50-30-20 Rule: ಅಗತ್ಯಗಳು, ಬಯಕೆಗಳಿಗೆ ಎಷ್ಟು ಹಣ ಬೇಕು? ಉಳಿತಾಯಕ್ಕೆ ಎಷ್ಟು ಬೇಕು? ನಿಮಗಿದೋ 50-30-20 ಸೂತ್ರ

Money Management: ಹಣ ಉಳಿಸುವುದು ಕಲೆ. ಜೊತೆಗೆ ಬದ್ಧತೆ, ಶಿಸ್ತೂ ಬೇಕು. ಬದ್ಧತೆ, ಶಿಸ್ತು ಇಟ್ಟುಕೊಂಡರೆ ಸಾಧ್ಯವಾದಷ್ಟು ಬೇಗ ಸಂಪತ್ತು ಹೆಚ್ಚಿಸಿಕೊಳ್ಳಬಹುದು. ನಿಮ್ಮ ಆದಾಯದಲ್ಲಿ ಯಾವ್ಯಾವ ಖರ್ಚಿಗೆ ಎಷ್ಟು ಹಣ ವ್ಯಯಿಸಬೇಕು ಎಂಬ ಗೊಂದಲ ಇದ್ದರೆ 50-30-20 ನಿಯಮ ಅಳವಡಿಸಿ. ನಿಮ್ಮ ಅಗತ್ಯಗಳಿಗೆ ವೆಚ್ಚ ಶೇ. 50 ಮೀರಬಾರದು. ಬಯಕೆಗಳಿಗೆ ಶೇ. 30ಕ್ಕಿಂತ ಹೆಚ್ಚು ವ್ಯಯಿಸದಿರಿ. ಉಳಿತಾಯ ಕನಿಷ್ಠ ಶೇ. 20ರಷ್ಟಿರಬೇಕು.

50-30-20 Rule: ಅಗತ್ಯಗಳು, ಬಯಕೆಗಳಿಗೆ ಎಷ್ಟು ಹಣ ಬೇಕು? ಉಳಿತಾಯಕ್ಕೆ ಎಷ್ಟು ಬೇಕು? ನಿಮಗಿದೋ 50-30-20 ಸೂತ್ರ
ಉಳಿತಾಯ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 10, 2024 | 7:30 AM

ಹಣ ಹೂಡಿಕೆ ಮಾಡುವುದು ಒಂದು ಕಲೆಯಾದರೆ, ಹಣ ಉಳಿಸುವುದೂ (money savings) ಕೂಡ ಒಂದು ರೀತಿಯಲ್ಲಿ ಕಲೆಯೇ. ಜೊತೆಗೆ ಬದ್ಧತೆ, ಶಿಸ್ತೂ ಬೇಕು. ಬಹಳ ಬೇಗ ಶ್ರೀಮಂತರಾಗಲು ಯಾವುದೇ ಶಾರ್ಟ್​ಕಟ್ ಇಲ್ಲ. ಆದರೆ, ದುಡ್ಡಿನ ವಿಚಾರದಲ್ಲಿ ಬದ್ಧತೆ, ಶಿಸ್ತು ಇಟ್ಟುಕೊಂಡರೆ ಸಾಧ್ಯವಾದಷ್ಟು ಬೇಗ ಸಂಪತ್ತು ಹೆಚ್ಚಿಸಿಕೊಳ್ಳುತ್ತಾ ಹೋಗಬಹುದು. ಈ ನಿಟ್ಟಿನಲ್ಲಿ 50-30-20 ನಿಯಮ ನಿಮಗೆ ನೆರವಾಗಬಹುದು.

ಏನಿದು 50-30-20 ನಿಯಮ?

ಸಾಲ ಮಾಡುವ ವಿಚಾರಕ್ಕೆ ಬಂದರೆ ಎಷ್ಟು ಸಾಲ ಮಾಡಬೇಕು ಎನ್ನುವ ಗೊಂದಲ ಬಹಳ ಮಂದಿಗೆ ಇರುತ್ತದೆ. ನಿಮ್ಮ ಆದಾಯದ ಹಣವನ್ನು ಯಾವ್ಯಾವುದಕ್ಕೆ ಎಷ್ಟು ವೆಚ್ಚ ಮಾಡಬೇಕು ಎಂಬ ಗೊಂದಲವೂ ಇರುತ್ತದೆ. ಇಂಥ ಸ್ಥಿತಿಯಲ್ಲಿ ನೀವು ಇದ್ದರೆ ನಿಮಗಿದೋ ಇದೆ 50-30-20 ಸೂತ್ರ.

ಇಲ್ಲಿ 50 ಎಂದರೆ ನಿಮ್ಮ ಆದಾಯದ ಶೇ. 50ರಷ್ಟು ಹಣವನ್ನು ಅಗತ್ಯಗಳಿಗೆ ಖರ್ಚು ಮಾಡಬಹುದು. ಅದಕ್ಕಿಂತ ಹೆಚ್ಚು ಹಣ ವೆಚ್ಚವಾಗದಂತೆ ನೋಡಿಕೊಳ್ಳಬೇಕು.

ಇದನ್ನೂ ಓದಿ: 100-Age Rule: 40 ವರ್ಷ ಆದ ಬಳಿಕ ಎಲ್ಲಿ ಎಷ್ಟು ಹೂಡಿಕೆ ಮಾಡಬೇಕು? ಯಾವ್ಯಾವ ವಯಸ್ಸಿಗೆ ಹೂಡಿಕೆ ಹೇಗಿರಬೇಕು? ನಿಯಮ 100 ತಿಳಿಯಿರಿ

ಇಲ್ಲಿ ಅಗತ್ಯ ಖರ್ಚು ಎಂದರೆ ಮನೆ ಬಾಡಿಗೆ, ಬಿಲ್​ಗಳು, ಇಎಂಐ, ದಿನಸಿ ವಸ್ತು ಇತ್ಯಾದಿಯವುಗಳಿಗೆ ಮಾಡುವ ವೆಚ್ಚ.

ಇನ್ನು, ನಿಮ್ಮ ಬಯಕೆಗಳಿಗೆ ಮಾಡುವ ವೆಚ್ಚ ಶೇ. 30 ಮೀರದಂತೆ ಎಚ್ಚರಿ ವಹಿಸಿ. ಇಲ್ಲಿ ಬಯಕೆಗಳೆಂದರೆ ಆಗಾಗ್ಗೆ ಹೋಟೆಲ್​ಗೆ ಹೋಗಿ ಮಾಡುವ ಊಟ, ಪ್ರವಾಸ, ಸಿನಿಮಾ, ವಾಹನ ಖರೀದಿ ಇತ್ಯಾದಿ ಸೇರುತ್ತವೆ.

ಕೊನೆಯಲ್ಲಿ, ನಿಮ್ಮ ಉಳಿತಾಯವು ಕನಿಷ್ಠ ಶೇ. 20ರಷ್ಟಾದರೂ ಇರಬೇಕು. ಹೀಗಾಗಿ, ಮೊದಲಿಗೆ ಉಳಿತಾಯಕ್ಕೆ ಶೇ. 20ರಷ್ಟು ಆದಾಯವನ್ನು ಎತ್ತಿ ಇಟ್ಟುಕೊಂಡು ಉಳಿದ ಹಣವನ್ನು ನಿಮ್ಮ ಅಗತ್ಯಗಳಿಗೆ ಮತ್ತು ಬಯಕೆಗಳಿಗೆ ಬಳಸುವ ಅಭ್ಯಾಸ ಮಾಡಿಕೊಳ್ಳಿ.

ಇದನ್ನೂ ಓದಿ: ಸೂತ್ರ 72; ನಿಮ್ಮ ಹಣ ಡಬಲ್ ಅಗುವುದು ಯಾವಾಗ? ಎಷ್ಟು ಬಡ್ಡಿದರ ಅಗತ್ಯ? ಎಲ್ಲಕ್ಕೂ ಕೆಲಸ ಮಾಡುತ್ತೆ ಈ ಫಾರ್ಮುಲಾ

ನಿಮ್ಮ ಬಯಕೆಗಳಿಗೆ ಮಾಡುವ ಖರ್ಚನ್ನು ಸಾಧ್ಯವಾದಷ್ಟೂ ಮೊಟಕುಗೊಳಿಸಲು ಯತ್ನಿಸಿ. ಅಗತ್ಯಬಿದ್ದರೆ ಅಗತ್ಯಗಳಿಗೆ ಮಾಡುವ ವೆಚ್ಚವನ್ನೂ ಕಡಿಮೆ ಮಾಡಬಹುದು. ಇವುಗಳಿಂದ ಉಳಿಸಿದ ಹಣವನ್ನು ಉಳಿತಾಯಕ್ಕೆ ಸೇರಿಸುತ್ತಾ ಹೋಗಿ. ಹೀಗೆ ಮಾಡಿದರೆ ನಿಮ್ಮ ಸಂಪತ್ತು ಬೇಗ ಬೇಗ ಬೆಳೆಯುತ್ತಾ ಹೋಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್