ATM Frauds: ಎಟಿಎಂ ಕಾರ್ಡ್ ಖದೀಮರಿದ್ದಾರೆ ಹುಷಾರ್; ನೋಡನೋಡುತ್ತಿದ್ದಂತೆಯೇ ಹಣ ಮಾಯ; ವಂಚಕರ ತಂತ್ರಗಳೇನು ತಿಳಿದಿರಿ

From Card Swapping to Skimming: ನೀವು ಎಟಿಎಂನೊಳಗೆ ಕಾರ್ಡ್ ಇಡುತ್ತಿದ್ದಂತೆಯೇ ಎಲ್ಲಾ ಮಾಹಿತಿ ಕದಿಯುವ ಖದೀಮರೂ ಇದ್ದಾರೆ. ಕಾರ್ಡ್ ಸ್ಕಿಮ್ಮಿಂಗ್, ಕಾರ್ಡ್ ಸ್ವಾಪಿಂಗ್, ಫಿಶಿಂಗ್, ಕ್ಯಾಷ್ ಟ್ರ್ಯಾಪಿಂಗ್ ಹೇಗೆ ನಾನಾ ರೀತಿಯ ವಂಚನೆಯ ಮಾರ್ಗಗಳನ್ನು ಖದೀಮರು ಕಂಡುಕೊಂಡಿದ್ದಾರೆ.

ATM Frauds: ಎಟಿಎಂ ಕಾರ್ಡ್ ಖದೀಮರಿದ್ದಾರೆ ಹುಷಾರ್; ನೋಡನೋಡುತ್ತಿದ್ದಂತೆಯೇ ಹಣ ಮಾಯ; ವಂಚಕರ ತಂತ್ರಗಳೇನು ತಿಳಿದಿರಿ
ಎಟಿಎಂ ಕಾರ್ಡ್ ಖದೀಮ
Follow us
|

Updated on:May 01, 2023 | 4:26 PM

ಎಟಿಎಂ ಸಂಬಂಧಿತ ವಂಚನೆ ಪ್ರಕರಣಗಳು (ATM Fraud Cases) ಇತ್ತೀಚಿನ ದಿನಗಳಲ್ಲಿ ಹೆಚ್ಚಿವೆ. ಮಾಧ್ಯಮಗಳಲ್ಲಿ ಬಾರಿ ಬಾರಿ ಇಂಥ ಪ್ರಕರಣಗಳ ವರದಿ ಆಗುತ್ತಲೇ ಇರುತ್ತದೆ. ಜನರೂ ಕೂಡ ತುಸು ಎಚ್ಚರಿಕೆಯಿಂದ ಇರುತ್ತಾರಾದರೂ ವಂಚಕರು ಮಾತ್ರ ತಮ್ಮ ಕೃತ್ಯಕ್ಕೆ ಹೊಸ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಬೆಂಗಳೂರಿನ ಕಾರ್ಪೊರೇಷನ್ ಸರ್ಕಲ್ ಬಳಿ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಸೆಂಟರ್​ನೊಳಗೆ ಜ್ಯೋತಿ ಎಂಬ ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ಯಾರಿಗೆ ನೆನಪಿಲ್ಲ? ಅಂತಹ ಕೃತ್ಯಗಳು ಬಹಳ ಅಪರೂಪವೇ. ದುಷ್ಕರ್ಮಿಗಳು ನಯವಾಗಿ ಹಣ ಕದಿಯುವುದನ್ನು ಸಿದ್ಧಿಸಿಕೊಂಡಿದ್ದಾರೆ. ನೀವು ನೋಡನೋಡುತ್ತಿದ್ದಂತೆಯೇ ಕಾರ್ಡ್ ಲಪಟಾಯಿಸುತ್ತಾರೆ, ಕ್ಷಣಮಾತ್ರದಲ್ಲಿ ಹಣವನ್ನೂ ಖಾಲಿ ಮಾಡುತ್ತಾರೆ. ನೀವು ಎಟಿಎಂನೊಳಗೆ ಕಾರ್ಡ್ ಇಡುತ್ತಿದ್ದಂತೆಯೇ ಎಲ್ಲಾ ಮಾಹಿತಿ ಕದಿಯುವ ಖದೀಮರೂ ಇದ್ದಾರೆ. ಕಾರ್ಡ್ ಸ್ಕಿಮ್ಮಿಂಗ್, ಕಾರ್ಡ್ ಸ್ವಾಪಿಂಗ್, ಫಿಶಿಂಗ್, ಕ್ಯಾಷ್ ಟ್ರ್ಯಾಪಿಂಗ್ ಹೇಗೆ ನಾನಾ ರೀತಿಯ ವಂಚನೆಯ ಮಾರ್ಗಗಳನ್ನು ಖದೀಮರು ಕಂಡುಕೊಂಡಿದ್ದಾರೆ.

