India Export: ತೈಲ ರಾಷ್ಟ್ರಗಳನ್ನೇ ಮೀರಿಸಿದ ಭಾರತ; ಯೂರೋಪ್​ಗೆ ಪೆಟ್ರೋಲ್ ಸರಬರಾಜಿನಲ್ಲಿ ಭಾರತವೇ ನಂ. 1

Refined Fuel Exports From India: ತನ್ನ ಪೆಟ್ರೋಲಿಯಂ ಅಗತ್ಯಗಳಿಗೆ ಭಾರತದ ಮೇಲೆ ಯೂರೋಪ್​ನ ಅವಲಂಬನೆ ಇನ್ನೂ ಹೆಚ್ಚಾಗಿದೆ. ಸಂಸ್ಕರಿತ ಇಂಧನಗಳನ್ನು ಭಾರತದಿಂದಲೇ ಯೂರೋಪ್ ಅತಿ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ರಷ್ಯಾದಿಂದ ಕಚ್ಛಾ ತೈಲ ಕಡಿಮೆ ಬೆಲೆ ಸಿಗುತ್ತಿರುವುದು ಭಾರತಕ್ಕೆ ವರದಾನವಾಗಿದೆ.

India Export: ತೈಲ ರಾಷ್ಟ್ರಗಳನ್ನೇ ಮೀರಿಸಿದ ಭಾರತ; ಯೂರೋಪ್​ಗೆ ಪೆಟ್ರೋಲ್ ಸರಬರಾಜಿನಲ್ಲಿ ಭಾರತವೇ ನಂ. 1
ಕಚ್ಛಾ ತೈಲ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 30, 2023 | 4:43 PM

ನವದೆಹಲಿ: ವಿಶ್ವದ ಅತಿದೊಡ್ಡ ಕಚ್ಛಾ ತೈಲ ಆಮದು ರಾಷ್ಟ್ರಗಳಲ್ಲೊಂದಾದ ಭಾರತ ಈಗ ಸಂಸ್ಕರಿತ ತೈಲೋತ್ಪನ್ನಗಳ (Petroleum Products) ರಫ್ತಿನಲ್ಲಿ ಮುಂಚೂಣಿಗೆ ಬಂದಿದೆ. ತೈಲೋತ್ಪನ್ನಗಳ ಸರಬರಾಜಿಗೆ ಭಾರತದ ಮೇಲೆ ಯೂರೋಪ್​ನ ಅವಲಂಬನೆ ಇನ್ನಷ್ಟು ಹೆಚ್ಚಾಗಿದೆ. ರೀಫೈನ್ಸ್ ಫುಯೆಲ್​ನಲ್ಲಿ (Refined Fuel) ಯೂರೋಪ್​ಗೆ ಭಾರತ ಈಗ ಅತಿದೊಡ್ಡ ಸರಬರಾಜುದಾರ ದೇಶವಾಗಿದೆ. ಈ ವಿಚಾರದಲ್ಲಿ ಸೌದಿ ಅರೇಬಿಯಾವನ್ನೇ ಮೀರಿಸುವಂತೆ ಭಾರತ ಬೆಳೆದಿದೆ. ಕೆಪ್ಲರ್ (Kpler) ಎಂಬ ಅನಾಲಿಟಿಕ್ಸ್ಸ್ ಸಂಸ್ಥೆ ಪ್ರಕಟಿಸಿದ ಇತ್ತೀಚಿನ ವರದಿಯಲ್ಲಿ ಈ ಮಾಹಿತಿ ಇದೆ. ಈ ವರದಿ ಪ್ರಕಾರ, ಯೂರೋಪ್ ದೇಶಗಳು ಭಾರತದಿಂದ ಆಮದು ಮಾಡಿಕೊಳ್ಳುವ ಸಂಸ್ಕರಿತ ಇಂಧನಗಳ ಪ್ರಮಾಣ ದಿನಕ್ಕೆ 30,000 ಬ್ಯಾರಲ್​ನಷ್ಟಾಗಲಿದೆ. ರಷ್ಯಾದಿಂದ ಭಾರತ ಕಡಿಮೆ ಬೆಲೆಗೆ ಕಚ್ಛಾ ತೈಲ ಪಡೆದು ಸಂಸ್ಕರಿತ ತೈಲೋತ್ಪನ್ನಗಳನ್ನು ಪಾಶ್ಚಿಮಾತ್ಯ ದೇಶಗಳಿಗೆ ಪೂರೈಸುತ್ತಿದೆ. ಈ ಮೂಲಕ ಭಾರತ ವಿಶ್ವದ ಅತಿದೊಡ್ಡ ಪೆಟ್ರೋಲಿಯಂ ರಫ್ತುದಾರ ದೇಶಗಳ ಪೈಕಿ ಸೇರಿದೆ.

