ಸರ್ಕಾರದ್ದೇ ಒಟಿಟಿ ಪ್ಲಾಟ್​ಫಾರ್ಮ್ ಬಿಡುಗಡೆ; ನೆಟ್​ಫ್ಲಿಕ್ಸ್, ಅಮೇಜಾನ್ ಪ್ರೈಮ್​ಗೆ ಹೊಸ ಪ್ರತಿಸ್ಪರ್ಧಿ; ಕೇಬಲ್ ಆಪರೇಟರುಗಳಿಗೂ ಆತಂಕ

Waves OTT by government: ಪ್ರಸಾರ್ ಭಾರತಿ ಸಂಸ್ಥೆ ವೇವ್ಸ್ ಎನ್ನುವ ಒಟಿಟಿ ಪ್ಲಾಟ್​ಫಾರ್ಮ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ 65 ಲೈವ್ ಚಾನಲ್​ಗಳೂ ಸೇರಿದಂತೆ ವಿವಿಧ ಕಂಟೆಂಟ್​ಗಳು ಸಿಗತ್ತವೆ. ಗೇಮಿಂಗ್, ವಿಒಡಿ, ಆನ್​ಲೈನ್ ಶಾಪಿಂಗ್ ಸರ್ವಿಸ್ ಕೂಡ ಇದರಲ್ಲಿವೆ. ಕನ್ನಡ ಸೇರಿದಂತೆ 12 ಭಾರತೀಯ ಭಾಷೆಯ ಕಂಟೆಂಟ್​ಗಳನ್ನು ವೇವ್ಸ್​ನಲ್ಲಿ ವೀಕ್ಷಿಸಬಹುದು.

ಸರ್ಕಾರದ್ದೇ ಒಟಿಟಿ ಪ್ಲಾಟ್​ಫಾರ್ಮ್ ಬಿಡುಗಡೆ; ನೆಟ್​ಫ್ಲಿಕ್ಸ್, ಅಮೇಜಾನ್ ಪ್ರೈಮ್​ಗೆ ಹೊಸ ಪ್ರತಿಸ್ಪರ್ಧಿ; ಕೇಬಲ್ ಆಪರೇಟರುಗಳಿಗೂ ಆತಂಕ
ವೇವ್ಸ್ ಒಟಿಟಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 25, 2024 | 11:26 AM

ನವದೆಹಲಿ, ನವೆಂಬರ್ 25: ಸರ್ಕಾರೀ ಸ್ವಾಮ್ಯದ ಪ್ರಸಾರ್ ಭಾರತಿ ಸಂಸ್ಥೆ ವೇವ್ಸ್ ಹೆಸರಿನಲ್ಲಿ ಒಟಿಟಿ ಪ್ಲಾಟ್​ಫಾರ್ಮ್ ಅನ್ನು ಆರಂಭಿಸಿದೆ. ಕಳೆದ ವಾರ ಗೋವಾದಲ್ಲಿ ನಡೆದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವೇವ್ಸ್ ಬಿಡುಗಡೆ ಆಗಿದೆ. ಈ ವೇವ್ಸ್ ಒಟಿಟಿ ಸಂಪೂರ್ಣ ಉಚಿತವಾಗಿರುತ್ತದೆ. 65 ಲೈವ್ ಚಾನಲ್​ಗಳು, ವಿಒಡಿ ಸರ್ವಿಸ್, ಗೇಮಿಂಗ್ ಇವೆಲ್ಲವೂ ಫ್ರೀಯಾಗಿ ಲಭಿಸಲಿವೆ. ಆನ್​ಲೈನ್ ಶಾಪಿಂಗ್ ಸರ್ವಿಸ್ ಕೂಡ ಇದರಲ್ಲಿ ಒಳಗೊಳ್ಳಲಾಗುತ್ತದೆ. ಇದು ಒಎನ್​ಡಿಸಿ ಸೌಲಭ್ಯವನ್ನು ಒದಗಿಸುತ್ತದೆ. ಕನ್ನಡವೂ ಸೇರಿದಂತೆ 12 ಭಾರತೀಯ ಭಾಷೆಗಳಲ್ಲಿ ಇದರ ಕಂಟೆಂಟ್ ಲಭ್ಯ ಇದೆ.

