ಮೋದಿಗಿರುವಂತಹ ಗಟ್ಟಿತನ ಅಮೆರಿಕಕ್ಕೆ ಸ್ವಲ್ಪವಾದರೂ ಬೇಕು: ಜೆಪಿ ಮಾರ್ಗನ್ ಸಿಇಒ

|

Updated on: Apr 24, 2024 | 4:39 PM

JP Morgan Chase CEO Jamie Dimon praises PM Narendra Modi: ಜೆಪಿ ಮಾರ್ಗನ್ ಚೇಸ್ ಸಂಸ್ಥೆಯ ಸಿಇಒ ಜೇಮೀ ಡಿಮೋನ್ ಅವರು ಭಾರತದಲ್ಲಿ ಮೋದಿ ನೇತೃತ್ವದಲ್ಲಿ ನಡೆದಿರುವ ಬೆಳವಣಿಗೆಯನ್ನು ಕೊಂಡಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಗಟ್ಟಿಯಾಗಿರುವುದರಿಂದ ಹಳೆಯ ಆಡಳಿತಶಾಹಿ ವ್ಯವಸ್ಥೆಯನ್ನು ಪರಿವರ್ತಿಸಲು ಸಾಧ್ಯವಾಯಿತು. 40 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲು ಸಾಧ್ಯವಾಯಿತು. ಅಂಥವರಿಗೆ ನಾವು ಏನೋ ಹೇಳಲು ಹೋಗುತ್ತೇವೆ. ಅವರಲ್ಲಿರುವ ಗಟ್ಟಿತನದಲ್ಲಿ ಸ್ವಲ್ಪವಾದರೂ ಅಮೆರಿಕಕ್ಕೆ ಬೇಕಿತ್ತು ಎಂದು ಸಿಇಒ ಹೇಳಿದ್ದಾರೆ.

ಮೋದಿಗಿರುವಂತಹ ಗಟ್ಟಿತನ ಅಮೆರಿಕಕ್ಕೆ ಸ್ವಲ್ಪವಾದರೂ ಬೇಕು: ಜೆಪಿ ಮಾರ್ಗನ್ ಸಿಇಒ
ಜೆಪಿ ಮಾರ್ಗನ್ ಚೇಸ್​ನ ಸಿಇಒ ಜೇಮೀ ಡಿಮೋನ್
Follow us on

ನ್ಯೂಯಾರ್ಕ್, ಏಪ್ರಿಲ್ 24: ಅಮೆರಿಕದ ಬ್ಯಾಂಕಿಂಗ್ ಸಂಸ್ಥೆ ಜೆಪಿ ಮಾರ್ಗನ್ ಚೇಸ್​ನ ಸಿಇಒ ಜೇಮೀ ಡಿಮೋನ್ (Jamie dimon) ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸಾಧನೆಗಳ ಗುಣಗಾನ ಮಾಡಿದ್ದಾರೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅದ್ವಿತೀಯ ಕೆಲಸ ಮಾಡಿದ್ದಾರೆ. ಅದ್ವಿತೀಯ ಎನಿಸುವ ಶಿಕ್ಷಣ ವ್ಯವಸ್ಥೆ ಮತ್ತು ಮೂಲಸೌಕರ್ಯವನ್ನು ರೂಪಿಸಿದ್ದಾರೆ ಎಂದು ಈ ಅಮೆರಿಕನ್ ಸಿಇಒ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಎಕನಾಮಿಕ್ ಕ್ಲಬ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಜೆಪಿ ಮಾರ್ಗನ್ ಚೇಸ್​ನ ಸಿಇಒ, ‘ನರೇಂದ್ರ ಮೋದಿ ಭಾರತದಲ್ಲಿ 40 ಕೋಟಿ ಜನರನ್ನು ಬಡತನದಿಂದ ಹೊರಗೆ ತಂದಿದ್ದಾರೆ. 40 ಕೋಟಿ ಜನರಿಗೆ ಶೌಚಾಲಯ ಕೊಟ್ಟಿದ್ದಾರೆ. 70 ಕೋಟಿ ಜನರು ಬ್ಯಾಂಕ್ ಖಾತೆ ತೆರೆಯುವಂತೆ ಮಾಡಿದ್ದಾರೆ. ನಾವು ಅವರಿಗೆ ಆ ಕೆಲಸ ಮಾಡಿ ಈ ಕೆಲಸ ಮಾಡಿ ಎಂದು ಭೋಧಿಸಲು ಹೋಗುತ್ತಿದ್ದೇವೆ,’ ಎಂದಿದ್ದಾರೆ. ಇಂಥ ಗಟ್ಟಿತನ ಅಮೆರಿಕಕ್ಕೆ ಸ್ವಲ್ಪವಾದರೂ ಬೇಕಿತ್ತು ಎಂದು ಜೇಮೀ ಡಿಮೋನ್ ಹೇಳಿದ್ದಾರೆ.

