ಬೆಂಗಳೂರು: ದೇಶದ ಜಿಎಸ್ಟಿ ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕವೇ ಮುಂದಿರುವುದು. ಒಂದು ರಾಜ್ಯದಿಂದ ಹೆಚ್ಚು ತೆರಿಗೆ ಸಂಗ್ರಹ ಆಗುತ್ತಿದೆ ಎಂದರೆ ಸಾಮಾನ್ಯವಾಗಿ ಆ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ (Economic Activity) ಚುರುಕಾಗಿ ನಡೆಯುತ್ತಿದೆ ಎಂದು ಭಾವಿಸಬಹುದು. ಕರ್ನಾಟಕದ ಯಾವ ಜಿಲ್ಲೆಗಳು ಆರ್ಥಿಕವಾಗಿ ಸುದೃಢವಾಗಿವೆ? ದೇಶದ ಸಿಲಿಕಾನ್ ಸಿಟಿ ಎಂದೇ ಹೆಸರುವಾಸಿಯಾಗಿರುವ ಬೆಂಗಳೂರು ನಗರ ಸಹಜವಾಗಿಯೇ ಟಾಪ್ಪರ್ ಆಗುತ್ತದೆ. ಇಡೀ ದೇಶದಲ್ಲಿ ಮುಂಬೈ ಬಿಟ್ಟರೆ ಅತಿ ಹೆಚ್ಚು ತೆರಿಗೆ ಸಂಗ್ರಹ ಆಗಿರುವುದು ಬೆಂಗಳೂರಿನಲ್ಲೇ. ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಪರಿಸ್ಥಿತಿ ಹೇಗಿದೆ? ಬೀದರ್, ಕಲಬರ್ಗಿ, ರಾಯಚೂರು ಮೊದಲಾದ ಜಿಲ್ಲೆಗಳಿರುವ ಕಲ್ಯಾಣ ಕರ್ನಾಟಕ ಪ್ರದೇಶ (Hyderabad Karnataka Region) ಮೊದಲಿಂದಲೂ ಹಿಂದುಳಿಯುತ್ತಾ ಬಂದಿವೆ. ಇವುಗಳ ಪರಿಸ್ಥಿತಿ ಹೇಗೆ? ತಲಾದಾಯದಲ್ಲಿ (Per Capita Income) ಯಾವುವು ಮುಂದಿವೆ? ಯಾವುವು ಹಿಂದಿವೆ? ಮೊದಲಿಗೆ ಕರ್ನಾಟಕ ರಾಜ್ಯದ ವಿಶೇಷ ಸಾಧನೆಗಳೇನು, ಈ ವಿವರ ನೋಡಬಹುದು.
ಕರ್ನಾಟಕದ ಜಿಲ್ಲೆಗಳಲ್ಲಿ ಆರ್ಥಿಕ ಬೆಳವಣಿಗೆ ಸಹಜವಾಗಿ ಸಮರೀತಿಯಲ್ಲಿ ಇಲ್ಲ. ಬಹುತೇಕ ಉದ್ಯಮ, ಕೈಗಾರಿಕೆಗಳು ನೆಲಸಿರುವ ಬೆಂಗಳೂರಿನಲ್ಲಿ ಸಹಜವಾಗಿ ತಲಾದಾಯ ಹೆಚ್ಚಿದೆ. ದಶಕಗಳಿಂದ ಹಿಂದುಳಿದಿರುವ ಕಲಬುರ್ಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿರುವುದು ಅಚ್ಚರಿ ತಂದಿಲ್ಲ. ಆದರೆ, ಜಿಲ್ಲೆ ಜಿಲ್ಲೆಗಳ ನಡುವೆ ತಲಾದಾಯದಲ್ಲಿ ಅಸಮಾನತೆ ಇದ್ದರೂ ತೀರಾ ದೊಡ್ಡ ಅಂತರ ಇಲ್ಲ. ಬೆಂಗಳೂರಿನಲ್ಲಿ ತಲಾದಾಯ 6,21,131 ರೂ ಇದ್ದರೆ, ಕೊನೆಯ ಸ್ಥಾನದಲ್ಲಿರುವ ಕಲಬುರ್ಗಿಯಲ್ಲಿ ಇದು 1,24,998 ರೂ ಇದೆ. ರಾಷ್ಟ್ರೀಯ ಸರಾಸರಿ ತಲಾದಾಯ ಇರುವ 1.71 ಲಕ್ಷ ರೂಗೆ ಹೋಲಿಸಿದರೆ ಕಲಬರ್ಗಿ ತೀರಾ ಹಿಂದುಳಿದಿಲ್ಲ.
ಇದನ್ನೂ ಓದಿ: Inspiring: ಅಪ್ಪನ ಆಸ್ತಿ ಇಲ್ಲ; ಓದೋದು ಬಿಟ್ಟು ಕೇವಲ 23ರ ವಯಸ್ಸಿಗೆ 100 ಕೋಟಿ ಒಡೆಯನಾದ ಸಂಕರ್ಷ್
ಡಿಡಿಪಿಗೆ ಅತಿಕಡಿಮೆ ಕೊಡುಗೆ ನೀಡುವ ಜಿಲ್ಲೆಗಳು
ಇದನ್ನೂ ಓದಿ: New GST Rules: 7 ದಿನದೊಳಗೆ ಇನ್ವಾಯ್ಸ್ ಸಲ್ಲಿಸದಿದ್ದರೆ ಏನಾಗುತ್ತದೆ? ಹೊಸ ಜಿಎಸ್ಟಿ ನಿಯಮ ತಿಳಿದಿರಿ
ವಿವಿಧ ಜಿಲ್ಲೆಗಳು ಆರ್ಥಿಕವಾಗಿ ಹಿಂದುಳಿಯಲು ಪ್ರಮುಖ ಕಾರಣ ಕೈಗಾರಿಕೆ ಮತ್ತು ಉದ್ಯಮಗಳ ಉಪಸ್ಥಿತಿ ಇಲ್ಲದಿರುವುದು. ಈ ಹಿಂದುಳಿದ ಜಿಲ್ಲೆಗಳೆಲ್ಲವೂ ಕೃಷಿ ಅವಲಂಬಿತ ಪ್ರದೇಶಗಳಾಗಿವೆ. ಕೃಷಿಗಾರಿಕೆಗೆ ಬೇಕಾದ ನೈಸರ್ಗಿಕ ಅನುಕೂಲತೆ ಮತ್ತು ಸೌಕರ್ಯವ್ಯವಸ್ಥೆಯೂ ಈ ಜಿಲ್ಲೆಗಳಿಗಿಲ್ಲ. ಬೆಂಗಳೂರು ಹಾಗೂ ಸುತ್ತಮುತ್ತ ಕೇಂದ್ರೀಕೃತವಾಗಿರುವ ಉದ್ಯಮಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸುವುದು ಇತ್ಯಾದಿ ಕ್ರಮಗಳು ಸಮತೋಲನ ತರಬಹುದು. ಈ ನಿಟ್ಟಿನಲ್ಲಿ ಜವಳಿ ಕ್ಲಸ್ಟರ್ನಂತಹ ಯೋಜನೆಗಳು ಮಾದರಿ ಆಗಬಹುದು.
ಇನ್ನಷ್ಟು ವಾಣಿಜ್ಯ ಮತ್ತು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Tue, 2 May 23