Edible Oil: ಖಾದ್ಯ ತೈಲ ಬೆಲೆ ಕಡಿತ ನಂತರ ಹಾಲು, ಸಾಬೂನು, ಶಾಂಪೂ ಬೆಲೆ ಕಡಿಮೆ ಆಗುತ್ತವೆಯೇ?

| Updated By: Srinivas Mata

Updated on: Jun 21, 2022 | 7:54 PM

ಖಾದ್ಯ ತೈಲ ಬೆಲೆಗಳು ಇಳಿಕೆ ಆದ ಮೇಲೆ ಅದರಿಂದ ತಯಾರಾಗುವ ಉತ್ಪನ್ನಗಳ ಬೆಲೆ ಏನಾಗಬಹುದು ಎಂಬ ಬಗ್ಗೆ ಎಫ್​ಎಂಸಿಜಿ ತಯಾರಕರು ಹೇಳಿದ್ದಾರೆ.

Edible Oil: ಖಾದ್ಯ ತೈಲ ಬೆಲೆ ಕಡಿತ ನಂತರ ಹಾಲು, ಸಾಬೂನು, ಶಾಂಪೂ ಬೆಲೆ ಕಡಿಮೆ ಆಗುತ್ತವೆಯೇ?
ಸಾಂದರ್ಭಿಕ ಚಿತ್ರ
Follow us on

ಆಮದು ಸುಂಕ ಕಡಿಮೆ ಆದ ಮೇಲೆ ಖಾದ್ಯ ತೈಲ (Edible Oil) ಬೆಲೆಗಳ ಇಳಿಕೆ ಆದರೂ ಎಫ್​ಎಂಸಿಜಿ ಕಂಪೆನಿಗಳು ಬೆಲೆ ಇಳಿಕೆ ಮಾಡುವುದಿಲ್ಲ ಎಂದಿದ್ದು, ಬೆಲೆ ಏರಿಕೆ ವೇಗವನ್ನು ಕಡಿಮೆ ಮಾಡುವುದಾಗಿ ಹೇಳಿವೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಖಾದ್ಯ ತೈಲಗಳ ಬೆಲೆ ಲೀಟರ್​ಗೆ 15ರಿಂದ 20 ರೂಪಾಯಿ ತನಕ ಇಳಿಕೆ ಆಗಿದೆ. ಬ್ರ್ಯಾಂಡೆಡ್ ಖಾದ್ಯ ತೈಲ ತಯಾರಕರು ತೈಲದ ಮೇಲಿನ ಬೆಲೆಯನ್ನು ಇಳಿಸುತ್ತಿದ್ದು, ಅದರಲ್ಲಿ ತಾಳೆ ಎಣ್ಣೆ ಒಳಗೊಂಡಿದೆ. ಈಚೆಗೆ ಅದರ ಮೇಲೆ ಕೇಂದ್ರ ಸರ್ಕಾರದಿಂದ ಈಚೆಗೆ ಆಮದು ಸುಂಕ ಇಳಿಸಲಾಗಿತ್ತು. ಈ ವಾರ ಸರ್ಕಾರದಿಂದ ಕಚ್ಚಾ ತಾಳೆ ಎಣ್ಣೆ, ಸೋಯಾ ಎಣ್ಣೆ, ಚಿನ್ನ ಮತ್ತು ಬೆಳ್ಳಿಯ ಮೂಲ ಆಮದು ದರ ಇಳಿಕೆ ಮಾಡಿದೆ.

