AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New GST Rules: 7 ದಿನದೊಳಗೆ ಇನ್ವಾಯ್ಸ್ ಸಲ್ಲಿಸದಿದ್ದರೆ ಏನಾಗುತ್ತದೆ? ಹೊಸ ಜಿಎಸ್​ಟಿ ನಿಯಮ ತಿಳಿದಿರಿ

Time Limit For Invoice Uploading: ಇನ್ವಾಯ್ಸ್ ನೀಡಲಾದ ದಿನಾಂಕದಿಂದ 7 ದಿನದೊಳಗಾಗಿ ಅದನ್ನು ಇನ್ವಾಯ್ಸ್ ರಿಜಿಸ್ಟ್ರೇಷನ್ ಪೋರ್ಟಲ್​ಗೆ ಅಪ್​ಲೋಡ್ ಮಾಡಬೇಕು ಎಂದು ಸರ್ಕಾರ ಹೊಸ ನಿಯಮ ಜಾರಿ ಮಾಡಿದೆ. ಇದು ಸದ್ಯ 100ಕೋಟಿಗೂ ಹೆಚ್ಚು ಮೊತ್ತದ ವ್ಯವಹಾರ ಇರುವ ಸಂಸ್ಥೆಗಳಿಗೆ ಮಾತ್ರ ನೀಡಿರುವ ಕಾಲಮಿತಿಯಾಗಿದೆ.

New GST Rules: 7 ದಿನದೊಳಗೆ ಇನ್ವಾಯ್ಸ್ ಸಲ್ಲಿಸದಿದ್ದರೆ ಏನಾಗುತ್ತದೆ? ಹೊಸ ಜಿಎಸ್​ಟಿ ನಿಯಮ ತಿಳಿದಿರಿ
ಜಿಎಸ್​ಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 01, 2023 | 10:56 AM

Share

ನವದೆಹಲಿ: ಕನಿಷ್ಠ 100 ಕೋಟಿ ರೂ ವಹಿವಾಟು ಹೊಂದಿರುವ ಸಂಸ್ಥೆಗಳಿಗೆ ತೆರಿಗೆ ನಿಯಮವೊಂದನ್ನು ಸರ್ಕಾರ ಬದಲಿಸಿದೆ. ಇಂಥ ಸಂಸ್ಥೆಗಳು ತಮ್ಮ ಇನ್​ವಾಯ್ಸ್​ಗಳನ್ನು (Invoices) 7 ದಿನದೊಳಗೆ ಐಆರ್​ಪಿ ಪೋರ್ಟಲ್​ಗೆ (IRP- Invoice Registration Portal) ಅಪ್​ಲೋಡ್ ಮಾಡಬೇಕು ಎಂದು ಸೂಚಿಸಲಾಗಿದೆ. ಇನ್​ವಾಯ್ಸ್ ನೀಡಲಾದ ದಿನದಿಂದ ಏಳು ದಿನದೊಳಗೆ ಅದನ್ನು ಇನ್​ವಾಯ್ಸ್ ರಿಜಿಸ್ಟ್ರೇಷನ್ ಪೋರ್ಟಲ್​ಗೆ ಅಪ್​ಲೋಡ್ ಮಾಡದಿದ್ದರೆ, ಮತ್ತೆ ಅದನ್ನು ಅಪ್​ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಎಸ್​ಟಿ ನೆಟ್ವರ್ಕ್ (GSTN) ಸಂಸ್ಥೆ, ‘ಏಳಕ್ಕೂ ಹೆಚ್ಚು ದಿನಗಳ ಹಳೆಯದ ಇನ್ವಾಯ್ಸ್​ಗಳನ್ನು ಸಲ್ಲಿಸಲು ಅವಕಾಶ ನೀಡಲಾಗುವುದಿಲ್ಲ. ಸರಿಯಾದ ಸಮಯಕ್ಕೆ ಇನ್​ವಾಯ್ಸ್​ಗಳು ಅಪ್​ಲೋಡ್ ಆಗುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ,’ ಎಂದು ಹೇಳಿದೆ. ಈ ಹೊಸ ನಿಯಮ ಯಾವಾಗಿನಿಂದ ಜಾರಿಗೆ ಬರುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಬಹುದು ಎನ್ನಲಾಗಿದೆ.

