ಮದುವೆಗೂ ಇದೆ ವಿಮಾ ಸುರಕ್ಷೆ; ವೆಡ್ಡಿಂಗ್ ಇನ್ಷೂರೆನ್ಸ್ ಪಾಲಿಸಿಯಲ್ಲಿ ಏನೇನು ಕವರೇಜ್ ಇರುತ್ತದೆ?

Wedding Insurance: ಲಕ್ಷಾಂತರ ರೂ ವೆಚ್ಚವಾಗುವ ಮದುವೆ ದಿಢೀರ್ ನಿಂತು ಹೋದರೆ ಒಬ್ಬ ವ್ಯಕ್ತಿಗೆ ಭಾರೀ ನಷ್ಟ ಆಗುತ್ತದೆ. ಮದುವೆ ಹಾಲ್​ಗೆ ಕೊಟ್ಟಿದ್ದ ಅಡ್ವಾನ್ಸ್, ಅಡುಗೆ ಮತ್ತಿತರ ಸರ್ವಿಸ್​ಗೆ ಕೊಟ್ಟ ಅಡ್ವಾನ್ಸ್ ಇವೆಲ್ಲವೂ ನಷ್ಟವಾಗುತ್ತದೆ. ಇದನ್ನು ಭರಿಸಲು ವಿವಾಹ ವಿಮೆಗಳು ಅಸ್ತಿತ್ವದಲ್ಲಿವೆ. ಮದುವೆಗೆ ಏಳು ದಿನ ಮುಂಚಿನಿಂದಲೇ ವಿಮಾ ಕವರೇಜ್ ಇರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ...

ಮದುವೆಗೂ ಇದೆ ವಿಮಾ ಸುರಕ್ಷೆ; ವೆಡ್ಡಿಂಗ್  ಇನ್ಷೂರೆನ್ಸ್ ಪಾಲಿಸಿಯಲ್ಲಿ ಏನೇನು ಕವರೇಜ್ ಇರುತ್ತದೆ?
ವಿವಾಹ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 24, 2023 | 1:06 PM

ಇದೀಗ ವೈವಾಹಿಕ ಸೀಸನ್. ಸಾಕಷ್ಟು ಮದುವೆಗಳು ನಡೆಯುತ್ತವೆ. ಮನೆ ಕಟ್ಟಿ ನೋಡು, ಮದುವೆ ಮಾಡಿ ಎಂದು ಹಿರಿಯರು ಅನುಭವ ಮಾತನ್ನು ಹೇಳಿರುವುದು ಸುಮ್ಮನೆ ಅಲ್ಲ. ಮದುವೆ ಯಾವುದೇ ವ್ಯಕ್ತಿಯ ಬಾಳಿನಲ್ಲಿ ಪ್ರಮುಖ ಘಟ್ಟ ಎಂಬುದು ಎಷ್ಟು ನಿಜವೋ ಹಾಗೆಯೇ, ವಿವಾಹ ಕಾರ್ಯಕ್ರಮದ ಖರ್ಚೂ ಕೂಡ ವ್ಯಕ್ತಿಯ ಜೀವನದ ಪ್ರಮುಖ ವೆಚ್ಚ ಎಂಬುದೂ ಸತ್ಯ. ಸಾಕಷ್ಟು ಖರ್ಚುಗಳನ್ನು ಮಾಡಿ ಮದುವೆ ಕಾರ್ಯಕ್ರಮ ಆಯೋಜಿಸುತ್ತೇವೆ. ಒಬ್ಬ ಸಾಮಾನ್ಯ ಮಧ್ಯಮವರ್ಗದ ವ್ಯಕ್ತಿ ಇವತ್ತು ಮದುವೆ ಸಮಾರಂಭಕ್ಕೆ (wedding function) 10 ಲಕ್ಷಕ್ಕೂ ಹೆಚ್ಚು ಖರ್ಚು ಮಾಡುತ್ತಾರೆ. ಹೀಗಿರುವಾಗ ಮದುವೆ ದಿಢೀರನೇ ಮುರಿದುಬಿದ್ದರೆ, ಅಥವಾ ಮುಂದೂಡಿಕೆ ಆದರೆ ಲಕ್ಷಾಂತರ ಹಣ ನಷ್ಟ ಆಗಿಬಿಡಬಹುದು. ಇಂಥ ನಷ್ಟಗಳನ್ನು ಭರಿಸಿಕೊಡಲು ಈಗ ಮದುವೆಗೂ ಇನ್ಷೂರೆನ್ಸ್ ಪಾಲಿಸಿಗಳು (wedding insurance) ಬಂದಿವೆ. ಈ ವಿವಾಹ ವಿಮೆ ಯಾವ್ಯಾವೆಲ್ಲಾ ಅವಘಡಗಳನ್ನು ಕವರ್ ಮಾಡಲು ಸಾಧ್ಯ? ಒಂದಷ್ಟು ಮೂಲಭೂತ ವಿವರ ಇಲ್ಲಿದೆ…

ವಿವಾಹ ವಿಮೆ ಯಾವುದನ್ನೆಲ್ಲಾ ಕವರ್ ಮಾಡುತ್ತದೆ?

