AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನಿಂದ ನವಿ ಮುಂಬೈ ಏರ್ಪೋರ್ಟ್​ಗೆ ಅಂತಾರಾಷ್ಟ್ರೀಯ ಫ್ಲೈಟ್​ಗಳ ಸ್ಥಳಾಂತರ ಪ್ರಸ್ತಾಪ; ಮಹಾರಾಷ್ಟ್ರ ಸಿಎಂ ವಿರೋಧ

ಮುಂಬೈ ವಿಮಾನ ನಿಲ್ದಾಣದಿಂದ ನವಿ ಮುಂಬೈ ವಿಮಾನ ನಿಲ್ದಾಣಕ್ಕೆ ಯಾವುದೇ ವಿಮಾನಗಳನ್ನು ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಕೇಂದ್ರ ನಾಗರಿಕ ವಿಮಾನಯಾನ ಸಚಿವರಿಗೆ ಅವರು ಪತ್ರ ಬರೆದಿದ್ದಾರೆ. ಮುಂಬೈ ಏರ್ಪೋರ್ಟ್​ನ ನವೀಕರಣ ಕಾರ್ಯಕ್ಕಾಗಿ ಕೆಲ ಫ್ಲೈಟ್​ಗಳನ್ನು ಸ್ಥಳಾಂತರಿಸಲು ಏರ್ಪೋರ್ಟ್ ಆಪರೇಟರ್ ಪ್ರಸ್ತಾಪಿಸಿದೆ.

ಮುಂಬೈನಿಂದ ನವಿ ಮುಂಬೈ ಏರ್ಪೋರ್ಟ್​ಗೆ ಅಂತಾರಾಷ್ಟ್ರೀಯ ಫ್ಲೈಟ್​ಗಳ ಸ್ಥಳಾಂತರ ಪ್ರಸ್ತಾಪ; ಮಹಾರಾಷ್ಟ್ರ ಸಿಎಂ ವಿರೋಧ
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ಣವಿಸ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 11, 2026 | 10:51 AM

Share

ಮುಂಬೈ, ನವೆಂಬರ್ 11: ಕೆಲ ಅಂತಾರಾಷ್ಟ್ರೀಯ ವಿಮಾನ ಮಾರ್ಗಗಳ ಫ್ಲೈಟ್​ಗಳನ್ನು ಮುಂಬೈ ಏರ್​ಪೋರ್ಟ್​ನಿಂದ ನವಿ ಮುಂಬೈ ವಿಮಾನ ನಿಲ್ದಾಣಕ್ಕೆ ಬದಲಾಯಿಸುವ ಯೋಜನೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ಣವಿಸ್ ವಿರೋಧಿಸಿದ್ದಾರೆ. ಕೇಂದ್ರ ವಿಮಾನಯಾನ ಸಚಿವರಿಗೆ ಬರೆದ ಪತ್ರದಲ್ಲಿ ಅವರು, ಯಾವ ಫ್ಲೈಟ್​ಗಳನ್ನೂ ಮುಂಬೈ ಏರ್​ಪೋರ್ಟ್​ನಿಂದ ಸ್ಥಳಾಂತರಿಸಲು ಬಿಡುವುದಿಲ್ಲ ಎಂದಿದ್ದಾರೆ.

ಮುಂಬರುವ ಬೇಸಿಗೆಯಲ್ಲಿ ಮುಂಬೈ ಏರ್​ಪೋರ್ಟ್​ನ ಕೆಲ ಅಂತರರಾಷ್ಟ್ರೀಯ ಫ್ಲೈಟ್​ಗಳನ್ನು ನವಿ ಮುಂಬೈ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲು ಪ್ರಸ್ತಾಪಿಸಿದ್ದು ಮುಂಬೈ ಏರ್ಪೋರ್ಟ್ ಆಪರೇಟರ್ ಆದ ಎಂಎಐಎಲ್.

ಮುಂಬೈನಿಂದ ನವಿ ಮುಂಬೈಗೆ ಕೆಲ ಫ್ಲೈಟ್​ಗಳ ಸ್ಥಳಾಂತರ ಯಾಕೆ?

ಮುಂಬೈ ವಿಮಾನ ನಿಲ್ದಾಣವನ್ನು ನವೀಕರಿಸುವ ಪ್ಲಾನ್ ನಡೆದಿದೆ. ದೇಶದೊಳಗೆ ಸಂಚರಿಸುವ ವಿಮಾನಗಳು ನಿಲ್ಲುವ ಮೊದಲ ಟರ್ಮಿನಲ್ (T1) ಅನ್ನು ಮೊದಲು ಕೆಡವಲಾಗುತ್ತದೆ. ಇದರಿಂದ ವರ್ಷಕ್ಕೆ 50 ಲಕ್ಷ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ.

