LPG Users: ಎಲ್ಪಿಜಿ ಗ್ರಾಹಕರಿಗೆ ಉಚಿತ 50 ಲಕ್ಷ ವಿಮೆ; ಕ್ಲೈಮ್ ಮಾಡುವುದು ಹೇಗೆ?
50 Lakh Accident Insurance Coverage: ಎಲ್ಪಿಜಿ ಕನೆಕ್ಷನ್ ಪಡೆಯುವ ಎಲ್ಲಾ ಗ್ರಾಹಕರಿಗೂ ಆ ಪೆಟ್ರೋಲಿಯಂ ಕಂಪನಿ ಉಚಿತವಾಗಿ 50 ಲಕ್ಷ ರೂ ಮೊತ್ತದ ಆ್ಯಕ್ಸಿಡೆಂಟ್ ಇನ್ಷೂರೆನ್ಸ್ ಸೌಲಭ್ಯ ಒದಗಿಸುತ್ತದೆ. ಇನ್ಷೂರೆನ್ಸ್ ಕವರೇಜ್ಗಾಗಿ ಪೆಟ್ರೋಲಿಯಂ ಕಂಪನಿ ಯಾವುದಾದರೂ ಇನ್ಷೂರೆನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿರುತ್ತದೆ. ಎಲ್ಪಿಜಿ ಗ್ಯಾಸ್ ದುರಂತ ಘಟನೆಯಲ್ಲಿ ಆಸ್ತಿಗೆ ಧಕ್ಕೆಯಾದರೆ 2 ಲಕ್ಷ ರೂವರೆಗೆ ಕ್ಲೈಮ್ ಮಾಡಲು ಸಾಧ್ಯ. ಸಾವಾದರೆ ಒಬ್ಬರಿಗೆ 6 ಲಕ್ಷ ಪರಿಹಾರ ಸಿಗುತ್ತದೆ.
ನವದೆಹಲಿ, ಜನವರಿ 5: ಎಲ್ಪಿಜಿ ಸಿಲಂಡರ್ ಸ್ಪೋಟಗೊಂಡ ಹಲವು ಪ್ರಕರಣಗಳು ದೇಶಾದ್ಯಂತ ಸಂಭವಿಸುತ್ತಲೇ ಇರುತ್ತವೆ. ಸಾಕಷ್ಟು ಆಸ್ತಿಪಾಸ್ತಿ ನಷ್ಟ, ಜೀವಹಾನಿ ಆಗುವುದುಂಟು. ಹೀಗಾಗಿ, ಇಂಥದ್ದಕ್ಕೆ ಇನ್ಷೂರೆನ್ಸ್ ಕವರೇಜ್ ಇರುವುದು ಬಹಳ ಮುಖ್ಯ. ಪೆಟ್ರೋಲಿಯಂ ಕಂಪನಿಗಳೇ ತಮ್ಮ ಎಲ್ಲಾ ಎಲ್ಪಿಜಿ ಗ್ರಾಹಕರಿಗೂ ಉಚಿತವಾಗಿ ಅಪಘಾತ ವಿಮಾ ಕವರೇಜ್ (free insurance coverage) ಸೌಲಭ್ಯ ಒದಗಿಸುತ್ತದೆ. ಅದೂ 50 ಲಕ್ಷ ರೂ ಮೊತ್ತದ ಆಕ್ಸಿಡೆಂಟ್ ಇನ್ಷೂರೆನ್ಸ್ ಕವರೇಜ್ ಇರುತ್ತದೆ. ಇದಕ್ಕೆ ಎಲ್ಪಿಜಿ ಗ್ರಾಹಕರು ಪ್ರತ್ಯೇಕ ಪ್ರೀಮಿಯಮ್ ಕಟ್ಟಬೇಕಿಲ್ಲ. ಪೆಟ್ರೋಲಿಯಂ ಕಂಪನಿಯೇ ಉಚಿತವಾಗಿ ಈ ಕವರೇಜ್ ನೀಡುತ್ತದೆ.
ಎಲ್ಪಿಜಿ ಸಿಲಂಡರ್ ಸ್ಪೋಟ ಘಟನೆಯಿಂದ ಆಗುವ ಹಾನಿಗೆ ಎಲ್ಪಿಜಿ ಗ್ರಾಹಕರು ಸಂಬಂಧಿತ ಪೆಟ್ರೋಲಿಯಂ ಕಂಪನಿಯಿಂದ ಪರಿಹಾರ ಪಡೆಯಲು ಅವಕಾಶ ಇದೆ. ಎಲ್ಪಿಜಿ ಗ್ರಾಹಕ ಹಾಗೂ ಅವರ ಕುಟುಂಬ ಸದಸ್ಯರಿಗೆ ಒಟ್ಟಾರೆ ವರ್ಷಕ್ಕೆ 50 ಲಕ್ಷ ರೂವರೆಗೂ ಕಾಂಪೆನ್ಸೇಶನ್ ಅವಕಾಶ ಇರುತ್ತದೆ. ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ 10 ಲಕ್ಷ ರೂವರೆಗೂ ಪರಿಹಾರ ಪಡೆಯಬಹುದು.