ಎಟಿಎಂ ಕಾರ್ಡ್ ಸ್ವಾಪಿಂಗ್

ಎಟಿಎಂ ಸೆಂಟರ್​ನಲ್ಲಿ ಹಣ ಪಡೆಯಲು ಯಾರಿಗಾದರೂ ಸಮಸ್ಯೆಯಾದಾಗ ಸಹಾಯಕ್ಕೆಂದು ಕೆಲವರು ಒಳಗೆ ಹೋಗಿ, ಕಾರ್ಡ್​ನ ಪಿನ್ ಪಡೆದು, ಗೊತ್ತೇ ಆಗದ ರೀತಿಯಲ್ಲಿ ಕಾರ್ಡ್ ಅದಲುಬದಲು ಮಾಡಿ ಹೋಗಿಬಿಡುತ್ತಾರೆ. ಬೇರೆ ಎಟಿಎಂ ಸೆಂಟರ್​ಗೆ ಹೋಗಿ ಅಕೌಂಟ್​ನಲ್ಲಿ ಇದ್ದಬದ್ದ ಹಣವನ್ನೆಲ್ಲಾ ದೋಚಿಬಿಡುತ್ತಾರೆ. ನೀವು ಕಾರ್ಡ್ ಬ್ಲಾಕ್ ಮಾಡುವಷ್ಟರಲ್ಲಿ ಹಣವೆಲ್ಲಾ ಮಂಗಮಾಯ. ಇಂತಹ ಪ್ರಕರಣಗಳು ಸಾಕಷ್ಟು ಕಡೆ ವರದಿಯಾಗಿವೆ.

ಇದನ್ನೂ ಓದಿ: Wipro Half-Salary: ವಿಪ್ರೋದಲ್ಲಿ ಅರ್ಧಸಂಬಳ; ಕೆಲಸಕ್ಕೆ ಸೇರಿದವರೆಷ್ಟು? ಆಫರ್ ತಿರಸ್ಕರಿಸಿದವರೆಷ್ಟು?

ಕಳೆದ ವರ್ಷ ಚೆನ್ನೈನಲ್ಲಿ 56 ವರ್ಷದ ವ್ಯಕ್ತಿಯೊಬ್ಬ ಇಂಥದ್ದೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ. ಈತನ ಬಳಿ ಪೊಲೀಸರಿಗೆ 271 ಎಟಿಎಂ ಕಾರ್ಡ್​ಗಳಿದ್ದವು. ಎಟಿಎಂ ಸೆಂಟರ್​ಗಳಲ್ಲಿ ಬಿಸಾಡಲಾಗಿದ್ದ ಹಳೆಯ ಕಾರ್ಡ್​ಗಳನ್ನು ಈತ ಸಂಗ್ರಹಿಸಿಕೊಂಡು ಕಾರ್ಡ್ ಸ್ವಾಪಿಂಗ್ ಕೃತ್ಯಗಳಿಗೆ ಬಳಸುತ್ತಿದ್ದ.

ಎಟಿಎಂ ಕಾರ್ಡ್ ಸ್ಕಿಮ್ಮಿಂಗ್

ವಂಚಕರು ಎಟಿಎಂ ಮೆಷೀನ್​ನಲ್ಲಿ ಕಾರ್ಡ್ ಸ್ಕಿಮ್ಮಿಂಗ್ ಡಿವೈಸ್ ಅನ್ನು ಅಳವಡಿಸುತ್ತಾರೆ. ಕಣ್ಣಿಗೆ ಕಾಣದಂತೆ ಮರೆಯಲ್ಲಿರುವ ಈ ಸಾಧನವು ಎಟಿಎಂ ಮೆಷೀನ್​ಗೆ ಇನ್ಸರ್ಟ್ ಮಾಡುವ ಕಾರ್ಡ್​ನ ಮಾಹಿತಿ ಹಾಗೂ ಎಟಿಎಂ ಪಿನ್ ನಂಬರ್ ರೆಕಾರ್ಡ್ ಮಾಡುತ್ತದೆ. ಎಫ್​ಐಸಿಒ ವರದಿಯೊಂದರ ಪ್ರಕಾರ 2022ರಲ್ಲಿ ಭಾರತದಲ್ಲಿ 1.61 ಲಕ್ಷದಷ್ಟು ಎಟಿಎಂ ಕಾರ್ಡ್​ಗಳ ವಿವರವನ್ನು ಸ್ಕಿಮ್ಮರ್​ಗಳು ರೆಕಾರ್ಡ್ ಮಾಡಿರುವ ಸಾಧ್ಯತೆ ಇದೆ.

