Punishment: ಹಿಟ್ ಅಂಡ್ ರನ್ ಕೇಸ್; 2-10 ವರ್ಷದವರೆಗೆ ಜೈಲು ಶಿಕ್ಷೆ; ಐಪಿಸಿ 304 ಮತ್ತು 304ಎ ಸೆಕ್ಷನ್ ಬಗ್ಗೆ ತಿಳಿದಿರಿ

Hit and Run Case: ಹಿಟ್ ಅಂಡ್ ರನ್ ಎಂಬುದು ಆ್ಯಕ್ಸಿಡೆಂಟ್ ಪ್ರಕರಣವಾಗಿದ್ದು, ಚಾಲಕ ಅಪಘಾತ ಎಸಗಿ ಸಾವಿಗೆ ಕಾರಣರಾಗಿ ಬಳಿಕ ಸ್ಥಳದಿಂದ ಪರಾರಿಯಾಗುವುದು. ಭಾರತೀಯ ನ್ಯಾಯ ಸಂಹಿತೆಯ ಪ್ರಸ್ತಾವಿತ 104(2) ಸೆಕ್ಷನ್​ನಲ್ಲಿ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಹಾಲಿ ಐಪಿಸಿಯಲ್ಲೂ ಈ ಪ್ರಕರಣಕ್ಕೆ 2-10 ವರ್ಷದವರೆಗೆ ಜೈಲು ಶಿಕ್ಷೆ ಇದೆ. ಸೆಕ್ಷನ್ 304 ಅಡಿಯಲ್ಲಿ ಗರಿಷ್ಠ ಶಿಕ್ಷೆ ಇದೆ.

Punishment: ಹಿಟ್ ಅಂಡ್ ರನ್ ಕೇಸ್; 2-10 ವರ್ಷದವರೆಗೆ ಜೈಲು ಶಿಕ್ಷೆ; ಐಪಿಸಿ 304 ಮತ್ತು 304ಎ ಸೆಕ್ಷನ್ ಬಗ್ಗೆ ತಿಳಿದಿರಿ
ಅಪಘಾತ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 05, 2024 | 3:58 PM

ಭಾರತೀಯ ನ್ಯಾಯ ಸಂಹಿತೆಯಲ್ಲಿ (BNS- Bharatiya Nyay Samhita) ಪ್ರಸ್ತಾಪಿತವಾಗಿರುವ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ (hit and run case) ಅಪರಾಧಿಗಳಿಗೆ 10 ವರ್ಷದವರೆಗೆ ಜೈಲು ಶಿಕ್ಷೆ ನೀಡಲಾಗುತ್ತದೆ. ಈ ವಿಚಾರವಾಗಿ ಟ್ರಕ್ ಡ್ರೈವರ್​ಗಳ ಪ್ರತಿಭಟನೆ ನಡೆದಿತ್ತು. ನ್ಯಾಯ ಸಂಹಿತೆಯ ಈ ಕಾನೂನು ಇನ್ನೂ ಜಾರಿಗೆ ಬಂದಿಲ್ಲ. ಹಾಲಿ ಇರುವ ಐಪಿಸಿ ಕಾನೂನಿನಲ್ಲೂ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಅಪರಾಧಿಗೆ 10 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಇದೆ.

ಏನಿದು ಹಿಟ್ ಅಂಡ್ ರನ್ ಪ್ರಕರಣ?

ಹಿಟ್ ಅಂಡ್ ರನ್ ಕೇಸ್ ಎನ್ನುವುದು ಅಪಘಾತದ ಒಂದು ವರ್ಗೀಕರಣ. ವಾಹನದ ಚಾಲಕ ಡ್ರೈವಿಂಗ್ ಮಾಡುವಾಗ ಯಾವುದೇ ವ್ಯಕ್ತಿಗೆ ಡಿಕ್ಕಿ ಹೊಡೆದು, ಬಳಿಕ ಅಲ್ಲಿಂದ ಪರಾರಿಯಾಗುವುದಕ್ಕೆ ಹಿಟ್ ಅಂಡ್ ರನ್ ಎನ್ನುವುದು. ಅಪಘಾತ ಮಾಡುವುದು ಒಂದು ಅಪರಾಧವಾದರೆ, ಘಟನೆ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಹೋಗುವುದು ಇನ್ನೊಂದು ಅಪರಾಧ.

