ಸಿಲಿಕಾನ್ ಸಿಟಿ ಹೊಂದಿರುವ ಕರ್ನಾಟಕದಲ್ಲಿ 470 ಹಳ್ಳಿಗಳಲ್ಲಿ ಈಗಲೂ ಇಲ್ಲ ಮೊಬೈಲ್ ಸಂಪರ್ಕ

Mobile network data in India: ಭಾರತದಲ್ಲಿ 8,985 ಹಳ್ಳಿಗಳಲ್ಲಿ ಈಗಲೂ ಮೊಬೈಲ್ ಕನೆಕ್ಟಿವಿಟಿ ಇಲ್ಲ. ನೆಟ್ವರ್ಕ್ ಇಲ್ಲದ ಅತಿಹೆಚ್ಚು ಹಳ್ಳಿಗಳಿರುವುದು ಒಡಿಶಾ, ಅರುಣಾಚಲಪ್ರದೇಶದಲ್ಲಿ. ಈ ಪಟ್ಟಿಯಲ್ಲಿ ಕರ್ನಾಟಕಕ್ಕೆ ಐದನೇ ಸ್ಥಾನ. ರಾಜ್ಯದಲ್ಲಿ ಬರೋಬ್ಬರಿ 470 ಹಳ್ಳಿಗಳು ಈಗಲೂ ಕೂಡ ಮೊಬೈಲ್ ಕನೆಕ್ಟಿವಿಟಿ ಹೊಂದಿಲ್ಲ.

ಸಿಲಿಕಾನ್ ಸಿಟಿ ಹೊಂದಿರುವ ಕರ್ನಾಟಕದಲ್ಲಿ 470 ಹಳ್ಳಿಗಳಲ್ಲಿ ಈಗಲೂ ಇಲ್ಲ ಮೊಬೈಲ್ ಸಂಪರ್ಕ
ಮೊಬೈಲ್ ಟವರ್

Updated on: Mar 13, 2026 | 3:23 PM

ಬೆಂಗಳೂರು, ಮಾರ್ಚ್ 13: ಡಿಜಿಟಲ್ ಇಂಡಿಯಾದಂತಹ ಮಹತ್ವಾಕಾಂಕ್ಷಿ ಯೋಜನೆ ನಡೆಸುತ್ತಿರುವ ಭಾರತದಲ್ಲಿ ಈಗಲೂ ಕೂಡ ಸಾವಿರಾರು ಹಳ್ಳಿಗಳಿಗೆ ಮೊಬೈಲ್ ನೆಟ್ವರ್ಕ್ (Mobile Network) ಇಲ್ಲವೇ ಇಲ್ಲ. ಲೋಕಸಭೆಯಲ್ಲಿ ದೂರಸಂಪರ್ಕ ಇಲಾಖೆ ಹಂಚಿಕೊಂಡಿರುವ ದತ್ತಾಂಶದ ಪ್ರಕಾರ, 2026ರ ಜನವರಿ 31ರವರೆಗೂ ಮೊಬೈಲ್ ನೆಟ್ವರ್ಕ್ ಇಲ್ಲದ ಹಳ್ಳಿಗಳ ಸಂಖ್ಯೆ 8,985 ಎನ್ನಲಾಗಿದೆ. ಈ ವಿಚಾರದಲ್ಲಿ ಕಳಪೆ ಸಾಧನೆ ಹೊಂದಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವೂ ಇದೆ.

ಕರ್ನಾಟಕದಲ್ಲಿ 470 ಹಳ್ಳಿಗಳಲ್ಲಿ ಮೊಬೈಲ್ ನೆಟ್ವರ್ಕ್ ಸ್ಥಾಪನೆಯಾಗಿಲ್ಲ. ದಕ್ಷಿಣ ರಾಜ್ಯಗಳಲ್ಲೇ ಕರ್ನಾಟಕದ್ದು ಹೀನಾಯ ಸಾಧನೆ. ಕೇರಳದಲ್ಲಿ ಪ್ರತೀ ಹಳ್ಳಿಯಲ್ಲೂ ಮೊಬೈಲ್ ನೆಟ್ವರ್ಕ್ ಇದೆ. ತಮಿಳುನಾಡಿನಲ್ಲಿ ಕೇವಲ ಮೂರು ಹಳ್ಳಿಗಳು ನೆಟ್ವರ್ಕ್​ನಿಂದ ವಂಚಿತವಾಗಿವೆ. ಕಳಪೆ ಮೊಬೈಲ್ ಕನೆಕ್ಟಿವಿಟಿಯಲ್ಲಿ ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಪೈಪೋಟಿ ನೀಡುತ್ತಿರುವುದು ಆಂಧ್ರ ಮಾತ್ರ. ಅಲ್ಲಿ 394 ಹಳ್ಳಿಗಳಲ್ಲಿ ಮೊಬೈಲ್ ಸಂಪರ್ಕ ಇಲ್ಲ. ತೆಲಂಗಾಣದಲ್ಲಿ 228 ಹಳ್ಳಿಗಳಿಗೆ ಈ ನೆಟ್ವರ್ಕ್ ಇಲ್ಲ.