ಈ ರೀತಿಯ ಕಾರ್ಡ್ ಸ್ಕಿಮ್ಮಿಂಗ್ ಡಿವೈಸ್​ಗಳು ಎಟಿಎಂ ಮೆಷೀನ್​ನಲ್ಲಿಯಷ್ಟೇ ಅಲ್ಲ ಕಾರ್ಡ್ ಸ್ವೈಪಿಂಗ್ ಮೆಷೀನ್​ಗಳಲ್ಲೂ ದುಷ್ಕರ್ಮಿಗಳು ಅಳವಡಿಸಿರಬಹುದು.

ಇದನ್ನೂ ಓದಿ: Job Market: ಮುಂದಿನ 5 ವರ್ಷದಲ್ಲಿ ಭಾರತದಲ್ಲಿ ಯಾವ ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗಸೃಷ್ಟಿ? 2027ಕ್ಕೆ ಜಾಗತಿಕವಾಗಿ ಹೇಗಿರಲಿದೆ ಜಾಬ್ ಮಾರ್ಕೆಟ್?

ಎಟಿಎಂ ಕ್ಯಾಷ್ ಟ್ರ್ಯಾಪರ್

ಇಲ್ಲಿ ದುಷ್ಕರ್ಮಿಗಳು ಎಟಿಎಂ ಮೆಷೀನ್​ನಲ್ಲಿ ಕ್ಯಾಷ್ ರಿಲೀಸ್ ಆಗುವ ಜಾಗದಲ್ಲಿ ನೋಟು ಆಚೆ ಬರದ ರೀತಿಯಲ್ಲಿ ಅಡ್ಡಕ್ಕೆ ಕ್ಯಾಷ್ ಟ್ರ್ಯಾಪರ್ ಸಾಧನ ಹಾಕಿರುತ್ತಾರೆ. ಎಟಿಎಂ ಕಾರ್ಡ್​ದಾರರು ಕ್ಯಾಷ್ ವಿತ್​ಡ್ರಾ ಮಾಡಿದಾಗ ಹಣ ಬಿಡುಗಡೆ ಆಗುತ್ತದಾದರೂ ಕ್ಯಾಷ್ ಟ್ರ್ಯಾಪರ್​ನಿಂದ ತಡೆಯುತ್ತದೆ. ಎಟಿಎಂ ಮೆಷೀನ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಜನರು ಹೊರಹೋಗುತ್ತಿರುವಂತೆಯೇ ವಂಚಕರು ಒಳಗೆ ಹೋಗಿ ಕ್ಯಾಷ್ ಟ್ರ್ಯಾಪರ್ ತೆಗೆದು ಹಣವನ್ನು ಎಗರಿಸಿ ಎಸ್ಕೇಪ್ ಆಗುತ್ತಾರೆ. ಸೆಕ್ಯೂರಿಟಿ ಇಲ್ಲದ ಎಟಿಎಂ ಸೆಂಟರ್​ಗಳಲ್ಲಿ ಇಂಥ ಕೆಲಸಗಳು ಹೆಚ್ಚಾಗಿ ನಡೆಯುತ್ತವೆ.

ಶೋಲ್ಡರ್ ಸರ್ಫಿಂಗ್

ಶೋಲ್ಡರ್ ಸರ್ಫಿಂಗ್ ಎಂದರೆ ಹಿಂಬದಿಯಿಂದ ಕದ್ದು ನೋಡುವುದು. ನೀವು ಕಂಪ್ಯೂಟರ್, ಮೊಬೈಲ್ ಇತ್ಯಾದಿ ಯಾವುದಕ್ಕಾದರೂ ಲಾಗಿನ್ ಆಗುವಾಗ ಪಿನ್ ಅಥವಾ ಪಾಸ್​ವರ್ಡ್ ಅಥವಾ ಪ್ಯಾಟರ್ನ್ ಹಾಕುತ್ತೀರಿ. ಅದನ್ನು ನಿಮ್ಮ ಹಿಂಬದಿಯಿಂದ ಯಾರಾದರೂ ನಿಂತು ಸುಲಭವಾಗಿ ಕದ್ದು ನೋಡಬಹುದು. ಎಟಿಎಂ ಸೆಂಟರ್​ನಲ್ಲೂ ಈ ಸಂಭಾವ್ಯತೆ ಇರುತ್ತದೆ. ನಿಮ್ಮ ಜೊತೆಗೇ ಎಟಿಎಂ ಒಳಗೆ ಬಂದು ಸರದಿಯಲ್ಲಿ ನಿಲ್ಲುವ ಅಪರಿಚಿತರು ನೀವು ಎಟಿಎಂ ಪಿನ್ ದಾಖಲಿಸುವುದನ್ನು ಕದ್ದು ಗಮನಿಸಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Mon, 1 May 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