ಎಫ್​ಎಂಸಿಜಿಗಳಲ್ಲಿ ಹಾಲು, ಸಾಬೂನು, ಶಾಂಪೂ ಮತ್ತು ಬಿಸ್ಕೆಟ್ ಒಳಗೊಂಡಿವೆ. ತಾಳೆ ಎಣ್ಣೆ ಮತ್ತು ಅದರ ಡೆರಿವೇಟಿವ್ಸ್ ಅನ್ನು ಡಿಟರ್ಜೆಂಟ್​ಗಳು, ಆಹಾರ ಉತ್ಪನ್ನಗಳು, ಬಯೋಫ್ಯುಯೆಲ್ಸ್ ಮತ್ತು ಕಾಸ್ಮೆಟಿಕ್ಸ್​ಗಳಲ್ಲಿ ಬಳಸಲಾಗುತ್ತದೆ. ಇವುಗಳನ್ನು ದಿನ ನಿತ್ಯ ಬಳಸುವ ಪದಾರ್ಥಗಳಾದ ಶಾಂಪೂ, ಸಾಬೂನು, ಚಾಕೊಲೇಟ್ಸ್, ಬಿಸ್ಕೆಟ್, ನೂಡಲ್ಸ್​ಗಳಲ್ಲಿ ಬಳಸಲಾಗುತ್ತದೆ. ಆದ್ದರಿಂದ ತಾಳೆ ಎಣ್ಣೆ ಬೆಲೆಯು ಎಲ್ಲ ವಲಯದ ಕೈಗಾರಿಕೆಯ ಇನ್​ಪುಟ್​ ವೆಚ್ಚ ಹೆಚ್ಚಳಕ್ಕೆ ಕಾರಣ ಆಗುತ್ತದೆ.

ಕಚ್ಚಾ ತಾಳೆ ಎಣ್ಣೆ ಹೊಸ ಮೂಲ ಆಮದು ದರ ಟನ್​ಗೆ 1620 ಟನ್ ಇದ್ದು, ಈ ಹಿಂದೆ 1625 ಯುಎಸ್​ಡಿ ಇತ್ತು. ಅದೇ ರೀತಿ ಆರ್​ಬಿಡಿ ತಾಳೆ ಎಣ್ಣೆ ಮತ್ತು ಆರ್​ಬಿಡಿ ಪಾಮೊಲಿನ್ ಮೂಲ ಬೆಲೆ ಕೂಡ ಪ್ರತಿ ಟನ್​ಗೆ 1757 ಡಾಲರ್ ಹಾಗೂ 1767 ಡಾಲರ್​ಗೆ ಕ್ರಮವಾಗಿ ಇಳಿದಿದೆ. ಕಚ್ಚಾ ಸೋಯಾ ತೈಲ ಮೂಲ ಬೆಲೆ ಟನ್​ಗೆ 1831 ಯುಎಸ್​ಡಿಗೆ ಇಳಿದಿದ್ದು, ಈ ಹಿಂದೆ 1866 ಡಾಲರ್ ಇತ್ತು. ಮೂಲ ಬೆಲೆ ಎಂಬುದನ್ನು ಆಮದುದಾರರು ಕಟ್ಟಬೇಕಾದ ತೆರಿಗೆಯನ್ನು ಲೆಕ್ಕ ಹಾಕುವ ಸಲುವಾಗಿ ಬಳಸಲಾಗುತ್ತದೆ.

ಭಾರತವು ಪ್ರತಿ ವರ್ಷ 13.5 ಮಿಲಿಯನ್ ಟನ್​ ಖಾದ್ಯ ತೈಲವನ್ನು ಪ್ರತಿ ವರ್ಷ ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ 8ರಿಂದ 8.5 ಮಿಲಿಯನ್ ಟನ್ (ಶೇ 63ರಷ್ಟು) ತಾಳೆ ಎಣ್ಣೆ. ವಿಶ್ವದ ಅತಿ ದೊಡ್ಡ ತಾಳೆ ಎಣ್ಣೆ ಆಮದುದಾರ ದೇಶ ಭಾರತವು ಅದಕ್ಕಾಗಿ ಇಂಡೋನೇಷ್ಯಾ ಮತ್ತು ಮಲೇಷ್ಯಾದ ಮೇಲೆ ಅವಲಂಬಿತವಾಗಿದೆ. ಇಂಡೋನೇಷ್ಯಾದಿಂದ ಭಾರತವು ಪ್ರತಿ ವರ್ಷ ಹತ್ತಿರಹತ್ತಿರ 4 ಮಿಲಿಯನ್ ಟನ್​ಗಳಷ್ಟು ಆಮದು ಮಾಡಿಕೊಳ್ಳುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