Sign In

By signing in or creating an account, you agree with Associated Broadcasting Company's Terms & Conditions and Privacy Policy.

Manish Lachwani: ಅಮೆರಿಕದ ಭಾರತೀಯ ಮೂಲದ ಟೆಕ್ಕಿಯ ಕರ್ಮಕಾಂಡ; ಮಾಡಿದ್ದ ಹೆಸರೆಲ್ಲಾ ನೀರಲ್ಲಿ ಮಣ್ಣುಪಾಲು; ಮಾಜಿ ಸಿಇಒಗೆ ಕಾದಿದೆಯಾ 20 ವರ್ಷ ಜೈಲುಶಿಕ್ಷೆ?

HeadSpin Ex-CEO Pleads Guilty of 3 Charges In US Court: ಅಮೆರಿಕದಲ್ಲಿ ಹೆಡ್​ಸ್ಪಿನ್ ಎಂಬ ಸ್ಟಾರ್ಟಪ್ ಕಟ್ಟಿ ಅದಕ್ಕೆ ಹೆಚ್ಚು ಬಂಡವಾಳ ತರಲು ಅಕ್ರಮ ತಂತ್ರಗಳನ್ನು ಅನುಸರಿಸಿದ ಆರೋಪಗಳು ಭಾರತೀಯ ಮೂಲದ ಮನೀಶ್ ಲಾಚವಾನಿ ಮೇಲಿವೆ. ಕೋರ್ಟ್ ಮುಂದೆ ಈಗ ಅವರು ತಪ್ಪೊಪ್ಪಿಕೊಂಡಿದ್ದಾರೆ.

Manish Lachwani: ಅಮೆರಿಕದ ಭಾರತೀಯ ಮೂಲದ ಟೆಕ್ಕಿಯ ಕರ್ಮಕಾಂಡ; ಮಾಡಿದ್ದ ಹೆಸರೆಲ್ಲಾ ನೀರಲ್ಲಿ ಮಣ್ಣುಪಾಲು; ಮಾಜಿ ಸಿಇಒಗೆ ಕಾದಿದೆಯಾ 20 ವರ್ಷ ಜೈಲುಶಿಕ್ಷೆ?
ಹಣಕಾಸು ಅಕ್ರಮ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 30, 2023 | 1:19 PM

ಸ್ಯಾನ್ ಫ್ರಾನ್ಸಿಸ್ಕೋ: ಷೇರುಪೇಟೆಯಲ್ಲಿ ಕಂಪನಿಯ ಷೇರುಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಸಲು ಕಂಪನಿಯ ಆದಾಯವನ್ನು ಕೃತಕವಾಗಿ ಉಬ್ಬಿಸುವ (Artificially Inflate Revenue Numbers) ಕುತಂತ್ರಗಾರಿಕೆ ಕಾರ್ಪೊರೇಟ್ ವಲಯದಲ್ಲಿ ಅನುಸರಿಸಲಾಗುತ್ತದೆ ಎಂಬ ಆರೋಪ ಬಹಳ ಕಾಲದಿಂದಲೂ ಇದೆ. ಈ ಬಗ್ಗೆ ಕಾರ್ಪೊರೇಟ್ ಪ್ರಾಧಿಕಾರಗಳು ಬಹಳ ಕಟ್ಟುನಿಟ್ಟಿನ ನಿಯಮಗಳನ್ನು ಹಾಕಿವೆ. ಆದರೂ ಅಲ್ಲಲ್ಲಿ ಕಂಪನಿಗಳು ಇಂತಹ ಕೃತಕ ವರದಿಗಳನ್ನು ಬಿಡುಗಡೆ ಮಾಡಿ ಹೂಡಿಕೆದಾರರನ್ನು ವಂಚಿಸುವ ಕೆಲಸ ಮಾಡುತ್ತವೆ. ಅಮೆರಿಕದಲ್ಲಿ ಇಂಥ ಕೆಲಸ ಮಾಡಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸಿಕ್ಕಿಬಿದ್ದಿದ್ದಾರೆ. ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಸಿಲಿಕಾನ್ ವ್ಯಾಲಿಯಲ್ಲಿನ ಹೆಡ್​ಸ್ಪಿನ್ (HeadSpin) ಎಂಬ ಕಂಪನಿಯ ಮಾಜಿ ಸಿಇಒ 47 ವರ್ಷದ ಮನೀಶ್ ಲಾಚವಾನಿ ಈಗ ಇಂಥ ಆರೋಪ ಎದುರಿಸುತ್ತಿದ್ದಾರೆ. ಅಲ್ಲದೇ ಅಮೆರಿಕದ ಕೋರ್ಟ್​ವೊಂದರ ಮುಂದೆ ಇವರು ತಪ್ಪೊಪ್ಪಿಗೆಯನ್ನೂ ನೀಡಿರುವುದು ಬೆಳಕಿಗೆ ಬಂದಿದೆ.

