LPG Cylinder Price: 19 ಕಿಲೋ ಎಲ್​ಪಿಜಿ ಬೆಲೆ 10.50 ರೂ ಇಳಿಕೆ; ಇಲ್ಲಿದೆ ದರಪಟ್ಟಿ

LPG prices revised on 2025 December 1st: ಕಮರ್ಷಿಯಲ್ ಎಲ್​ಪಿಜಿ ಗ್ಯಾಸ್ ಸಿಲಿಂಡರ್​ಗಳ ಬೆಲೆಯಲ್ಲಿ ಡಿಸೆಂಬರ್ ತಿಂಗಳಲ್ಲೂ ಇಳಿಕೆಯಾಗಿದೆ. 19 ಕಿಲೋ ಸಿಲಿಂಡರ್ ಬೆಲೆಯಲ್ಲಿ 10.50 ರೂ ತಗ್ಗಿದೆ. 47.50 ಕಿಲೋ ಸಿಲಿಂಡರ್ ಬೆಲೆಯಲ್ಲಿ 25.50 ರೂ ಕಡಿಮೆ ಆಗಿದೆ. ಕಳೆದ ಒಂದು ವರ್ಷದಲ್ಲಿ ಹತ್ತು ಬಾರಿ ಕಮರ್ಷಿಯಲ್ ಸಿಲಿಂಡರ್ ಬೆಲೆ ಕಡಿಮೆಗೊಂಡಿದೆ. ಇದೇ ವೇಳೆ, ಗೃಹಬಳಕೆ ಗ್ಯಾಸ್ ಬೆಲೆಯಲ್ಲಿ ಇಳಿಕೆ ಆಗಿಲ್ಲ.

LPG Cylinder Price: 19 ಕಿಲೋ ಎಲ್​ಪಿಜಿ ಬೆಲೆ 10.50 ರೂ ಇಳಿಕೆ; ಇಲ್ಲಿದೆ ದರಪಟ್ಟಿ
ಎಲ್​ಪಿಜಿ

Updated on: Dec 01, 2025 | 11:51 AM

ಬೆಂಗಳೂರು, ಡಿಸೆಂಬರ್ 1: ಕಮರ್ಷಿಯಲ್ ಎಲ್​ಪಿಜಿ ಗ್ಯಾಸ್ ಬೆಲೆಯಲ್ಲಿ (Commercial LPG price) ಇಳಿಕೆಯಾಗಿದೆ. 19 ಕಿಲೋ ಎಲ್​ಪಿಜಿ ಬೆಲೆ 10-10.50 ರೂ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ 10.50 ರೂಗೆ ಇಳಿದಿದೆ. 47.5 ಕಿಲೋ ಎಲ್​ಪಿಜಿ ಗ್ಯಾಸ್ ಬೆಲೆ 25.50 ರೂನಷ್ಟು ತಗ್ಗಿದೆ. ಉಳಿದ ಗೃಹಬಳಕೆ ಅಡುಗೆ ಅನಿಲದ (Domestic LPG cylinder) ಬೆಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ.

ಡಿಸೆಂಬರ್ 1ರಿಂದ 19 ಕಿಲೋ ಕಮರ್ಷಿಯಲ್ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 1,654 ರೂ ಆಗಿದೆ. 47.5 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆ 4,132.50 ರೂಗೆ ಇಳಿದಿದೆ. ಇನ್ನು, ಗೃಹಬಳಕೆಯ 14.2 ಕಿಲೋ ಎಲ್​ಪಿಜಿ ಬೆಲೆ 855.5 ರೂ, ಹಾಗೂ 5 ಕಿಲೋ ಸಿಲಿಂಡರ್ ಬೆಲೆ 318.50 ರೂನಲ್ಲಿ ಮುಂದುವರಿದಿದೆ.

