ಬಡ್ಡಿದರ, ಇಎಂಐ, ದಂಡ ಎಷ್ಟು? ಬ್ಯಾಂಕ್​ನಲ್ಲಿ ವೈಯಕ್ತಿಕ ಸಾಲ ಪಡೆಯುವ ವಿಚಾರಿಸಬೇಕಾದ ಸಂಗತಿಗಳು

Personal Loan Tips:ತುರ್ತಾಗಿ ಹಣದ ಅವಶ್ಯಕತೆ ಇದ್ದರೆ ಪರ್ಸನಲ್ ಲೋನ್ ಉಪಯುಕ್ತ. ಆದರೆ, ಈ ವೈಯಕ್ತಿಕ ಸಾಲ ಪಡೆಯುವ ಮುನ್ನ ಕೆಲವಿಷ್ಟು ವಿಚಾರಗಳನ್ನು ಮೊದಲೇ ತಿಳಿದುಕೊಂಡಿರುವುದು ಉತ್ತಮ. ನೀವು ಸಾಲ ತೆಗೆದುಕೊಳ್ಳುವಾಗ ಯಾವುದೇ ಅನುಮಾನ ಇದ್ದರೂ ಬ್ಯಾಂಕ್​ನವರಲ್ಲಿ ಕೇಳಿ ಬಗೆಹರಿಸಿಕೊಳ್ಳಿ. ಈ ಕೆಲ ಪ್ರಶ್ನೆಗಳನ್ನು ತಪ್ಪದೇ ಕೇಳಿ.

ಬಡ್ಡಿದರ, ಇಎಂಐ, ದಂಡ ಎಷ್ಟು? ಬ್ಯಾಂಕ್​ನಲ್ಲಿ ವೈಯಕ್ತಿಕ ಸಾಲ ಪಡೆಯುವ ವಿಚಾರಿಸಬೇಕಾದ ಸಂಗತಿಗಳು
ಪರ್ಸನಲ್ ಲೋನ್
Follow us
|

Updated on: Nov 07, 2023 | 2:45 PM

ಬ್ಯಾಂಕುಗಳಲ್ಲಿ ಅತಿಹೆಚ್ಚು ತೆಗೆದುಕೊಳ್ಳಲಾಗುವ ಸಾಲವೆಂದರೆ ಅದು ಪರ್ಸನಲ್ ಲೋನ್. ಗೃಹಸಾಲಕ್ಕೆ ಹೋಲಿಸಿದರೆ ಇದಕ್ಕೆ ಬಡ್ಡಿದರ (interest rate) ಹೆಚ್ಚು. ಆದರೆ, ಸಾಲ ಕೊಡಲಾಗುವ ಪ್ರಕ್ರಿಯೆ ತುಸು ಸರಳ. ತುರ್ತಾಗಿ ಹಣದ ಅವಶ್ಯಕತೆ ಇದ್ದರೆ ಪರ್ಸನಲ್ ಲೋನ್ (personal loan) ಉಪಯುಕ್ತ. ಆದರೆ, ಈ ವೈಯಕ್ತಿಕ ಸಾಲ ಪಡೆಯುವ ಮುನ್ನ ಕೆಲವಿಷ್ಟು ವಿಚಾರಗಳನ್ನು ಮೊದಲೇ ತಿಳಿದುಕೊಂಡಿರುವುದು ಉತ್ತಮ. ನೀವು ಸಾಲ ತೆಗೆದುಕೊಳ್ಳುವಾಗ ಯಾವುದೇ ಅನುಮಾನ ಇದ್ದರೂ ಬ್ಯಾಂಕ್​ನವರಲ್ಲಿ ಕೇಳಿ ಬಗೆಹರಿಸಿಕೊಳ್ಳಿ. ಈ ಕೆಲ ಪ್ರಶ್ನೆಗಳನ್ನು ತಪ್ಪದೇ ಕೇಳಿ.

ಪರ್ಸನಲ್ ಲೋನ್​ನ ಬಡ್ಡಿದರ

ಕೆಲ ಬ್ಯಾಂಕುಗಳಲ್ಲಿ ವೈಯಕ್ತಿಕ ಸಾಲಕ್ಕೆ ಹೆಚ್ಚು ಬಡ್ಡಿದರ ವಿಧಿಸುತ್ತವೆ. ಆದ್ದರಿಂದ ಮೊದಲು ಬಡ್ಡಿದರ ಎಷ್ಟೆಂದು ವಿಚಾರಿಸಿ.

