ಚೆನ್ನೈ ಮೂಲದ ಐಟಿ ಸಂಸ್ಥೆಯೊಂದು ತನ್ನ 50 ಉದ್ಯೋಗಿಗಳಿಗೆ ಕಾರನ್ನು ಉಡುಗೊರೆಯಾಗಿ ನೀಡಿದೆ. ತನ್ನ ಉದ್ಯೋಗಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಲು ಈ ಹೊಚ್ಚ ಹೊಸ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಐಡಿಯಾಸ್2ಐಟಿ ಟೆಕ್ನಾಲಜಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯಸ್ಥರಾದ ಮುರಳಿ ಅವರು ತಮ್ಮ ಪತ್ನಿಯೊಂದಿಗೆ 2009 ರಲ್ಲಿ ಸಂಸ್ಥೆಯನ್ನು ಸ್ಥಾಪಿಸಿದರು.
ಉದ್ಯಮದ ಆರಂಭದಿಂದಲೂ ಕೆಲ ಉದ್ಯೋಗಿಗಳು ಎಷ್ಟೇ ಕಷ್ಟಬಂದರೂ ಸಂಸ್ಥೆಯನ್ನು ಬಿಡದೆ ಈ ದಂಪತಿಯ ಬೆಂಬಲಕ್ಕೆ ನಿಂತಿದ್ದರು, ಹೀಗಾಗಿ ದೀರ್ಘಕಾಲಗಳ ಕಾಲ ಸೇವೆ ಸಲ್ಲಿಸಿದ 50 ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮುರಳಿ ಹಾಗೂ ಅವರ ಪತ್ನಿಯ ಷೇರುಗಳನ್ನು ಪರಿವರ್ತಿಸಿ ಶೇ.33ರಷ್ಟನ್ನು ದೀರ್ಘಾವಧಿಯ ಉದ್ಯೋಗಿಗಳಿಗೆ ನೀಡಲು ಬಯಸಿದ್ದಾರೆ. ಕಂಪನಿಯು ಕಳೆದ ವರ್ಷ ಉದ್ಯೋಗಿಗಳ ಕಠಿಣ ಪರಿಶ್ರಮಕ್ಕೆ ಏನಾದರೂ ಹಿಂದಿರುಗಿ ನೀಡಬೇಕೆಂದು ಬಯಸಿ 100 ಕಾರುಗಳನ್ನು ಉಡುಗೊರೆಯಾಗಿ ನೀಡಲಾಗಿದೆ ಎನ್ನುವ ಮಾಹಿತಿ ನೀಡಿದ್ದಾರೆ.
ಹರ್ಯಾಣದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ದೀಪಾವಳಿಗೆ ಕಾರು ನೀಡಿತ್ತು
ಹರ್ಯಾಣದ ಪಂಚಕುಲದಲ್ಲಿರುವ ಫಾರ್ಮಾಸ್ಯುಟಿಕಲ್ ಕಂಪನಿಯ ಮಾಲೀಕರೊಬ್ಬರು ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಕಾರುಗಳನ್ನು ನೀಡಿತ್ತು. ಕಂಪನಿಯ ನಿರ್ದೇಶಕ ಎಂಕೆ ಭಾಟಿಯಾ ಅವರು ತಮ್ಮ ಉದ್ಯೋಗಿಗಳನ್ನು ಸೆಲೆಬ್ರಿಟಿಗಳು ಎಂದು ಕರೆದಿದ್ದಾರೆ 12 ಸ್ಟಾರ್ ಪರ್ಫಾರ್ಮರ್ಸ್ ಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು.
ಮತ್ತಷ್ಟು ಓದಿ: ತನ್ನ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಕಾರುಗಳನ್ನು ನೀಡಿದ ಕಂಪನಿ
ಫಾರ್ಮಾಸ್ಯುಟಿಕಲ್ ಕಂಪನಿ, ಮಿಟ್ಸ್ ಹೆಲ್ತ್‌ಕೇರ್, ಮುಂದಿನ ದಿನಗಳಲ್ಲಿ ಇನ್ನೂ 38 ಉದ್ಯೋಗಿಗಳಿಗೆ ಕಾರುಗಳನ್ನು ನೀಡಲಿದೆ. ಈ ಗ್ರ್ಯಾಂಡ್ ದೀಪಾವಳಿ ಗಿಫ್ಟ್ ಪಡೆದವರಲ್ಲಿ ಆಫೀಸ್ ಬಾಯ್ ಕೂಡ ಇದ್ದಾರೆ. ಭಾಟಿಯಾ ತನ್ನ ಕಂಪನಿಯ ಯಶಸ್ಸಿಗೆ ತನ್ನ ಉದ್ಯೋಗಿಗಳ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ನಿಷ್ಠೆ ಕಾರಣವೆಂದು ಹೇಳಿದ್ದಾರೆ. ಅವರಲ್ಲಿ ಕೆಲವರು ಕಂಪನಿ ಪ್ರಾರಂಭವಾದಾಗಿನಿಂದಲೂ ಅವರೊಂದಿಗೆ ಇದ್ದಾರೆ.
ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