ಇದು 100ಕೋಟಿಗೂ ಹೆಚ್ಚು ಮೊತ್ತದ ವಹಿವಾಟು ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಜಾರಿ ಮಾಡಲಾಗಿರುವ ಹೊಸ ನಿಯಮ. ಸದ್ಯ ಎಲ್ಲಾ ವ್ಯಾವಹಾರಿಕ ಸಂಸ್ಥೆಗಳು ಇನ್​ವಾಯ್ಸ್ ಯಾವುದೇ ದಿನಾಂಕದ್ದಾದರೂ ಅದನ್ನು ಐಆರ್​ಪಿಗೆ ಅಪ್​ಲೋಡ್ ಮಾಡುತ್ತಿವೆ. ಈಗ ಹಳೆಯ ಇನ್ವಾಯ್ಸ್ ಸಲ್ಲಿಸಲು ಕಾಲಮಿತಿ ನಿಗದಿ ಮಾಡಲು ಸರ್ಕಾರ ನಿರ್ಧರಿಸಿದೆ. ಉದಾಹರಣೆಗೆ ಇನ್ವಾಯ್ಸ್ ನೀಡಲಾದ ದಿನಾಂಕ ಮೇ 1 ಆಗಿದ್ದರೆ, ಅದನ್ನು ಐಆರ್​ಪಿ ಪೋರ್ಟಲ್​ಗೆ ಅಪ್​ಲೋಡ್ ಮಾಡಲು ಮೇ 8ರವರೆಗೂ ಕಾಲಾವಕಾಶ ಇರುತ್ತದೆ.

ಇದನ್ನೂ ಓದಿTwitter: ಸುದ್ದಿಗೆ ದುಡ್ಡು; ಟ್ವಿಟ್ಟರ್​ಗೆ ಆದಾಯ ತರಲು ಮಸ್ಕ್ ಹರಸಾಹಸ; ಮಾಧ್ಯಮಗಳಿಗೆ ಮಂದಹಾಸ; ಆದರೆ, ಇದರ ಜಾರಿ ಹೇಗೆ ಸಾಧ್ಯ?

ಏಳು ದಿನಕ್ಕೂ ಹಳೆಯ ಇನ್ವಾಯ್ಸ್ ಐಆರ್​ಪಿಗೆ ಅಪ್​ಲೋಡ್ ಮಾಡಿದರೆ ಏನಾಗುತ್ತದೆ?

ಒಂದು ಇನ್ವಾಯ್ಸ್ ನೀಡಲಾದ ದಿನಾಂಕದಿಂದ ಏಳು ದಿನದೊಳಗೆ ಅದನ್ನು ಐಆರ್​ಪಿ ಪೋರ್ಟಲ್​ಗೆ ಅಪ್​ಲೋಡ್ ಮಾಡಲು ಅವಕಾಶ ಇರುತ್ತದೆ. ಅದಾದ ಬಳಿಕ ಆ ಇನ್ವಾಯ್ಸ್ ಅಪ್​ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಪೋರ್ಟಲ್​ನಲ್ಲಿ ವ್ಯಾಲಿಡೇಶನ್ ಸಿಸ್ಟಂ ಅನ್ನು ಅಳವಡಿಸಲಾಗಿದ್ದು, ಅದು ಇನ್ವಾಯ್ಸ್ ದಿನಾಂಕವನ್ನು ಪರಿಶೀಲಿಸಿ, 7 ದಿನಕ್ಕಿಂತ ಹಳೆಯದಾದ ಇನ್ವಾಯ್ಸ್ ಅನ್ನು ತಿರಸ್ಕರಿಸುತ್ತದೆ.

ಇನ್ವಾಯ್ಸ್ ವಿಚಾರದಲ್ಲಿ ಮಾತ್ರ ಕಾಲಮಿತಿ

ಅಂದಹಾಗೆ, ಈ ಹೊಸ ನಿಯಮ 100ಕೋಟಿ ರೂಗೂ ಹೆಚ್ಚು ಮೊತ್ತದ ವಹಿವಾಟು ಇರುವ ಸಂಸ್ಥೆಗಳಿಗೆ ಮಾತ್ರ ಅನ್ವಯ ಆಗುವ ನಿಯಮ. ಹಾಗೆಯೇ, ಇನ್ವಾಯ್ಸ್ ವಿಚಾರದಲ್ಲಿ ಮಾತ್ರ ಈ ಕಾಲಮಿತಿ ಇದೆ. ಡೆಬಿಟ್ ನೋಟ್, ಕ್ರೆಡಿಟ್ ನೋಟ್ ಸಲ್ಲಿಸುವ ವಿಚಾರದಲ್ಲಿ ಯಾವ ಕಾಲಮಿತಿ ಇರುವುದಿಲ್ಲ.