ಹೆಡ್​ಸ್ಪಿನ್ ಎಂಬ ಸಾಫ್ಟ್​ವೇರ್ ಕಂಪನಿಯನ್ನು 2015ರಲ್ಲಿ ಸ್ಥಾಪಿಸಿದ್ದ ಮನೀಶ್ ಲಾಚವಾನಿ 2020ರವರೆಗೂ ಸಿಇಒ ಆಗಿದ್ದರು. ಮೊಬಯಲ್ ಅಪ್ಲಿಕೇಶನ್​ಗಳನ್ನು ಪರೀಕ್ಷಿಸುವ ಸಾಫ್ಟ್​ವೇರ್ ಟೂಲ್​ಗಳನ್ನು ತಯಾರಿಸುವ ಕಂಪನಿ ಅವರದ್ದು. 2020ರಲ್ಲಿ ಮನೀಶ್ ಅವರ ವಿರುದ್ಧ ಹಣಕಾಸು ನೀತಿ ಅವ್ಯವಹಾರಗಳ ಗುರುತರ ಆರೋಪ ಬಂದವು. ಆ ಬಳಿಕ ಅವರು ರಾಜೀನಾಮೆ ನೀಡಿದರು. 2021 ಆಗಸ್ಟ್ ತಿಂಗಳಲ್ಲಿ ಅವರ ಬಂಧನವಾಯಿತು. ಇದೀಗ ತಮ್ಮ ತಪ್ಪುಗಳನ್ನು ಕೋರ್ಟ್ ಮುಂದೆ ಅವರು ಒಪ್ಪಿಕೊಂಡಿದ್ದಾರೆ.

ಮನೀಶ್ ಲಾಚವಾನಿ ಮಾಡಿದ ತಪ್ಪುಗಳೇನು?

2017 ಏಪ್ರಿಲ್​ನಿಂದ 2020 ಏಪ್ರಿಲ್​ವರೆಗೂ ಹೆಡ್​​ಸ್ಪಿನ್ ಕಂಪನಿ ವಿವಿಧ ಅವಧಿಯಲ್ಲಿ ಹೂಡಿಕೆದಾರರಿಂದ 100 ಮಿಲಿಯನ್ ಡಾಲರ್​ನಷ್ಟು (ಸುಮಾರು 810 ಕೋಟಿ ರೂ) ಬಂಡವಾಳ ಕಲೆ ಹಾಕಿತ್ತು. ಇದರಿಂದ ಕಂಪನಿಯ ವ್ಯಾಲ್ಯುವೇಶನ್ 1.1 ಬಿಲಿಯನ್ ಡಾಲರ್​ನಷ್ಟಾಯಿತು. ಅಂದರೆ ಸುಮಾರು 9,000 ಕೋಟಿ ರೂನಷ್ಟು ಮೌಲ್ಯದ ಕಂಪನಿ ಎನಿಸಿತು. ಇಷ್ಟೇ ಆಗಿದ್ದರೆ ಅದು ಕಂಪನಿಯ ಗಮನಾರ್ಹ ಸಾಧನೆ ಎನಿಸುತ್ತಿತ್ತು. ಆದರೆ, ಇಷ್ಟು ಬಂಡವಾಳ ಸಂಗ್ರಹಿಸಲು ಹೂಡಿಕೆದಾರರನ್ನು ಸೆಳೆಯಲು ಹೆಡ್​ಸ್ಪಿನ್ ಸಿಇಒ ಅಕ್ರಮ ಮಾರ್ಗಗಳನ್ನು ಹಿಡಿದಿದ್ದರು.

