Gold Loan: ಚಿನ್ನದ ಮೇಲೆ ಸಾಲ; ಬಹಳ ವೇಗ, ಬಹಳ ಸುಲಭ; ಬಡ್ಡಿಯೂ ಕಡಿಮೆ; ಆದರೆ, ಸಾಲ ಪಡೆಯುವ ಮುನ್ನ ಈ ವಿಷಯ ಗಮನಿಸಿರಿ

Comparison of Gold Loan Interest Rates: ಕಡಿಮೆ ಬಡ್ಡಿಗೆ ಬಹಳ ಸುಲಭವಾಗಿ ಸಿಗುವ ಸಾಲದಲ್ಲಿ ಗೋಲ್ಡ್ ಲೋನ್ ಒಂದು. ಚಿನ್ನದ ತೂಕಕ್ಕೆ ಅನುಗುಣವಾಗಿ ಸಾಲದ ಪ್ರಮಾಣ ಇರುತ್ತದೆ. ಬಡ್ಡಿ ದರವೂ ಕಡಿಮೆ. ಬ್ಯಾಂಕುಗಳಿಗೂ ಇದು ಪಕ್ಕಾ ಸೆಕ್ಯೂರ್ಡ್ ಲೋನ್. ಆದರೆ, ಸಾಲ ಪಡೆಯುವ ಮುನ್ನ ಕೆಲವೊಂದಿಷ್ಟು ವಿಚಾರಗಳನ್ನು ಗಮನಿಸಿದರೆ ಸಹಾಯವಾಗಬಹುದು.

Gold Loan: ಚಿನ್ನದ ಮೇಲೆ ಸಾಲ; ಬಹಳ ವೇಗ, ಬಹಳ ಸುಲಭ; ಬಡ್ಡಿಯೂ ಕಡಿಮೆ; ಆದರೆ, ಸಾಲ ಪಡೆಯುವ ಮುನ್ನ ಈ ವಿಷಯ ಗಮನಿಸಿರಿ
ಚಿನ್ನದ ಮೇಲಿನ ಸಾಲ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 01, 2023 | 11:59 AM

ನವದೆಹಲಿ: ಸದ್ಯ ಅತ್ಯಂತ ಸುಲಭವಾಗಿರುವ ಹಾಗೂ ಕಡಿಮೆ ವೆಚ್ಚವಿರುವ ಸಾಲಗಳಲ್ಲಿ ಗೋಲ್ಡ್ ಲೋನ್ (Gold Loan) ಪ್ರಮುಖವಾದುದು. ಕೈಯಲಿ ಇದ್ದರೆ ಚಿನ್ನ, ಚಿಂತೆಯು ಏತಕೆ ಅಣ್ಣಾ ಅಂತ ಒಂದು ಜಾಹೀರಾತಿನಲ್ಲಿ ಹೇಳೋದನ್ನು ಕೇಳಿರಬಹುದು. ಇದು ಅಕ್ಷರಶಃ ನಿಜ. ಚಿನ್ನ ಬಹೂಪಯೋಗಿ ಎನಿಸುವ ಆಪದ್ಬಾಂಧವ ವಸ್ತು. ಒಡವೆಯಾಗಿ ನಮ್ಮ ಅಂದ ಹೆಚ್ಚಿಸುತ್ತದೆ. ಮಾರಿದರೆ ದುಡ್ಡು ಸಿಗುತ್ತದೆ. ತುರ್ತಾಗಿ ಸಾಲ ಬೇಕೆಂದರೆ ಅದೂ ಸಿಗುತ್ತದೆ. ಚಿನ್ನವನ್ನು ಒತ್ತೆ ಇಟ್ಟು ಸುಲಭವಾಗಿ ಸಾಲ ಪಡೆಯಬಹುದು. ಇತರ ಸಾಲಗಳಿಗೆ ಹೋಲಿಸಿದರೆ ಒಡವೆ ಸಾಲಕ್ಕೆ ಬಡ್ಡಿಯೂ ಕಡಿಮೆ. ಕೆಲ ಒಡವೆ ಅಂಗಡಿಗಳಿಂದ ಹಿಡಿದು ಬಹುತೇಕ ಎಲ್ಲಾ ಕಮರ್ಷಿಯಲ್ ಬ್ಯಾಂಕು, ಹಣಕಾಸು ಸಂಸ್ಥೆಗಳು, ಸಹಕಾರ ಬ್ಯಾಂಕುಗಳು ಒಡವೆ ಒತ್ತೆ ಇಟ್ಟುಕೊಂಡು ಸಾಲ ಕೊಡುತ್ತವೆ. ಆದರೆ, ಸಾಲ ಪಡೆಯುವ ಮುನ್ನ ಕೆಲವೊಂದಿಷ್ಟು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳಿತು.

