SEBI: ಅದಾನಿ ಗ್ರೂಪ್​ನಂಥ ಸಂಸ್ಥೆಯ ತನಿಖೆಗೆ ಹೆಚ್ಚು ಸಮಯ ಬೇಕು: ಸುಪ್ರೀಂಕೋರ್ಟ್​ಗೆ ಸೆಬಿ ಮನವಿ

Adani Group and Hindenburg Research Report: ಅದಾನಿ ಗ್ರೂಪ್ ವಿರುದ್ಧ ಹಿಂಡನ್ಬರ್ಗ್ ಮಾಡಿದ ಆರೋಪ ಸಂಬಂಧ ಮೇ 2ರೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕೆಂದು ಸೆಬಿಗೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಆದರೆ, ಅದಾನಿಯಂಥ ಕಂಪನಿಗಳ ತನಿಖೆಗೆ ಈ ಸಮಯ ಸಾಕಾಗಲ್ಲ. ಹೆಚ್ಚು ಕಾಲಾವಕಾಶ ಬೇಕು ಎಂದು ಸೆಬಿ ಕೋರಿದೆ.

SEBI: ಅದಾನಿ ಗ್ರೂಪ್​ನಂಥ ಸಂಸ್ಥೆಯ ತನಿಖೆಗೆ ಹೆಚ್ಚು ಸಮಯ ಬೇಕು: ಸುಪ್ರೀಂಕೋರ್ಟ್​ಗೆ ಸೆಬಿ ಮನವಿ
ಸೆಬಿ
Follow us
|

Updated on: Apr 30, 2023 | 10:57 AM

ನವದೆಹಲಿ: ಅದಾನಿ ಗ್ರೂಪ್ ವಿರುದ್ದ ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ (Hindenburg Research Company) ಮಾಡಿದ್ದ ಆರೋಪಗಳ ಸಂಬಂಧ ತನಿಖೆ ಪೂರ್ಣಗೊಳಿಸಲು ಸುಪ್ರೀಂಕೋರ್ಟ್ ಬಳಿ ಸೆಬಿ (SEBI- Securities and Exchange Board of India) ಹೆಚ್ಚು ಕಾಲಾವಕಾಶ ಕೋರಿದೆ. ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ 2 ತಿಂಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಕಳೆದ ತಿಂಗಳು ಸೆಬಿಗೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಅದಾನಿ ಗ್ರೂಪ್​ನಂತಹ ಸಂಸ್ಥೆಯ ತನಿಖೆಗೆ ಈ ಸಮಯ ಸಾಕಾಗುವುದಿಲ್ಲ. ವಹಿವಾಟುಗಳು ಸಂಕೀರ್ಣವಾಗಿರುವುದರಿಂದ ಎಲ್ಲಾ ಸ್ತರಗಳಲ್ಲೂ ತನಿಖೆ ಆಗಬೇಕು. ಅದಕ್ಕೆ ಹೆಚ್ಚು ಕಾಲಾವಕಾಶ ಬೇಕು. ತಮಗೆ ಇನ್ನೂ 6 ತಿಂಗಳು ಹೆಚ್ಚುವರಿ ಸಮಯ ಕೊಡಿ ಎಂದು ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಅರ್ಜಿಯಲ್ಲಿ ಸೆಬಿ ಕೋರಿಕೊಂಡಿದೆ.

‘ಶಾರ್ಟ್ ಸೆಲಿಂಗ್ ಕಂಪನಿಗಳು ಅಮೆರಿಕದಲ್ಲಿ ವಿವಿಧ ಕಂಪನಿಗಳ ವಿರುದ್ಧ ಸಲ್ಲಿಸಿದ್ದ 56 ಪ್ರಕರಣಗಳನ್ನು ಸೆಬಿ ಅಧ್ಯಯನ ನಡೆಸಿದೆ. ಆರೋಪಿತ ಅರೋಪಿತ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾದ ಪ್ರಕರಣಗಳನ್ನು ಗಮನಿಸಿದರೆ, ಇಂಥ ಪ್ರಕರಣಗಳಲ್ಲಿ ತನಿಖೆ ನಡೆಸಲು ಸೆಕ್ಯೂರಿಟೀಸ್ ಎಕ್ಸ್​ಚೇಂಜ್ ಕಮಿಷನ್ (ಅಮೆರಿಕದ ಷೇರುಪೇಟೆ ನಿಯಂತ್ರಣ ಪ್ರಾಧಿಕಾರ) ಸುಮಾರು 9ತಿಂಗಳಿಂದ 5 ವರ್ಷ ತೆಗೆದುಕೊಂಡಿದೆ. ಅಂದರೆ ಸರಾಸರಿ 2 ವರ್ಷ ಆಗಿದೆ.