ಹಿಟ್ ಅಂಡ್ ರನ್​ಗೆ ಎರಡು ಸೆಕ್ಷನ್​ಗಳು

ಯಾವುದಾದರೂ ಹಿಟ್ ಅಂಡ್ ರನ್ ಪ್ರಕರಣವಾಗಿ ಯಾರಾದರೂ ಸತ್ತರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಎರಡು ಸೆಕ್ಷನ್​ಗಳ ಆಯ್ಕೆ ಹೊಂದಿರುತ್ತಾರೆ. ಸೆಕ್ಷನ್ 304 ಮತ್ತು 304ಎ ಇರುತ್ತದೆ. ಈ ಎರಡನೇ ಸೆಕ್ಷನ್​ನಲ್ಲಿ ಪ್ರಕರಣ ದಾಖಲಾದರೆ ಗರಿಷ್ಠ ಎರಡು ವರ್ಷದವರೆಗೆ ಶಿಕ್ಷೆ ಇರುತ್ತದೆ. ಸೆಕ್ಷನ್ 304ರಲ್ಲಿ ದಾಖಲಾಗುವ ಪ್ರಕರಣದಲ್ಲಿ 10 ವರ್ಷದವರೆಗೆ ಜೈಲು ಶಿಕ್ಷೆ ಇರುತ್ತದೆ.

ಇದನ್ನೂ ಓದಿ: LPG Users: ಎಲ್​ಪಿಜಿ ಗ್ರಾಹಕರಿಗೆ ಉಚಿತ 50 ಲಕ್ಷ ವಿಮೆ; ಕ್ಲೈಮ್ ಮಾಡುವುದು ಹೇಗೆ?

ಏನಿದು ಸೆಕ್ಷನ್ 304ಎ?

ಡ್ರೈವರ್ ಸಿಗ್ನಲ್ ಜಂಪ್ ಮಾಡಿದ ಪರಿಣಾಮವಾಗಿ ಅಪಘಾತವಾದರೆ ಅದನ್ನು ನಿರ್ಲಕ್ಷ್ಯ ಚಾಲನೆ ಎಂದು ಪರಿಗಣಿಸಲಾಗುತ್ತದೆ. ಅಂಥ ಪ್ರಕರಣವನ್ನು ಸೆಕ್ಷನ್ 304ಎ ಅಡಿಯಲ್ಲಿ ದಾಖಲಿಸಲಾಗುತ್ತದೆ. ಇದಕ್ಕೆ ಎರಡು ವರ್ಷದವರೆಗೆ ಮಾತ್ರವೇ ಶಿಕ್ಷೆ ಇರುತ್ತದೆ. ಬಂಧಿತರಿಗೆ ಜಾಮೀನು ಕೂಡ ಸಿಗುತ್ತದೆ.

ಸೆಕ್ಷನ್ 304 ಹೇಗೆ?

ವಾಹನದ ಚಾಲಕ ಕುಡಿದು ಡ್ರೈವ್ ಮಾಡುತ್ತಿದ್ದರೆ ಅಥವಾ ಬೇಕಾಬಿಟ್ಟಿ ವಾಹನ ಚಾಲನೆ ಮಾಡಿ ಅಪಘಾತವಾದರೆ ಆಗ ಪೊಲೀಸರು ಸೆಕ್ಷನ್ 304ರ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು. ಇದಕ್ಕೆ ಜಾಮೀನು ಸಿಗುವುದಿಲ್ಲ. 10 ವರ್ಷದವರೆಗೆ ಜೈಲುಶಿಕ್ಷೆ ಇರುತ್ತದೆ.

ಇದನ್ನೂ ಓದಿ: Infosys Story: ಎಲ್ಲಾ ಅರ್ಹತೆ ಇದ್ದ ಪತ್ನಿಯನ್ನು ಇನ್ಫೋಸಿಸ್​ನಿಂದ ದೂರ ಇಟ್ಟು ತಪ್ಪು ಮಾಡಿದೆ: ಪರಿತಪಿಸಿದ ನಾರಾಯಣಮೂರ್ತಿ

ಹೊಸ ಭಾರತೀಯ ನ್ಯಾಯ ಸಂಹಿತೆಯಲ್ಲಿ ಹೇಗೆ?

ಪ್ರಸ್ತಾವಿತ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106(2) ಪ್ರಕಾರ ಹಿಟ್ ಅಂಡ್ ರನ್ ಪ್ರಕರಣದಲ್ಲಿ 10 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು