LPG Cylinder Price: ಗ್ರಾಹಕರಿಗೆ ಗುಡ್​ ನ್ಯೂಸ್, ವಾಣಿಜ್ಯ ಬಳಕೆಯ ಎಲ್​ಪಿಜಿ​ ಸಿಲಿಂಡರ್​ ಬೆಲೆಯಲ್ಲಿ ಭಾರಿ ಇಳಿಕೆ

ತೈಲ ಮಾರುಕಟ್ಟೆ ಕಂಪನಿಗಳು(ಒಎಂಸಿ) 2023ರ ಮೇ 1 ರಂದು ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.

LPG Cylinder Price: ಗ್ರಾಹಕರಿಗೆ ಗುಡ್​ ನ್ಯೂಸ್, ವಾಣಿಜ್ಯ ಬಳಕೆಯ ಎಲ್​ಪಿಜಿ​ ಸಿಲಿಂಡರ್​ ಬೆಲೆಯಲ್ಲಿ ಭಾರಿ ಇಳಿಕೆ
ಸಿಲಿಂಡರ್
Follow us
ನಯನಾ ರಾಜೀವ್
|

Updated on:May 01, 2023 | 8:30 AM

ತೈಲ ಮಾರುಕಟ್ಟೆ ಕಂಪನಿಗಳು(ಒಎಂಸಿ) 2023ರ ಮೇ 1 ರಂದು ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್(LPG Cylinder) ಬೆಲೆಯನ್ನು ಕಡಿಮೆ ಮಾಡುವ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಮೇ 1, 2023 ರಂದು ವಾಣಿಜ್ಯ LPG ಸಿಲಿಂಡರ್‌ಗಳ ದರವನ್ನು ಕಡಿತಗೊಳಿಸಿದ ನಂತರ, ಅದರ ಬೆಲೆಗಳು ಇಡೀ ದೇಶದಲ್ಲಿ ಜಾರಿಗೆ ಬಂದಿವೆ. ಹೊಸ ವಾಣಿಜ್ಯ ಅನಿಲ ಬೆಲೆಗಳು ಸೋಮವಾರ, ಮೇ 1 ರಿಂದ ಜಾರಿಗೆ ಬಂದಿವೆ. ಈ ಬಾರಿ ಗ್ಯಾಸ್ ಸಿಲಿಂಡರ್ ಬೆಲೆ ಒಂದೇ ಬಾರಿಗೆ 171.50 ರೂಪಾಯಿ ಇಳಿಕೆಯಾಗಿದೆ.

ಪ್ರಸ್ತುತ 14.2 ಕೆಜಿ ಗೃಹಬಳಕೆಯ ಅಡುಗೆ ಅನಿಲದ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ . ದೆಹಲಿಯಲ್ಲಿ ವಾಣಿಜ್ಯ LPG ಸಿಲಿಂಡರ್ 1856.50 ರೂ. ಇದರ ದರ ಕೋಲ್ಕತ್ತಾದಲ್ಲಿ ರೂ 1960.50, ಮುಂಬೈನಲ್ಲಿ ರೂ 1808.50 ಮತ್ತು ಚೆನ್ನೈನಲ್ಲಿ ರೂ 2021.50. ತೈಲ ಕಂಪನಿಗಳು ತಮ್ಮ ವೆಬ್‌ಸೈಟ್‌ನಲ್ಲಿ ಹೊಸ ದರಗಳನ್ನು ನವೀಕರಿಸಿವೆ.

ಏಪ್ರಿಲ್ 1, 2023 ರಂದು, ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯನ್ನು ಸಹ ಕಡಿತಗೊಳಿಸಲಾಯಿತು. ನಂತರ ಗ್ಯಾಸ್ ಸಿಲಿಂಡರ್ ಸುಮಾರು 92 ರೂ.ಗಳಷ್ಟು ಅಗ್ಗವಾಗಿದ್ದು, ಮಾರ್ಚ್‌ನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 350 ರೂ.ಗಿಂತ ಹೆಚ್ಚಾಗಿದೆ.

ಕೋಲ್ಕತ್ತಾದಲ್ಲಿ ಪ್ರಸ್ತುತ ವಾಣಿಜ್ಯ ಅನಿಲ ಸಿಲಿಂಡರ್ (LPG) ಮತ್ತು ಕೈಗಾರಿಕಾ ಅನಿಲ ಸಿಲಿಂಡರ್ (RSP) ಬೆಲೆ 2,132 ರೂ. ಈ ಎರಡೂ ಬಗೆಯ ಗ್ಯಾಸ್ ಸಿಲಿಂಡರ್ ಗಳ ಬೆಲೆ 171.50 ರೂಪಾಯಿ ಇಳಿಕೆಯಾಗಿದೆ. ಇದರ ಪರಿಣಾಮವಾಗಿ, ಕೋಲ್ಕತ್ತಾದಲ್ಲಿ ವಾಣಿಜ್ಯ ವಲಯದಲ್ಲಿ ಬಳಸಲಾಗುವ 19 ಕೆಜಿ ಎಲ್‌ಪಿಜಿ ಮತ್ತು ಆರ್‌ಎಸ್‌ಪಿ ಗ್ಯಾಸ್ ಸಿಲಿಂಡರ್‌ನ ಹೊಸ ಬೆಲೆ 1,960.50 ರೂ.ಗೆ ಇಳಿದಿದೆ. ಈ ಹೊಸ ಬೆಲೆಗಳು ಇಂದಿನಿಂದ ಅಂದರೆ ಮೇ 1 ರಿಂದ ಜಾರಿಗೆ ಬಂದಿವೆ.

01 ಎಪ್ರಿಲ್ 2023 ರಂದು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗಿದೆ ಇದಾದ ನಂತರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2028 ರೂ., ಕೋಲ್ಕತ್ತಾದಲ್ಲಿ 2132 ರೂ., ಮುಂಬೈನಲ್ಲಿ 1980 ರೂ. ಮತ್ತು ಚೆನ್ನೈನಲ್ಲಿ 2192.50 ರೂ. ಈ ಹಿಂದೆ 1 ಮಾರ್ಚ್-2023 ರಂದು ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರೂ.2119.50, ಕೋಲ್ಕತ್ತಾದಲ್ಲಿ ರೂ.2221.50, ಮುಂಬೈನಲ್ಲಿ ರೂ.2071.50 ಮತ್ತು ಚೆನ್ನೈನಲ್ಲಿ ರೂ.2268 ಆಗಿತ್ತು.

Published On - 8:23 am, Mon, 1 May 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್