ಇದನ್ನೂ ಓದಿ: 18 ವರ್ಷ ಅಡೋಬ್ ಸಿಇಒ ಆಗಿದ್ದ ಭಾರತ ಮೂಲದ ಶಾಂತನು ನಾರಾಯಣ್ ರಾಜೀನಾಮೆ

ಕರ್ನಾಟಕದಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶಗಳು ಹೆಚ್ಚಾಗಿ ಅರಣ್ಯ ಹಾಗೂ ಗುಡ್ಡಗಾಡು ಜಾಗದಲ್ಲಿವೆ. ಉತ್ತರಕನ್ನಡ ಜಿಲ್ಲೆಯೊಂದರಲ್ಲೇ 189 ಇಂಥ ಹಳ್ಳಿಗಳಿವೆ. ಶಿವಮೊಗ್ಗ (75), ಚಿಕ್ಕಮಗಳೂರು (40), ಚಾಮರಾಜನಗರ (25), ಬೆಳಗಾವಿ (19), ಕಲಬುರ್ಗಿ (18) ಜಿಲ್ಲೆಗಳು ನಂತರದ ಸ್ಥಾನ ಪಡೆಯುತ್ತವೆ.

ಮೊಬೈಲ್ ನೆಟ್ವರ್ಕ್ ಇಲ್ಲದ ಅತಿಹೆಚ್ಚು ಹಳ್ಳಿಗಳಿರುವ ರಾಜ್ಯಗಳು

  1. ಒಡಿಶಾ: 1,237
  2. ಅರುಣಾಚಲಪ್ರದೇಶ: 1,185
  3. ಮಧ್ಯಪ್ರದೇಶ: 960
  4. ಮಹಾರಾಷ್ಟ್ರ: 872
  5. ಕರ್ನಾಟಕ: 470

ಇದನ್ನೂ ಓದಿ: ಮನೆಯಲ್ಲೇ ಅಡುಗೆ ಮಾಡಿಕೊಳ್ಳಿ, ತಿನ್ನಿ, ಕೆಲಸ ಮಾಡಿ: ಎಲ್​ಪಿಜಿ ಸಮಸ್ಯೆಗೆ ಎಚ್​ಸಿಎಲ್​ನಿಂದ ವರ್ಕ್ ಫ್ರಂ ಹೋಮ್ ಪರಿಹಾರ

ಭಾರತ್​ನೆಟ್ ಪ್ರಾಜೆಕ್ಟ್​ನಲ್ಲಿ ಎಲ್ಲೆಡೆ ಕನೆಕ್ಟಿವಿಟಿ

ಸರ್ಕಾರವು ಡಿಜಿಟಲ್ ಇಂಡಿಯಾವನ್ನು ಇನ್ನೂ ಸಮರ್ಪಕವಾಗಿ ಮಾಡಲು ಭಾರತ್​ನೆಟ್ ಪ್ರಾಜೆಟ್ ಜಾರಿಗೊಳಿಸುತ್ತಿದೆ. ಈ ಯೋಜನೆ ಅಡಿ ಪ್ರತೀ ಹಳ್ಳಿಗೂ ಬ್ರಾಡ್​ಬ್ಯಾಂಡ್ ಕನೆಕ್ಟಿವಿಟಿ ಕೊಡುವ ಗುರಿ ಇದೆ. ಈ ಸ್ಕೀಮ್ ಅಡಿ ಇಲ್ಲಿಯವರೆಗೆ ದೇಶಾದ್ಯಂತ 23,994 ಮೊಬೈಲ್ ಟವರ್​ಗಳನ್ನು ಸ್ಥಾಪಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us