100-Age Rule: 40 ವರ್ಷ ಆದ ಬಳಿಕ ಎಲ್ಲಿ ಎಷ್ಟು ಹೂಡಿಕೆ ಮಾಡಬೇಕು? ಯಾವ್ಯಾವ ವಯಸ್ಸಿಗೆ ಹೂಡಿಕೆ ಹೇಗಿರಬೇಕು? ನಿಯಮ 100 ತಿಳಿಯಿರಿ

Investment Tips: ಹೂಡಿಕೆಗೆ ಹಲವು ಆಯ್ಕೆಗಳಿವೆ. ಈಕ್ವಿಟಿ, ಮ್ಯುಚುವಲ್ ಫಂಡ್, ಡೆಟ್, ಎಫ್​​ಡಿ ಇತ್ಯಾದಿ ಇನ್ವೆಸ್ಟ್​ಮೆಂಟ್ ಆಯ್ಕೆಗಳಿವೆ. ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದು ರಿಸ್ಕಿ, ಆದರೆ ಹೆಚ್ಚು ರಿಟರ್ನ್ ಸಾಧ್ಯತೆ ಇರುತ್ತದೆ. ಸಣ್ಣ ವಯಸ್ಸಿನಲ್ಲಿ ಈಕ್ವಿಟಿಗಳಲ್ಲಿ ಹೂಡಿಕೆ ಹೆಚ್ಚಿರಬೇಕು. 100 ಮೈನಸ್ ವಯಸ್ಸು ಸೂತ್ರದಂತೆ ನಿಮ್ಮ ವಯಸ್ಸು 40 ವರ್ಷ ಆಗಿದ್ದರೆ ಶೇ. 60ರಷ್ಟನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬಹುದು.

100-Age Rule: 40 ವರ್ಷ ಆದ ಬಳಿಕ ಎಲ್ಲಿ ಎಷ್ಟು ಹೂಡಿಕೆ ಮಾಡಬೇಕು? ಯಾವ್ಯಾವ ವಯಸ್ಸಿಗೆ ಹೂಡಿಕೆ ಹೇಗಿರಬೇಕು? ನಿಯಮ 100 ತಿಳಿಯಿರಿ
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 05, 2024 | 5:26 PM

ಹಣ ಹೂಡಿಕೆ ಮಾಡಲು ಹಲವು ಮಾರ್ಗಗಳಿವೆ. ಬ್ಯಾಂಕುಗಳ ಠೇವಣಿ ಸ್ಕೀಮ್​ಗಳಿವೆ. ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳಿವೆ. ಮ್ಯುಚುವಲ್ ಫಂಡ್​ಗಳಿವೆ. ಈಕ್ವಿಟಿ ಅಥವಾ ಷೇರುಗಳಲ್ಲಿ ನೇರವಾಗಿಯೂ ಹೂಡಿಕೆ ಮಾಡಬಹುದು. ಗೋಲ್ಡ್ ಬಾಂಡ್ ಇತ್ಯಾದಿ ಸ್ಕೀಮ್​ಗಳಿವೆ. ಕಾರ್ಪೊರೇಟ್ ಬಾಂಡ್​​ಗಳಿವೆ. ಹೀಗೆ ನಾನಾ ಆಯ್ಕೆಗಳಿವೆ. ಷೇರು ಅಥವಾ ಮ್ಯುಚುವಲ್ ಫಂಡ್​ಗಳಲ್ಲಿ ಹೂಡಿಕೆ (Investment) ಮಾಡುವುದು ಹೆಚ್ಚು ರಿಸ್ಕಿಯಾದರೂ ಹೆಚ್ಚಿನ ಪ್ರಮಾಣದ ರಿಟರ್ನ್ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ರಿಟರ್ನ್ ಹೆಚ್ಚು ಬರುತ್ತದೆ ಎಂದು ಎಲ್ಲಾ ಸೇವಿಂಗ್ ಹಣವನ್ನು ಷೇರುಗಳ ಮೇಲೆ ಹೂಡಿಕೆ ಮಾಡುವುದು ಮೂರ್ಖತನ ಆದೀತು ಎಂಬುದು ತಜ್ಞರ ಅನಿಸಿಕೆ.

ಹಾಗಿದ್ದರೆ, ಎಲ್ಲಿ ಹೂಡಿಕೆ ಮಾಡಬೇಕು? ಷೇರುಗಳಲ್ಲಿ ಎಷ್ಟು ಹೂಡಿಕೆ ಮಾಡಿದರೆ ರಿಸ್ಕ್ ಕಡಿಮೆ? ಈ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರ ಕೊಡುವುದು ಕಷ್ಟ. ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ತಜ್ಞರು 100 ಮೈನಸ್ ವಯಸ್ಸು ನಿಯಮ ಅಥವಾ ಹಂಡ್ರೆಡ್ ಮೈನಸ್ ಏಜ್ ರೂಲ್ ಅನ್ನು ಮುಂದಿಡುತ್ತಾರೆ.

