ಭಾರತದಲ್ಲಿ ಸಣ್ಣ ವ್ಯವಹಾರಗಳಿಗೆ ಸಾರಿಗೆ ಬೆನ್ನೆಲುಬಾಗಿದೆ. ಕರ್ನಾಟಕದಲ್ಲಿ, ಸಾವಿರಾರು ಆಟೋ ಚಾಲಕರು, ವಿತರಣಾ ಪಾಲುದಾರರು ಮತ್ತು ಸಣ್ಣ ಸಾಗಣೆದಾರರು ಈಗ ದಿನಗೂಲಿಯನ್ನು ಮೀರಿದ ಆದಾಯ ಗಳಿಸುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಎಂದು ಕರ್ನಾಟಕ ದಕ್ಷಿಣ ಸಾರಿಗೆ ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ್ (C. Mallikarjun) ತಿಳಿಸಿದ್ದಾರೆ.
ಏಸ್ ಪ್ರೊ – ಅಬ್ ಮೇರಿ ಬಾರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಣ್ಣ ಕಾರ್ಮಿಕರು ಸ್ಥಿರತೆ ಹಾಗೂ ಘನತೆಯೊಂದಿಗೆ ಸ್ವ-ಉದ್ಯೋಗದತ್ತ ಹೆಜ್ಜೆ ಹಾಕಲು ಬೆಂಬಲ ನೀಡುವಲ್ಲಿ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳು ಹಾಗೂ ಟಿವಿ9 ನೆಟ್‌ವರ್ಕ್‌ನ ಪಾತ್ರವು ಬಹುದೊಡ್ಡದಿದೆ. ಈ ಅಭಿಯಾನವು ಪ್ರಗತಿಯ ಹೊಸ ಅಲೆಯನ್ನು ಪ್ರತಿನಿಧಿಸುತ್ತಿದ್ದು, ಸಾರಿಗೆ ಕೇವಲ ಚಲನಶೀಲತೆಯಲ್ಲ, ಆದರೆ ಸ್ವಾವಲಂಬನೆಯ ಮಾರ್ಗವಾಗಿದೆ ಎಂದು ಹೇಳಿದ್ದಾರೆ.
ಅಬ್ ಮೇರಿ ಬಾರಿ ಅಭಿಯಾನದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