ಮಿಂಚುತ್ತಿರುವ ಭಾರತೀಯ ಗೇಮ್​ಗಳು; ‘ಇಂಡಸ್’, ‘ರೇಜ್ ಎಫೆಕ್ಟ್’, ‘ಫೌಜಿ’ ಮೊದಲಾದವುಗಳ ಜಾಗತಿಕ ಸದ್ದು

|

Updated on: Nov 25, 2024 | 12:12 PM

Indian gaming industry: ಭಾರತದ ಗೇಮಿಂಗ್ ಉದ್ಯಮ ಜಾಗತಿಕವಾಗಿ ಮಿಂಚುತ್ತಿವೆ. ಕ್ಯಾಷುವಲ್ ಗೇಮ್​ಗಳನ್ನು ತಯಾರಿಸುತ್ತಿದ್ದ ಭಾರತೀಯ ಸಂಸ್ಥೆಗಳು ಈಗ ಹೈಬಜೆಟ್ ಗೇಮ್​ಗಳನ್ನು ನಿರ್ಮಿಸುತ್ತಿದ್ದಾರೆ. ಇಂಡಸ್ ಬ್ಯಾಟಲ್ ರಾಯೇಲ್, ರೇಜ್ ಎಫೆಕ್ಟ್, ಫೌಜಿ ಮೊದಲಾದ ಗೇಮ್​​ಗಳು ಭರವಸೆ ಮೂಡಿಸಿವೆ. ಸಾಕಷ್ಟು ಹೂಡಿಕೆದಾರರನ್ನು ಆಕರ್ಷಿಸಲೂ ಯಶಸ್ವಿಯಾಗಿವೆ.

ಮಿಂಚುತ್ತಿರುವ ಭಾರತೀಯ ಗೇಮ್​ಗಳು; ‘ಇಂಡಸ್’, ‘ರೇಜ್ ಎಫೆಕ್ಟ್’, ‘ಫೌಜಿ’ ಮೊದಲಾದವುಗಳ ಜಾಗತಿಕ ಸದ್ದು
ಇಂಡಸ್ ಬ್ಯಾಟಲ್ ರಾಯೇಲ್
Follow us on

ನವದೆಹಲಿ, ನವೆಂಬರ್ 25: ಭಾರತದಲ್ಲಿ ಗೇಮಿಂಗ್ ಉದ್ಯಮ ಭರ್ಜರಿಯಾಗಿ ಬೆಳೆಯುತ್ತಿದೆ. ಜಾಗತಿಕ ಮಾರುಕಟ್ಟೆಗಳಿಗೆ ಲಗ್ಗೆ ಹಾಕುತ್ತಿದೆ. ಭಾರತೀಯರಿಂದ ಕ್ಯಾಷುವಲ್ ಗೇಮ್​ಗಳ ನಿರ್ಮಾಣವಾಗುತ್ತಿದ್ದ ಕಾಲ ಗತಿಸಿ ಹೋಗಿದೆ. ದೊಡ್ಡ ಬಜೆಟ್, ಉನ್ನತ ಗುಣಮಟ್ಟದ ಗೇಮ್​ಗಳನ್ನು ಭಾರತೀಯರು ನಿರ್ಮಿಸುತ್ತಿದ್ದಾರೆ. ಕಳೆದ ತಿಂಗಳು ಭಾರತೀಯರು ರಚಿಸಿದ ಎರಡು ಗೇಮ್​ಗಳು ಜಾಗತಿಕವಾಗಿ ಸದ್ದು ಮಾಡುತ್ತಿವೆ. ‘ಇಂಡಸ್ ಬ್ಯಾಟಲ್ ರಾಯೇಲ್’ ಮತ್ತು ‘ರೇಜ್ ಎಫೆಕ್ಟ್: ಮೊಬೈಲ್’ ಗೇಮ್​ಗಳು ಜನಪ್ರಿಯವಾಗುತ್ತಿವೆ. ಇಂಡಸ್ ಬ್ಯಾಟಲ್ ರಾಯೇಲ್ ಗೇಮ್ 50 ಲಕ್ಷ ಡೌನ್​ಲೋಡ್ ಆಗಿದೆ.

ಶೂಟರ್ ಗೇಮ್ ಆದ ರೇಜ್ ಎಫೆಕ್ಟ್ ಬಿಡುಗಡೆಗೆ ಮುನ್ನವೇ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಅದರ ಬೀಟಾ ವರ್ಷನ್​ಗೆ ಒಂದು ಲಕ್ಷಕ್ಕೂ ಅಧಿಕ ಪ್ರೀ ರಿಜಿಸ್ಟ್ರೇಶನ್​ಗಳಾಗಿವೆ.

