Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಷೂರೆನ್ಸ್ ಪಾಲಿಸಿಗೆ ನಾಮಿನಿ ಎಷ್ಟು ಮುಖ್ಯ? ನಾಮಿನಿ ಹೆಸರು ಬದಲಿಸಲು ಸಾಧ್ಯವೇ? ಇಲ್ಲಿದೆ ಡೀಟೇಲ್ಸ್

Changing Nominees in Term Insurance: ವಿಮಾ ಯೋಜನೆಯಲ್ಲಿ ಒಂದು ವೇಳೆ ನೀವು ನಾಮಿನಿ ಹೆಸರಿಸದೇ ನಿಧನ ಹೊಂದಿದರೆ ನಿಮ್ಮ ಕುಟುಂಬದ ಬೇರೆ ಬೇರೆ ಸದಸ್ಯರು ಹಣಕ್ಕಾಗಿ ಕ್ಲೈಮ್ ಮಾಡಲು ಮುಂದಾಗಬಹುದು. ಇದನ್ನು ತಪ್ಪಿಸಲು ನೀವು ನಾಮಿನಿಯನ್ನು ನಿರ್ದಿಷ್ಟಪಡಿಸಿದರೆ ಅನುಕೂಲವಾಗುತ್ತದೆ. ನೀವು ವಿಮಾ ಯೋಜನೆ ಅವಧಿಯ ಯಾವುದೇ ಸಮಯದಲ್ಲೂ ನಾಮಿನಿಯನ್ನು ಬದಲಿಸಬಹುದು. ನಿಮ್ಮಿಷ್ಟದ ಇನ್ನೊಬ್ಬರನ್ನು ನಾಮಿನಿಯಾಗಿ ಆಯ್ಕೆ ಮಾಡಬಹುದು.

ಇನ್ಷೂರೆನ್ಸ್ ಪಾಲಿಸಿಗೆ ನಾಮಿನಿ ಎಷ್ಟು ಮುಖ್ಯ? ನಾಮಿನಿ ಹೆಸರು ಬದಲಿಸಲು ಸಾಧ್ಯವೇ? ಇಲ್ಲಿದೆ ಡೀಟೇಲ್ಸ್
ಇನ್ಷೂರೆನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 07, 2023 | 12:35 PM

ಯಾವುದೇ ಹಣಕಾಸು ಸ್ಕೀಮ್​ನಲ್ಲೂ ನಾಮಿನಿ ಹೆಸರಿಸುವ ಆಯ್ಕೆ ಇರುತ್ತದೆ. ತಮ್ಮ ನಿಧನದ ನಂತರ ಯಾರಿಗೆ ಹಣ ಅಥವಾ ಲಾಭ ವರ್ಗಾವಣೆ ಆಗಬೇಕು ಎಂದು ನಿರ್ದಿಷ್ಟಪಡಿಸಲು ನಾಮಿನಿ ಬೇಕು. ಅಂತೆಯೇ ಬ್ಯಾಂಕ್ ಖಾತೆಗೂ ನಾಮಿನಿ (nominee) ಹೆಸರಿಸಲು ಕೇಳಲಾಗುತ್ತದೆ. ನಿಧನದ ಬಳಿಕ ಬ್ಯಾಂಕ್ ಖಾತೆಯಲ್ಲಿರುವ ಹಣಕ್ಕೆ ವಾರಸುದಾರರು ಇರಬೇಕೆಂದು ನಾಮಿನಿ ಕೇಳಲಾಗುತ್ತದೆ. ಮ್ಯುಚುವಲ್ ಫಂಡ್, ಎಫ್​ಡಿ, ಇನ್ಷೂರೆನ್ಸ್ ಇತ್ಯಾದಿ ಯಾವುದೇ ಯೋಜನೆಗೂ ನಾಮಿನಿ ಎಂಬ ಆಯ್ಕೆ ಇರುತ್ತದೆ.

ವಿಮಾ ಯೋಜನೆಯಲ್ಲಿ ಒಂದು ವೇಳೆ ನೀವು ನಾಮಿನಿ ಹೆಸರಿಸದೇ ನಿಧನ ಹೊಂದಿದರೆ ನಿಮ್ಮ ಕುಟುಂಬದ ಬೇರೆ ಬೇರೆ ಸದಸ್ಯರು ಹಣಕ್ಕಾಗಿ ಕ್ಲೈಮ್ ಮಾಡಲು ಮುಂದಾಗಬಹುದು. ಇದನ್ನು ತಪ್ಪಿಸಲು ನೀವು ನಾಮಿನಿಯನ್ನು ನಿರ್ದಿಷ್ಟಪಡಿಸಿದರೆ ಅನುಕೂಲವಾಗುತ್ತದೆ.

ಹಾಗೆಯೇ, ಒಮ್ಮೆ ನಾಮಿನಿ ಹೆಸರಿಸಿದರೆ ಅದೇ ಖಾಯಂ ಆಗಬೇಕೆಂದಿಲ್ಲ. ನಾಮಿನಿ ನಿಧನ ಹೊಂದಿರಬಹುದು, ಅಥವಾ ನಿಮ್ಮನ್ನು ತೊರೆದು ಹೋಗಿರಬಹುದು, ಹೀಗೆ ಬೇರೆ ಬೇರೆ ಕಾರಣಕ್ಕೆ ನಾಮಿನಿಯನ್ನು ನೀವು ಬದಲಾಯಿಸಲು ಬಯಸಬಹುದು. ನೀವು ವಿಮಾ ಯೋಜನೆ ಅವಧಿಯ ಯಾವುದೇ ಸಮಯದಲ್ಲೂ ನಾಮಿನಿಯನ್ನು ಬದಲಿಸಬಹುದು. ನಿಮ್ಮಿಷ್ಟದ ಇನ್ನೊಬ್ಬರನ್ನು ನಾಮಿನಿಯಾಗಿ ಆಯ್ಕೆ ಮಾಡಬಹುದು.

