ಮತ್ತೆ ಫ್ಲೈಟ್ ಬುಕಿಂಗ್ ಆರಂಭಿಸಿ: ಭಾರತದ ಈಸ್ ಮೈ ಟ್ರಿಪ್ ಸಂಸ್ಥೆಗೆ ಮಾಲ್ಡೀವ್ಸ್ ಪ್ರವಾಸೋದ್ಯಮ ಮನವಿ

Ease My Trip and Maldives: ತಮ್ಮ ಪ್ಲಾಟ್​ಫಾರ್ಮ್​ನಲ್ಲಿ ಮಾಲ್ಡೀವ್ಸ್​ಗೆ ಫ್ಲೈಟ್ ಬುಕಿಂಗ್ ಮತ್ತೆ ಆರಂಭಿಸಿ ಎಂದು ಆ ದೇಶದ ಪ್ರವಾಸೋದ್ಯಮ ಸಂಸ್ಥೆಯು ಭಾರತದ ಈಸ್ ಮೈ ಟ್ರಿಪ್​ಗೆ ಮನವಿ ಮಾಡಿದೆ. ಮಾಲ್ಡೀವ್ಸ್​ನ ಸಚಿವರು ಆಡಿದ ಮಾತು ಸಾಮಾನ್ಯ ಮಾಲ್ಡೀವ್ಸ್ ಜನರ ಧ್ವನಿ ಅಲ್ಲ. ಅದನ್ನು ನಿರ್ಲಕ್ಷಿಸಿ ಎಂದು ಕೇಳಿಕೊಂಡಿದೆ.

ಮತ್ತೆ ಫ್ಲೈಟ್ ಬುಕಿಂಗ್ ಆರಂಭಿಸಿ: ಭಾರತದ ಈಸ್ ಮೈ ಟ್ರಿಪ್ ಸಂಸ್ಥೆಗೆ ಮಾಲ್ಡೀವ್ಸ್ ಪ್ರವಾಸೋದ್ಯಮ ಮನವಿ
ಮಾಲ್ಡೀವ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 10, 2024 | 12:04 PM

ನವದೆಹಲಿ, ಜನವರಿ 10: ತಮ್ಮ ಪ್ಲಾಟ್​ಫಾರ್ಮ್​ನಲ್ಲಿ ಮಾಲ್ಡೀವ್ಸ್​ಗೆ ಫ್ಲೈಟ್ ಬುಕಿಂಗ್ ಮತ್ತೆ ಆರಂಭಿಸಿ ಎಂದು ಆ ದೇಶದ ಪ್ರವಾಸೋದ್ಯಮ ಸಂಸ್ಥೆಯು ಭಾರತದ ಈಸ್ ಮೈ ಟ್ರಿಪ್​ಗೆ (Ease My Trip) ಮನವಿ ಮಾಡಿದೆ. ಮಾಲ್ಡೀವ್ಸ್ ಟೂರ್ ಮತ್ತು ಟ್ರಾವಲ್ ಆಪರೇಟರ್ಸ್ ಸಂಘಟನೆ (MATATO) ಹೇಳಿಕೆ ನೀಡಿದ್ದು, ಮಾಲ್ಡೀವ್ಸ್​ನ ಸಚಿವರು ಆಡಿದ ಮಾತು ಸಾಮಾನ್ಯ ಮಾಲ್ಡೀವ್ಸ್ ಜನರ ಧ್ವನಿ ಅಲ್ಲ. ಅದನ್ನು ನಿರ್ಲಕ್ಷಿಸಿ ಎಂದು ಈಸ್ ಮೈ ಟ್ರಿಪ್ ಸಿಇಒ ನಿಶಾಂತ್ ಪಿಟ್ಟಿ ಅವರಿಗೆ ಮನವಿ ಮಾಡಿದೆ.

ಮಾಲ್ಡೀವ್ಸ್ ಸಚಿವರು ಭಾರತದ ಪ್ರಧಾನಿ ಮತ್ತು ಭಾರತೀಯ ಬಗ್ಗೆ ಅವಹೇಳನ ಮಾಡಿದ ಬಳಿಕ ಈಸ್ ಮೈ ಟ್ರಿಪ್ ಸಂಸ್ಥೆ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಮಾಲ್ಡೀವ್ಸ್ ಪ್ರವಾಸದ ಬುಕಿಂಗ್ಸ್ ರದ್ದುಗೊಳಿಸಿತ್ತು. ವೈಯಕ್ತಿಕ ಲಾಭಕ್ಕಿಂತ ರಾಷ್ಟ್ರೀಯತೆ ದೊಡ್ಡದು ಎಂದು ಹೇಳಿದ ಈಸ್ ಮೈ ಟ್ರಿಪ್ ಸಂಸ್ಥೆ ಮಾಲ್ಡೀವ್ಸ್​ಗೆ ಫ್ಲೈಟ್ ಬುಕಿಂಗ್​ಗಳನ್ನೂ ನಿಲ್ಲಿಸಿತ್ತು. ಅಂತೆಯೇ, ಸಾವಿರಾರು ಭಾರತೀಯರು ಮಾಲ್ಡೀವ್ಸ್ ಪ್ರವಾಸ ರದ್ದುಗೊಳಿಸಿದ್ದಾರೆ.

