Axis Bank: ನಿಯಮಾವಳಿಗಳ ಉಲ್ಲಂಘನೆಗಾಗಿ ಆಕ್ಸಿಸ್ ಬ್ಯಾಂಕ್ಗೆ 10 ಕೋಟಿ ರೂ. ದಂಡ ಹಾಕಿದ ಆರ್ಬಿಐ
ಪಾವತಿ ವ್ಯವಸ್ಥೆಗೆ ಸಂಬಂಧಿಸಿದ ಕಾರ್ಪೊರೇಟ್ ಗ್ರಾಹಕರಾಗಿ ಬ್ಯಾಂಕ್ಗಳ ಮಧ್ಯದ ವಹಿವಾಟು, ಸೈಬರ್ ಭದ್ರತೆ ಮತ್ತು ಹಣಕಾಸು ಒಳಗೊಳ್ಳುವಿಕೆಯೂ ಸೇರಿದಂತೆ ಕೇಂದ್ರ ಬ್ಯಾಂಕ್ನ ಕೆಲವು ನಿಯಮಾವಳಿಗಳನ್ನು ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಆಕ್ಸಿಸ್ ಬ್ಯಾಂಕ್ ಮೇಲೆ ಬುಧವಾರ 5 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಈ ಕ್ರಮಕ್ಕೆ ಸಂಬಂಧಿಸಿದಂತೆ ಆರ್ಬಿಐ ಸ್ಪಷ್ಟನೆ ನೀಡಿದ್ದು, ನಿಯಂತ್ರಕ ಸಂಸ್ಥೆಯ ನಿಯಮಾವಳಿಗಳನ್ನು ಪಾಲನೆ ಮಾಡುವಲ್ಲಿ ಕೊರತೆ ಕಂಡುಬಂದಿದೆ ಮತ್ತು ಯಾವುದೇ ವಹಿವಾಟಿನ ಸಿಂಧುತ್ವ ಘೋಷಣೆ ಮಾಡುವ ಉದ್ದೇಶ […]
ಪಾವತಿ ವ್ಯವಸ್ಥೆಗೆ ಸಂಬಂಧಿಸಿದ ಕಾರ್ಪೊರೇಟ್ ಗ್ರಾಹಕರಾಗಿ ಬ್ಯಾಂಕ್ಗಳ ಮಧ್ಯದ ವಹಿವಾಟು, ಸೈಬರ್ ಭದ್ರತೆ ಮತ್ತು ಹಣಕಾಸು ಒಳಗೊಳ್ಳುವಿಕೆಯೂ ಸೇರಿದಂತೆ ಕೇಂದ್ರ ಬ್ಯಾಂಕ್ನ ಕೆಲವು ನಿಯಮಾವಳಿಗಳನ್ನು ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಆಕ್ಸಿಸ್ ಬ್ಯಾಂಕ್ ಮೇಲೆ ಬುಧವಾರ 5 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಈ ಕ್ರಮಕ್ಕೆ ಸಂಬಂಧಿಸಿದಂತೆ ಆರ್ಬಿಐ ಸ್ಪಷ್ಟನೆ ನೀಡಿದ್ದು, ನಿಯಂತ್ರಕ ಸಂಸ್ಥೆಯ ನಿಯಮಾವಳಿಗಳನ್ನು ಪಾಲನೆ ಮಾಡುವಲ್ಲಿ ಕೊರತೆ ಕಂಡುಬಂದಿದೆ ಮತ್ತು ಯಾವುದೇ ವಹಿವಾಟಿನ ಸಿಂಧುತ್ವ ಘೋಷಣೆ ಮಾಡುವ ಉದ್ದೇಶ ಇಲ್ಲ ಎಂದು ಆರ್ಬಿಐ ಹೇಳಿದೆ.
