Wipro Half-Salary: ವಿಪ್ರೋದಲ್ಲಿ ಅರ್ಧಸಂಬಳ; ಕೆಲಸಕ್ಕೆ ಸೇರಿದವರೆಷ್ಟು? ಆಫರ್ ತಿರಸ್ಕರಿಸಿದವರೆಷ್ಟು?

92pc Freshers Join Wipro For Lower Salary: ಕ್ಯಾಂಪಸ್ ಇಂಟರ್ವ್ಯೂನಲ್ಲಿ ವಿಪ್ರೋಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 6.5 ಲಕ್ಷ ಬದಲು 3.5 ಲಕ್ಷ ರೂ ಸಂಬಳ ಆಫರ್ ಮಾಡಲಾಗಿತ್ತು. ಈಗ ಈ ಅರ್ಧಸಂಬಳದ ಆಫರ್ ಅನ್ನು ಶೇ. 92 ಮಂದಿ ಅಭ್ಯರ್ಥಿಗಳು ಸ್ವೀಕರಿಸಿದ್ದಾರೆ ಎಂದು ವಿಪ್ರೋ ಅಧಿಕಾರಿಯೊಬ್ಬರು ಹೇಳಿದ್ದಾರೆ.

Wipro Half-Salary: ವಿಪ್ರೋದಲ್ಲಿ ಅರ್ಧಸಂಬಳ; ಕೆಲಸಕ್ಕೆ ಸೇರಿದವರೆಷ್ಟು? ಆಫರ್ ತಿರಸ್ಕರಿಸಿದವರೆಷ್ಟು?
ವಿಪ್ರೋ
Follow us
|

Updated on:May 01, 2023 | 2:58 PM

ನವದೆಹಲಿ: ಭಾರತದ ದೈತ್ಯ ಐಟಿ ಕಂಪನಿಗಳಲ್ಲೊಂದಾದ ವಿಪ್ರೋ (Wipro Technologies) ಕೆಲ ತಿಂಗಳ ಹಿಂದೆ ಅರ್ಧಸಂಬಳದ ಆಫರ್ (Half Salary offer) ಕೊಡುವ ಮೂಲಕ ಸುದ್ದಿಯಲ್ಲಿತ್ತು. ಕೆಲಸಕ್ಕೆ ಸೇರಲು ಆಯ್ಕೆಯಾಗಿರುವ ಹೊಸಬರಿಗೆ ಅರ್ಧ ಸಂಬಳದ ಮಾತ್ರ ಕೊಡುವುದಾಗಿ ವಿಪ್ರೋ ಹೇಳಿತ್ತು. ಇದಾಗಿದ್ದು ಫೆಬ್ರುವರಿ ತಿಂಗಳಲ್ಲಿ. ಬಹಳ ಜನರು ವಿಪ್ರೋ ವಿರುದ್ಧ ಟೀಕೆ ನಡೆಸಿದ್ದರು. ಇದೀಗ ವಿಪ್ರೋದ ಸಿಎಫ್​ಒ ಜತಿನ್ ದಲಾಲ್ ಈ ಅರ್ಧಸಂಬಳ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ತಾನು ಯಾವ ಅಭ್ಯರ್ಥಿಗೂ ಅರ್ಧ ಸಂಬಳಕ್ಕೆ ಬರಬೇಕೆಂದು ಬಲವಂತಪಡಿಸಿಲ್ಲ. ಅರ್ಧಸಂಬಳಕ್ಕೆ ಬರುವುದು, ಬಿಡುವುದು, ಉದ್ಯೋಗಿಗಳ ಆಯ್ಕೆಗೆ ಬಿಟ್ಟಿದ್ದೆವು ಎಂದು ಜತಿನ್ ದಲಾಲ್ ಹೇಳಿದ್ದಾರೆ. ಅರ್ಧ ಸಂಬಳಕ್ಕೆ ಬರಲು ಒಪ್ಪದ ಅಭ್ಯರ್ಥಿಗಳಿಗೆ ಕೆಲಸದ ಅವಕಾಶ ನಿಂತು ಹೋಗುತ್ತೆ ಎಂದಲ್ಲ. ಹೆಚ್ಚು ಸಂಬಳದ ಆಫರ್ ಬರುವವರೆಗೂ ಇವರು ಕಾಯಬೇಕಾಗುತ್ತದೆ.

ವಿಪ್ರೋದಲ್ಲಿ ಅರ್ಧಸಂಬಳ ಸಾಕೆಂದು ಆಫರ್ ಒಪ್ಪಿ ಕೆಲಸಕ್ಕೆ ಸೇರಿದವರು ಎಷ್ಟು?

ಸಂದರ್ಶನದಲ್ಲಿ ಆಯ್ಕೆಯಾದ ಹೊಸಬರಿಗೆ ವಿಪ್ರೋ ಮೊದಲಿಗೆ 6.5 ಲಕ್ಷ ರೂ (ವಾರ್ಷಿಕ) ವೇತನ ಆಫರ್ ಕೊಟ್ಟಿತ್ತು. ಬಳಿಕ ಆಫರ್ ಪ್ರಮಾಣವನ್ನು ಅರ್ಧದಷ್ಟು ಇಳಿಸಿತು. 3.5 ಲಕ್ಷ ರು ಸಂಬಳದ ಪರಿಷ್ಕೃತ ಆಫರ್ ಕೊಟ್ಟಿತು. 3.5 ಲಕ್ಷ ರೂ ಸಂಬಳ ಒಪ್ಪಿಗೆ ಆದರೆ ಬೇಗನೇ ಕೆಲಸಕ್ಕೆ ಸೇರಬಹುದು. ಹಿಂದಿನ ಆಫರ್​ನ ಸಂಬಳ ಬೇಕೆಂದರೆ ಕಾಯಬೇಕಾಗಬಹುದು ಎಂದೂ ಅಭ್ಯರ್ಥಿಗಳಿಗೆ ತಿಳಿಸಲಾಗಿತ್ತಂತೆ.