ಪ್ರವಾಸೋದ್ಯಮವೇ ಪ್ರಮುಖ ಆದಾಯ ಮೂಲ ಹೊಂದಿರುವ ಮಾಲ್ಡೀವ್ಸ್​ಗೆ ಈ ಬೆಳವಣಿ ಪೆಟ್ಟು ಕೊಡುವ ಸಾಧ್ಯತೆ ಇದೆ. ಅಲ್ಲಿನ ಪ್ರವಾಸೋದ್ಯಮ ಸಂಘಟನೆಗಳು ಈ ವಿವಾದ ಸಂಬಂಧ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

ಇದನ್ನೂ ಓದಿ: Ayodhya: ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ಅಯೋಧ್ಯೆ ನಗರಿ ಮಾರ್ಪಾಡು; ಇದರ ಹಿಂದಿದ್ದಾರೆ ಮಾಸ್ಟರ್ ಪ್ಲಾನರ್ ದೀಕ್ಷು ಕುಕ್ರೇಜಾ

ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಪ್ರವಾಸದ ಬಳಿಕ ಮಾಲ್ಡೀವ್ಸ್​ಗೆ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಅದರಲ್ಲೂ ಪ್ರಧಾನಿ ಬಗ್ಗೆ ಮಾಲ್ಡೀವ್ಸ್ ಸಚಿವರು ಲೇವಡಿ ಮಾಡಿದ ಬಳಿಕ ಇದು ಇನ್ನಷ್ಟು ಪರಿಣಾಮ ಬೀರಿದೆ.

ಈಸ್ ಮೈ ಟ್ರಿಪ್ ಮಾಲ್ಡೀವ್ಸ್ ಪ್ರವಾಸದ ಬುಕಿಂಗ್​ಗಳನ್ನು ರದ್ದು ಮಾಡಿದ್ದು ಮಾತ್ರವಲ್ಲ, ಲಕ್ಷದ್ವೀಪ್ ಪ್ರವಾಸಕ್ಕೆ ಆಕರ್ಷಕ ಪ್ಯಾಕೇಜ್​ಗಳನ್ನು ಸದ್ಯದಲ್ಲೇ ಘೋಷಿಸುವುದಾಗಿ ತಿಳಿಸಿದೆ. ಲಕ್ಷದ್ವೀಪ್​ನಲ್ಲಿ ಈಗಾಗಲೇ ಸೌಕರ್ಯ ವ್ಯವಸ್ಥೆಯನ್ನು (ಇನ್​ಫ್ರಾಸ್ಟ್ರಕ್ಚರ್) ಅಭಿವೃದ್ದಿಪಡಿಸಲಾಗುತ್ತಿದೆ. ಟಾಟಾ ಗ್ರೂಪ್​ನಿಂದ ಎರಡು ತಾಜ್ ಹೋಟೆಲ್​ಗಳ ನಿರ್ಮಾಣ ಆಗುತ್ತಿದೆ.

ಇದನ್ನೂ ಓದಿ: EaseMyTrip: ವೈಯಕ್ತಿಕ ಲಾಭಕ್ಕಿಂತ ರಾಷ್ಟ್ರ ಹಿತಾಸಕ್ತಿ ಮುಖ್ಯ; ಮಾಲ್ಡೀವ್ಸ್ ಅಲ್ಲ, ಲಕ್ಷದ್ವೀಪ, ಅಯೋಧ್ಯೆ ಪ್ಯಾಕೇಜ್ ಕೊಡ್ತೀವಿ: ಈಸ್ ಮೈ ಟ್ರಿಪ್

ಮಾಲ್ಡೀವ್ಸ್ ಮತ್ತು ಲಕ್ಷದ್ವೀಪ್ ಪ್ರದೇಶಗಳು ನೂರಾರು ದ್ವೀಪಗಳ ಸಮೂಹಗಳಾಗಿವೆ. ಎರಡೂ ಕೂಡ ಒಂದೇ ದ್ವೀಪ ಸಮೂಹಕ್ಕೆ ಸೇರಿದ್ದು ಎನ್ನಲಾಗಿದೆ. ಹೀಗಾಗಿ, ಮಾಲ್ಡೀವ್ಸ್​ನಲ್ಲಿರುವ ಸುಂದರ ಬೀಚ್ ಇತ್ಯಾದಿ ವಾತಾವರಣ ಲಕ್ಷದ್ವೀಪ್​ನಲ್ಲೂ ಇದೆ. ಹೀಗಾಗಿ, ಲಕ್ಷದ್ವೀಪ್ ಕೂಡ ಮಾಲ್ಡೀವ್ಸ್​ನಂತೆಯೇ ಪ್ರವಾಸಿಗರಿಗೆ ನೆಚ್ಚಿನ ಸ್ಪಾಟ್ ಎನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್