ದೀಪಾವಳಿ, ಒಳ್ಳೆಯ ಶಾಪಿಂಗ್ ಟೈಮ್; ನಿಮ್ಮ ಕ್ರೆಡಿಟ್ ಕಾರ್ಡ್ ಸರಿಯಾಗಿ ಬಳಸಿ ಹೆಚ್ಚು ರಿವಾರ್ಡ್, ಕ್ಯಾಷ್ಬ್ಯಾಕ್ ಪಡೆಯುವ ತಂತ್ರ
Credit Card Tips: ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಬಳಸಿದರೆ ರಿವಾರ್ಡ್ಗಳು ಸಿಗುತ್ತವೆ. ಅದರಲ್ಲೂ ಹಬ್ಬದ ಸೀಸನ್ ಶಾಪಿಂಗ್ನಲ್ಲಿ ಈ ಆಫರ್ಸ್ ಹೆಚ್ಚಿರುತ್ತವೆ. ಬ್ಯಾಂಕು ಮತ್ತು ಇಕಾಮರ್ಸ್ ಪ್ಲಾಟ್ಫಾರ್ಮ್ ಮಧ್ಯೆ ಒಪ್ಪಂದವಾಗಿರುತ್ತದೆ. ಒಂದು ಇಕಾಮರ್ಸ್ ಪ್ಲಾಟ್ಫಾರ್ಮ್ನಲ್ಲಿ ನಿರ್ದಿಷ್ಟ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡಿದರೆ ಡಿಸ್ಕೌಂಟ್ ಸಿಗುತ್ತದೆ. ಹೀಗೆ, ಬೇರೆ ಬೇರೆ ಪ್ಲಾಟ್ಫಾರ್ಮ್ನಲ್ಲಿ ಬೇರೆ ಬೇರೆ ಕಾರ್ಡ್ ಬಳಕೆಗೆ ಡಿಸ್ಕೌಂಟ್, ರಿವಾರ್ಡ್ ಇತ್ಯಾದಿ ