ಹೊಸ ಜಿಯೋ ಹೋಮ್ ಟಿವಿ ಪ್ಯಾಕ್ ಬಿಡುಗಡೆ; ಮಾಸಿಕ 400 ರೂಗೆ ಸಾವಿರಕ್ಕೂ ಹೆಚ್ಚು ಲೈವ್ ಚಾನಲ್ಗಳು
Jio Home TV pack of Rs 400: ರಿಲಾಯನ್ಸ್ ಜಿಯೋ ಜುಲೈ 14ರಂದು ಹೊಸ ಹೋಮ್ ಟಿವಿ ಪ್ಯಾಕ್ ಬಿಡುಗಡೆ ಮಾಡಿದೆ. ಮಾಸಿಕ 400 ರೂ ಪ್ಲಾನ್ನಲ್ಲಿ ಒಂದು ಸಾವಿರಕ್ಕೂ ಅಧಿಕ ಲೈವ್ ಟಿವಿ ಚಾನಲ್ಗಳು ಸಿಗುತ್ತವೆ. 12 ಪ್ರೀಮಿಯಮ್ ಒಟಿಟಿ ಆ್ಯಪ್ಗಳ ಸಬ್ಸ್ಕ್ರಿಪ್ಸಷನ್ ಸಿಗುತ್ತದೆ. ಇಷ್ಟದ ಭಾಷೆಗಳಲ್ಲಿ ವಿವಿಧ ಪ್ರಸಾಕರ ಲೈವ್ ಟಿವಿ ಚಾನಲ್ಸ್ ವೀಕ್ಷಿಸಬಹುದು.

ಬೆಂಗಳೂರು, ಜುಲೈ 14: ದೇಶದ ಪ್ರಮುಖ ಟೆಲಿಕಾಂ ದೈತ್ಯ ರಿಲಾಯನ್ಸ್ ಜಿಯೋ (Reliance Jio), ಹೋಮ್ ಎಂಟರ್ಟೈನ್ಮೆಂಟ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ. ಗ್ರಾಹಕರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಪ್ರೀಮಿಯಂ ಟೆಲಿವಿಷನ್ ಅನುಭವ ನೀಡುವ ಉದ್ದೇಶದಿಂದ ‘ಜಿಯೋ ಹೋಮ್ ಟಿವಿ ಪ್ಯಾಕ್’ (Jio Home TV Pack) ಅನ್ನು ಇಂದು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಯೋಜನೆಯಡಿ ಗ್ರಾಹಕರು ತಿಂಗಳಿಗೆ ಕೇವಲ ₹400 ಕ್ಕೆ (ಎಲ್ಲಾ ತೆರಿಗೆ ಒಳಗೊಂಡಂತೆ) 1,000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಆನಂದಿಸಬಹುದಾಗಿದೆ.
ಜಿಯೋ ಹೋಮ್ ಟಿವಿ ಪ್ಯಾಕ್‌ನ ಪ್ರಮುಖ ಫೀಚರ್ಸ್
- ವೈವಿಧ್ಯಮಯ ಚಾನೆಲ್‌ಗಳು: ಗ್ರಾಹಕರು ತಮ್ಮ ಇಷ್ಟದ ಭಾಷೆಗಳಲ್ಲಿ ಮನರಂಜನೆ, ಚಲನಚಿತ್ರಗಳು, ಕ್ರೀಡೆ, ಸುದ್ದಿ, ಕಾರ್ಟೂನ್ (ಮಕ್ಕಳಿಗಾಗಿ), ಸಂಗೀತ ಮತ್ತು ಪ್ರಾದೇಶಿಕ ಚಾನೆಲ್‌ಗಳು ಸೇರಿದಂತೆ ಎಲ್ಲಾ ಪ್ರಮುಖ ಪ್ರಸಾರಕರ ಲೈವ್ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದು.
- ವಿಶೇಷ ಸ್ವಾಗತ ಕೊಡುಗೆ: ಜಿಯೋ ಹೋಮ್ ಟಿವಿ ಪ್ಯಾಕ್‌ಗೆ ಚಂದಾದಾರರಾಗುವ ಗ್ರಾಹಕರಿಗೆ ಮೊದಲ ತಿಂಗಳು (Welcome Offer) 30 Mbps ವೇಗದ ಉಚಿತ ಅನಿಯಮಿತ ವೈ-ಫೈ (Wi-Fi) ಸಿಗಲಿದೆ. ಇದರೊಂದಿಗೆ 12 ಪ್ರೀಮಿಯಂ ಒಟಿಟಿ (OTT) ಆಪ್‌ಗಳ ಚಂದಾದಾರಿಕೆಯೂ ಉಚಿತವಾಗಿ ಲಭ್ಯವಿರಲಿದೆ.
- ಆರಂಭಿಕ ವೆಚ್ಚ ಮುಕ್ತ: ಗ್ರಾಹಕರ ಮೇಲಿನ ಮುಂಗಡ ವೆಚ್ಚದ ಭಾರವನ್ನು ಕಡಿಮೆ ಮಾಡಲು ಜಿಯೋ ಶೂನ್ಯ (₹0) ಇನ್‌ಸ್ಟಾಲೇಶನ್ (ಅಳವಡಿಕೆ) ಶುಲ್ಕ ಮತ್ತು ₹0 ಸೆಕ್ಯೂರಿಟಿ ಡೆಪಾಸಿಟ್ ಕೊಡುಗೆಯನ್ನು ಪ್ರಕಟಿಸಿದೆ.
ಇದನ್ನೂ ಓದಿ: ಹಾರ್ಮುಜ್ ಸಹವಾಸವೇ ಬೇಡ; ದೂರದಲ್ಲಿ ಬೇರೆಯೇ ಬಂದರು ಕಟ್ಟುತ್ತಿದೆ ಈ ಗಲ್ಫ್ ದೇಶ
ಜಿಯೋ ಹೋಮ್ ಟಿವಿ ಪ್ಯಾಕ್: ಪಾವತಿ ಆಯ್ಕೆ ಹೇಗೆ?
ಈ ಆಫರ್ ಆರಂಭದಲ್ಲಿ 6 ತಿಂಗಳ ರೀಚಾರ್ಜ್ (FRC) ಆಯ್ಕೆಯೊಂದಿಗೆ ಲಭ್ಯವಿದ್ದು, ಜಿಎಸ್‌ಟಿ ಸೇರಿದಂತೆ ಒಟ್ಟು ಮೊತ್ತ ₹2,400 ಆಗಿರುತ್ತದೆ. ಇದು ಗ್ರಾಹಕರಿಗೆ ದೀರ್ಘಾವಧಿಯ ಮತ್ತು ಜಂಜಾಟವಿಲ್ಲದ ಪಾವತಿ ಆಯ್ಕೆ ಒದಗಿಸುತ್ತದೆ.
ಮೊಬೈಲ್ ಗ್ರಾಹಕರಿಗೂ ಬಂಪರ್ ಆಫರ್: ಕಳೆದ ವಾರವಷ್ಟೇ ಜಿಯೋ ತನ್ನ ಮೊಬೈಲ್ ಬಳಕೆದಾರರಿಗಾಗಿ ಕೇವಲ ₹55 ಕ್ಕೆ 1,000 ಕ್ಕೂ ಹೆಚ್ಚು ಲೈವ್ ಚಾನೆಲ್‌ಗಳನ್ನು ವೀಕ್ಷಿಸಬಹುದಾದ ವಿಶೇಷ ಮೊಬೈಲ್ ಪ್ಯಾಕ್ ಅನ್ನು ಬಿಡುಗಡೆ ಮಾಡಿ ಗಮನ ಸೆಳೆದಿತ್ತು. ಈಗ ಹೋಮ್ ಟಿವಿ ಪ್ಯಾಕ್ ಮೂಲಕ ಇಡೀ ಕುಟುಂಬಕ್ಕೆ ಡಿಜಿಟಲ್ ಮನರಂಜನೆಯನ್ನು ಒದಗಿಸಲು ಮುಂದಾಗಿದೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ಗೆ ಅಮೆರಿಕ-ಇರಾನ್ ಪೈಪೋಟಿ; ಭಾರತಕ್ಕೆ ಏನು ತಲೆನೋವು?
ಲೈವ್ ಟೆಲಿವಿಷನ್, ಹೈ-ಸ್ಪೀಡ್ ಇಂಟರ್ನೆಟ್ ಮತ್ತು ಪ್ರೀಮಿಯಂ ಒಟಿಟಿ ಸ್ಟ್ರೀಮಿಂಗ್ ಈ ಮೂರನ್ನೂ ಒಂದೇ ಸೂರಿನಡಿ ತರುವ ಮೂಲಕ ರಿಲಯನ್ಸ್ ಜಿಯೋ ಭಾರತೀಯ ಕುಟುಂಬಗಳಿಗೆ ವಿಶ್ವದರ್ಜೆಯ ಡಿಜಿಟಲ್ ಅನುಭವ ನೀಡುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




