Ponzi Scheme: ಬೈಕ್​ಬೋಟ್ ಆಸೆ ಹುಟ್ಟಿಸಿ ಲಕ್ಷಾಂತರ ಮಂದಿಗೆ ಉಂಡೆನಾಮ ಹಾಕಿದ ಯುಪಿ ಮಹಿಳೆ; ಕೊಳ್ಳೆ ಹೊಡೆದ 15,000 ಕೋಟಿ ದುಡ್ಡು ಏನಾಯ್ತು?

Bikebot Ponzi Scam From UP Lady: ಬೈಕ್ ಟ್ಯಾಕ್ಸಿ ಸ್ಕೀಮ್ ಹೆಸರಿನಲ್ಲಿ ಲಕ್ಷಾಂತರ ಜನರನ್ನು ನಂಬಿಸಿ ಸಾವಿರಾರು ಕೋಟಿ ರೂ ಕೊಳ್ಳೆ ಹೊಡೆದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ದೀಪ್ತಿ ಬಾಹಲ್ ಎಂಬಾಕೆ ಈ ಸ್ಕ್ಯಾಮ್​ನ ಕಿಂಗ್​ಪಿನ್. ಸದ್ಯ ಈಕೆ ಪರಾರಿಯಾಗಿದ್ದು, ಪೊಲೀಸರು ಹುಡುಕುತ್ತಿದ್ದಾರೆ.

Ponzi Scheme: ಬೈಕ್​ಬೋಟ್ ಆಸೆ ಹುಟ್ಟಿಸಿ ಲಕ್ಷಾಂತರ ಮಂದಿಗೆ ಉಂಡೆನಾಮ ಹಾಕಿದ ಯುಪಿ ಮಹಿಳೆ; ಕೊಳ್ಳೆ ಹೊಡೆದ 15,000 ಕೋಟಿ ದುಡ್ಡು ಏನಾಯ್ತು?
ಸಾಂದರ್ಭಿಕ ಚಿತ್ರ
Follow us
|

Updated on: Apr 30, 2023 | 7:03 PM

ನವದೆಹಲಿ: ಭಾರತದಲ್ಲಿ ಹಣಕಾಸು ಹಗರಣಗಳು ಅದೆಷ್ಟು ನಡೆದಿಲ್ಲ? ಸೀಮಿತವಾಗಿರುವ ಸಂಪಾದನೆಯಿಂದ ಬರುವ ಹಣ ಯಾತಕ್ಕೆ ಸಾಲುತ್ತದೆಂದು ಹತಾಶೆಗೊಂಡಿರುವ ಮಧ್ಯಮವರ್ಗದ ಜನರ ಆಸೆಯನ್ನು ವಂಚಕರು ದುರುಪಯೋಗಪಡಿಸಿಕೊಳ್ಳುವ ಹಗರಣಗಳು ಪ್ರತಿಯೊಂದು ಕಾಲಘಟ್ಟದಲ್ಲೂ ನಡೆಯುತ್ತಾ ಬಂದಿವೆ. ನಮ್ಮ ಬೆಂಗಳೂರಿನ ವಿನಿವಿಂಕ್ ಹಗರಣ (Vinivink Scam), ಐಎಂಎ ಹಗರಣ (IMA Scam, ಗುರುಟೀಕ್ ಹಗರಣ (Guru Teak Scam), ಹೀಗೆ ನಮ್ಮ ರಾಜ್ಯದಲ್ಲೇ ಪಟ್ಟಿ ದೊಡ್ಡದಿದೆ. ಬೇರೆ ರಾಜ್ಯಗಳಲ್ಲಿಯದ್ದು ಗಣಿಸಿದರೆ ಲೆಕ್ಕಕ್ಕೆ ಸಿಗೋದಿಲ್ಲ ಬಿಡಿ. ಕೆಲ ವಂಚಕರು ಅದದೇ ಮಾರ್ಗದ ಮೂಲಕ ಜನರನ್ನು ಯಾಮಾರಿಸಿದರೆ ಇನ್ನೂ ಕೆಲವರು ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಾರೆ. ಈಗ ಇ ಟ್ಯಾಕ್ಸಿಗಳ ಹವಾ ಹೆಚ್ಚುತ್ತಿರುವುದರಿಂದ ಉತ್ತರಪ್ರದೇಶದ ವಂಚಕರ ಗ್ಯಾಂಗೊಂದು ಬೈಕ್​ಬೋಟ್ (Bikebot) ಎಂಬ ಹಗರಣ ನಡೆಸಿದ್ದಾರೆ. ಉತ್ತರಪ್ರದೇಶದ ಹಲವು ನಗರ ಮತ್ತು ಪಟ್ಟಣಗಳ ಮೂಲೆ ಮೂಲೆ ಸ್ಥಳಕ್ಕೂ ಬೈಕ್ ಟ್ಯಾಕ್ಸಿ ಸರ್ವಿಸ್ (Bike Taxi Service) ನೀಡುವ ಕಂಪನಿ ತಮ್ಮದೆಂದು ನಂಬಿಸಿ ಜನರಿಂದ ಹಣ ಸಂಗ್ರಹಿಸಿ ವಂಚನೆ ಎಸಗಲಾಗಿದೆ. ಈ ಹಗರಣದ ರೂವಾರಿ ದೀಪ್ತಿ ಬಾಹಲ್. ಸದ್ಯ ಪರಾರಿಯಾಗಿರುವ ಉತ್ತರಪ್ರದೇಶದ ಈ ಮಹಿಳೆಯ ತಲೆಗೆ ಅಲ್ಲಿನ ಪೊಲೀಸರು 5 ಲಕ್ಷ ರೂ ಬಹುಮಾನ ಇಟ್ಟಿದ್ದಾರೆ.