ಇದನ್ನೂ ಓದಿSwiggy: ಸ್ವಿಗ್ಗಿಯಲ್ಲಿ ಊಟಕ್ಕೆ ಆರ್ಡರ್ ಮಾಡಿದರೆ ಹೆಚ್ಚುವರಿ ಪ್ಲಾಟ್​ಫಾರ್ಮ್ ಶುಲ್ಕ; ಎಲ್ಲಾ ಫೂಡ್ ಆರ್ಡರ್​ಗೂ ಫೀಸ್ ಅನ್ವಯ; ಬೆಂಗಳೂರು, ಹೈದರಾಬಾದ್​ನಲ್ಲಿ ಆರಂಭಿಕ ಪ್ರಯೋಗ

‘ಅದಾನಿ ಗ್ರೂಪ್​ನಂತಹ ಕಂಪನಿಗಳ ವ್ಯವಹಾರಗಳನ್ನು ತನಿಖೆ ನಡೆಸುವುದು ಬಹಳ ಸಂಕೀರ್ಣ ಕಾರ್ಯವಾಗುತ್ತದೆ. ಪ್ರತಿಯೊಂದು ವಹಿವಾಟಿನ ಪ್ರತಿಯೊಂದು ವಿವರವನ್ನೂ ಕೂಲಂಕಷವಾಗಿ ಗಮನಿಸಬೇಕಾಗುತ್ತದೆ. 6 ತಿಂಗಳೊಳಗೆ ಈ ಕೆಲಸ ಮಾಡಲು ಕಷ್ಟಸಾಧ್ಯ’ ಎಂದು ಸೆಬಿ ಪರವಾಗಿ ವಕೀಲ ಶಶಾಂಕ್ ಅಗರ್ವಾಲ್ ಅವರು ಸುಪ್ರೀಂ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ಮೇ 2ರೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕೆಂದು ಸುಪ್ರೀಂಕೋರ್ಟ್ ಮಾರ್ಚ್ ತಿಂಗಳಲ್ಲಿ ಸೆಬಿಗೆ ಸೂಚಿಸಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನ ಬರುವ ಮುನ್ನವೇ ಸೆಬಿ ಅದಾನಿ ಗ್ರೂಪ್ ಕಂಪನಿಗಳ ವಿರುದ್ಧ ತನಿಖೆ ನಡೆಸುತ್ತಿತ್ತು. ಆದರೆ, ಅದಾನಿ ಗ್ರೂಪ್​ಗೆ ಸೇರಿದ ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಕನಿಷ್ಠ ಸಾರ್ವಜನಿಕ ಷೇರುದಾರಿಕೆ ನಿಯಮಗಳ (ಪಬ್ಲಿಕ್ ಷೇರ್​ಹೋಲ್ಡಿಂಗ್ ನಾರ್ಮ್ಸ್) ಉಲ್ಲಂಘನೆ ಮಾಡಿವೆಯಾ; ಸಂಬಂಧಿತ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ವಹಿವಾಟು ತೋರಿಸಲು ವಿಫಲವಾಗಿವೆಯಾ; ಅಥವಾ ಷೇರು ಬೆಲೆಗಳನ್ನು ಕೃತಕವಾಗಿ ಉಬ್ಬಿಸಲಾಗಿದೆಯಾ ಎಂಬಿತ್ಯಾದಿ ಹಿಂಡನ್ಬರ್ಗ್ ವರದಿಯಲಿ ಮಾಡಲಾದ ಆರೋಪಗಳ ಬಗ್ಗೆ ತನಿಖೆ ನಡೆಸಿ ಎಂದು ಸೆಬಿಗೆ ಸುಪ್ರೀಂಕೋರ್ಟ್ ನಿರ್ದಿಷ್ಟವಾಗಿ ಆದೇಶಿಸಿತ್ತು.