ಇದನ್ನೂ ಓದಿ: ಭಾರತೀಯರು ಎಂಥ ಅಪಾಯದಲ್ಲಿದ್ದಾರೆ ಗೊತ್ತಾ? ಬರ್ಬಾದ್ ಆಗಲು ಈ ಒಂದೇ ದುರ್ಘಟನೆ ಸಾಕು ಎನ್ನುತ್ತಾರೆ ನಿತಿನ್ ಕಾಮತ್; ಏನಿದು ಎಚ್ಚರಿಕೆಯ ಕರೆಗಂಟೆ?

ಇನ್ಷೂರೆನ್ಸ್ ಸ್ಕೀಮ್​ನಲ್ಲಿ ನಾಮಿನಿ ಹೆಸರನ್ನು ಬದಲಿಸುವ ಕ್ರಮಗಳು

  • ಇನ್ಷೂರೆನ್ಸ್ ಕಂಪನಿಯ ವೆಬ್​​ಸೈಟ್​ನಲ್ಲಿ ಅಥವಾ ಅದರ ಕಚೇರಿಯಲ್ಲಿ ನಾಮಿನೇಶನ್ ಬದಲಿಸುವ ಫಾರ್ಮ್ ಪಡೆಯಬೇಕು.
  • ಈ ಅರ್ಜಿಯನ್ನು ಭರ್ತಿ ಮಾಡಿ, ಪಾಲಿಸಿ ದಾಖಲೆಗಳ ಸಮೇತ ಸಲ್ಲಿಸಬೇಕು.
  • ಹೊಸ ನಾಮಿನಿಗೂ ತಮಗೂ ಇರುವ ಸಂಬಂಧವನ್ನು ನಿರ್ದಿಷ್ಟಪಡಿಸಬೇಕು. ಸಕಾರಣ ಎನಿಸಿದರೆ ಇನ್ಷೂರೆನ್ಸ್ ಕಂಪನಿ ನಾಮಿನಿ ವಿವರವನ್ನು ಸ್ವೀಕರಿಸುತ್ತದೆ.

ನಾಮಿನಿ ಬದಲಾವಣೆ ಆಗಿದ್ದಕ್ಕೆ ಇನ್ಷೂರೆನ್ಸ್ ಕಂಪನಿ ನಿಮಗೆ ಅಕ್ನಾಲೆಜ್ಮೆಂಟ್ ಕೊಡಬೇಕು. ಅದು ಬಹಳ ಮುಖ್ಯ. ಆ ದಾಖಲೆಯನ್ನು ನೀವು ಇನ್ಷೂರೆನ್ಸ್ ದಾಖಲೆಯೊಂದಿಗೆ ಇಟ್ಟುಕೊಳ್ಳಬೇಕು. ನಿಮ್ಮ ನಾಮಿನಿಯು ಇನ್ಷೂರೆನ್ಸ್ ಕ್ಲೈಮ್ ಮಾಡುವಾಗ ಈ ದಾಖಲೆ ಸಹಾಯಕ್ಕೆ ಬರುತ್ತದೆ.

ಇದನ್ನೂ ಓದಿ: ನಾಮಿನಿಗೆ ವಿಮಾ ಹಣ ಕೊಡದ ಖಾಸಗಿ ವಿಮಾ ಕಂಪನಿಗೆ, 10 ಲಕ್ಷ ರೂ ದಂಡ ವಿಧಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ

ನಾಮಿನಿ ಹೆಸರಿಸುವಾಗ ಈ ಅಂಶಗಳು ತಿಳಿದಿರಲಿ

  • ನಿಮ್ಮ ಕುಟುಂಬ ಸದಸ್ಯರನ್ನು ನಾಮಿನಿಯಾಗಿ ಆಯ್ಕೆ ಮಾಡಬಹುದು. ದೂರದ ಸಂಬಂಧಿಗಳನ್ನೂ ಬೇಕಾದರೆ ನಾಮಿನಿ ಮಾಡಬಹುದು.
  • ಎಷ್ಟು ಬಾರಿ ಬೇಕಾದರೂ ನಾಮಿನಿ ಹೆಸರು ಬದಲಿಸಬಹುದು.
  • ಒಬ್ಬರಿಗಿಂತ ಹೆಚ್ಚು ಮಂದಿಯನ್ನು ನಾಮಿನಿ ಮಾಡಬಹುದು. ಅವರಿಗೆ ನಿರ್ದಿಷ್ಟ ಪ್ರಮಾಣದ ಹಣ ಸಂದಾಯ ಆಗಬೇಕೆಂದು ನಮೂದಿಸಬಹುದು.
  • ನಾಮಿನಿ ಇನ್ನೂ ಅಪ್ರಾಪ್ತರಾಗಿದ್ದರೆ ಅಪಾಯಿಂಟೀ ಅನ್ನು ಆಯ್ಕೆ ಮಾಡಬೇಕು. ನೀವು ನಿಧನ ಹೊಂದಿದಾಗ ನಾಮಿನಿ ಇನ್ನೂ ಅಪ್ರಾಪ್ತ ವಯಸ್ಸಿನಲ್ಲೇ ಇದ್ದರೆ ಆಗ ಅಪಾಯಿಂಟೀ ಆದವರು ಹಣ ಕ್ಲೈಮ್ ಮಾಡಿ, ಅದನ್ನು ನಾಮಿನಿಗೆ ಹಸ್ತಾಂತರಿಸಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