LPG Cylinder Price: 19 ಕೆಜಿ ಎಲ್​ಪಿಜಿ ಸಿಲಿಂಡರ್ ಬೆಲೆ 83.50 ರೂ. ಇಳಿಕೆ, ವಿವರಗಳು ಇಲ್ಲಿವೆ

19 ಕೆಜಿ ಎಲ್​ಪಿಜಿ ಸಿಲಿಂಡರ್​ನ​ ಬೆಲೆ ಇಳಿಕೆಯಾಗಿದ್ದು ಗ್ರಾಹಕರಿಗೆ ಖುಷಿ ತಂದಿದೆ, ಸಿಲಿಂಡರ್​ ಬೆಲೆ 83.50 ರೂ.ಗೆ ಇಳಿಕೆಯಾಗಿದೆ.

LPG Cylinder Price: 19 ಕೆಜಿ ಎಲ್​ಪಿಜಿ ಸಿಲಿಂಡರ್ ಬೆಲೆ 83.50 ರೂ. ಇಳಿಕೆ, ವಿವರಗಳು ಇಲ್ಲಿವೆ
ಸಿಲಿಂಡರ್

Updated on: Jun 01, 2023 | 8:34 AM

19 ಕೆಜಿ ಎಲ್​ಪಿಜಿ ಸಿಲಿಂಡರ್​(LPG Cylinder) ನ​ ಬೆಲೆ ಇಳಿಕೆಯಾಗಿದ್ದು ಗ್ರಾಹಕರಿಗೆ ಖುಷಿ ತಂದಿದೆ, ಸಿಲಿಂಡರ್​ ಬೆಲೆ 83.50 ರೂ.ಗೆ ಇಳಿಕೆಯಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 83 ರೂ. ನಷ್ಟು ಇಳಿಕೆಯಾಗಿದೆ. ಈ ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಆದರೆ ಈ ಬೆಲೆ ಕಡಿತ ನಿರ್ಧಾರ ಕೆಲವರಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಅನಿಲ ಸಿಲಿಂಡರ್‌ಗಳಿಗೆ ಮಾತ್ರ ದರ ಇಳಿಕೆ ಅನ್ವಯವಾಗುತ್ತದೆ ಎಂದು ಕಂಪನಿಗಳು ಹೇಳಿಕೊಂಡಿವೆ.
ಅಂದರೆ 14.2 ಕೆಜಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಯಾವುದೇ ಪ್ರಯೋಜನವಿಲ್ಲ. ಏತನ್ಮಧ್ಯೆ, ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆ ಕ್ರಮೇಣ ಇಳಿಕೆಯಾಗುತ್ತಿದೆ. ಕಳೆದ ತಿಂಗಳು ಸಹ ಸಿಲಿಂಡರ್ ಬೆಲೆ 172 ರೂ.ಗೆ ಇಳಿದಿದೆ. ಮತ್ತೆ ಈಗ ಸಿಲಿಂಡರ್ ಬೆಲೆ 85 ರೂ.ನಷ್ಟು ಇಳಿಕೆಯಾಗಿದೆ. ಅಂದರೆ ಒಂದು ತಿಂಗಳೊಳಗೆ ಸಿಲಿಂಡರ್ ಬೆಲೆ 250 ರೂ.ನಷ್ಟು ಕಡಿಮೆಯಾಗಿದೆ ಎನ್ನಬಹುದು.

ಈಗಾಗಲೇ ವಾಣಿಜ್ಯ ಸಿಲಿಂಡರ್ ಬೆಲೆ 1,856.50 ರೂ. ನಷ್ಟಿತ್ತು ಅದು 1,773 ರೂ.ಗೆ ಇಳಿಕೆಯಾಗಿದೆ. ವಾಣಿಜ್ಯ ಮತ್ತು ಗೃಹಬಳಕೆಯ LPG ಸಿಲಿಂಡರ್‌ಗಳ ಬೆಲೆಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ. ಇಂದಿನಿಂದಲೇ ಹೊಸ ದರಗಳು ಅನ್ವಯವಾಗಲಿದೆ.