ಇದನ್ನೂ ಓದಿSEBI: ಅದಾನಿ ಗ್ರೂಪ್​ನಂಥ ಸಂಸ್ಥೆಯ ತನಿಖೆಗೆ ಹೆಚ್ಚು ಸಮಯ ಬೇಕು: ಸುಪ್ರೀಂಕೋರ್ಟ್​ಗೆ ಸೆಬಿ ಮನವಿ

ಸ್ಟಾರ್ಟಪ್ ಎನಿಸಿದ್ದ ಹೆಡ್​ಸ್ಪಿನ್​ನ ಆದಾಯ ಮತ್ತಿತರ ಹಣಕಾಸು ಅಂಶಗಳನ್ನು ಕೃತಕವಾಗಿ ಉಬ್ಬಿಸಿ ತೋರಿಸಲಾಗಿತ್ತು. ಇದರಿಂದ ಹೂಡಿಕೆದಾರರಿಗೆ 80 ಮಿಲಿಯನ್ ಡಾಲರ್​ನಷ್ಟು ಹಣ ವಂಚನೆ ಆಗಿದೆ ಎಂಬುದು ಆರೋಪ. ಹೆಡ್​ಸ್ಪಿನ್ ಕಂಪನಿ ಬಂಡವಾಳ ಸಂಗ್ರಹಿಸುತ್ತಿರುವ ಹೊತ್ತಿನಲ್ಲಿ ಮನೀಶ್ ಲಾಚವಾನಿ ಅವರು ಕಂಪನಿಯ ವ್ಯವಹಾರ, ಗ್ರಾಹಕರು, ಆದಾಯ, ಹಣಕಾಸು ಸ್ಥಿತಿ ಇತ್ಯಾದಿ ಬಗ್ಗೆ ಹೂಡಿಕೆದಾರರಿಗೆ ತಪ್ಪು ಮಾಹಿತಿ ರವಾನಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಹೂಡಿಕೆದಾರರು ಪ್ರಭಾವಿತರಾಗಿ ಹೆಡ್​​ಸ್ಪಿನ್ ಕಂಪನಿಯ ಷೇರುಗಳಿಗೆ ಹೂಡಿಕೆ ಮಾಡಿದ್ದರು ಎಂಬುದು ಆರೋಪ.

ಮನೀಶ್ ಲಾಚವಾನಿಗೆ 20 ವರ್ಷ ಜೈಲು ಶಿಕ್ಷೆ ಆಗುತ್ತದೆಯಾ?

