LIC Share: 6 ಲಕ್ಷ ಕೋಟಿ ರೂಪಾಯಿಗಿಂತ ಕೆಳಗಿಳಿದ ಎಲ್​ಐಸಿ ಮಾರುಕಟ್ಟೆ ಮೌಲ್ಯ

| Updated By: Srinivas Mata

Updated on: Jun 07, 2022 | 7:21 AM

ಎಲ್​​ಐಸಿ ಷೇರಿನ ಬೆಲೆ ಜೂನ್​ 6ನೇ ತಾರೀಕಿನ ಸೋಮವಾರದಂದು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಮಾರುಕಟ್ಟೆ ಬಂಡವಾಳ ಮೌಲ್ಯ 5 ಲಕ್ಷ ಕೋಟಿ ರೂಪಾಯಿಗೂ ಕೆಳಗೆ ಇಳಿದಿದೆ.

LIC Share: 6 ಲಕ್ಷ ಕೋಟಿ ರೂಪಾಯಿಗಿಂತ ಕೆಳಗಿಳಿದ ಎಲ್​ಐಸಿ ಮಾರುಕಟ್ಟೆ ಮೌಲ್ಯ
ಸಾಂದರ್ಭಿಕ ಚಿತ್ರ
Follow us on

ಬಹು ನಿರೀಕ್ಷೆ ಇಟ್ಟುಕೊಂಡಿದ್ದ ಎಲ್​ಐಸಿ (LIC) ಕಂಪೆನಿಯ ಷೇರು ಹೂಡಿಕೆದಾರರಿಗೆ ನಷ್ಟವನ್ನು ಮುಂದುವರಿಸಿದೆ. ಜೂನ್ 6ನೇ ತಾರೀಕಿನ ಸೋಮವಾರದಂದು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 775.10 ರೂಪಾಯಿ ಮುಟ್ಟಿತು. ದಿನದ ಕೊನೆಗೆ 777.35 ರೂಪಾಯಿಯಲ್ಲಿ ವ್ಯವಹಾರ ಚುಕ್ತಾಗೊಳಿಸಿದೆ. ಈ ಮೂಲಕ ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು 4.91 ಲಕ್ಷ ಕೋಟಿ ರೂಪಾಯಿಗೆ ಕುಸಿದಿದೆ. ಸೋಮವಾರದ ಬೆಳಗ್ಗೆಯೇ ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯ 5 ಲಕ್ಷ ಕೋಟಿ ರೂಪಾಯಿಗೂ ಕೆಳಗೆ ಇಳಿಯಿತು. ಅಂದಹಾಗೆ ಎಲ್​ಐಸಿ ಷೇರನ್ನು ಮೇಲ್​​ಸ್ತರದ ದರದ ಬ್ಯಾಂಡ್ ಪ್ರತಿ ಷೇರು 949 ರೂಪಾಯಿಗೆ ವಿತರಿಸಲಾಗಿತ್ತು. ಷೇರು ಮಾರುಕಟ್ಟೆ ವಿಶ್ಲೇಷಕರ ಅಭಿಫ್ರಾಯದಂತೆ, ಎಲ್​ಐಸಿ ಷೇರಿನ ಬೆಲೆ ಇನ್ನಷ್ಟು ಕಡಿಮೆ ಆಗಬಹುದು. ಅದದಕ್ಕೆ ಕಾರಣ ಏನೆಂದರೆ, ಆ್ಯಂಕರ್ ಹೂಡಿಕೆದಾರರ 30 ದಿನಗಳ ಲಾಕ್-ಇನ್ ಅವಧಿ ಜೂನ್​ ಮಧ್ಯದಲ್ಲಿ ಮುಕ್ತಾಯಗೊಳ್ಳಲಿದೆ. ಆಗ ಇನ್ನಷ್ಟು ಬೆಲೆ ಕುಸಿತ ಆಗಲಿದೆ.