ಇದನ್ನೂ ಓದಿPonzi Scheme: ಬೈಕ್​ಬೋಟ್ ಆಸೆ ಹುಟ್ಟಿಸಿ ಲಕ್ಷಾಂತರ ಮಂದಿಗೆ ಉಂಡೆನಾಮ ಹಾಕಿದ ಯುಪಿ ಮಹಿಳೆ; ಕೊಳ್ಳೆ ಹೊಡೆದ 15,000 ಕೋಟಿ ದುಡ್ಡು ಏನಾಯ್ತು?

ಐಆರ್​ಪಿಗೆ ಇಇನ್ವಾಯ್ಸ್ ಸಲ್ಲಿಸದಿದ್ದರೆ ಏನಾಗುತ್ತದೆ?

ಇನ್ವಾಯ್ಸ್ ರಿಜಿಸ್ಟ್ರೇಷನ್ ಪೋರ್ಟಲ್​ಗೆ ಒಂದು ಸಂಸ್ಥೆ ಇನ್ವಾಯ್ಸ್ ಸಲ್ಲಿಸದಿದ್ದರೆ ಐಟಿಸಿ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಐಟಿಸಿ ಎಂದರೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್. ಯಾವುದೇ ಒಂದು ಉತ್ಪನ್ನಕ್ಕೆ ತೆರಿಗೆ ವಿಧಿಸಲಾಗುತ್ತದೆ. ಈ ಉತ್ಪನ್ನ ತಯಾರಿಕೆಯಲ್ಲಿ ಬಳಸಲಾಗುವ ಸರಕುಗಳಿಗೂ ತೆರಿಗೆ ಕಟ್ಟಿರಲಾಗುತ್ತದೆ. ಒಂದು ಉತ್ಪನ್ನ ತಯಾರಿಕೆಯಲ್ಲಿರುವ ಸರಕುಗಳಿಗೆ ತೆರಿಗೆ ಕಟ್ಟಿದ್ದರೆ ಅದನ್ನು ನಮೂದಿಸಿ, ಉತ್ಪನ್ನದ ತೆರಿಗೆಯಲ್ಲಿ ರಿಯಾಯಿತಿ ಪಡೆಯಬಹುದು. ಇದು ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ ವ್ಯವಸ್ಥೆಯಾಗಿದೆ. ಐಟಿಸಿಯನ್ನು ಪಡೆಯಲು ಇನ್ವಾಯ್ಸ್ ದಾಖಲೆ ಬಹಳ ಅವಶ್ಯಕ. ನೀವು ಐಆರ್​ಪಿ ಪೋರ್ಟಲ್​ಗೆ ಇನ್ವಾಯ್ಸ್ ಅಪ್​ಲೋಡ್ ಮಾಡದಿದ್ದರೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸಿಗುವುದಿಲ್ಲ.

ಇನ್ವಾಯ್ಸ್ ಅಪ್​ಲೋಡಿಂಗ್​ಗೆ ಕಾಲಮಿತಿ; ಸದ್ಯ ಪ್ರಾಯೋಗಿಕ ಅನುಷ್ಠಾನ

ಹಳೆಯ ಇನ್ವಾಯ್ಸ್​ಗಳನ್ನು ಅಪ್​ಲೋಡ್ ಮಾಡುವ ರೂಢಿ ಬಹಳ ವ್ಯಾಪಕವಾಗಿದೆ. ಇದನ್ನು ತಡೆಯುವ ದೃಷ್ಟಿಯಿಂದ ಕಾಲಮಿತಿ ಹಾಕಲಾಗಿದೆ. ಸದ್ಯ ದೊಡ್ಡ ತೆರಿಗೆದಾರರಿಗೆ ಹೊಸ ನಿಯಮ ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಸ್ತರದ ತೆರಿಗೆದಾರರಿಗೂ ಈ ನಿಯಮ ಜಾರಿಗೆ ತರಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..