ಸ್ಯಾನ್ ಫ್ರಾನ್ಸಿಸ್ಕೋ ಫೆಡರಲ್ ಕೋರ್ಟ್​ನಲ್ಲಿ ಇದರ ವಿಚಾರಣೆ ಆಗಿದೆ. ಇಲ್ಲಿ ಮೂರು ಆರೋಪಗಳ ವಿಚಾರದಲ್ಲಿ ಮನೀಶ್ ಲಾಚವಾನಿ ತಪ್ಪೊಪ್ಪಿಕೊಂಡಿದ್ದಾರೆ. ಅಮೆರಿಕದಲ್ಲಿ ಹಣಕಾಸು ವಂಚನೆ, ಷೇರು ಅಕ್ರಮ ಇತ್ಯಾದಿಗೆಲ್ಲಾ ಕಠಿಣ ಕಾನೂನುಗಳುಂಟು. ಮನೀಶ್ ಮೇಲೆ ಬಂದಿರುವ ಆರೋಪದಂತಹ ಪ್ರಕರಣಗಳಲ್ಲಿ ಗರಿಷ್ಠ ಶಿಕ್ಷೆ 20 ವರ್ಷ ಸಜೆ ಹಾಗೂ 40 ಕೋಟಿ ರೂವರೆಗೂ ದಂಡ ವಿಧಿಸಬಹುದಾಗಿದೆ. ಕೆಲವೊಮ್ಮೆ ಹೆಚ್ಚುವರಿ ಅವಧಿಗೆ ಜೈಲುಶಿಕ್ಷೆ ಹಾಗೂ ಹೆಚ್ಚುವರಿ ದಂಡವನ್ನೂ ವಿಧಿಸಬಹುದು. 2023 ಸೆಪ್ಟೆಂಬರ್ 27ಕ್ಕೆ ಕೋರ್ಟ್ ತೀರ್ಪು ನೀಡಲಿದೆ.

ಇದನ್ನೂ ಓದಿInvestments: ಷೇರುಹೂಡಿಕೆಯಿಂದಲೇ ಸಿರಿವಂತರಾದ ಜುಂಜುನವಾಲ, ಕೇದಿಯಾ ಮೊದಲಾದವರ ಬಳಿ ಯಾವ್ಯಾವ ಕಂಪನಿಗಳ ಷೇರುಗಳಿವೆ? ಇಲ್ಲಿದೆ ಡೀಟೇಲ್ಸ್

ಪ್ರತಿಭಾನ್ವಿತ ಟೆಕ್ಕಿಯಾಗಿದ್ದ ಮನೀಶ್ ಲಾಚವಾನಿ

47 ವರ್ಷದ ಮನೀಶ್ ಲಾಚವಾನಿ ಟೆಕ್ಕಿ ಉದ್ಯಮದಲ್ಲಿ ಹೆಸರುವಾಸಿಯಾದವರು. ಹೆಡ್​ಸ್ಪಿನ್ ಎಂಬ ಸ್ಟಾರ್ಟಪ್ ಸ್ಥಾಪಿಸುವ ಮುನ್ನವೇ ಅವರ ಹೆಸರು ಈ ಉದ್ಯಮದಲ್ಲಿ ಪರಿಚಿತವಾಗಿತ್ತು. ಅಮೆಜಾನ್ ಟ್ಯಾಬ್ಲೆಟ್​ನ ಕಿಂಡಲ್ ಎಂಬ ಮೊದಲ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸಿದ್ದು ಮನೀಶ್ ಲಾಚಮಾನಿ ಅವರೆಯೇ. ಬಳಿಕ ಅವರು ಆ್ಯಪ್​ಪ್ಯೂರಿಫೈ (Appurify) ಎಂಬ ಮೊಬೈಲ್ ಟೆಸ್ಟಿಂಗ್ ಪ್ಲಾಟ್​ಫಾರ್ಮ್ ಸ್ಥಾಪನೆಗೆ ಕಾರಣರಾದರು. 2014ರಲ್ಲಿ ಈ ಪ್ಲಾಟ್​ಫಾರ್ಮ್ ಅನ್ನು ಗೂಗಲ್ ಖರೀದಿಸಿತು. ಅದಾಗಿ ಒಂದು ವರ್ಷದ ಬಳಿಕ ಮನೀಶ್ ಲಾಚಮಾನಿ ಅವರು ಹೆಡ್​ಸ್ಪಿನ್ ಅನ್ನು ಸ್ಥಾಪಿಸಿದರು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್