ಏನಿದು ಬೈಕ್ ಬೋಟ್ ಸ್ಕೀಮ್?

ಆಗಲೇ ತಿಳಿಸಿದಂತೆ ಇದು ಬೈಕ್ ಟ್ಯಾಕ್ಸಿ ಯೋಜನೆ. 2017ರಲ್ಲಿ ಈ ಕಂಪನಿ ಆರಂಭವಾಗಿದ್ದು. ಆಕರ್ಷಕವೆನಿಸುವ ಈ ಯೋಜನೆಯನ್ನು ಮುಂದಿಟ್ಟುಕೊಂಡು ದೀಪ್ತಿ ಬಾಹಲ್ ಅವರು ವಂಚನೆಯ ಬಲೆಯನ್ನೇ ಹೆಣೆದಿದ್ದರು. ಜನರು ಬೈಕ್ ಮೇಲೆ ಹಣ ಹೂಡಿಕೆ ಮಾಡಿದರೆ ಪ್ರತೀ ತಿಂಗಳು ನಿರ್ದಿಷ್ಟ ಮೊತ್ತದ ರೆಂಟಲ್ ಪಾವತಿಸಲಾಗುವುದು. ಜೊತೆಗೆ ಒಂದು ಬೈಕ್​ಗೆ ಶೇ. 5ರಷ್ಟು ಬೋನಸ್ ಬಾಡಿಗೆಯೂ ಸಿಗುತ್ತದೆ ಎಂದು ಕಂಪನಿಯು ಆಫರ್ ಕೊಟ್ಟಿತು.

ಅದರಂತೆ ಒಂದು ಬೈಕ್​ಗೆ ಜನರು 62,100 ರೂ ಹೂಡಿಕೆ ಮಾಡಬೇಕು. ಇದಕ್ಕೆ ತಿಂಗಳಿಗೆ 5,175 ರೂನಂತೆ ಇಎಂಐ ಕಟ್ಟಬೇಕು ಎಂದು ತಿಳಿಸಲಾಯಿತು. ಇನ್ನು ಕಂಪನಿ ವತಿಯಿಂದ ಬೈಕ್​ನ ಬಾಡಿಗೆಯಾಗಿ ಜನರಿಗೆ ತಿಂಗಳಿಗೆ 4,590 ರೂ ನೀಡುವ ಆಫರ್ ಇದು.