ಮದುವೆ ಕಾರ್ಯಕ್ರಮ ನಿಗದಿಯಾದ ದಿನಕ್ಕೆ ಒಂದು ವಾರ ಮುಂಚಿನಿಂದ ವಿವಾಹ ವಿಮೆ ಕವರೇಜ್ ಆರಂಭವಾಗುತ್ತದೆ. ಈ ಕೆಳಗಿನ ಕೆಲ ಸಂಗತಿಗಳು ವಿಮಾ ಕವರೇಜ್ ವ್ಯಾಪ್ತಿಗೆ ಸೇರುತ್ತವೆ:

  • ನೈಸರ್ಗಿಕ ವಿಕೋಪ, ಕಟ್ಟಡಕ್ಕೆ ಹಾನಿ, ಕಳ್ಳತನ, ದರೋಡೆ ಇತ್ಯಾದಿ ಅನಿರೀಕ್ಷಿತ ಕಾರಣಕ್ಕೆ ಮದುವೆ ರದ್ದಾದರೆ ಅಥವಾ ಮುಂದೂಡಿಕೆ ಆದರೆ ವಿವಾಹ ವಿಮೆಯಲ್ಲಿ ಕ್ಲೈಮ್ ಮಾಡಬಹುದು. ಕಾರ್ಡ್ ಮುದ್ರಣ ವೆಚ್ಚ, ವಿವಿಧ ಸೇವೆಗಳಿಗೆ ಕೊಟ್ಟಿರುವ ಮುಂಗಡ ಹಣ, ಪ್ರಯಾಣಕ್ಕೆ ಬುಕ್ ಮಾಡಿದ್ದ ಟಿಕೆಟ್ ಹಣವನ್ನು ವಿಮಾ ಸಂಸ್ಥೆ ಭರಿಸುತ್ತದೆ.
  • ಭೂಕಂಪ ಇತ್ಯಾದಿ ವಿಕೋಪಗಳು, ಕಳ್ಳತನ ಮೊದಲಾದ ಕಾರಣದಿಂದ ಮದುವೆ ಸ್ಥಳದ ಡೆಕೋರೇಶನ್​ಗೆ ಹಾನಿಯಾಗಿದ್ದರೆ, ಒಡವೆ ಕಳುವಾದರೆ, ಅಥವಾ ಪಟ್ಟಿ ಮಾಡಿದ್ದ ವಸ್ತುಗಳ ಪೈಕಿ ಯಾವುದಾದರೂ ಕಳೆದುಹೋಗಿದ್ದರೆ ಆ ನಷ್ಟವನ್ನು ಭರಿಸಲಾಗುತ್ತದೆ.
  • ಥರ್ಡ್ ಪಾರ್ಟಿಗಳಿಗೆ ಅಪಘಾತ, ಗಾಯವಾದರೆ ವಿಮಾ ಕವರೇಜ್ ಇರುತ್ತದೆ.
  • ಮದುವೆ ಕಾರ್ಯಕ್ರಮದ ವೇಳೆ ಅಪಘಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಬೇಕಿದ್ದರೆ ಆ ವೆಚ್ಚವನ್ನೂ ವಿಮಾ ಕಂಪನಿ ಭರಿಸುತ್ತದೆ.

ಇದನ್ನೂ ಓದಿ: ಇನ್ಷೂರೆನ್ಸ್ ಪಾಲಿಸಿಗೆ ನಾಮಿನಿ ಎಷ್ಟು ಮುಖ್ಯ? ನಾಮಿನಿ ಹೆಸರು ಬದಲಿಸಲು ಸಾಧ್ಯವೇ? ಇಲ್ಲಿದೆ ಡೀಟೇಲ್ಸ್

ಯಾವ್ಯಾವುದಕ್ಕೆಲ್ಲಾ ವಿಮಾ ಕವರೇಜ್ ಇರುವುದಿಲ್ಲ?

  • ವಧು ಅಥವಾ ವರ ಓಡಿ ಹೋಗಿ ಅಥವಾ ಅಪಹರಣವಾಗಿ ಮದುವೆ ನಿಂತರೆ ವಿಮಾ ಕವರೇಜ್ ಇರುವುದಿಲ್ಲ.
  • ಭಯೋತ್ಪಾದನೆ ಇತ್ಯಾದಿ ಕಾರಣಕ್ಕೆ ಮದುವೆ ಮುಂದೂಡಿಕೆ ಆದರೂ ಕವರೇಜ್ ಇರುವುದಿಲ್ಲ.
  • ಫ್ಲೈಟ್ ವಿಳಂಬವಾದ ಕಾರಣ
  • ನಿರ್ಲಕ್ಷ್ಯತನದಿಂದ ಕಟ್ಟಡಕ್ಕೆ ಹಾನಿಯಾದರೆ
  • ಕಟ್ಟಡ ಹಳೆಯದ್ದಾಗಿದ್ದರೆ ವಿವಾಹ ವಿಮೆಯ ಕವರೇಜ್​ಗೆ ಬರುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