Ayodhya: ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ಅಯೋಧ್ಯೆ ನಗರಿ ಮಾರ್ಪಾಡು; ಇದರ ಹಿಂದಿದ್ದಾರೆ ಮಾಸ್ಟರ್ ಪ್ಲಾನರ್ ದೀಕ್ಷು ಕುಕ್ರೇಜಾ

Ayodhya city redevelopment: ಅಯೋಧ್ಯೆ ನಗರವನ್ನು ಸುಸಜ್ಜಿತ ನಗರವನ್ನಾಗಿ ಮಾಡಲು ಮಾಸ್ಟರ್ ಪ್ಲಾನ್ ಮಾಡಲಾಗಿದೆ. ಅದಕ್ಕಾಗಿ ದೇಶ ವಿದೇಶಗಳ ಪ್ರಮುಖ ಸ್ಥಳಗಳ ಅಧ್ಯಯನ ಮಾಡಲಾಗಿದೆ. ಅಯೋಧ್ಯೆ ನಗರಿಯನ್ನು ಮಾರ್ಪಾಡುವ ಮಾಡುವ ಮಾಸ್ಟರ್ ಪ್ಲಾನ್​ಗೆ ದೀಕ್ಷು ಕುಕ್ರೇಜಾ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.

Ayodhya: ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ಅಯೋಧ್ಯೆ ನಗರಿ ಮಾರ್ಪಾಡು; ಇದರ ಹಿಂದಿದ್ದಾರೆ ಮಾಸ್ಟರ್ ಪ್ಲಾನರ್ ದೀಕ್ಷು ಕುಕ್ರೇಜಾ
ಅಯೋಧ್ಯೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 10, 2024 | 10:38 AM

ನವದೆಹಲಿ, ಜನವರಿ 10: ಶ್ರೀ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಯೋಧ್ಯೆ ನಗರ (Ayodhya city) ಇಡೀ ಜಗತ್ತಿನ ಗಮನ ಸೆಳೆದಿದೆ. ಇನ್ನೆರಡು ವಾರದೊಳಗೆ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ನೆರವೇರಲಿದೆ. ಶ್ರೀರಾಮನ ಜನ್ಮಸ್ಥಾನ ಎನ್ನಲಾದ ಸ್ಥಳದಲ್ಲಿ ಭವ್ಯವಾದ ದೇವಸ್ಥಾನವನ್ನು ಮರುನಿರ್ಮಿಸಲಾಗಿದೆ. ಇದರ ಜೊತೆಗೆ ಅಯೋಧ್ಯೆ ನಗರವನ್ನೂ ವ್ಯವಸ್ಥಿತವಾಗಿ ಮಾರ್ಪಾಡು ಮಾಡಲಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಈ ನಗರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕನಿಷ್ಠ ಮೂರು ಲಕ್ಷವಾದರೂ ಆದೀತು ಎಂಬ ಮುಂದಾಲೋಚನೆಯಲ್ಲಿ ನಗರದ ರೂಪುರೇಖೆಯನ್ನು ಬದಲಿಸಲಾಗುತ್ತಿದೆ.

ಈ ಅಯೋಧ್ಯೆ ನವೀಕರಣ ಯೋಜಿಸುವ ಜವಾಬ್ದಾರಿಯನ್ನು ದೀಕ್ಷು ಕುಕ್ರೇಜಾ ಅವರಿಗೆ ವಹಿಸಲಾಗಿದೆ. ಸಿ.ಪಿ. ಕುಕ್ರೇಜಾ ಆರ್ಕಿಟೆಕ್ಟ್ಸ್ ಸಂಸ್ಥೆಯ ಮುಖ್ಯಸ್ಥರಾದ ದೀಕ್ಷು ಅವರು ಅಯೋಧ್ಯೆಯ ವಿವಿಧ ಸೌಕರ್ಯ ವ್ಯವಸ್ಥೆ ಹೇಗಿರಬೇಕು ಎಂಬಿತ್ಯಾದಿಯ ಪ್ಲಾನಿಂಗ್ ನೀಡುತ್ತಿದ್ದಾರೆ. ಅಪಾರ ಸಂಖ್ಯೆಯ ಪ್ರವಾಸಿಗರಿಗೆ ಆತಿಥ್ಯ ನೀಡಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕಾಗಿ ಹೆಚ್ಚಿನ ಪ್ರವಾಸಿಗರು ಹೋಗುವ ದೇಶ ವಿದೇಶಗಳಲ್ಲಿನ ಇತರ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿನ ಇನ್​ಫ್ರಾಸ್ಟ್ರಕ್ಚರ್ ವ್ಯವಸ್ಥೆಯನ್ನು ಗಮನಿಸಲಾಗಿದೆ ಎಂದು ದೀಕ್ಷು ಕುಕ್ರೇಜಾ ಹೇಳುತ್ತಾರೆ. ಆಂಧ್ರದ ತಿರುಪತಿ, ಪಂಜಾಬ್​ನ ಅಮೃತಸರ್​, ಅಷ್ಟೇ ಅಲ್ಲ, ವ್ಯಾಟಿಕನ್ ಸಿಟಿ, ಕಾಂಬೋಡಿಯಾ, ಜೆರುಸಲೆಮ್ ಮೊದಲಾದ ಸ್ಥಳಗಳಲ್ಲಿನ ವ್ಯವಸ್ಥೆಯನ್ನು ಅಧ್ಯಯನ ಮಾಡಲಾಗಿದೆ.

ಇದನ್ನೂ ಓದಿ: BR Shetty: ಸಾವಿರ ಕೋಟಿ ರೂ ಬಜೆಟ್​ನಲ್ಲಿ ಮಹಾಭಾರತ ಸಿನಿಮಾ ನಿರ್ಮಿಸಲು ಹೊರಟಿದ್ದ ಈ ಕನ್ನಡಿಗನಿಗೆ ಈಗ ದಿಕ್ಕುತೋಚದ ಸ್ಥಿತಿ

ಅಯೋಧ್ಯೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹೆಗ್ಗುರುರಿಗೆ ಧಕ್ಕೆಯಾಗದ ರೀತಿಯಲ್ಲಿ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಪಡಿಸುವುದು ಕುಕ್ರೇಜಾ ಅವರ ಮಾಸ್ಟರ್ ಪ್ಲಾನ್ ಆಗಿದೆ. ನೆಲದ ಸಮರ್ಪಕ ಬಳಕೆ ಮಾಡುವುದು, ದಟ್ಟನೆ ಹೆಚ್ಚಾಗದಂತೆ ನೋಡಿಕೊಳ್ಳುವುದು, ಧರ್ಮಶಾಲೆಗಳು, ಧರ್ಮಛತ್ರಗಳು, ಹೋಮ್​ಸ್ಟೇಗಳ ನಿರ್ಮಾಣ ಮಾಡುವುದು ನವೀಕರಣ ಯೋಜನೆಯ ಭಾಗವಾಗಿರುತ್ತವೆ.

‘ಅಯೋಧ್ಯೆಯು ಜಾಗತಿಕ ಪ್ರವಾಸೋದ್ಯಮ ಸ್ಥಳವಾಗಿ ಬೆಳೆಯುವ ನಿರೀಕ್ಷೆ ಇದೆ. ಪ್ರವಾಸ, ಆರ್ಥಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಲಿದೆ. ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಅಯೋಧ್ಯೆಗೆ ನಿತ್ಯವೂ ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ಕೊಡುವ ಸಾಧ್ಯತೆ ಇರುತ್ತದೆ,’ ಎಂದು ದೀಕ್ಷು ಕುಕ್ರೇಜಾ ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