ಇದನ್ನೂ ಓದಿ: Twitter: ಸುದ್ದಿಗೆ ದುಡ್ಡು; ಟ್ವಿಟ್ಟರ್​ಗೆ ಆದಾಯ ತರಲು ಮಸ್ಕ್ ಹರಸಾಹಸ; ಮಾಧ್ಯಮಗಳಿಗೆ ಮಂದಹಾಸ; ಆದರೆ, ಇದರ ಜಾರಿ ಹೇಗೆ ಸಾಧ್ಯ?

ಜನವರಿಗೆ ಈ ಆಫರ್ ಸಹಜವಾಗಿ ತೃಪ್ತಿ ತಂದಿದೆ. ಎರಡು ವರ್ಷದಲ್ಲಿ ತಾವು ಹಾಕಿದ ಬಂಡವಾಳ ವಾಪಸ್ ಬಂದು, ತಿಂಗಳಿಗೆ ನಾಲ್ಕೈದು ಸಾವಿರ ರೂ ಕೊಡುವ ಆದಾಯಮೂಲ ಸೃಷ್ಟಿಸುವ ಈ ಯೋಜನೆ ಯಾರಿಗೆ ತಾನೆ ಇಷ್ಟವಾಗದು? ಅಂತೆಯೇ ಜನರು ಮುಗಿಬಿದ್ದು ಈ ಯೋಜನೆಗೆ ದುಡ್ಡು ಹಾಕಿದರು.

ಎಲ್ಲಾ ಹಗರಣಗಳಂತೆ ಬೈಕ್​ಬೋಡ್ ಸ್ಕೀಮ್ ಕೂಡ ಆರಂಭದಲ್ಲಿ ಚೆನ್ನಾಗಿ ನಡೆಯಿತು. ಯೋಜನೆ ಆರಂಭವಾಗಿ ಒಂದು ಅಥವಾ ಒಂದೂವರೆ ವರ್ಷದವರೆಗೂ ಕಂಪನಿ ವತಿಯಿಂದ ಹೂಡಿಕೆದಾರರಿಗೆ ತಿಂಗಳ ಕಂತು ಹೋಗುತ್ತಿತ್ತು. ಆಗ ಶುರುವಾಯಿತು ಎಲೆಕ್ಟ್ರಿಕ್ ಬೈಕ್​ನ ಇನ್ವೆಸ್ಟ್​ಮೆಂಟ್ ಸ್ಕೀಮ್.

2018ರ ನವೆಂಬರ್​ನಲ್ಲಿ ಇಬೈಕ್ ಸ್ಕೀಮ್​ನಲ್ಲಿ ಹೂಡಿಕೆ ದುಡ್ಡು ಲಕ್ಷಕ್ಕೂ ಮೇಲೆ ನಿಗದಿ ಮಾಡಲಾಯಿತು. ಹಿಂದಿನ ಬೈಕ್ ಸ್ಕೀಮ್​ನಲ್ಲಿ ಭರವಸೆ ನೀಡಿದಂತೆ ರಿಟರ್ನ್ ಬರುವುದನ್ನು ನೋಡಿದ್ದ ಜನರು ಇಬೈಕ್ ಸ್ಕೀಮ್ ಮೇಲೂ ಮುಗಿಬಿದ್ದು ದುಡ್ಡು ಸುರಿದರು.

ಮರುವರ್ಷ, ಅಂದರೆ 2019ರಲ್ಲಿ ಅನೇಕ ಜನರು ತಮಗೆ ಭರವಸೆ ನೀಡಿದಂತೆ ರಿಟರ್ನ್ ಬರುತ್ತಿಲ್ಲ ಎಂದು ಪೊಲೀಸ್ ಠಾಣೆಗಳಲ್ಲಿ ದೂರು ಕೊಡಲು ಆರಂಭಿಸಿದರು. ಅಲ್ಲಿಗೆ ಹಗರಣ ಬಯಲಿಗೆ ಬಂದಿತ್ತು.

ಕೊಳ್ಳೆ ಹೊಡೆದ ದುಡ್ಡು ಎಷ್ಟು?

