Job Market: ಮುಂದಿನ 5 ವರ್ಷದಲ್ಲಿ ಭಾರತದಲ್ಲಿ ಯಾವ ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗಸೃಷ್ಟಿ? 2027ಕ್ಕೆ ಜಾಗತಿಕವಾಗಿ ಹೇಗಿರಲಿದೆ ಜಾಬ್ ಮಾರ್ಕೆಟ್?

World Economic Forum Study: ಅಧ್ಯಯನ ವರದಿಯೊಂದರ ಪ್ರಕಾರ 2027ಕ್ಕೆ ಜಾಗತಿಕವಾಗಿ ಉದ್ಯೋಗಗಳು ಶೇ. 12.3ರ ದರದಲ್ಲಿ ಇಳಿಕೆ ಕಾಣಲಿವೆ. ಅಂಕಿ ಅಂಶಗಳಲ್ಲಿ ಹೇಳುವುದಾದರೆ ಜಾಗತಿಕವಾಗಿ 2027ರಷ್ಟರಲ್ಲಿ 6.9 ಕೋಟಿಯಷ್ಟು ಹೊಸ ಉದ್ಯೋಗಸೃಷ್ಟಿಯಾಗಲಿದೆ. ಅದೇ ವೇಳೆ 8.3ರಷ್ಟು ಉದ್ಯೋಗನಷ್ಟವೂ ಇರಲಿದೆಯಂತೆ.

Job Market: ಮುಂದಿನ 5 ವರ್ಷದಲ್ಲಿ ಭಾರತದಲ್ಲಿ ಯಾವ ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗಸೃಷ್ಟಿ? 2027ಕ್ಕೆ ಜಾಗತಿಕವಾಗಿ ಹೇಗಿರಲಿದೆ ಜಾಬ್ ಮಾರ್ಕೆಟ್?
ಉದ್ಯೋಗಸೃ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 01, 2023 | 1:10 PM

ನವದೆಹಲಿ: ಭಾರತದಲ್ಲಿ ಮುಂದಿನ 5 ವರ್ಷದಲ್ಲಿ ಶೇ. 22ರಷ್ಟು ಉದ್ಯೋಗಗಳು ಪರಿವರ್ತನೆ (Job churning) ಕಾಣಲಿವೆ. ಇದೇ ಅವಧಿಯಲ್ಲಿ ಜಾಗತಿಕವಾಗಿ ಉದ್ಯೋಗಸೃಷ್ಟಿ ಶೇ. 23ರಷ್ಟು ಇರಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಜಾಗತಿಕವಾಗಿ ಮುಂದಿನ 5 ವರ್ಷದಲ್ಲಿ ಶೇ. 23ರಷ್ಟು ಉದ್ಯೋಗಳಲ್ಲಿ ಪರಿವರ್ತನೆ ಆಗಲಿದೆ. ಉದ್ಯೋಗಸೃಷ್ಟಿ ಶೇ. 10.2ರ ದರದಲ್ಲಿ ಸಾಗಲಿದೆ. ಆದರೆ, ಉದ್ಯೋಗನಷ್ಟದ ವೇಗ ಇನ್ನೂ ಅಧಿಕ ಇರಲಿದೆ. ಇದು ವರ್ಲ್ಡ್ ಎಕನಾಮಿಕ್ ಫೋರಂ (WEF- World Economic Forum) ಸಂಸ್ಥೆಯ ‘ಲೇಟೆಸ್ಟ್ ಫ್ಯೂಚರ್ ಆಫ್ ಜಾಬ್ಸ್’ ವರದಿಯಲ್ಲಿ ಪ್ರಕಟಗೊಂಡಿರುವ ಅಂಶಗಳು. ಈ ವರದಿ ಪ್ರಕಾರ 2027ಕ್ಕೆ ಜಾಗತಿಕವಾಗಿ ಉದ್ಯೋಗಗಳು ಶೇ. 12.3ರ ದರದಲ್ಲಿ ಇಳಿಕೆ ಕಾಣಲಿವೆ. ಅಂಕಿ ಅಂಶಗಳಲ್ಲಿ ಹೇಳುವುದಾದರೆ ಜಾಗತಿಕವಾಗಿ 2027ರಷ್ಟರಲ್ಲಿ 6.9 ಕೋಟಿಯಷ್ಟು ಹೊಸ ಉದ್ಯೋಗಸೃಷ್ಟಿಯಾಗಲಿದೆ. ಅದೇ ವೇಳೆ 8.3ರಷ್ಟು ಉದ್ಯೋಗನಷ್ಟವೂ ಇರಲಿದೆಯಂತೆ.