ಅತಿದೊಡ್ಡ ಅಗ್ರಿಗೇಟರ್ ಒಟಿಟಿ ವೇವ್ಸ್

ಪ್ರಸಾರ್ ಭಾರತಿ ಸಂಸ್ಥೆಯ ವೇವ್ಸ್ ಒಟಿಟಿ ಅತಿದೊಡ್ಡ ಅಗ್ರಿಗೇಟರ್ ಎನಿಸಿದೆ. ಅತಿಹೆಚ್ಚು ಚಾನಲ್​ಗಳನ್ನು ಇದೊಂದೇ ಒಟಿಟಿಯಲ್ಲಿ ವೀಕ್ಷಿಸಬಹುದು. ಈ ಆ್ಯಪ್ ಅನ್ನು ಉಚಿತವಾಗಿ ಡೌನ್​ಲೋಡ್ ಮಾಡಬಹುದು. ಹೆಚ್ಚಿನ ಕಂಟೆಂಟ್​​ಗಳು ಉಚಿತ ವೀಕ್ಷಣೆಗೆ ಲಭ್ಯ ಇವೆ. ಪ್ರೀಮಿಯಮ್ ಕಂಟೆಂಟ್​​ಗಳಿಗೆ ಸಬ್​ಸ್ಕ್ರೈಬ್ ಮಾಡಬೇಕಾಗುತ್ತದೆ.

ಅಮೆರಿಕದ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್​ನ ಮ್ಯಾಚ್​ಗಳನ್ನು ಲೈವ್ ಆಗಿ ಇಲ್ಲಿ ವೀಕ್ಷಿಸಬಹುದು. ಅಯೋಧ್ಯೆಯ ರಾಮಲಲ್ಲಾ ಆರತಿ ಸೇವೆಯೂ ಲೈವ್ ಆಗಿ ವೀಕ್ಷಣೆಗೆ ಲಭ್ಯ. ಭಾರತೀಯ ಸಂಸ್ಕೃತಿ, ಪ್ರಾದೇಶಿಕತೆಯ ಕಂಟೆಂಟ್​ಗಳನ್ನು ವೇವ್ಸ್ ಒಟಿಟಿಯಲ್ಲಿ ಕಾಣಬಹುದು.

ಇದನ್ನೂ ಓದಿ: ನೊಂದಾಯಿತ ಸಣ್ಣ ಉದ್ದಿಮೆಗಳಲ್ಲಿ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ 23 ಕೋಟಿ

ನೆಟ್​ಫ್ಲಿಕ್ಸ್, ಜಿಯೋಗೆ ಪೈಪೋಟಿ ನೀಡುತ್ತಾ ವೇವ್ಸ್?

ನೆಟ್​ಫ್ಲಿಕ್ಸ್, ಜಿಯೋಹಾಟ್​ಸ್ಟಾರ್, ಅಮೇಜಾನ್ ಪ್ರೈಮ್ ಆ್ಯಪ್​ಗಳಿಗೆ ವೇವ್ಸ್ ಪೈಪೋಟಿ ನೀಡಬಲ್ಲುದಾ ಎನ್ನುವ ಪ್ರಶ್ನೆ ಇದೆ. ಆದರೆ, ನೆಟ್​ಫ್ಲಿಕ್ಸ್, ಪ್ರೈಮ್ ಇತ್ಯಾದಿಯಲ್ಲಿ ಬರುವ ಕಂಟೆಂಟ್​ಗಳೇ ಬೇರೆಯೇ ರೀತಿಯ ಜಾನರ್​ನದ್ದಾಗಿವೆ. ವೇವ್ಸ್​ನಲ್ಲಿ ಸಾಂಸ್ಕೃತಿಕ ಹಾಗೂ ಗಂಭೀರ ಸ್ತರದ ಕಂಟೆಂಟ್​ಗಳನ್ನು ನಿರೀಕ್ಷಿಸಬಹುದು.

ಕೇಬಲ್ ಆಪರೇಟರ್ಸ್​ಗೆ ತಲೆನೋವು…

ಪ್ರಸಾರ್ ಭಾರತಿ ಸಂಸ್ಥೆ ವೇವ್ಸ್ ಒಟಿಟಿಯನ್ನು ಬಿಡುಗಡೆ ಮಾಡಿರುವುದು ಕೇಬಲ್ ಮತ್ತು ಡಿಟಿಎಚ್ ಆಪರೇಟರ್​​ಗಳಿಗೆ ತುಸು ಆತಂಕಕ ಮೂಡಿಸಿದೆ. ಹೆಚ್ಚೆಚ್ಚು ವೀಕ್ಷಕರು ಟಿಡಿಎಚ್, ಕೇಬಲ್ ತೊರೆದು ಒಟಿಟಿಗಳತ್ತ ಮುಗಿಬೀಳುತ್ತಿದ್ದಾರೆ. ಈಗ ವೇವ್ಸ್​ನಲ್ಲಿ ಟಿವಿ ಚಾನಲ್​ಗಳ ಪ್ರಸಾರವನ್ನೂ ಒಳಗೊಳ್ಳಲಾಗಿರುವುದು ಇವುಗಳ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಇನ್ನೊಂದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಲಿದೆಯಂತೆ ಬಿಟ್​ಕಾಯಿನ್ ಮೌಲ್ಯ; 2,00,000 ಡಾಲರ್ ಬೆಲೆ ಪಡೆಯಲಿದೆ ಈ ಕ್ರಿಪ್ಟೋಕರೆನ್ಸಿ

ವೇವ್ಸ್ ಒಟಿಟಿ ಡೌನ್​ಲೋಡ್ ಮಾಡುವುದು ಹೇಗೆ?

ವೇವ್ಸ್ ಒಟಿಟಿಯು ಆ್ಯಪಲ್ ಮತ್ತು ಆಂಡ್ರಾಯ್ಡ್ ವರ್ಷನ್​ಗಳಲ್ಲಿ ಲಭ್ಯ. ಆ್ಯಪಲ್​ನ ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋನಲ್ಲಿ ಈ ಆ್ಯಪ್ ಅನ್ನು ಉಚಿತವಾಗಿ ಡೌನ್​ಲೋಡ್ ಮಾಡಬಹುದು. ಇದರಲ್ಲಿ ಮೂರು ರೀತಿಯ ಪ್ಲಾನ್​ಗಳಿವೆ. ಪ್ಲಾಟಿನಂ, ಡೈಮಂಡ್ ಮತ್ತು ಗೋಲ್ಡ್ ಪ್ಲಾನ್​ಗಳಿವೆ.

ಪ್ಲಾಟಿನಂ ಪ್ಲಾನ್ ವರ್ಷಕ್ಕೆ 999 ರೂ ಬೆಲೆ ಇದೆ. ಡೈಮಂಡ್ ಪ್ಲಾನ್​ನಲ್ಲಿ ವರ್ಷಕ್ಕೆ 350 ರೂ ಇದೆ.

ಎನ್​ಡಿಟಿವಿ ಇಂಡಿಯಾ, ಇಂಡಿಯಾ ಟುಡೇ ಸೇರಿದಂತೆ 65 ಲೈವ್ ಚಾನಲ್​ಗಳು ವೇವ್ಸ್​ನಲ್ಲಿ ಸಿಗುತ್ತವೆ. ಇದರಿಂದ ಬಂದ ಆದಾಯದಲ್ಲಿ ಶೇ. 65ರಷ್ಟನ್ನು ಆ ಚಾನಲ್​ಗಳೇ ಪಡೆಯುತ್ತವೆ. ಶೇ. 35ರಷ್ಟು ಆದಾಯವು ಪ್ರಸಾರಭಾರತಿ ಸಂಸ್ಥೆಗೆ ಹೋಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