ನವದೆಹಲಿ, ಜನವರಿ 10: ತಮ್ಮ ಪ್ಲಾಟ್ಫಾರ್ಮ್ನಲ್ಲಿ ಮಾಲ್ಡೀವ್ಸ್ಗೆ ಫ್ಲೈಟ್ ಬುಕಿಂಗ್ ಮತ್ತೆ ಆರಂಭಿಸಿ ಎಂದು ಆ ದೇಶದ ಪ್ರವಾಸೋದ್ಯಮ ಸಂಸ್ಥೆಯು ಭಾರತದ ಈಸ್ ಮೈ ಟ್ರಿಪ್ಗೆ (Ease My Trip) ಮನವಿ ಮಾಡಿದೆ. ಮಾಲ್ಡೀವ್ಸ್ ಟೂರ್ ಮತ್ತು ಟ್ರಾವಲ್ ಆಪರೇಟರ್ಸ್ ಸಂಘಟನೆ (MATATO) ಹೇಳಿಕೆ ನೀಡಿದ್ದು, ಮಾಲ್ಡೀವ್ಸ್ನ ಸಚಿವರು ಆಡಿದ ಮಾತು ಸಾಮಾನ್ಯ ಮಾಲ್ಡೀವ್ಸ್ ಜನರ ಧ್ವನಿ ಅಲ್ಲ. ಅದನ್ನು ನಿರ್ಲಕ್ಷಿಸಿ ಎಂದು ಈಸ್ ಮೈ ಟ್ರಿಪ್ ಸಿಇಒ ನಿಶಾಂತ್ ಪಿಟ್ಟಿ ಅವರಿಗೆ ಮನವಿ ಮಾಡಿದೆ.
ಮಾಲ್ಡೀವ್ಸ್ ಸಚಿವರು ಭಾರತದ ಪ್ರಧಾನಿ ಮತ್ತು ಭಾರತೀಯ ಬಗ್ಗೆ ಅವಹೇಳನ ಮಾಡಿದ ಬಳಿಕ ಈಸ್ ಮೈ ಟ್ರಿಪ್ ಸಂಸ್ಥೆ ತನ್ನ ಪ್ಲಾಟ್ಫಾರ್ಮ್ನಲ್ಲಿ ಮಾಲ್ಡೀವ್ಸ್ ಪ್ರವಾಸದ ಬುಕಿಂಗ್ಸ್ ರದ್ದುಗೊಳಿಸಿತ್ತು. ವೈಯಕ್ತಿಕ ಲಾಭಕ್ಕಿಂತ ರಾಷ್ಟ್ರೀಯತೆ ದೊಡ್ಡದು ಎಂದು ಹೇಳಿದ ಈಸ್ ಮೈ ಟ್ರಿಪ್ ಸಂಸ್ಥೆ ಮಾಲ್ಡೀವ್ಸ್ಗೆ ಫ್ಲೈಟ್ ಬುಕಿಂಗ್ಗಳನ್ನೂ ನಿಲ್ಲಿಸಿತ್ತು. ಅಂತೆಯೇ, ಸಾವಿರಾರು ಭಾರತೀಯರು ಮಾಲ್ಡೀವ್ಸ್ ಪ್ರವಾಸ ರದ್ದುಗೊಳಿಸಿದ್ದಾರೆ.
ಪ್ರವಾಸೋದ್ಯಮವೇ ಪ್ರಮುಖ ಆದಾಯ ಮೂಲ ಹೊಂದಿರುವ ಮಾಲ್ಡೀವ್ಸ್ಗೆ ಈ ಬೆಳವಣಿ ಪೆಟ್ಟು ಕೊಡುವ ಸಾಧ್ಯತೆ ಇದೆ. ಅಲ್ಲಿನ ಪ್ರವಾಸೋದ್ಯಮ ಸಂಘಟನೆಗಳು ಈ ವಿವಾದ ಸಂಬಂಧ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಪ್ರವಾಸದ ಬಳಿಕ ಮಾಲ್ಡೀವ್ಸ್ಗೆ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಅದರಲ್ಲೂ ಪ್ರಧಾನಿ ಬಗ್ಗೆ ಮಾಲ್ಡೀವ್ಸ್ ಸಚಿವರು ಲೇವಡಿ ಮಾಡಿದ ಬಳಿಕ ಇದು ಇನ್ನಷ್ಟು ಪರಿಣಾಮ ಬೀರಿದೆ.
ಈಸ್ ಮೈ ಟ್ರಿಪ್ ಮಾಲ್ಡೀವ್ಸ್ ಪ್ರವಾಸದ ಬುಕಿಂಗ್ಗಳನ್ನು ರದ್ದು ಮಾಡಿದ್ದು ಮಾತ್ರವಲ್ಲ, ಲಕ್ಷದ್ವೀಪ್ ಪ್ರವಾಸಕ್ಕೆ ಆಕರ್ಷಕ ಪ್ಯಾಕೇಜ್ಗಳನ್ನು ಸದ್ಯದಲ್ಲೇ ಘೋಷಿಸುವುದಾಗಿ ತಿಳಿಸಿದೆ. ಲಕ್ಷದ್ವೀಪ್ನಲ್ಲಿ ಈಗಾಗಲೇ ಸೌಕರ್ಯ ವ್ಯವಸ್ಥೆಯನ್ನು (ಇನ್ಫ್ರಾಸ್ಟ್ರಕ್ಚರ್) ಅಭಿವೃದ್ದಿಪಡಿಸಲಾಗುತ್ತಿದೆ. ಟಾಟಾ ಗ್ರೂಪ್ನಿಂದ ಎರಡು ತಾಜ್ ಹೋಟೆಲ್ಗಳ ನಿರ್ಮಾಣ ಆಗುತ್ತಿದೆ.
ಮಾಲ್ಡೀವ್ಸ್ ಮತ್ತು ಲಕ್ಷದ್ವೀಪ್ ಪ್ರದೇಶಗಳು ನೂರಾರು ದ್ವೀಪಗಳ ಸಮೂಹಗಳಾಗಿವೆ. ಎರಡೂ ಕೂಡ ಒಂದೇ ದ್ವೀಪ ಸಮೂಹಕ್ಕೆ ಸೇರಿದ್ದು ಎನ್ನಲಾಗಿದೆ. ಹೀಗಾಗಿ, ಮಾಲ್ಡೀವ್ಸ್ನಲ್ಲಿರುವ ಸುಂದರ ಬೀಚ್ ಇತ್ಯಾದಿ ವಾತಾವರಣ ಲಕ್ಷದ್ವೀಪ್ನಲ್ಲೂ ಇದೆ. ಹೀಗಾಗಿ, ಲಕ್ಷದ್ವೀಪ್ ಕೂಡ ಮಾಲ್ಡೀವ್ಸ್ನಂತೆಯೇ ಪ್ರವಾಸಿಗರಿಗೆ ನೆಚ್ಚಿನ ಸ್ಪಾಟ್ ಎನಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