ಇದನ್ನೂ ಓದಿJob Market: ಮುಂದಿನ 5 ವರ್ಷದಲ್ಲಿ ಭಾರತದಲ್ಲಿ ಯಾವ ಕ್ಷೇತ್ರಗಳಲ್ಲಿ ಹೆಚ್ಚು ಉದ್ಯೋಗಸೃಷ್ಟಿ? 2027ಕ್ಕೆ ಜಾಗತಿಕವಾಗಿ ಹೇಗಿರಲಿದೆ ಜಾಬ್ ಮಾರ್ಕೆಟ್?

ವಿಪ್ರೋ ಸಿಎಫ್​ಒ ಜತಿನ್ ದಲಾಲ್ ಹೇಳಿಕೆ ಪ್ರಕಾರ ಶೇ. 92ರಷ್ಟು ಅಭ್ಯರ್ಥಿಗಳು ಕಡಿಮೆ ಸಂಬಳದ ಆಫರ್​ಗೆ ಒಪ್ಪಿ ಕೆಲಸಕ್ಕೆ ಸೇರಲು ನಿರ್ಧರಿಸಿದರಂತೆ. ಆದರೆ ವಿಪ್ರೋದ ಈ ಕಡಿಮೆ ಸಂಬಳದ ಆಫರ್ ಕೊಡುವ ಕ್ರಮವನ್ನು ಐಟಿ ಉದ್ಯೋಗಿಗಳ ಸಂಘಟನೆ ಎನ್​ಐಟಿಇಎಸ್ ಬಲವಾಗಿ ಆಕ್ಷೇಪಿಸಿದ್ದು, ವಿಪ್ರೋ ಕ್ರಮ ಅನ್ಯಾಯಯುತವಾಗಿದೆ ಎಂದಿದೆ.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಜತಿನ್ ದಲಾಲ್, ‘ಫ್ರೆಷರ್​ಗಳ ವಿಚಾರದಲ್ಲಿ ಬಹಳ ಪಾರದರ್ಶಕವಾಗಿ ಹಾಗೂ ನ್ಯಾಯಯುತವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಭ್ಯರ್ಥಿಗಳಿಗೆ ಎರಡೂ ಅಯ್ಕೆಗಳನ್ನು ನೀಡಿದ್ದೆವು. ಕ್ಯಾಂಪಸ್ ಇಂಟರ್ವ್ಯೂನಲ್ಲಿ ಆಯ್ಕೆಯಾದವರ ಪೈಕಿ ಶೇ. 92ರಷ್ಟು ಅಭ್ಯರ್ಥಿಗಳು ಕಡಿಮೆ ಸಂಬಳದ ಆಫರ್ ಒಪ್ಪಿಕೊಂಡರು’ ಎಂದು ಹೇಳಿದ್ದಾರೆ.

ಇದನ್ನೂ ಓದಿPonzi Scheme: ಬೈಕ್​ಬೋಟ್ ಆಸೆ ಹುಟ್ಟಿಸಿ ಲಕ್ಷಾಂತರ ಮಂದಿಗೆ ಉಂಡೆನಾಮ ಹಾಕಿದ ಯುಪಿ ಮಹಿಳೆ; ಕೊಳ್ಳೆ ಹೊಡೆದ 15,000 ಕೋಟಿ ದುಡ್ಡು ಏನಾಯ್ತು?

ಇನ್ನುಳಿದ ಉದ್ಯೋಗಿಗಳು ಮೊದಲಿಗೆ ಭರವಸೆ ಕೊಟ್ಟ 6.5 ಲಕ್ಷ ರೂ ಸಂಬಳಕ್ಕಾಗಿ ಕಾಯಬೇಕಾಗಬಹುದು. ಇಲ್ಲದಿದ್ದರೆ ಬೇರೆಡೆ ಕೆಲಸಕ್ಕೆ ಸೇರಿಕೊಳ್ಳಬಹುದು.

2023 ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್ ಅವಧಿಯಲ್ಲಿ ವಿಪ್ರೋ 3,074.5 ಕೋಟಿ ರೂನಷ್ಟು ನಿವ್ವಳ ಲಾಭ ದಾಖಲಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲೂ ಬಹುತೇಕ ಇಷ್ಟೇ ನಿವ್ವಳ ಲಾಭ ದಾಖಲಾಗಿತ್ತು. ಈ ಅವಧಿಯಲ್ಲಿ ವಿಪ್ರೋ 5 ಸಾವಿರ ಟೆಕ್ಕಿಗಳನ್ನು ನೇಮಕ ಮಾಡಿಕೊಂಡಿತ್ತು. ಈ ಕ್ವಾರ್ಟರ್​ನಲ್ಲಿ ವಿಪ್ರೋ ನೇಮಕಾತಿ ಸಂಖ್ಯೆ ಕಡಿಮೆ ಇರುವ ಸಾಧ್ಯತೆ ಇದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:58 pm, Mon, 1 May 23