ಫೆ. 26, ಮಹಾಶಿವರಾತ್ರಿಯಂದು ಷೇರು ಮಾರುಕಟ್ಟೆಗೆ ರಜೆಯಾ? ಇಲ್ಲಿದೆ ಎನ್​ಎಸ್​ಇ, ಬಿಎಸ್​ಇ ರಜಾದಿನಗಳ ಪಟ್ಟಿ

Stock market 2025 holidays list: ಮಹಾಶಿವರಾತ್ರಿ ಹಬ್ಬ ಇರುವ ಫೆಬ್ರುವರಿ 26ರಂದು ಷೇರು ಮಾರುಕಟ್ಟೆಗೆ ರಜೆ ಇದೆ. ಇದು ಈ ವರ್ಷದ ಮೊದಲ ರಜೆಯಾಗಿದೆ. ಫೆಬ್ರುವರಿ ತಿಂಗಳ ಏಕೈಕ ರಜೆಯಾಗಿದೆ. ಈ ವರ್ಷ ಒಟ್ಟು 14 ದಿನ ರಜೆಗಳಿವೆ. ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳಲ್ಲಿ ತಲಾ ಮೂರು ದಿನ ರಜೆ ಇದೆ. ಇವು ಶನಿವಾರ ಮತ್ತು ಭಾನುವಾರದ ರೆಗ್ಯುಲರ್ ರಜೆ ಹೊರತುಪಡಿಸಿ ಘೋಷಿಸಲಾಗಿರುವ ರಜೆಗಳಾಗಿವೆ.

ಫೆ. 26, ಮಹಾಶಿವರಾತ್ರಿಯಂದು ಷೇರು ಮಾರುಕಟ್ಟೆಗೆ ರಜೆಯಾ? ಇಲ್ಲಿದೆ ಎನ್​ಎಸ್​ಇ, ಬಿಎಸ್​ಇ ರಜಾದಿನಗಳ ಪಟ್ಟಿ
ಷೇರು ಮಾರುಕಟ್ಟೆ

Updated on: Feb 25, 2025 | 6:38 PM

ಮುಂಬೈ, ಫೆಬ್ರುವರಿ 25: ನಾಳೆ ಬುಧವಾರ ಮಹಾಶಿವರಾತ್ರಿ ಹಬ್ಬ ಇದ್ದು, ಸರ್ಕಾರಿ ರಜೆ ಘೋಷಣೆ ಆಗಿದೆ. ಹೆಚ್ಚಿನ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇದೆ. ಭಾರತದ ಷೇರು ಮಾರುಕಟ್ಟೆಗೂ ಶಿವರಾತ್ರಿ ಹಬ್ಬ ನಿಮಿತ್ತ ರಜೆ ಇದೆ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಮತ್ತು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಅಂದು (ಫೆ. 26) ಕಾರ್ಯನಿರ್ವಹಿಸುವುದಿಲ್ಲ. ಈ ಷೇರು ವಿನಿಮಯದ ಘೋಷಿತ 14 ರಜೆಗಳಲ್ಲಿ ಇದೂ ಒಂದು. ಈ ಕ್ಯಾಲಂಡರ್ ವರ್ಷದ ಮೊದಲ ರಜೆಯೂ ಇದು.