ಒಡವೆ ಸಾಲ ಯಾರಿಂದ ಪಡೆಯುತ್ತೀರಿ ಎಂಬುದು ಮುಖ್ಯ

ಬಹಳ ಮಂದಿ ತುರ್ತಾಗಿ ಕಿರುಸಾಲ ಬೇಕೆಂದರೆ ಈಗಲೂ ಗಿರವಿ ಅಂಗಡಿಗಳಿಗೆ ಹೋಗಿ ಚಿನ್ನ ಒತ್ತೆ ಇಟ್ಟು ಸಾಲ ಪಡೆಯುತ್ತಾರೆ. ಆದರೆ, ಇಂಥ ಅಂಗಡಿಗಳಲ್ಲಿ ಒತ್ತೆ ಇಡುವ ಚಿನ್ನ ಪೂರ್ಣ ಸುರಕ್ಷಿತವಾಗಿರುವುದಿಲ್ಲ ಎನ್ನುವ ಅಪಾಯ ಇದ್ದೇ ಇದೆ. ಆದ್ದರಿಂದ ಬ್ಯಾಂಕ್, ಸಹಕಾರ ಸಂಸ್ಥೆ, ನೊಂದಾಯಿತ ಹಣಕಾಸು ಸಂಸ್ಥೆ ಇತ್ಯಾದಿ ಸಂಘಟಿತ ವಲಯದ ಬ್ಯಾಂಕುಗಳಲ್ಲಿ ಸಾಲಕ್ಕೆ ಒತ್ತೆ ಇಡಲಾಗುವ ಚಿನ್ನ ಬಹಳ ಸುರಕ್ಷಿತವಾಗಿರುತ್ತದೆ.

ಚಿನ್ನದ ಮೇಲೆ ಸಾಲ ಪಡೆಯುವ ಮುನ್ನ ಗಮನದಲ್ಲಿರಿಸಬೇಕಾದ ಸಂಗತಿಗಳು

ಬಡ್ಡಿ ದರ: ಬಹುತೇಕ ಎಲ್ಲಾ ಬ್ಯಾಂಕುಗಳಲ್ಲೂ ಒಡವೆ ಸಾಲಕ್ಕೆ ಬಡ್ಡಿ ದರ ಕಡಿಮೆಯೇ ಇರುತ್ತದೆ. ಆದರೆ, ಎಲ್ಲಿ ಅತಿ ಕಡಿಮೆ ಬಡ್ಡಿ ವಿಧಿಸಲಾಗುತ್ತದೆ ಎಂಬುದನ್ನು ತಿಳಿದು, ಹೋಲಿಕೆ ಮಾಡಿ ಬಳಿಕ ನಿರ್ಧಾರಕ್ಕೆ ಬರುವುದು ಒಳ್ಳೆಯದು.

ಇದನ್ನೂ ಓದಿNew GST Rules: 7 ದಿನದೊಳಗೆ ಇನ್ವಾಯ್ಸ್ ಸಲ್ಲಿಸದಿದ್ದರೆ ಏನಾಗುತ್ತದೆ? ಹೊಸ ಜಿಎಸ್​ಟಿ ನಿಯಮ ತಿಳಿದಿರಿ

ಒಡವೆಗೆ ಎಷ್ಟು ಸಾಲ?: ಒಡವೆ ಸಾಲ ಕೊಡುವಾಗ ಬ್ಯಾಂಕುಗಳು ಪ್ರತೀ ಗ್ರಾಮ್​ಗೆ ಇಂತಿಷ್ಟು ಪ್ರಮಾಣದ ಹಣವನ್ನು ಸಾಲವಾಗಿ ನೀಡುತ್ತವೆ. ಕೆಲ ಕಡೆ ಹೆಚ್ಚು ಸಿಗಬಹುದು. ಈ ಅಂಶವೂ ಗಮನದಲ್ಲಿರಲಿ. ಯಾಕೆಂದರೆ ನೀವು ಹೆಚ್ಚು ಒಡವೆ ಒತ್ತೆ ಇಡುವುದು ತಪ್ಪುತ್ತದೆ.

ಪ್ರೋಸಸಿಂಗ್ ಫೀಸ್: ಇದು ಒಡವೆ ಸಾಲ ನೀಡುವ ಪ್ರಕ್ರಿಯೆಗಳಿಗೆ ಬ್ಯಾಂಕು ವಿಧಿಸುವ ಶುಲ್ಕ. ಒಡವೆ ಗುಣಮಟ್ಟ ಪರೀಕ್ಷೆಯ ವೆಚ್ಚವೂ ಇದರಲ್ಲಿ ಒಳಗೊಂಡಿರುತ್ತದೆ. ಕೆಲ ಬ್ಯಾಂಕುಗಳಲ್ಲಿ 500 ರೂ ಪ್ರೋಸಸಿಂಗ್ ಫೀಸ್ ಇದ್ದರೆ, ಕೆಲವೆಡೆ ಒಂದು ಸಾವಿರಕ್ಕೂ ಹೆಚ್ಚು ಶುಲ್ಕ ವಿಧಿಸಲಾಗುತ್ತದೆ.