ಇದನ್ನೂ ಓದಿ: ದೆಹಲಿಯ ಗಾಳಿಯಲ್ಲಿ ಪಟಾಕಿ ವಿಷ: ಮಾಲಿನ್ಯದ ಶೇ. 80ಕ್ಕೂ ಹೆಚ್ಚು ಪಾಲು ಸಿಡಿಮದ್ದುಗಳದ್ದೇ

ಇವರ ಫ್ಲೈಟ್​ಗಳನ್ನು ಎರಡನೇ ಟರ್ಮಿನಲ್​ಗೆ (T2) ವರ್ಗಾಯಿಸಲಾಗುವುದು. ಈ ಎರಡನೇ ಟರ್ಮಿನಲ್​ನಲ್ಲಿ ಅಂತಾರಾಷ್ಟ್ರೀಯ ಫ್ಲೈಟ್​ಗಳನ್ನು ಕಾರ್ಯಾಚರಿಸಲಾಗುತ್ತದೆ. ದೇಶೀಯ ಫ್ಲೈಟ್​ಗಳಿಗೋಸ್ಕರ ಈ ಎರಡನೇ ಟರ್ಮಿನಲ್​ನಲ್ಲಿ ಅಂತಾರಾಷ್ಟ್ರೀಯ ಫ್ಲೈಟ್​ಗಳ ಸಂಖ್ಯೆ ಮೂರನೇ ಒಂದು ಭಾಗದಷ್ಟು ಕಡಿಮೆ ಮಾಡಬೇಕೆನ್ನುವ ಪ್ಲಾನ್ ಮುಂಬೈ ಇಂಟರ್​ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಸಂಸ್ಥೆಯದ್ದು. ಅದಾನಿ ಗ್ರೂಪ್​ಗೆ ಸೇರಿದ ಸಂಸ್ಥೆಯು ಈ ಏರ್ಪೋರ್ಟ್ ಅನ್ನು ನಿರ್ವಹಿಸುತ್ತಿದೆ.

ವಿಮಾನಯಾನ ಸಂಸ್ಥೆಗಳ ಕಳವಳ

ಮುಂದಿನ ವರ್ಷದ ಬೇಸಿಗೆ ವೇಳಾಪಟ್ಟಿಯೊಳಗೆ ಟರ್ಮಿನಲ್ 2 (T2) ದಲ್ಲಿನ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳನ್ನು ಕಡಿತಗೊಳಿಸಿ ಕೆಲವು ವಿಮಾನಗಳನ್ನು ನವಿ ಮುಂಬೈಗೆ ವರ್ಗಾಯಿಸುವ ಯೋಜನೆಗೆ ವಿಮಾನಯಾನ ಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಹವಾಫಾಸು ಸಾರಿಗೆ ಸಂಘಟನೆಯೂ (IATA) ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಟರ್ಮಿನಲ್ ಸಂಪೂರ್ಣ ಮುಚ್ಚುವುದರಿಂದ ಪ್ರಯಾಣಿಕರಿಗೆ ಭಾರಿ ತೊಂದರೆಯಾಗಲಿದೆ ಎಂದು ಎಚ್ಚರಿಸಿವೆ.

ಮಹಾರಾಷ್ಟ್ರ ಮುಖ್ಯಮಂತ್ರಿಯ ಪರ್ಯಾಯ ಪ್ಲಾನ್

ಟರ್ಮಿನಲ್ 1 (T1) ನವೀಕರಣಕ್ಕಾಗಿ ಅದನ್ನು ಸಂಪೂರ್ಣವಾಗಿ ಮುಚ್ಚುವ ಬದಲು, ಹಂತ ಹಂತವಾಗಿ ಅಭಿವೃದ್ಧಿಪಡಿಸುವಂತೆ ಪರ್ಯಾಯ ಮಾರ್ಗವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಪ್ರಸ್ತಾವಿಸಿದ್ದಾರೆ. ಮೊದಲು ‘ಟರ್ಮಿನಲ್ 1ಬಿ’ (Terminal 1B) ಅಭಿವೃದ್ಧಿಪಡಿಸಿ, ನಂತರ 1ಎ ಯನ್ನು 1ಬಿ ಗೆ ಬದಲಾಯಿಸಿ ಕೊನೆಯಲ್ಲಿ ಹಳೆಯ ಟರ್ಮಿನಲ್ ಕೆಡವುವಂತೆ ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ರೈಲು ನಿಲ್ಲಿಸಲು ಲೋಕೋ ಪೈಲಟ್ ಹರಸಾಹಸ: ಅಪಘಾತ ಸಮಯದ ವಿಡಿಯೋ ವೈರಲ್

ಬಾಧಿತವಾಗಲಿರುವ 14 ಅಂತಾರಾಷ್ಟ್ರೀಯ ಮಾರ್ಗಗಳಿವು…

  1. ಬಹರೇನ್
  2. ಧಮ್ಮಮ್, ಸೌದಿ ಅರೇಬಿಯಾ
  3. ಢಾಕಾ, ಬಾಂಗ್ಲಾದೇಶ
  4. ದೋಹಾ, ಕತಾರ್
  5. ಫುಜೇರಾಹ್, ಯುಎಇ
  6. ಜಕಾರ್ತ, ಇಂಡೋನೇಷ್ಯಾ
  7. ಜೆದ್ದಾಹ್, ಸೌದಿ ಅರೇಬಿಯ
  8. ಕಠ್ಮಂಡು, ನೇಪಾಳ
  9. ಕುವೇತ್
  10. ಮದೀನಾ, ಸೌದಿ ಅರೇಬಿಯಾ
  11. ಮಸ್ಕತ್, ಓಮನ್
  12. ರಸ್ ಅಲ್ ಖೇಮಾಹ್, ಯುಎಇ
  13. ರಿಯಾಧ್, ಸೌದಿ ಅರೇಬಿಯಾ
  14. ಶಾರ್ಜಾ, ಯುಎಇ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More