸಸ್ ಕಂಪೆನಿಗಳಲ್ಲೂ ಜೂನ್ ತ್ರೈಮಾಸಿಕದ ಕೊನೆಯ ಲೆಕ್ಕಾಚಾರದಲ್ಲಿ ಕೆಲಸ ಬಿಡುವವರ ಪ್ರಮಾಣ ಜಾಸ್ತಿ ಆಗಿದೆ. ಆ ಕಾರಣಕ್ಕೆ ಎಂಜಿನಿಯರಿಂಗ್ ಪ್ರತಿಭೆಗಳು, ಅದರಲ್ಲೂ ಡಿಜಿಟಲ್ ಕೌಶಲ ಇರುವವರಿಗೆ ಬೇಡಿಕೆ ತುಂಬ ಜಾಸ್ತಿ ಆಗಿದೆ. ಇನ್ನು ಇಲ್ಲಿ ಗೊತ್ತಾಗಬೇಕಾದ ಸಂಗತಿ ಏನಂದರೆ, ಪ್ರತಿಭೆಗಳ ಪೂರೈಕೆಗಿಂತ ಬೇಡಿಕೆ ಸಿಕ್ಕಾಪಟ್ಟೆ ಜಾಸ್ತಿ ಇದೆ. ಆ ಕಾರಣಕ್ಕೆ ಅಮತೋಲನ ಆಗುತ್ತಿದೆ.

ಪ್ರತಿಭೆಗಳಿಗಾಗಿ ಕದನ ಈ ವರ್ಷದ ಬಾಕಿ ಅವಧಿಗೂ ಮುಂದುವರಿಯುವ ಎಲ್ಲ ಸಾಧ್ಯತೆಗಳಿವೆ. ಆದರೆ ಕಾಗ್ನಿಜಂಟ್ ಕಂಪೆನಿಯ ಈಗಿನ ಸಂಖ್ಯೆಯು ಅದರದೇ ವಲಯದ ಉಳಿದೆಲ್ಲ ಕಂಪೆನಿಗಳಿಗಿಂತ ಬಹಳ ಹೆಚ್ಚಿದೆ. ಈ ಸ್ಥೂಲವಾದ ಬೇಡಿಕೆ ಹಿನ್ನೆಲೆಯಲ್ಲಿ ಪ್ರಮುಖ ಕೌಶಲಗಳ ಬೇಡಿಕೆ ಮತ್ತು ಪೂರೈಕೆಯ ಅಸಮತೋಲನಕ್ಕೆ ಕಾರಣವಾಗಿದೆ. ಐ.ಟಿ. ವಲಯದಲ್ಲಿ ಕೆಲಸ ಬಿಡುವವರ ಪ್ರಮಾಣ ಜಾಸ್ತಿ ಆಗುವುದರ ಮೂಲವಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಸತತವಾಗಿ ಇದು ಮುಂದುವರಿಯಬಹುದು ಎಂಬ ನಿರೀಕ್ಷೆ ನಮಗಿತ್ತು ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲಿ ಕೆಲಸ ಬಿಡುವ ಪ್ರಮಾಣ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ. ಕಾಗ್ನಿಜಂಟ್​ನಲ್ಲಿ ಈಗ ಹೊರಬಂದಿರುವ ಸಂಖ್ಯೆಯು ಆತಂಕಕಾರಿ. ಅದು ಮೇಲ್ಮಟ್ಟದಲ್ಲಿಯೇ ಮುಂದುವರಿಯಲಿದೆ. ಅಂದರೆ ಶೇ 20ಕ್ಕಿಂತ ಹೆಚ್ಚು ಇರಲಿದೆ. ಏಕೆಂದರೆ ಕೆಲವು ತ್ರಯಮಾಸಿಕಗಳಲ್ಲಂತೂ ಹೊಸದಾಗಿ ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಂಡೇ ಇಲ್ಲ ಎನ್ನಲಾಗಿದೆ. ಅದೇ ಟಿಸಿಎಸ್​, ಇನ್ಫೋಸಿಸ್ ಮತ್ತು ವಿಪ್ರೋದಲ್ಲಿ ಶೇ 8.6, ಶೇ13.9 ಹಾಗೈ ಶೇ 15.9ರಷ್ಟಿದೆ ಕೆಲಸ ತೊರೆಯುವವರ ಪ್ರಮಾಣ. ಇನ್ನು ಕಾಗ್ನಿಜಂಟ್​ನಲ್ಲಿ ಉದ್ಯೋಗ ತೊರೆಯುತ್ತಿರುವವರ ಪ್ರಮಾಣ ಕಡಿಮೆ ಮಾಡಬೇಕು ಎಂಬ ಕಾರಣಕ್ಕೆ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಹೇಳಲಾಗಿದೆ.

ಕೆಲಸ ಬಿಡುತ್ತಿರುವ ಸಮಸ್ಯೆಯಿಂದ ಹೊರಬರಲು ಈ ವರ್ಷ 1 ಲಕ್ಷ ಲ್ಯಾಟರಲ್ ನೇಮಕಾತಿ ಹಾಗೂ 1 ಲಕ್ಷಕ್ಕೂ ಹೆಚ್ಚು ಅಸೋಸಿಯೇಟ್ಸ್ ತರಬೇತಿ ನೀಡುವ ಆಲೋಚನೆ ಕಾಗ್ನಿಜಂಟ್ ಮಾಡುತ್ತಿದೆ. 2021ರಲ್ಲಿ 30 ಸಾವಿರ ಹೊಸ ಪದವೀಧರರು, 2022ರಲ್ಲಿ 45 ಸಾವಿರ ಪದವೀಧರರಿಗೆ ಭಾರತದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: Job Loss: ಆಟೋಮೆಷನ್​ನಿಂದ 2022ರ ಹೊತ್ತಿಗೆ ಕೆಲಸ ಕಳೆದುಕೊಳ್ಳಲಿದ್ದಾರೆ 30 ಲಕ್ಷ ಮಂದಿ; ಏಕೆ ಹಾಗೂ ಹೇಗೆ ಗೊತ್ತಾ?

(Cognizant Attrition Rate At 37 Percent In Second Quarter Reached Peak Level )

Published On - 4:25 pm, Thu, 29 July 21

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್