ಗ್ಯಾಸ್ ಸೋರಿಕೆ, ಸ್ಫೋಟ ಇತ್ಯಾದಿ ಅಪಘಾತ ಘಟನೆಗಳಿಗೆ ಈ ವಿಮಾ ಸೌಲಭ್ಯ ಅನ್ವಯ ಆಗುತ್ತದೆ. ಅದಕ್ಕಾಗಿ ಪೆಟ್ರೋಲಿಯಂ ಕಂಪನಿಗಳು ವಿವಿಧ ವಿಮಾ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತವೆ.
ಇದನ್ನೂ ಓದಿ: ಮದುವೆಗೂ ಇದೆ ವಿಮಾ ಸುರಕ್ಷೆ; ವೆಡ್ಡಿಂಗ್ ಇನ್ಷೂರೆನ್ಸ್ ಪಾಲಿಸಿಯಲ್ಲಿ ಏನೇನು ಕವರೇಜ್ ಇರುತ್ತದೆ?
ಯಾವ್ಯಾವ ಹಾನಿಗೆ ಎಷ್ಟೆಷ್ಟು ಪರಿಹಾರ?
ಎಲ್ಪಿಜಿ ಸಿಲಿಂಡರ್ ಅಪಘಾತ ಘಟನೆಯಲ್ಲಿ ಯಾವುದಾದರೂ ಆಸ್ತಿಗೆ ಹಾನಿಯಾದರೆ ಗರಿಷ್ಠ 2 ಲಕ್ಷ ರೂವರೆಗೆ ಹಣ ಕ್ಲೈಮ್ ಮಾಡಬಹುದು. ಸಾವಾದರೆ, ಒಬ್ಬ ವ್ಯಕ್ತಿಗೆ 6 ಲಕ್ಷ ರೂ ವಿಮಾ ಪರಿಹಾರ ಸಿಗುತ್ತದೆ. ಗಾಯವಾದರೆ ಒಬ್ಬ ವ್ಯಕ್ತಿಗೆ 2 ಲಕ್ಷ ರೂವರೆಗೆ ಪರಿಹಾರ ಕೊಡಲಾಗುತ್ತದೆ.
ಎಲ್ಪಿಜಿ ಆಕ್ಸಿಡೆಂಟ್ ವಿಮೆ ಕ್ಲೈಮ್ ಮಾಡುವುದು ಹೇಗೆ?
ಅಕಸ್ಮಾತ್ ಗ್ಯಾಸ್ ಸ್ಫೋಟ ದುರಂತ ಸಂಭವಿಸಿ ಅನಾಹುತವಾಗಿ ಬಿಟ್ಟರೆ ಇನ್ಷೂರೆನ್ಸ್ ಕಂಪನಿಯನ್ನು ಸಂಪರ್ಕಿಸುವ ಅಗತ್ಯ ಇರುವುದಿಲ್ಲ. ಆದರೆ, ಸಮೀಪದ ಪೊಲೀಸ್ ಸ್ಟೇಷನ್ ಮತ್ತು ಎಲ್ಪಿಜಿ ಡಿಸ್ಟ್ರಿಬ್ಯೂಟರ್ಗೆ ಮಾಹಿತಿ ನೀಡಬೇಕು.
ಪೊಲೀಸ್ ಸ್ಟೇಷನ್ನಲ್ಲಿ ದೂರು ನೀಡಿದ ಪ್ರತಿಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ನೀವು ಎಲ್ಪಿಜಿ ಡಿಸ್ಟ್ರಿಬ್ಯೂಟರ್ಗೆ ಮಾಹಿತಿ ನೀಡಿದ ಬಳಿಕ ಅದು ಸಂಬಂಧಿತ ಇನ್ಷೂರೆನ್ಸ್ ಕಂಪನಿಗೆ ಮಾಹಿತಿ ತಲುಪುತ್ತದೆ. ಆ ಸಂಸ್ಥೆಯ ಪ್ರತಿನಿಧಿಗಳು ಬಂದು ತನಿಖೆ ನಡೆಸುತ್ತಾರೆ.
ಇದನ್ನೂ ಓದಿ: Jeevan Utsav: ಎಲ್ಐಸಿಯಿಂದ ಇಂದು ಹೊಸ ಜೀವನ್ ಉತ್ಸವ್ ಪಾಲಿಸಿ ಬಿಡುಗಡೆ; ಇದರ ವಿಶೇಷತೆಗಳೇನು?
ಅಪಘಾತ ಘಟನೆ ನಡೆದಿರುವುದು ನಿಜವೆಂದು ದೃಢಪಟ್ಟ ಬಳಿಕ ಕ್ಲೈಮ್ ಪ್ರಕ್ರಿಯೆ ಚಾಲನೆಗೊಳ್ಳುತ್ತದೆ.
ಪೊಲೀಸ್ ದೂರಿನ ಪ್ರತಿ, ಗಾಯಗೊಂಡಿದ್ದರೆ ಚಿಕಿತ್ಸಾ ವೆಚ್ಚದ ದಾಖಲೆಗಳು, ಮೃತಪಟ್ಟಿದ್ದರೆ ಡೆತ್ ಸರ್ಟಿಫಿಕೇಟ್ ಅಥವಾ ಪೋಸ್ಟ್ ಮಾರ್ಟಮ್ ರಿಪೋರ್ಟ್ನ ಪ್ರತಿ ಇವೆಲ್ಲಾ ದಾಖಲೆಗಳನ್ನು ಇನ್ಷೂರೆನ್ಸ್ ಕಂಪನಿಗೆ ಒದಗಿಸಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