ಜನವರಿ ಕೊನೆಯ ವಾರದಲ್ಲಿ ಹಿಂಡನ್ಬರ್ಗ್ ವರದಿ ಸ್ಫೋಟ

ಅಮೆರಿಕದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್ಬರ್ಗ್ ರಿಸರ್ಚ್ ಜನವರಿ 24ರಂದು ಗೌತಮ್ ಅದಾನಿ ಮಾಲಿಕತ್ವದ ಅದಾನಿ ಗ್ರೂಪ್ ವಿರುದ್ಧ ತನಿಖಾ ವರದಿ ಬಹಿರಂಗಪಡಿಸಿತ್ತು. ಎರಡು ವರ್ಷಗಳ ಕಾಲ ನಡೆಸಿದ ತನಿಖೆಯಲ್ಲಿ ಅದಾನಿ ಗ್ರೂಪ್ ಕಂಪನಿ ಹಲವಾರು ಹಣಕಾಸು ಅಕ್ರಮ ಅವ್ಯವಹಾರಗಳನ್ನು ನಡೆಸಿದೆ. ಷೇರುಬೆಲೆಗಳನ್ನು ಕೃತಕವಾಗಿ ಉಬ್ಬಿಸಿದೆ ಎಂದು ಆರೋಪ ಮಾಡಿತು. ಅದಾನಿ ಗ್ರೂಪ್ ವಿರುದ್ಧ ಆರೋಪಗಳ ದೊಡ್ಡ ಪಟ್ಟಿಯನ್ನೇ ಮುಂದಿಟ್ಟಿತು.

ಇದನ್ನೂ ಓದಿಆಪದ್ಬಾಂಧವ ಚಿನ್ನದ ಮೇಲೆ ಸಾಲ ಪಡೆಯಬೇಕಾ? ಹಾಗಾದರೆ ಕಡಿಮೆ ಬಡ್ಡಿಗೆ ಸಾಲ ನೀಡುವ ಬ್ಯಾಂಕ್‌ಗಳು ಯಾವುವು?

ಈ ವರದಿ ಬಳಿಕ ಅದಾನಿ ಗ್ರೂಪ್​ನ ಕಂಪನಿಗಳ ಷೇರುಗಳು ಪ್ರಪಾತಕ್ಕೆ ಬಿದ್ದವು. ಅಪಾರ ಷೇರುಸಂಪತ್ತುಗಳ ಮೂಲಕ ವಿಶ್ವದ 3ನೇ ಅತಿ ಶ್ರೀಮಂತ ವ್ಯಕ್ತಿ ಎನಿಸಿದ್ದ ಗೌತಮ್ ಅದಾನಿ ದಿಢೀರನೇ 30ಕ್ಕಿಂತ ಹೆಚ್ಚು ಸ್ಥಾನ ಕೆಳಗೆ ಕುಸಿದರು.

ಇದಕ್ಕಿಂತ ಹೆಚ್ಚಾಗಿ, ಹಲವಾರು ಉದ್ಯಮಗಳಿಗೆ ವಿಸ್ತರಿಸಿದ್ದ ಅದಾನಿ ಗ್ರೂಪ್ ಮೇಲೆ ಜನರ ವಿಶ್ವಾಸ ಮಸುಕಾಗುವಂತೆ ಮಾಡಿದೆ. ಅದಾನಿ ಗ್ರೂಪ್ ಕಂಪನಿಗಳ ಮೇಲೆ ಲಕ್ಷಾಂತರ ಕೋಟಿ ಹೂಡಿಕೆ ಮಾಡಿದ್ದ ಎಲ್​ಐಸಿಯಂತಹ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಸ್ಥಿತಗತಿ ಹಾಗೂ ಅದರಿಂದ ಭಾರತದ ಆರ್ಥಿಕತೆಗೆ ಋಣಾತ್ಮಕ ಪರಿಣಾಮ ಉಂಟಾಗುವುದು ಮತ್ತು ಜನಸಾಮಾನ್ಯರ ತಳಮಳ ಇವೆಲ್ಲವೂ ಗಮನಾರ್ಹವಾಗಿದೆ.

ಹಿಂಡನ್ಬರ್ಗ್ ರಿಸರ್ಚ್ ಕಂಪನಿಯ ವರದಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮಾರ್ಚ್ 2ರಂದು ತಜ್ಞರ ಸಮಿತಿಯೊಂದನ್ನು ಸ್ಥಾಪಿಸಿದೆ. ಸುಪ್ರೀಂಕೋರ್ಟ್ ನ್ಯಾಯೂರ್ತಿ ಎಎಂ ಸಪ್ರೆ ನೇತೃತ್ವದ 6 ಸದಸ್ಯರು ಈ ಸಮಿತಿಯಲ್ಲಿರುತ್ತಾರೆ. ಅದಾದ ಬಳಿಕ ಮೇ 2ರೊಳಗೆ ಸ್ಟೇಟಸ್ ರಿಪೋರ್ಟ್ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೆಬಿಗೆ ಸೂಚಿಸಿತ್ತು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