ಕೆಲ ಬ್ಯಾಂಕುಗಳು ಪರ್ಸನಲ್ ಲೋನ್​ಗೆ ಅತಿಕಡಿಮೆ ಬಡ್ಡಿ ವಿಧಿಸುತ್ತವಾದರೂ ಅದಕ್ಕೆ ಷರತ್ತುಗಳಿರುತ್ತವೆ. ಆ ಷರತ್ತು ಏನೆಂದು ಕೇಳಿ.

ಇದನ್ನೂ ಓದಿ: ಯುಪಿಐನಲ್ಲಿ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಫೀಚರ್; ಪ್ರಯೋಜನಗಳೇನು? ಅನನುಕೂಲಗಳೇನು?

ನಿಮ್ಮ ಕ್ರೆಡಿಟ್ ಸ್ಕೋರ್, ಆದಾಯ ಉತ್ತಮವಾಗಿದ್ದರೆ ಪರ್ಸನಲ್ ಲೋನ್ ಸುಲಭವಾಗಿ ಸಿಗುತ್ತದೆ. ಬಡ್ಡಿಯೂ ಕಡಿಮೆ ಇರುತ್ತದೆ. ಈ ವಿಚಾರ ಮೊದಲೇ ತಿಳಿದಿರಲಿ. ಆದ್ದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಯಾವತ್ತೂ ಹಾಳುಮಾಡಿಕೊಳ್ಳದಂತೆ ಎಚ್ಚರ ವಹಿಸಿ.

ಸಾಲದ ಅವಧಿ ಎಷ್ಟೆಂದು ಕೇಳಿ

ವೈಯಕ್ತಿಕ ಸಾಲ ಪಡೆಯುವಾಗ ಬಹಳಷ್ಟು ಬ್ಯಾಂಕುಗಳು ತಾವೇ ಇಎಂಐಗಳನ್ನು ಫಿಕ್ಸ್ ಮಾಡಿಬಿಡುತ್ತವೆ. ನೀವು ಇಎಂಐ ಆಯ್ಕೆ ಬಗ್ಗೆ ವಿಚಾರಿಸಬೇಕು. ನೀವು ಎರಡು ವರ್ಷದಲ್ಲಿ ಸಾಲ ತೀರಿಸಬೇಕೆಂದಿದ್ದರೆ ಅದಕ್ಕೆ ತಕ್ಕಂತೆ ಇಎಂಐ ಅನ್ನು ಬ್ಯಾಂಕ್ ನಿಗದಿ ಮಾಡಬಹುದು. ಅಥವಾ ನೀವು ಗರಿಷ್ಠ ಇಂತಿಷ್ಟು ಇಎಂಐ ಮಾತ್ರ ಕಟ್ಟಬಲ್ಲೆನೆಂದರೆ ಅದಕ್ಕೆ ತಕ್ಕಂತೆ ಸಾಲದ ಅವಧಿಯನ್ನು ಹೆಚ್ಚಿಸಬಹುದು. ಈ ಅವಕಾಶ ಇದೆಯಾ ಎಂದು ಬ್ಯಾಂಕ್ ಅನ್ನು ಕೇಳಿ.

ಇದನ್ನೂ ಓದಿ: RML: ವಯಸ್ಸಾದವರಿಗೊಂದು ಹಣಕಾಸು ಅಸ್ತ್ರ; ಮನೆಪತ್ರ ಅಡ ಇಟ್ಟು ಹಣ ಪಡೆಯಿರಿ, ಸಾಯುವವರೆಗೂ ಮನೆಮಾಲೀಕರಾಗಿರಿ

ಶುಲ್ಕ ಮತ್ತು ದಂಡ ಇತ್ಯಾದಿ…

ನೀವು ಸಾಲವನ್ನು ಮುಂಚಿತವಾಗಿ ತೀರಿಸುವುದಾದರೆ ಪ್ರೀಕ್ಲೋಶರ್ ಶುಲ್ಕ ಪಾವತಿಸಬೇಕಾಗಬಹುದು. ಕೆಲ ಬ್ಯಾಂಕುಗಳು ಯಾವುದೇ ಶುಲ್ಕ ವಿಧಿಸುವುದಿಲ್ಲ. ಈ ಅಂಶವನ್ನು ವಿಚಾರಿಸಿ.

ಹಾಗೆಯೇ, ಇಎಂಐ ಅನ್ನು ನೀವು ಕಟ್ಟದೇ ಹೋದರೆ ಅಥವಾ ತಡವಾಗಿ ಕಟ್ಟಿದರೆ ಏನಾಗುತ್ತದೆ, ಎಷ್ಟು ದಂಡ ಬೀಳುತ್ತದೆ ಎಂಬುದನ್ನೂ ಕೇಳಿರಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