ರಿಫೈನ್ಡ್ ಫುಯೆಲ್ ಎಂದರೇನು?

ಇಲ್ಲಿ ರೀಫೈನ್ಡ್ ಫುಯೆಲ್ ಅಥವಾ ಸಂಸ್ಕರಿತ ಇಂಧನ ಎಂದರೆ ಪೆಟ್ರೋಲ್, ಡೀಸೆಲ್ ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳು. ಕಚ್ಛಾ ತೈಲವನ್ನು ಸಂಸ್ಕರಿಸಿ ಅದನ್ನು ಪೆಟ್ರೋಲ್, ಡೀಸೆಲ್, ಕೆರೋಸಿನ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ರಿಲಾಯನ್ಸ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಬಿಪಿಸಿಎಲ್, ಎಚ್​​ಪಿಸಿಎಲ್, ಆಯಿಲ್ ಇಂಡಿಯಾ ಇತ್ಯಾದಿ ಕೆಲವಾರು ಭಾರತೀಯ ತೈಲ ಸಂಸ್ಕರಣಾ ಸಂಸ್ಥೆಗಳಿವೆ. ಒಟ್ಟು 23 ತೈಲ ಸಂಸ್ಕರಣಾ ಘಟಕಗಳು ಭಾರತದಲ್ಲಿವೆ. ಅಮೆರಿಕ ಬಿಟ್ಟರೆ ಈಗ ಭಾರತವೆ ಅತಿ ಹೆಚ್ಚು ರಿಫೈನ್ಡ್ ಆಯಿಲ್ ಉತ್ಪನ್ನಗಳನ್ನು ರಫ್ತು ಮಾಡುವುದು.

ಇದನ್ನೂ ಓದಿTwitter: ಸುದ್ದಿಗೆ ದುಡ್ಡು; ಟ್ವಿಟ್ಟರ್​ಗೆ ಆದಾಯ ತರಲು ಮಸ್ಕ್ ಹರಸಾಹಸ; ಮಾಧ್ಯಮಗಳಿಗೆ ಮಂದಹಾಸ; ಆದರೆ, ಇದರ ಜಾರಿ ಹೇಗೆ ಸಾಧ್ಯ?

ರಷ್ಯಾದಿಂದ ಕಡಿಮೆ ಬೆಲೆಗೆ ಭಾರತಕ್ಕೆ ಕಚ್ಛಾ ತೈಲ

ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ವಿರುದ್ಧ ಅಮೆರಿಕ ಹಾಗೂ ಯೂರೋಪ್ ಆರ್ಥಿಕ ನಿಷೇಧಗಳನ್ನು ಹೇರಿವೆ. ಇದರ ಭಾಗವಾಗಿ ರಷ್ಯಾದ ತೈಲವನ್ನೂ ನಿಷೇಧಿಸಿವೆ. ತಮ್ಮ ಇಂಧನ ಅಗತ್ಯಗಳಿಗೆ ರಷ್ಯಾ ಮೇಲೆ ಪೂರ್ಣ ಅವಲಂಬಿತವಾಗಿದ್ದ ಯೂರೋಪ್ ದೇಶಗಳಿಗೆ ಬೇರೆ ಪರ್ಯಾಯ ವ್ಯವಸ್ಥೆ ಬಳಸುವುದು ಅನಿವಾರ್ಯವಾಗಿದೆ.