ದೀಪ್ತಿ ಬಾಹಲ್ ಬಾಘಪತ್​ನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿದ್ದವರು. ಈಕೆಯ ಪತಿಯ ಕುಟುಂಬದವರದ್ದು ರಿಯಲ್ ಎಸ್ಟೇಟ್ ಕಂಪನಿ ಇತ್ತು. ದೀಪ್ತಿ ಅದರ ನಿರ್ದೇಶಕಿಯಾಗಿದ್ದರು. 2017ರಲ್ಲಿ ಇದೇ ಕಂಪನಿ ವತಿಯಿಂದ ಬೈಕ್ ಟ್ಯಾಕ್ಸಿ ವ್ಯವಹಾರ ಶುರುವಾಗಿದ್ದು. ದೀಪ್ತಿಯೇ ಈ ಯೋಜನೆಯ ರೂವಾರಿ ಎಂದೆನ್ನಲಾಗಿದೆ. ಹಗರಣ ಬೆಳಕಿಗೆ ಬರುತ್ತಲೇ ಈಕೆ ಪರಾರಿಯಾಗಿದ್ದಾರೆ. ವಿದೇಶಕ್ಕೆ ಹೋಗಿರುವ ಶಂಕೆ ಇದೆ. ಈಕೆಯ ಪತಿ 2019ರಲ್ಲಿ ಕೋರ್ಟ್​ಗೆ ಶರಣಾಗಿದ್ದಾರೆ.

ಇದನ್ನೂ ಓದಿ: SEBI: ಅದಾನಿ ಗ್ರೂಪ್​ನಂಥ ಸಂಸ್ಥೆಯ ತನಿಖೆಗೆ ಹೆಚ್ಚು ಸಮಯ ಬೇಕು: ಸುಪ್ರೀಂಕೋರ್ಟ್​ಗೆ ಸೆಬಿ ಮನವಿ

ಜಾರಿ ನಿರ್ದೇಶನಾಲಯದಿಂದ ತನಿಖೆ ಆಗಿದೆ. ಆರ್ಥಿಕ ಅಪರಾಧಗಳ ವಿಭಾಗದ ಪ್ರಕಾರ ಲಕ್ಷಾಂತರ ಜನರಿಗೆ 4,500 ಕೋಟಿ ರೂ ವಂಚನೆ ಆಗಿದೆ. ದೇಶಾದ್ಯಂತ 250 ಪ್ರಕರಣಗಳು ದಾಖಲಾಗಿವೆ. ಕೆಲ ವರದಿಗಳ ಪ್ರಕಾರ ವಂಚನೆಯ ಪ್ರಮಾಣ 15,000 ಕೋಟಿ ರೂ ಎನ್ನಲಾಗಿದೆ. ದೀಪ್ತಿ ಹಾಗು ಆಕೆಯ ಕುಟುಂಬದವರಿಗೆ ಸೇರಿದ ಚಿರ ಮತ್ತು ಚರಾಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಇವೆಲ್ಲದರ ಮೌಲ್ಯ 103 ಕೋಟಿ ರೂ ಇರಬಹುದು.

ಜನರಿಂದ ಪಡೆದಿರುವ ಸಾವಿರಾರು ಕೋಟಿ ರೂ ಎಲ್ಲಿ ಹೋಯಿತು ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಹೆಚ್ಚುತ್ತಿದ್ದಾರೆ. ಕುಲ್ಲು ಮನಾನಿಯಲ್ಲಿ ರೆಸಾರ್ಟ್ ಖರೀದಿ, ಬೇರೆ ಬೇರೆ ಕಂಪನಿ ಮತ್ತು ವ್ಯಕ್ತಿಗಳ ಹೆಸರಿನಲ್ಲಿ ಹಲವು ಆಸ್ತಿಗಳ ಖರೀದಿ ಮಾಡಲಾಗಿದೆ. ವಿವಿಧ ಕಂಪನಿಗಳು ಮತ್ತು ವ್ಯಕ್ತಿಗಳಿಗೆ ಹೂಡಿಕೆ ಮತ್ತು ಸಾಲವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಇವು ತನಿಖಾಧಿಕಾರಿಗಳಿಗೆ ಸದ್ಯ ಗೊತ್ತಾಗಿರುವ ಅಂಶಗಳು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