Swiggy: ಸ್ವಿಗ್ಗಿಯಲ್ಲಿ ಊಟಕ್ಕೆ ಆರ್ಡರ್ ಮಾಡಿದರೆ ಹೆಚ್ಚುವರಿ ಪ್ಲಾಟ್​ಫಾರ್ಮ್ ಶುಲ್ಕ; ಎಲ್ಲಾ ಫೂಡ್ ಆರ್ಡರ್​ಗೂ ಫೀಸ್ ಅನ್ವಯ; ಬೆಂಗಳೂರು, ಹೈದರಾಬಾದ್​ನಲ್ಲಿ ಆರಂಭಿಕ ಪ್ರಯೋಗ

Platform Fee of Rs 2 In Swiggy: ಆನ್​ಲೈನ್ ಫುಡ್ ಡೆಲಿವರಿ ಪ್ಲಾಟ್​ಫಾರ್ಮ್ ಸ್ವಿಗ್ಗಿಯಲ್ಲಿ ಮಾಡಲಾಗುವ ಎಲ್ಲಾ ಫುಡ್ ಆರ್ಡರ್​ಗೂ 2 ರೂ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. ಇದು ಸ್ವಿಗ್ಗಿ ಪ್ಲಾಟ್​ಫಾರ್ಮ್​ನ ಗುಣಮಟ್ಟ ಹೆಚ್ಚಿಸಲು ಬಳಕೆಯಾಗಲಿದೆ.

Swiggy: ಸ್ವಿಗ್ಗಿಯಲ್ಲಿ ಊಟಕ್ಕೆ ಆರ್ಡರ್ ಮಾಡಿದರೆ ಹೆಚ್ಚುವರಿ ಪ್ಲಾಟ್​ಫಾರ್ಮ್ ಶುಲ್ಕ; ಎಲ್ಲಾ ಫೂಡ್ ಆರ್ಡರ್​ಗೂ ಫೀಸ್ ಅನ್ವಯ; ಬೆಂಗಳೂರು, ಹೈದರಾಬಾದ್​ನಲ್ಲಿ ಆರಂಭಿಕ ಪ್ರಯೋಗ
ಸ್ವಿಗ್ಗಿ ಡೆಲಿವರಿ ಬಾಯ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 28, 2023 | 7:28 PM

ಬೆಂಗಳೂರು: ಪ್ರತೀ ಫುಡ್ ಅರ್ಡರ್​ಗೂ 2 ರೂಗಳ ಪ್ಲಾಟ್​ಫಾರ್ಮ್ ಫೀ (Platform Fee) ಸಂಗ್ರಹಿಸುವ ಕೆಲಸವನ್ನು ಸ್ವಿಗ್ಗಿ (Swiggy) ಆರಂಭಿಸಿದೆ. ನೀವು ಸ್ವಿಗ್ಗಿ ಆ್ಯಪ್​ನಲ್ಲಿ ಆರ್ಡರ್ ಮಾಡುವ ಯಾವುದೇ ಆಹಾರಕ್ಕೂ (Food Orders) ಪ್ಲಾಟ್​ಫಾರ್ಮ್ ಶುಲ್ಕ ತೆರಬೇಕು. ಇದು ಮಾಮೂಲಿಯಾಗಿ ಇರುವ ಇತರ ಶುಲ್ಕ, ತೆರಿಗೆಗಳಿಗೆ ಹೆಚ್ಚುವರಿಯಾಗಿ ನೀಡುವ ಶುಲ್ಕವಾಗಿದೆ. ಸದ್ಯ ಈ ಹೊಸ ಪ್ರಯೋಗವನ್ನು ಸ್ವಿಗ್ಗಿ ಬೆಂಗಳೂರು ಮತ್ತು ಹೈದರಾಬಾದ್​ನಲ್ಲಿ ಆರಂಭಿಸಿದೆ. ಸದ್ಯ ಎರಡು ರುಪಾಯಿಯನ್ನು ಪ್ಲಾಟ್​ಫಾರ್ಮ್ ಶುಲ್ಕವಾಗಿ ಪ್ರತಿಯೊಂದು ಆರ್ಡರ್​ಗೂ ಸ್ವಿಗ್ಗಿ ವಿಧಿಸುತ್ತಿದೆ. ಇತರ ಪ್ರಮುಖ ನಗರಗಳಾದ ದೆಹಲಿ ಮತ್ತು ಮುಂಬೈನಲ್ಲಿ ಸದ್ಯಕ್ಕೆ ಈ ಹೊಸ ಶುಲ್ಕ ಜಾರಿಗೆ ಬಂದಿಲ್ಲ. ಇನ್ನೂ ಒಂದು ಸಂಗತಿ ಎಂದರೆ ಸ್ವಿಗ್ಗಿ ಆ್ಯಪ್​ನಲ್ಲಿ ಲಭ್ಯ ಇರುವ ಇನ್ಸ್​ಟಾಮಾರ್ಟ್ ಡೆಲಿವರಿ ಸೇವೆಗೆ ಪ್ಲಾಟ್​ಫಾರ್ಮ್ ಫೀ ಜಾರಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಯಾಕೆ ಪ್ಲಾಟ್​ಫಾರ್ಮ್ ಶುಲ್ಕ ವಿಧಿಸುತ್ತಿದೆ ಸ್ವಿಗ್ಗಿ?