ಮರುಪಾವತಿ ಅವಕಾಶ: ಗೃಹಸಾಲ, ವೈಯಕ್ತಿಕ ಸಾಲ ಇತ್ಯಾದಿ ವಿಚಾರದಲ್ಲಿ ತಿಂಗಳ ಕಂತುಗಳನ್ನು ತಪ್ಪದೇ ಕಟ್ಟಬೇಕು. ಇಲ್ಲದಿದ್ದರೆ ದಂಡ ಹಾಕಲಾಗುತ್ತದೆ. ಒಡವೆ ಸಾಲದಲ್ಲಿ ಸಾಮಾನ್ಯವಾಗಿ ಸಡಿಲ ನಿಯಮ ಇರುತ್ತದೆ. ಯಾವಾಗ ಬೇಕಾದರೂ ಹಣ ಮರುಪಾವತಿ ಮಾಡಬಹುದು. ಈ ವಿಚಾರವನ್ನೂ ವಿಚಾರಿಸಿ ತಿಳಿದುಕೊಳ್ಳಿ.

ಇದನ್ನೂ ಓದಿFD Rates: SBI, ICICI, HDFC, Axis Bank- ಈ ನಾಲ್ಕರಲ್ಲಿ ಯಾವ ಬ್ಯಾಂಕ್​ನ ಎಫ್​ಡಿ ಅತ್ಯುತ್ತಮ? ಇಲ್ಲಿದೆ ಒಂದು ಹೋಲಿಕೆ

ಯಾವ್ಯಾವ ಬ್ಯಾಂಕಲ್ಲಿ ಒಡವೆ ಸಾಲಕ್ಕೆ ಎಷ್ಟಿದೆ ಬಡ್ಡಿ ದರ?

  • ಎಸ್​ಬಿಐ: ವಾರ್ಷಿಕ ಬಡ್ಡಿ ಶೇ. 7ರಿಂದ ಆರಂಭ
  • ಕೆನರಾ ಬ್ಯಾಂಕ್: ಬಡ್ಡಿ ಶೇ. 7.35ರಿಂದ ಆರಂಭ
  • ಬ್ಯಾಂಕ್ ಆಫ್ ಮಹಾರಾಷ್ಟ್ರ: ಶೇ. 7.10ರಿಂದ ಆರಂಭ
  • ಪಂಜಾಬ್ ನ್ಯಾಷನಲ್ ಬ್ಯಾಂಕ್: ಬಡ್ಡಿ ದರ ಶೇ. 7.70ರಿಂದ ಶೇ. 8.75
  • ಬ್ಯಾಂಕ್ ಆಫ್ ಬರೋಡ: ಶೇ. 8.85ರಿಂದ ಆರಂಭ
  • ಆ್ಯಕ್ಸಿಸ್ ಬ್ಯಾಂಕ್: ಒಡವೆ ಸಾಲಕ್ಕೆ ಬಡ್ಡಿ ದರ ಶೇ. 13.50ರಿಂದ ಶೇ. 16.95
  • ಎಚ್​ಡಿಎಫ್​ಸಿ ಬ್ಯಾಂಕ್: ವಾರ್ಷಿಕ ಬಡ್ಡಿ ದರ ಶೇ. 11ರಿಂದ 16ವರೆಗೂ
  • ಕೋಟಕ್ ಮಹೀಂದ್ರ ಬ್ಯಾಂಕ್: ಗೋಲ್ಡ್ ಲೋನ್​ಗೆ ಬಡ್ಡಿ ದರ ಶೇ. 10ರಿಂದ 17.
  • ಇಂಡಸ್​ಇಂಡ್ ಬ್ಯಾಂಕ್: ಶೇ. 11.50ರಿಂದ ಶೇ. 16
  • ಮುತ್ತೂಟ್ ಫೈನಾನ್ಸ್: ಶೇ. 12ರಿಂದ ಶೇ. 26
  • ಮಣಪ್ಪುರಂ ಗೋಲ್ಡ್: ಶೇ. 9.90ರಿಂದ ಶೇ. 24

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಚಿನ್ನದ ಮೇಲಿನ ಸಾಲಕ್ಕೆ ಅತಿ ಕಡಿಮೆ ಬಡ್ಡಿ ದರ ಇದೆ. ಮೇಲೆ ಪಟ್ಟಿಯಲ್ಲಿ ಇಲ್ಲದ ಕರ್ನಾಟಕ ಬ್ಯಾಂಕ್, ಆಂಧ್ರ ಬ್ಯಾಂಕ್ ಇತ್ಯಾದಿಯಲ್ಲೂ ಒಡವೆ ಸಾಲಕ್ಕೆ ಬಹಳ ಕಡಿಮೆ ಬಡ್ಡಿ ದರ ಇದೆ. ಕೋ ಆಫರೇಟಿವ್ ಬ್ಯಾಂಕುಗಳಲ್ಲಿ ಶೇ. 9ರಿಂದ ಶೇ. 13ರವರೆಗೂ ಬಡ್ಡಿಗೆ ಗೋಲ್ಡ್ ಲೋನ್ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್