ಇದನ್ನೂ ಓದಿ: SIP Magic: ದಿನಕ್ಕೆ 200 ರೂನಂತೆ ಎಸ್​ಐಪಿಯಲ್ಲಿ ಹೂಡಿಕೆ ಮಾಡಿದರೆ 25 ವರ್ಷಕ್ಕೆ ಎಷ್ಟು ಸಂಪಾದನೆ ಆಗಬಹುದು?

ಏನಿದು 100 – ಏಜ್ ರೂಲ್?

ಇದು ವಯಸ್ಸಿಗೆ ತಕ್ಕಂತೆ ಮಾಡಬಹುದಾದ ಹೂಡಿಕೆ ಕ್ರಮವಾಗಿದೆ. ವಯಸ್ಸು ಕಡಿಮೆ ಇದ್ದಾಗ ಹೆಚ್ಚು ರಿಸ್ಕ್ ತೆಗೆದುಕೊಳ್ಳಬಹುದು. ನಷ್ಟವಾದಾಗ ರಿಕವರ್ ಮಾಡಿಕೊಳ್ಳಲು ಕಾಲಾವಕಾಶ ಇರುತ್ತದೆ. ಆದರೆ, ಹೆಚ್ಚು ವಯಸ್ಸಾದಂತೆಲ್ಲಾ ರಿಸ್ಕ್ ತೆಗೆದುಕೊಳ್ಳಲು ಕಷ್ಟವಾಗುತ್ತದೆ. ಏನು ಮಾಡಬೇಕೆಂದು ಗೊಂದಲ ಸ್ಥಿತಿಯಲ್ಲಿದ್ದರೆ ನೂರು ಮೈನಸ್ ವಯಸ್ಸು ನಿಯಮ ಸಹಾಯಕ್ಕೆ ಬರಬಹುದು.

ಉದಾಹರಣೆಗೆ, ನಿಮ್ಮ ವಯಸ್ಸು 40 ವರ್ಷ ಇದೆ ಎಂದಿಟ್ಟುಕೊಳ್ಳಿ. ಆಗ ನೂರು ಮೈನಸ್ ವಯಸ್ಸು ಎಂದರೆ 100 – 40 = 60. ನಿಮ್ಮ ಪೋರ್ಟ್​ಫೋಲಿಯೋ ಅಥವಾ ಒಟ್ಟು ಹೂಡಿಕೆಯಲ್ಲಿ ಶೇ. 60ರಷ್ಟು ಮೊತ್ತವು ಈಕ್ವಿಟಿಗಳಲ್ಲಿ ವಿನಿಯೋಗವಾಗಬಹುದು. ಉಳಿದ ಶೇ. 40ರಷ್ಟು ಹಣವನ್ನು ಎಫ್​ಡಿ ಇತ್ಯಾದಿ ನಿಶ್ಚಿತ ಆದಾಯದ ಸಾಧನಗಳಲ್ಲಿ ತೊಡಗಿಸಬಹುದು.

ಇನ್ನು, ನಿಮ್ಮ ವಯಸ್ಸು 50 ವರ್ಷ ಆಗಿದ್ದಲ್ಲಿ ಶೇ. 50ರಷ್ಟು ಹಣವನ್ನು ಈಕ್ವಿಟಿಗಳಲ್ಲಿ, ಉಳಿದ ಹಣವನ್ನು ಡೆಟ್​ಗಳಲ್ಲಿ ಹಾಕಬಹುದು.

ಇದನ್ನೂ ಓದಿ: ಸೂತ್ರ 72; ನಿಮ್ಮ ಹಣ ಡಬಲ್ ಅಗುವುದು ಯಾವಾಗ? ಎಷ್ಟು ಬಡ್ಡಿದರ ಅಗತ್ಯ? ಎಲ್ಲಕ್ಕೂ ಕೆಲಸ ಮಾಡುತ್ತೆ ಈ ಫಾರ್ಮುಲಾ

ವಯಸ್ಸು ಇನ್ನೂ 25 ವರ್ಷ ಮಾತ್ರವೇ ಆಗಿದ್ದಲ್ಲಿ ಮುಕ್ಕಾಲು ಪಾಲು ಉಳಿತಾಯ ಹಣವನ್ನು ಈಕ್ವಿಟಿಗಳಲ್ಲಿ ತೊಡಗಿಸಬಹುದು. ಈಕ್ವಿಟಿ ಎಂದರೆ ನೇರ ಷೇರುಗಳಲ್ಲಿ ಬೇಕಾದರೆ ಇನ್ವೆಸ್ಟ್ ಮಾಡಬಹುದು. ಅಥವಾ ಈಕ್ವಿಟಿ ಮ್ಯುಚುವಲ್ ಫಂಡ್​ಗಳಾದರೂ ಆಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್