ಇದನ್ನೂ ಓದಿ: ಸರ್ಕಾರದ್ದೇ ಒಟಿಟಿ ಪ್ಲಾಟ್​ಫಾರ್ಮ್ ಬಿಡುಗಡೆ; ನೆಟ್​ಫ್ಲಿಕ್ಸ್, ಅಮೇಜಾನ್ ಪ್ರೈಮ್​ಗೆ ಹೊಸ ಪ್ರತಿಸ್ಪರ್ಧಿ; ಕೇಬಲ್ ಆಪರೇಟರುಗಳಿಗೂ ಆತಂಕ

ಮಾಸ್ಕ್ ಗನ್ ಇತ್ಯಾದಿ ಗೇಮ್​ಗಳನ್ನು ನಿರ್ಮಿಸಿದ ಪುಣೆ ಮೂಲದ ಸೂಪರ್​ಗೇಮಿಂಗ್ ಸಂಸ್ಥೆಯು ಇಂಡಸ್ ಬ್ಯಾಟಲ್ ರಾಯೇಲ್ ಗೇಮ್ ಅನ್ನು ರಚಿಸಿದೆ. 160 ಮಂದಿಯ ತಂಡ ಸೇರಿ ಈ ರೋಚಕ ಗೇಮ್ ಅನ್ನು ಸಿದ್ಧಪಡಿಸಿರುವುದು ತಿಳಿದುಬಂದಿದೆ.

ಡಾಟ್9 ಗೇಮ್ಸ್ ಎನ್ನುವ ಸಂಸ್ಥೆ ‘ಫೌಜಿ ಡಾಮಿನೇಶನ್’ (Fearless and United Guards -FAU G) ಎನ್ನುವ ಗೇಮ್ ತಯಾರಿಸಿದೆ. ಇದು ಭಾರತದ ಫಸ್ಟ್ ಪರ್ಸನ್ ಶೂಟರ್ ಗೇಮ್ ಆಗಿದೆ. ಈ ಗೇಮ್ ಕೂಡ ಜಾಗತಿಕಾಗಿ ನಿರೀಕ್ಷೆ ಹುಟ್ಟುಹಾಕಿದೆ. ಭಾರತೀಯ ಮಿಲಿಟರಿ ಥೀಮ್ ಆಧಾರದಲ್ಲಿ ಗೇಮಿಂಗ್ ಸ್ವರೂಪ ರಚಿಸಲಾಗಿದೆ. ಹೈದರಾಬಾದ್ ಗುರುಗ್ರಾಮ್, ಮುಂಬೈನಲ್ಲಿ ನಡೆದ ಪ್ರಯೋಗಗಳಲ್ಲಿ ಶೇ. 70ರಷ್ಟು ಗೇಮರ್​ಗಳಿಗೆ ಈ ಫೌಜಿ ಗೇಮ್ ತೃಪ್ತಿ ಕೊಟ್ಟಿದೆಯಂತೆ.

ಇದನ್ನೂ ಓದಿ: ನೊಂದಾಯಿತ ಸಣ್ಣ ಉದ್ದಿಮೆಗಳಲ್ಲಿ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ 23 ಕೋಟಿ

ಇನ್ನೂ ಹಲವು ಗೇಮ್​ಗಳು ಭಾರತದಲ್ಲಿ ತಯಾರಾಗುತ್ತಿವೆ. ಕ್ಯಾಷುವಲ್ ಗೇಮ್​ಗಳಿಗೆ ಸೀಮಿತವಾಗಿದ್ದ ಭಾರತೀಯರು ಈಗ ಹೈಬಜೆಟ್ ಗೇಮ್ ತಯಾರಿಸುತ್ತಿದ್ದಾರೆ. ವಿಶೇಷ ಎಂದರೆ ಈ ಗೇಮ್​ಗಳಿಗೆ ಹೂಡಿಕೆದಾರರ ಬೆಂಬಲವೂ ಯಥೇಚ್ಛವಾಗಿ ಸಿಗುತ್ತದೆ. ಭಾರತದ ಗೇಮಿಂಗ್ ಉದ್ಯಮದ ಬೆಳವಣಿಗೆಯು ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಮೂಡಿಸಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