ಯುಪಿಐನಲ್ಲಿ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಫೀಚರ್; ಪ್ರಯೋಜನಗಳೇನು? ಅನನುಕೂಲಗಳೇನು?
Linking Credit Card To UPI: ಯುಪಿಐಗೆ ಕ್ರೆಡಿಟ್ ಕಾರ್ಡನ್ನೂ ಈಗ ಸೇರಿಸಲು ಅವಕಾಶ ಇದೆ. ಮೊದಲಾದರೆ ಬ್ಯಾಂಕ್ ಅಕೌಂಟ್ ಮತ್ತು ಡೆಬಿಟ್ ಕಾರ್ಡನ್ನು ಯುಪಿಐಗೆ ಲಿಂಕ್ ಮಾಡಬಹುದಿತ್ತು. ಈಗ ಕ್ರೆಡಿಟ್ ಕಾರ್ಡ್ ಬಳಕೆಗೆ ಆರ್ಬಿಐ ಅನುಮತಿಸಿದೆ. ಯುಪಿಐನಲ್ಲಿ ಕ್ರೆಡಿಟ್ ಕಾರ್ಡ್ ಬಳಕೆಯ ಸಾಧಕ ಬಾಧಕಗಳೇನು ಎಂದು ತಿಳಿಯುವುದು ಮುಖ್ಯ.
ರಾಷ್ಟ್ರೀಯ ಪಾವತಿ ನಿಗಮ (NPCI) ರೂಪಿಸಿರುವ ಯುಪಿಐ ಎಂಬ ಡಿಜಿಟಲ್ ಪಾವತಿ ವ್ಯವಸ್ಥೆ (digital payment system) ನಿರಂತರವಾಗಿ ಸುಧಾರಣೆಗಳನ್ನು ಕಾಣುತ್ತಿದೆ. ಕಾಲ ಕಾಲಕ್ಕೆ ಹೊಸ ಫೀಚರ್ಗಳನ್ನು ಸೇರಿಸುತ್ತಿದೆ. ಬ್ಯಾಂಕುಗಳು ನಿಮಗೆ ಯುಪಿಐನಲ್ಲಿ ಕ್ರೆಡಿಟ್ ಲಿಮಿಟ್ ಕೂಡ ಕೊಡುತ್ತವೆ. ಅದು ಹೊಸ ಫೀಚರ್. ಇದಲ್ಲದೇ, ಯುಪಿಐಗೆ ಕ್ರೆಡಿಟ್ ಕಾರ್ಡನ್ನೂ ಈಗ ಸೇರಿಸಲು ಅವಕಾಶ ಇದೆ. ಮೊದಲಾದರೆ ಬ್ಯಾಂಕ್ ಅಕೌಂಟ್ ಮತ್ತು ಡೆಬಿಟ್ ಕಾರ್ಡನ್ನು ಯುಪಿಐಗೆ ಲಿಂಕ್ ಮಾಡಬಹುದಿತ್ತು. ಈಗ ಕ್ರೆಡಿಟ್ ಕಾರ್ಡ್ ಬಳಕೆಗೆ ಆರ್ಬಿಐ ಅನುಮತಿಸಿದೆ. ಯುಪಿಐನಲ್ಲಿ ಕ್ರೆಡಿಟ್ ಕಾರ್ಡ್ ಬಳಕೆಯ ಸಾಧಕ ಬಾಧಕಗಳೇನು ಎಂದು ತಿಳಿಯುವುದು ಮುಖ್ಯ.
ಯುಪಿಐಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವುದರಿಂದ ಅನುಕೂಲಗಳೇನು?
- ಯುಪಿಐಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವುದರಿಂದ ನೀವು ಪ್ರತ್ಯೇಕವಾಗಿ ಕ್ರೆಡಿಟ್ ಕಾರ್ಡ್ ಕೊಂಡೊಯ್ಯುವ ಪ್ರಮೇಯ ತಪ್ಪುತ್ತದೆ.
- ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದಾಗ ಕ್ರೆಡಿಟ್ ಕಾರ್ಡ್ ಮೂಲಕ ಹಣ ವಹಿವಾಟು ನಡೆಸಬಹುದು.
- ಯುಪಿಐ ಪಾವತಿ ವ್ಯವಸ್ಥೆ ಇನ್ನಷ್ಟು ಸುಲಭವಾಗುತ್ತದೆ.
- ಕ್ರೆಡಿಟ್ ಕಾರ್ಡ್ ಕಂಪನಿಗಳಿಂದ ಡಿಸ್ಕೌಂಟ್, ರಿವಾರ್ಡ್ ಇತ್ಯಾದಿ ಲಭ್ಯವಾಗುತ್ತದೆ.
ಇದನ್ನೂ ಓದಿ: Tech Tips: ನೀವು ಯುಪಿಐ ಬಳಸುತ್ತಿದ್ದರೆ ಈ ವಿಷಯ ನೆನಪಿನಲ್ಲಿಡಿ: ಸಣ್ಣ ತಪ್ಪು ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು
ಕ್ರೆಡಿಟ್ ಕಾರ್ಡ್ ಅನನುಕೂಲತೆಗಳೇನು?
- ಕ್ರೆಡಿಟ್ ಕಾರ್ಡ್ ಎಂಬುದು ನಿಮಗೆ ಸಾಲ ಕೊಡುವ ಒಂದು ಸಾಧನ. ನಿರ್ದಿಷ್ಟ ಅವಧಿಯವರೆಗೆ ಸಾಲ ಉಚಿತ. ಆ ಬಳಿಕ ಬಡ್ಡಿ ಖಚಿತ. ಇದು ಗೊತ್ತಿರಲಿ.
- ಕ್ರೆಡಿಟ್ ಕಾರ್ಡ್ ಇದ್ದರೆ ನಾವು ಅಗತ್ಯಕ್ಕಿಂತ ಹೆಚ್ಚು ಹಣ ವೆಚ್ಚ ಮಾಡಲು ಪ್ರೇರೇಪಣೆ ಆಗುತ್ತದೆ. ಇದು ಡೇಂಜರ್.
ಒಟ್ಟಾರೆ ಹೇಳುವುದಾದರೆ, ಕ್ರೆಡಿಟ್ ಕಾರ್ಡ್ ಬಳಕೆಯನ್ನು ನಾವು ಹೇಗೆ ನಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳುತ್ತೀವೋ ಅಷ್ಟೂ ನಮಗೆ ಅದು ಲಾಭಕಾರಿ. ಇಲ್ಲವಾದರೆ ಸಾಲದ ಶೂಲಕ್ಕೆ ಸಿಲುಕಬೇಕಾದೀತು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