ವರ್ಲ್ಡ್ ಎಕನಾಮಿಕ್ ಫೋರಂ ಈ ಅಧ್ಯಯನಕ್ಕಾಗಿ ವಿಶ್ವಾದ್ಯಂತ 803 ಕಂಪನಿಗಳ ಸಮೀಕ್ಷೆ ನಡೆಸಿದೆ. ಜಾಗತಿಕವಾಗಿ 67.3 ಕೋಟಿ ಉದ್ಯೋಗಗಳ ಪೈಕಿ 8.8 ಕೋಟಿ ಉದ್ಯೋಗಗಳು ನಷ್ಟವಾಗಲಿವೆ. ಹೊಸ ಉದ್ಯೋಗ ಸೃಷ್ಟಿ ಮತ್ತು ಉದ್ಯೋಗನಷ್ಟ ಎರಡೂ ಗಣಿಸಿದರೆ ಉದ್ಯೋಗದಲ್ಲಿ ಶೇ. 2ರಷ್ಟು ನಿವ್ವಳ ನಷ್ಟವಾಗಲಿದೆ. ಸಮೀಕ್ಷೆ ಮಾಡಲಾದ 803 ಕಂಪನಿಗಳ ಅಭಿಪ್ರಾಯ ಪಡೆದು ಈ ವರದಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Ponzi Scheme: ಬೈಕ್​ಬೋಟ್ ಆಸೆ ಹುಟ್ಟಿಸಿ ಲಕ್ಷಾಂತರ ಮಂದಿಗೆ ಉಂಡೆನಾಮ ಹಾಕಿದ ಯುಪಿ ಮಹಿಳೆ; ಕೊಳ್ಳೆ ಹೊಡೆದ 15,000 ಕೋಟಿ ದುಡ್ಡು ಏನಾಯ್ತು?

ಮುಂದಿನ 5 ವರ್ಷದಲ್ಲಿ ಯಾವ ಕ್ಷೇತ್ರದಲ್ಲಿ ಹೊಸ ಉದ್ಯೋಗ ಎಷ್ಟು ಆಗಲಿದೆ?

ಭಾರತದಲ್ಲಿ ಮುಂದಿನ 5 ವರ್ಷದಲ್ಲಿ ಅತಿಹೆಚ್ಚು ಉದ್ಯೋಗಸೃಷ್ಟಿಗೆ ಕಾರಣವಾಗುವುದು ಇಎಸ್​ಜಿ ಸ್ಟಾಂಡರ್ಡ್ ಹೂಡಿಕೆಗಳು ಎನ್ನಲಾಗಿದೆ. ಇಎಸ್​ಜಿ ಎಂದರೆ ಪರಿಸರ, ಸಾಮಾಜಿಕ ಮತ್ತು ಆಡಳಿತಾತ್ಮಕಈ ಮೂರು ಅಂಶಗಳ ಆಧಾರದ ಮೇಲೆ ಆಗುವ ಹೂಡಿಕೆಗಳಿಂದ ಉದ್ಯೋಗಸೃಷ್ಟಿಗೆ ಪುಷ್ಟಿ ಸಿಗಬಹುದು ಎಂಬುದು ಸಮೀಕ್ಷೆಗೊಳಪಟ್ಟ ಶೇ. 61ರಷ್ಟು ಕಂಪನಿಗಳು ಅಭಿಪ್ರಾಯಪಟ್ಟಿವೆ. ಹಾಗೆಯೇ, ಹೊಸ ತಂತ್ರಜ್ಞಾನಗಳ ಅಳವಡಿಕೆಯಿಂದ ಹಾಗೂ ವಿಸ್ತೃತ ಡಿಜಿಟಲ್ ಅಕ್ಸೆಸ್​ನಿಂದ ಹೊಸ ಉದ್ಯೋಗಗಳು ಸೃಷ್ಟಿಯಾಗಬಹುದು ಎಂದೂ ಅಭಿಪ್ರಾಯಗಳಿವೆ.