ವಂಚನೆ ಮತ್ತು ಅದಕ್ಕೆ ಸಂಬಂಧಿಸಿದ ವಹಿವಾಟುಗಳ ಹಿನ್ನೆಲೆಯಲ್ಲಿ ಬ್ಯಾಂಕ್ ಮೇಲೆ ದಂಡ ವಿಧಿಸಲಾಗಿದೆ. ಈ ಬಗ್ಗೆ 2020ರ ಜೂನ್ ತಿಂಗಳಲ್ಲಿ ಬ್ಯಾಂಕ್ನಿಂದ ಆರ್ಬಿಐಗೆ ಬ್ಯಾಂಕ್ನಿಂದ ದೂರು ನೀಡಲಾಗಿತ್ತು. ನಿಯಂತ್ರಕ ಸಂಸ್ಥೆಯಿಂದ ಪರಿಶೀಲನೆ ನಡೆಸುವ ವೇಳೆಯಲ್ಲಿ ನಿಯಮಾವಳಿಗಳ ಉಲ್ಲಂಘನೆ ಆಗಿರುವುದು ತಿಳಿದುಬಂದಿದೆ.
ಭಾರತದಲ್ಲಿ ಬ್ಯಾಂಕ್ಗಳ ನಿಯಮಾವಳಿಗಳನ್ನು ಸರಿಯಾಗಿ ಪಾಲನೆ ಮಾಡಲಾಗುತ್ತಿದೆಯೋ ಇಲ್ಲವೋ ಎಂಬ ಬಗ್ಗೆ ನಿಗಾ ಮಾಡುವ ನಿಯಂತ್ರಕ ಸಂಸ್ಥೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ. ಈ ಹಿಂದೆ ಕೂಡ ಹಲವು ಸಂದರ್ಭಗಳಲ್ಲಿ ಬ್ಯಾಂಕ್ಗಳ ಮೇಲೆ ನಿಯಮಾವಳಿ ಉಲ್ಲಂಘನೆಯ ಮೇಲೆ ದಂಡ ವಿಧಿಸಲಾಗಿದೆ.
ಇತ್ತೀಚೆಗೆ ಒಂದೇ ದಿನದಲ್ಲಿ ಹದಿನಾಲ್ಕು ಬ್ಯಾಂಕ್ಗಳ ಮೇಲೆ ಆರ್ಬಿಐನಿಂದ ದಂಡ ವಿಧಿಸಲಾಗಿತ್ತು. ಆ ಸಂದರ್ಭದಲ್ಲಿ ಎಲ್ಲ ಬ್ಯಾಂಕ್ಗಳ ವಹಿವಾಟು ಸಹ ಡಿಎಚ್ಎಫ್ಎಲ್ಗೆ ಸಂಬಂಧಿಸಿದ್ದವೇ ಆಗಿದ್ದವು. ಇನ್ನು ಎಚ್ಡಿಎಫ್ಸಿ ಬ್ಯಾಂಕ್ ಸೇರಿದಂತೆ ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಮೇಲೂ ದಂಢ ಹಾಕಿದ ಉದಾಹರಣೆಗಳು ಕಂಡುಬರುತ್ತವೆ.
ಇದನ್ನೂ ಓದಿ: ಎಸ್ಬಿಐ ಸೇರಿದಂತೆ ಒಟ್ಟು 14 ಬ್ಯಾಂಕ್ಗಳಿಗೆ ಒಂದೇ ದಿನದಲ್ಲಿ 50 ಲಕ್ಷದಿಂದ 2 ಕೋಟಿ ತನಕ ದಂಡ ವಿಧಿಸಿದ ಆರ್ಬಿಐ
ಇದನ್ನೂ ಓದಿ: Penalty to HDFC Bank: ಎಚ್ಡಿಎಫ್ಸಿ ಬ್ಯಾಂಕ್ಗೆ ರೂ. 10 ಕೋಟಿ ದಂಡ ಹಾಕಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
(RBI Imposed Penalty Of Rs 5 Crore On Axis Bank For Non Compliance With Regulator Norms)