ಷೇರು ಮಾರುಕಟ್ಟೆಯ 2025ರ ವರ್ಷದ ರಜಾ ದಿನಗಳ ಪಟ್ಟಿ

  • ಫೆ. 26, ಬುಧವಾರ: ಮಹಾಶಿವರಾತ್ರಿ ಹಬ್ಬ
  • ಮಾರ್ಚ್ 14, ಶುಕ್ರವಾರ: ಹೋಳಿ ಹಬ್ಬ
  • ಮಾರ್ಚ್ 31, ಸೋಮವಾರ: ಈದ್ ಹಬ್ಬ
  • ಏಪ್ರಿಲ್ 10, ಗುರುವಾರ: ಮಹಾವೀರ ಜಯಂತಿ
  • ಏಪ್ರಿಲ್ 14, ಸೋಮವಾರ: ಅಂಬೇಡ್ಕರ್ ಜಯಂತಿ
  • ಏಪ್ರಿಲ್ 18, ಶುಕ್ರವಾರ: ಗುಡ್ ಫ್ರೈಡೆ
  • ಮೇ 1, ಗುರುವಾರ: ಮಹಾರಾಷ್ಟ್ರ ದಿನ
  • ಆಗಸ್ಟ್ 15, ಶುಕ್ರವಾರ: ಸ್ವಾತಂತ್ರ್ಯ ದಿನಾಚರಣೆ
  • ಆಗಸ್ಟ್ 27, ಬುಧವಾರ: ಗಣೇಶ ಹಬ್ಬ
  • ಅಕ್ಟೋಬರ್ 2, ಗುರುವಾರ: ಗಾಂಧಿ ಜಯಂತಿ
  • ಅಕ್ಟೋಬರ್ 21, ಮಂಗಳವಾರ: ದೀಪಾವಳಿ ಧನಲಕ್ಷ್ಮೀ ಪೂಜೆ
  • ಅಕ್ಟೋಬರ್ 22, ಬುಧವಾರ: ದೀಪಾವಳಿ ಬಲಿಪಾಡ್ಯಮಿ
  • ನವೆಂಬರ್ 5, ಬುಧವಾರ: ಗುರು ನಾನಕ್ ದೇವ್ ಜಯಂತಿ
  • ಡಿಸೆಂಬರ್ 25, ಗುರುವಾರ: ಕ್ರಿಸ್ಮಸ್ ಹಬ್ಬ

ಹಿಂದಿನ ವರ್ಷಗಳಲ್ಲಿ ಗಣರಾಜ್ಯೋತ್ಸವ, ಶ್ರೀರಾಮನವಮಿ, ಬಕ್ರೀದ್, ಮುಹರಂ ಹಬ್ಬಗಳಿಗೆ ರಜೆ ನೀಡಲಾಗುತ್ತಿತ್ತು. ಈ ಬಾರಿ ಈ ಹಬ್ಬಗಳು ಶನಿವಾರ ಮತ್ತು ಭಾನುವಾರದ ದಿನಗಳಂದು ಇರುವುದರಿಂದ ಪರ್ಯಾಯವಾಗಿ ಬೇರೆ ಹಬ್ಬಗಳಿಗೆ ರಜೆ ನೀಡಲಾಗಿದೆ.

ಇದನ್ನೂ ಓದಿ: ಕೋಟಿ ಕೋಟಿ ಕುಬೇರನಿಗೆ ಚಿಲ್ಲರೆ ಕಾಟ; ಅಮೆರಿಕಕ್ಕೆ ಪೆನ್ನಿ ಸಂಕಟ

ಮಹಾರಾಷ್ಟ್ರ ದಿನದಂದು ಯಾಕೆ ರಜೆ?

ಭಾರತದ ಷೇರು ಮಾರುಕಟ್ಟೆಯಲ್ಲಿ ಬಿಎಸ್​ಇ ಮತ್ತು ಎನ್​ಎಸ್​ಇ, ಈ ಎರಡು ಷೇರು ವಿನಿಮಯ ಕೇಂದ್ರಗಳಿವೆ. ಇವುಗಳು ಇರುವುದು ಮುಂಬೈನಲ್ಲಿ. ಹೀಗಾಗಿ, ಮಹಾರಾಷ್ಟ್ರ ರಾಜ್ಯದ ಪ್ರಾದೇಶಿಕ ರಜೆಗಳೂ ಕೂಡ ಷೇರು ಮಾರುಕಟ್ಟೆಯ ರಜಾದಿನಗಳ ಪಟ್ಟಿಗೆ ಪ್ರಭಾವ ಬೀರುತ್ತವೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ, ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಮುಂಬೈನಲ್ಲಿ ಮತದಾನ ನಡೆಯುವ ದಿನದಂದೂ ಷೇರು ಮಾರುಕಟ್ಟೆಗೆ ರಜೆ ನೀಡಲಾಗುತ್ತದೆ.

ಷೇರು ಮಾರುಕಟ್ಟೆ ವಹಿವಾಟು ಅವಧಿ…

ಷೇರು ಮಾರುಕಟ್ಟೆಗೆ ಈ ಮೇಲಿನ ರಜಾದಿನಗಳು ಹಾಗೂ ಶನಿವಾರ ಮತ್ತು ಭಾನುವಾರ ಬಿಟ್ಟು ಉಳಿದ ದಿನಗಳು ಕಾರ್ಯನಿರ್ವಹಿಸುತ್ತವೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತೀ ದಿನ ಬೆಳಗ್ಗೆ 9:15ರಿಂದ ಮಧ್ಯಾಹ್ನ 3:30ರವರೆಗೆ ಷೇರು ವಹಿವಾಟು ನಡೆಯಲು ಅವಕಾಶ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us