ಅತ್ತ, ಯೂರೋಪ್​ನಿಂದ ತೈಲ ನಿಷೇಧವಾದ್ದರಿಂದ ರಷ್ಯಾಕ್ಕೂ ಆದಾಯ ಮೂಲಕ್ಕೆ ಹೊಡೆತಬಿದ್ದಂತಾಗಿತ್ತು. ಆದರೆ, ಕಡಿಮೆ ಬೆಲೆಗೆ ಕಚ್ಛಾ ತೈಲ ಮಾರಲು ರಷ್ಯಾ ನಿರ್ಧರಿಸಿತು. ಇದರ ಲಾಭವನ್ನು ಚೀನಾ, ಭಾರತ ಮೊದಲಾದ ದೇಶಗಳು ಪಡೆಯುತ್ತಿವೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿಗಿಂತ ಬಹಳ ಕಡಿಮೆ ಬೆಲೆಗೆ ರಷ್ಯಾದಿಂದ ಕಚ್ಛಾ ತೈಲ ಭಾರತಕ್ಕೆ ಸಿಗುತ್ತಿದೆ. ಈ ಅಗ್ಗದ ಕಚ್ಛಾ ತೈಲವನ್ನು ಭಾರತೀಯ ಕಂಪನಿಗಳು ಸಂಸ್ಕರಿಸಿ ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸುತ್ತಿವೆ. ಒಂದು ಭಾಗವು ಭಾರತಲ್ಲಿ ಬಳಕೆಗೆ ಹೋಗುತ್ತಿದೆ. ಇನ್ನೊಂದು ಭಾಗವು ರಫ್ತಾಗುತ್ತಿದೆ.

ಇದನ್ನೂ ಓದಿManish Lachwani: ಅಮೆರಿಕದ ಭಾರತೀಯ ಮೂಲದ ಟೆಕ್ಕಿಯ ಕರ್ಮಕಾಂಡ; ಮಾಡಿದ್ದ ಹೆಸರೆಲ್ಲಾ ನೀರಲ್ಲಿ ಮಣ್ಣುಪಾಲು; ಮಾಜಿ ಸಿಇಒಗೆ ಕಾದಿದೆಯಾ 20 ವರ್ಷ ಜೈಲುಶಿಕ್ಷೆ?

ಈ ವ್ಯವಸ್ಥೆ ಒಂದು ರೀತಿಯಲ್ಲಿ ವಿವಿಧ ರಾಷ್ಟ್ರಗಳ ಪ್ರತಿಷ್ಠೆಯನ್ನು ಶಮನಗೊಳಿಸುವಂತೆ ಅನಿಸುತ್ತದೆ. ಪಾಶ್ಚಿಮಾತ್ಯ ದೇಶಗಳಿಗೆ ರಷ್ಯಾಗೆ ನಿಷೇಧ ಹೇರಿದೆವೆಂಬ ಸಮಾಧಾನ ಸಿಕ್ಕಿದೆ; ಭಾರತದ ಮೂಲಕ ತಮ್ಮ ಇಂಧನ ಅಗತ್ಯಗಳನ್ನು ಈ ದೇಶಗಳು ಪೂರೈಸಿಕೊಳ್ಳುತ್ತಿವೆ; ರಷ್ಯಾಕ್ಕೂ ತನ್ನ ಆರ್ಥಿಕತೆ ಕುಸಿಯದಂತೆ ತಡೆಯಲು ಕಚ್ಛಾ ತೈಲ ರಫ್ತು ಸಹಾಯ ಮಾಡಿದೆ.

ಭಾರತ ತನ್ನ ಕಚ್ಛಾ ತೈಲದ ಅಗತ್ಯದಲ್ಲಿ ಶೇ. 44ರಷ್ಟು ಭಾಗ ರಷ್ಯಾದಿಂದಲೇ ಪೂರೈಕೆ ಆಗುತ್ತದೆ. ಉಕ್ರೇನ್ ಯುದ್ಧಕ್ಕೆ ಮುನ್ನ ಭಾರತ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಚ್ಛಾ ತೈಲ ಕೇವಲ ಶೇ. 2ಕ್ಕಿಂತಲೂ ಕಡಿಮೆ. ಈಗ ಅರ್ಧದಷ್ಟು ತೈಲವು ರಷ್ಯಾದಿಂದ ಬರುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Sun, 30 April 23

ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?