‘ಅವರಲ್ಲಿ ಅದ್ವಿತೀಯವಾದ ಶಿಕ್ಷಣ ವ್ಯವಸ್ಥೆ ಮತ್ತು ಮೂಲಸೌಕರ್ಯ ವ್ಯವಸ್ಥೆ ಇದೆ. ಈ ಒಬ್ಬ ಮನುಷ್ಯ ಗಟ್ಟಿಯಾಗಿರುವುದರಿಂದ ಇಡೀ ದೇಶ ಮೇಲೇಳುತ್ತಿದೆ. ಹಳೆಯ ಆಡಳಿತಷಾಹಿ ವ್ಯವಸ್ಥೆಯನ್ನು ಮುರಿಯುವ ಗಟ್ಟಿತನ ಮೋದಿ ತೋರಿದ್ದಾರೆ. ಅಮೆರಿಕಕ್ಕೆ ಇದರಲ್ಲಿ ಸ್ವಲ್ಪವಾದರೂ ಬರಬೇಕು,’ ಎಂದು ಸಿಇಒ ಜೇಮೀ ದಿಮೋನ್ ತಿಳಿಸಿದ್ದಾರೆ.

ಇದನ್ನೂ ಓದಿ: ವೈಯಕ್ತಿಕ ಆಸ್ತಿಯಲ್ಲಿ ಸರ್ಕಾರಕ್ಕೆ ಶೇ. 55 ಪಾಲು: ಅಮೆರಿಕದ ಟ್ಯಾಕ್ಸ್ ವ್ಯವಸ್ಥೆ ಪ್ರಸ್ತಾಪಿಸಿದ ಸ್ಯಾಮ್ ಪಿತ್ರೋಡಾ

ಭಾರತದ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ವ್ಯವಸ್ಥೆಯನ್ನೂ ಅವರು ಕೊಂಡಾಡಿದ್ದಾರೆ. ‘ಪ್ರತಿಯೊಬ್ಬ ನಾಗರಿಕನನ್ನು ಕೈಯಿಂದಾಗಲೀ, ಕಣ್ಣಿಂದಾಗಲೀ ಅಥವಾ ಬೆರಳಿಂದಾಗಲೀ ಗುರುತಿಸಲಾಗುತ್ತಿದೆ. 70 ಕೋಟಿ ಜನರು ಬ್ಯಾಂಕ್ ಖಾತೆ ತೆರೆದಿದ್ದಾರೆ. ಅವರು ಆನ್ಲೈನ್​ನಲ್ಲಿ ಸುಲಭವಾಗಿ ಹಣ ಪಾವತಿಸಬಲ್ಲುರು,’ ಎಂದು ಅಮೆರಿಕದ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆಯಾದ ಜೆಪಿ ಮಾರ್ಗನ್ ಚೇಸ್​ನ ಸಿಇಒ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ಪ್ರಸಕ್ತಿ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಇವರು ಪ್ರತಿಕ್ರಿಯಿಸಿದ್ದಾರೆ. ಅಮೆರಿಕದ ರಾಷ್ಟ್ರೀಯ ಸಾಲ, ಹಣದುಬ್ಬರ ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟು ಆರ್ಥಿಕತೆಯ ಮೇಲೆ ಪ್ರಭಾವ ಬೀರಬಹುದು. ಹಣದುಬ್ಬರ ಹಾಗೂ ಅಧಿಕ ಬಡ್ಡಿದರ ಎರಡೂ ಕೂಡ ನಿರೀಕ್ಷೆಗಿಂತ ಹೆಚ್ಚು ಅವಧಿ ಇರಬಹುದು ಎಂದು ಜೇಮೀ ಡಿಮೋನ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