19 ಕೆಜಿ ವಾಣಿಜ್ಯ ಸಿಲಿಂಡರ್ ಈಗ ದೆಹಲಿಯಲ್ಲಿ ರೂ.1773 ಕ್ಕೆ ಲಭ್ಯವಿದೆ. 1875.50 ರೂ.ಗೆ ಕೋಲ್ಕತ್ತಾದಲ್ಲಿ ಜೂನ್ 1 ರಿಂದ ಲಭ್ಯವಿದೆ. ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1937ರೂ. ಆಗಿದೆ. ಕೋಲ್ಕತ್ತಾದಲ್ಲಿ 85 ರೂಪಾಯಿ, ಮುಂಬೈನಲ್ಲಿ 83.50 ರೂಪಾಯಿ ಮತ್ತು ಚೆನ್ನೈನಲ್ಲಿ 84.50 ರೂಪಾಯಿ ಸಿಲಿಂಡರ್ ಬೆಲೆ ಅಗ್ಗವಾಗಿದೆ.

ಮತ್ತಷ್ಟು ಓದಿ: New Rules In June 2023: ಇ-ವಾಹನ ಬೆಲೆ ಹೆಚ್ಚಳ; ಎಲ್​ಪಿಜಿ ಬೆಲೆ ಇಳಿಕೆಯಾಗುತ್ತಾ? ಜೂನ್ 1ರಿಂದ ಏನೇನು ಹಣಕಾಸು ಬದಲಾವಣೆ? ಇಲ್ಲಿದೆ ಡೀಟೇಲ್ಸ್

ಪಾಟ್ನಾದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ 2037 ರೂ. ಅದೇ ಸಮಯದಲ್ಲಿ, 14 ಕೆಜಿ ದೇಶೀಯ ಸಿಲಿಂಡರ್ 1,201 ರೂ.ಗೆ ಲಭ್ಯವಿರುತ್ತದೆ.
ಜೈಪುರದಲ್ಲಿ ವಾಣಿಜ್ಯ ಸಿಲಿಂಡರ್‌ನ ಬೆಲೆ 1796 ರೂ ಮತ್ತು ಗೃಹಬಳಕೆಯ ಸಿಲಿಂಡರ್‌ನ ಬೆಲೆ 1106.50 ರೂ. ಇದೆ. ಈಗ ಇಂದೋರ್‌ನಲ್ಲಿ ವಾಣಿಜ್ಯ ಸಿಲಿಂಡರ್‌ನ ಇತ್ತೀಚಿನ ದರ ರೂ.1877 ಆಗಿದೆ, ನಂತರ ಗೃಹಬಳಕೆಯ ಸಿಲಿಂಡರ್ ರೂ.1131ಕ್ಕೆ ಲಭ್ಯವಿರುತ್ತದೆ.

ದೇಶದಲ್ಲಿ ಎಲ್‌ಪಿಜಿ ಬೆಲೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ತಿಂಗಳು ನಿಗದಿಪಡಿಸುತ್ತವೆ . ಜಾಗತಿಕ ಕಚ್ಚಾ ಇಂಧನ ದರಗಳ ಆಧಾರದ ಮೇಲೆ ತೈಲ ಬೆಲೆಗಳನ್ನು ನಿರ್ಧರಿಸಲಾಗುತ್ತದೆ. ಅದಕ್ಕಾಗಿಯೇ ಪ್ರತಿ ತಿಂಗಳು ತೈಲ ಬೆಲೆಗಳನ್ನು ಬದಲಾಯಿಸಲಾಗುತ್ತದೆ. ಕಚ್ಚಾ ತೈಲ ಬೆಲೆಗಳು LPG ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಇದಲ್ಲದೆ, ಎಫ್‌ಒಬಿ, ಸಾರಿಗೆ, ವಿಮೆ, ಕಸ್ಟಮ್ ಸುಂಕ ಮತ್ತು ಪೋರ್ಟ್ ಡ್ಯೂಟಿ ಇತ್ಯಾದಿ ಅಂಶಗಳಿಂದ ಎಲ್‌ಪಿಜಿ ಬೆಲೆಗಳು ಬದಲಾಗುತ್ತವೆ.

 

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 8:23 am, Thu, 1 June 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us