ಫುಡ್ ಆರ್ಡರ್​ಗಳ ಪ್ಲಾಟ್​ಫಾರ್ಮ್ ಶುಲ್ಕದಿಂದ ಬರುವ ಹಣವನ್ನು ನಮ್ಮ ಪ್ಲಾಟ್​ಫಾರ್ಮ್ ಗುಣಮಟ್ಟ ವೃದ್ಧಿಸಲು ಮತ್ತು ಆ್ಯಪ್​ನ ಫೀಚರ್​ಗಳನ್ನು ಸುಧಾರಿಸಲು ಬಳಸಲಾಗುತ್ತದೆ ಎಂದು ಸ್ವಿಗ್ಗಿಯ ವಕ್ತಾರರು ಹೇಳಿದ್ದಾರೆ.

ಇದನ್ನೂ ಓದಿInvestments: ಷೇರುಹೂಡಿಕೆಯಿಂದಲೇ ಸಿರಿವಂತರಾದ ಜುಂಜುನವಾಲ, ಕೇದಿಯಾ ಮೊದಲಾದವರ ಬಳಿ ಯಾವ್ಯಾವ ಕಂಪನಿಗಳ ಷೇರುಗಳಿವೆ? ಇಲ್ಲಿದೆ ಡೀಟೇಲ್ಸ್

ಆದರೆ, ಪ್ಲಾಟ್​ಫಾರ್ಮ್ ಶುಲ್ಕ ಹೇರುವ ಸ್ವಿಗ್ಗಿ ನಿರ್ಧಾರದ ಹಿಂದೆ ಈ ಕ್ಷೇತ್ರದಲ್ಲಾಗಿರುವ ಹಿನ್ನಡೆ ಕಾರಣ ಎನ್ನಲಾಗಿದೆ. ಸ್ವಿಗ್ಗಿಯಲ್ಲಿ 380 ಮಂದಿಯನ್ನು ಕೆಲಸದಿಂದ ತೆಗೆಯಲಾಗಿತ್ತು. ಈ ಸಂಬಂಧ ಉದ್ಯೋಗಿಗಳಿಗೆ ಇಮೇಲ್ ಮೂಲಕ ಉದ್ಯಮ ಸಂಕಷ್ಟದ ಸ್ಥಿತಿಯನ್ನು ಸ್ವಿಗ್ಗಿ ಸಿಇಒ ಶ್ರೀಹರ್ಷ ಮಜೇಟಿ ಅವರು ತಿಳಿಸಿದ್ದರು.

ಭಾರತದಲ್ಲಿ ಡೆಲಿವರಿ ಬ್ಯುಸಿನೆಸ್ ಮಂದಗೊಂಡಿದೆ. ನಮ್ಮ ಕಂಪನಿಯೂ ಇದರಿಂದ ಹೊರತಾಗಿಲ್ಲ ಎಂದು ಸ್ವಿಗ್ಗಿ ಸಹಸಂಸ್ಥಾಪಕರೂ ಆದ ಶ್ರೀಹರ್ಷ ತಮ್ಮ ಇಮೇಲ್​ನಲ್ಲಿ ತಿಳಿಸಿದ್ದರು.

ಇದನ್ನೂ ಓದಿBank Customers Alert: ಬ್ಯಾಂಕ್ ಗ್ರಾಹಕರೇ ಜಾಗ್ರತೆ! ಈ ಬ್ಯಾಂಕ್​ನಲ್ಲಿ ವಾರ್ಷಿಕ ಶುಲ್ಕಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳ

ಫುಡ್ ಡೆಲಿವರಿ ಬ್ಯುಸಿನೆಸ್ ಬೆಳವಣಿಗೆ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕುಂಠಿತಗೊಂಡಿದೆ. ನಮ್ಮಲ್ಲಿ ಕಠಿಣ ಸಂದರ್ಭಗಳನ್ನು ಎದುರಿಸುವಷ್ಟು ಸುಭದ್ರ ಹಣಕಾಸು ಸ್ಥಿತಿ ಇದೆಯಾದರೂ ಅದನ್ನೇ ನೆಚ್ಚಿಕೊಂಡಿರಲು ಅಗುವುದಿಲ್ಲ. ದೀರ್ಘ ಕಾಲ ಮುನ್ನಡೆಯಲು ನಾವು ಏನಾದರೂ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಸ್ವಿಗ್ಗಿ ಸಿಇಒ ಅವರು ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್​ನಲ್ಲಿ ಹೇಳಿದ್ದರು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:28 pm, Fri, 28 April 23

ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