ಕಡಿಮೆಗೆ ಸಿಗುತ್ತಿದೆ ಎಂಬ ಕಾರಣಕ್ಕೆ ಎಲ್​ಐಸಿ ಷೇರುಗಳ ಖರೀದಿಗೆ ಮುಂದಾಗಬೇಡಿ ಎಂದು ವಿಶ್ಲೇಷಕರು ಸಲಹೆ ಮಾಡುತ್ತಾರೆ. ಎಲ್​ಐಸಿ ಐಪಿಒ ಲಿಸ್ಟಿಂಗ್ ದುರ್ಬಲವಾಗಿತ್ತು. ಎಫ್​ಐಐ ಭಾಗವಹಿಸುವಿಕೆ ಇಲ್ಲವೇ ಇಲ್ಲ ಎಂಬಂತಾಗಿತ್ತು. ಇನ್ನು ಆ್ಯಂಕರ್ ಹೂಡಿಕೆದಾರರ ಒಂದು ತಿಂಗಳ ಅವಧಿ ಪೂರ್ಣಗೊಂಡ ನಂತರ ಒಂದಷ್ಟು ಮಾರಾಟ ಎದುರು ನೋಡಬಹುದು. ಇನ್ನು ಎಲ್​ಐಸಿಯ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಕೂಡ ಉತ್ತೇಜನಕಾರಿ ಆಗಿಲ್ಲ. ಆದರೆ ಬೆಲೆ ಇಳಿಕೆ ಆಗಿದೆ ಎಂಬ ಕಾರಣಕ್ಕೆ ಎಲ್​ಐಸಿ ಷೇರು ಖರೀದಿಗೆ ಮುಂದಾಗಬಾರದು ಎಂಬ ಸಲಹೆ ನೀಡುತ್ತಾರೆ ಷೇರುಪೇಟೆ ತಜ್ಞರು.

ತಮ್ಮ ಪೋರ್ಟ್‌ಫೋಲಿಯೊದಲ್ಲಿ ಎಲ್‌ಐಸಿ ಷೇರುಗಳನ್ನು ಹೊಂದಿರುವ ದೀರ್ಘಾವಧಿಯ ಹೂಡಿಕೆದಾರರಿಗೆ ನೀಡುವ ಸಲಹೆ ಏನೆಂದರೆ, “ಎಲ್‌ಐಸಿ ಷೇರಿನ ಬೆಲೆಯು 750 ರೂಪಾಯಿ ಮಟ್ಟದ ತನಕ ಇಳಿಯಬಹುದು ಮತ್ತು ದೀರ್ಘಾವಧಿಯ ದೃಷ್ಟಿಕೋನವನ್ನು ಹೊಂದಿರುವವರು ಸ್ಕ್ರಿಪ್ ಅನ್ನು ಇಟ್ಟುಕೊಳ್ಳಬಹುದು ಮತ್ತು ಪ್ರತಿ ಶೇಕಡಾ 5ರಿಂದ 6ರಷ್ಟು ಇಳಿಕೆ ಆಗುತ್ತಿದ್ದಂತೆ ಸರಾಸರಿ ಮಾಡಿಕೊಳ್ಳುತ್ತಾ ಮುಂದುವರಿಸಬಹುದು. ಆದರೆ ಸರಾಸರಿಯು ಸುಮಾರು ರೂ. 750 ಮಟ್ಟದಿಂದಲೇ ಪ್ರಾರಂಭವಾಗಬೇಕು,” ಎಂದು ಸಲಹೆ ಮಾಡುತ್ತಾರೆ.

ಕಳೆದ ವಾರ ಎಮ್​ಕೆ ಬ್ರೋಕರೇಜ್ ಮತ್ತು ಸಂಶೋಧನಾ ಸಂಸ್ಥೆ ಎಲ್ಐಸಿ ಷೇರುಗಳ ಮೇಲೆ ತಟಸ್ಥ ದೃಷ್ಟಿಕೋನದಿಂದ ಕವರೇಜ್ ಅನ್ನು ಪ್ರಾರಂಭಿಸಿದೆ ಮತ್ತು ಷೇರುಗಳ 12-ತಿಂಗಳ ಗುರಿ ಬೆಲೆಯನ್ನು ರೂ. 875ರಲ್ಲಿ ಹೊಂದಿದೆ, ಇದು ಅದರ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಇಶ್ಯೂ ಬೆಲೆಗಿಂತ ಕಡಿಮೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: LIC Earnings: ಹಣಕಾಸು ವರ್ಷ 2022ಕ್ಕೆ ಎಲ್​ಐಸಿ ನಿವ್ವಳ ಲಾಭ ಶೇ 39ರಷ್ಟು ಏರಿಕೆಯಾಗಿ 4043 ಕೋಟಿಗೆ