ಭಾರತದಲ್ಲಿ ಔದ್ಯಮಿಕ ಪರಿವರ್ತನೆ ತರುವ ಉದ್ಯೋಗಗಳು

  1. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್
  2. ಮೆಷಿನ್ ಲರ್ನಿಂಗ್ ಸ್ಪೆಷಲಿಸ್ಟ್
  3. ಡಾಟಾ ಅನಾಲಿಸ್ಟ್ ಅಂಡ್ ಸೈಂಟಿಸ್ಟ್

ಇದನ್ನೂ ಓದಿ: New GST Rules: 7 ದಿನದೊಳಗೆ ಇನ್ವಾಯ್ಸ್ ಸಲ್ಲಿಸದಿದ್ದರೆ ಏನಾಗುತ್ತದೆ? ಹೊಸ ಜಿಎಸ್​ಟಿ ನಿಯಮ ತಿಳಿದಿರಿ

ಜಾಗತಿಕವಾಗಿಯೂ ಇಎಸ್​ಜಿ ಸ್ಟಾಂಡರ್ಡ್​ಗಳು ಉದ್ಯೋಗ ಮಾರುಕಟ್ಟೆಗೆ ಪುಷ್ಟಿ ಕೊಡಲಿವೆ. ಸರಬರಾಜು ಸರಪಳಿಯ ಸ್ಥಳೀಕರಣ, ಹಸಿರು ಪರಿವರ್ತನೆ ಇತ್ಯಾದಿಯೂ ಪೂರಕವಾಗಿ ಪ್ರಭಾವ ಬೀರಲಿವೆ. ಆದರೆ, ಹಣದುಬ್ಬರ, ಮಂದ ಆರ್ಥಿಕವೃದ್ಧಿ, ಸರಬರಾಜು ಕೊರತೆ ಇವು ಜಾಗತಿಕವಾಗಿ ಉದ್ಯೋಗಸೃಷ್ಟಿಗೆ ಹಿನ್ನಡೆ ತರಬಹುದು ಎಂದು ವರ್ಲ್ಡ್ ಎಕನಾಮಿಕ್ ಫೋರಂ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ.

ಹೊಸ ಉದ್ಯೋಗಸೃಷ್ಟಿ ಅಪ್ಪುವಂತಹ ವಾತಾವರಣ ನಿರ್ಮಾಣ ಆಗಬೇಕಿದೆ

ಕೋವಿಡ್ ನಂತರ ಜಾಗತಿಕವಾಗ ಜನರು ಸಂಕಷ್ಟಕ್ಕೆ ಒಳಗಾಗಿ ಅವರ ಬದುಕು ಅನಿಶ್ಚಿತ ಸ್ಥಿತಿಯಲ್ಲಿ ಹೊಯ್ದಾಡುತ್ತಿದೆ. ಅದರ ಜೊತೆಗೆ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಮತ್ತಿತರ ತಂತ್ರಜ್ಞಾನಗಳು ಈ ಅನಿಶ್ಚಿತ ಸ್ಥಿತಿಯನ್ನು ಇನ್ನಷ್ಟು ಹೆಚ್ಚಿಸಿವೆ. ಆದರೆ, ಶುಭ ಸುದ್ದಿ ಎಂದರೆ ಹೊಸ ತಂತ್ರಜ್ಞಾನಗಳ ಆವಿಷ್ಕಾರದೊಂದಿಗೆ ಹೊಸ ರೀತಿಯ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಉದ್ಯೋಗಗಳಿಗೆ ಬೇಕಾದ ಅರ್ಹತಾ ಕೌಶಲ್ಯಗಳನ್ನು ಜನರಿಗೆ ನೀಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಗಮನ ಕೊಡಬೇಕು ಎಂದು ಡಬ್ಲ್ಯೂಇಎಫ್ ತನ್ನ ವರದಿಯಲ್ಲಿ ತಿಳಿಸಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್