ಬೆಂಗಳೂರಿನಲ್ಲಿ 2025ರ ಡಿ.1 ರಿಂದ ಎಲ್​ಪಿಜಿ ದರಗಳ ಪಟ್ಟಿ

  • 14.2 ಕಿಲೋ ಗೃಹಬಳಕೆ ಎಲ್​ಪಿಜಿ: 855.50 ರೂ
  • 5 ಕಿಲೋ ಗೃಹಬಳಕೆ ಎಲ್​ಪಿಜಿ: 318.50 ರೂ
  • 19 ಕಿಲೋ ವಾಣಿಜ್ಯಬಳಕೆ ಎಲ್​ಪಿಜಿ: 1,654 ರೂ
  • 47.50 ಕಿಲೋ ವಾಣಿಜ್ಯ ಬಳಕೆ ಎಲ್​ಪಿಜಿ: 4,132.50 ರೂ

ಇದನ್ನೂ ಓದಿ: Gold Rate Today Bangalore: 13,000 ರೂ ಗಡಿದಾಟಿದ ಅಪರಂಜಿ ಚಿನ್ನದ ಬೆಲೆ

ಕಮರ್ಷಿಯಲ್ ಗ್ಯಾಸ್ ಬೆಲೆಗಳಲ್ಲಿ ಸತತ ಇಳಿಕೆ

ಕಳೆದ ಒಂದು ವರ್ಷದಲ್ಲಿ ಕಮರ್ಷಿಯಲ್ ಗ್ಯಾಸ್ ಬೆಲೆ ಭಾರತದಲ್ಲಿ ಬಹುತೇಕ ನಿರಂತರವಾಗಿ ಇಳಿದಿದೆ. ಕಳೆದ 12 ತಿಂಗಳಲ್ಲಿ 10 ಬಾರಿ ಬೆಲೆ ಇಳಿದಿದೆ. ಎರಡು ತಿಂಗಳು ಮಾತ್ರವೇ ಬೆಲೆ ಏರಿಕೆ ಆಗಿದ್ದು. ಜನವರಿಯಲ್ಲಿ ಬೆಂಗಳೂರಿನಲ್ಲಿ 19 ಕಿಲೋ ಸಿಲಿಂಡರ್ ಬೆಲೆ 1,874.50 ರೂ ಇತ್ತು. ಇದೀಗ 1,654 ರೂಗೆ ಇಳಿದಿದೆ. ಒಂದು ವರ್ಷದಲ್ಲಿ ಈ ಕಮರ್ಷಿಯಲ್ ಗ್ಯಾಸ್ ಬೆಲೆ ಸಿಲಿಂಡರ್​ಗೆ 220.50 ರೂ ಇಳಿಕೆ ಆಗಿದೆ.

ಇದೇ ವೇಳೆ, ಗೃಹಬಳಕೆ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಈ ಒಂದು ವರ್ಷ ಯಾವುದೇ ಇಳಿಕೆ ಆಗಿಲ್ಲ. ಕಳೆದ ಒಂದು ವರ್ಷದಲ್ಲಿ ಒಮ್ಮೆ 50 ರೂ ಬೆಲೆ ಏರಿಕೆಯೂ ಆಗಿದೆ.

ವಿವಿಧ ನಗರಗಳಲ್ಲಿ 19 ಕಿಲೋ ಎಲ್​ಪಿಜಿ ದರಗಳು

  • ದೆಹಲಿ: 1,580.50 ರೂ
  • ಕೋಲ್ಕತಾ: 1,684 ರೂ
  • ಮುಂಬೈ: 1,531.50 ರೂ
  • ಚೆನ್ನೈ: 1,739.50 ರೂ
  • ಬೆಂಗಳೂರು: 1,654 ರೂ

ಇದನ್ನೂ ಓದಿ: ವೆಬ್ ಬ್ರೌಸರ್​ನಲ್ಲಿ ವಾಟ್ಸಾಪ್ ಪ್ರತೀ 6 ಗಂಟೆಗೆ ಲಾಗೌಟ್ ಆಗುತ್ತೆ: ಭಾರತದಲ್ಲಿ ಬರುತ್ತಿದೆ ಹೊಸ ರೂಲ್ಸ್

ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಎಲ್​ಪಿಜಿ ಸಿಗುವುದು ಮುಂಬೈನಲ್ಲಿ. ಅತಿ ದುಬಾರಿ ಎನಿಸಿರುವುದು ಚೆನ್ನೈನಲ್ಲಿ. ವಿವಿಧ ರಾಜ್ಯಗಳು ಎಲ್​ಪಿಜಿ ಮೇಲೆ ಬೇರೆ ಬೇರೆ ಪ್ರಮಾಣದಲ್ಲಿ ತೆರಿಗೆ ವಿಧಿಸುತ್ತವೆ. ಹೀಗಾಗಿ, ರಾಜ್ಯದಿಂದ ರಾಜ್ಯಕ್ಕೆ ಗ್ಯಾಸ್ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:10 am, Mon, 1 December 25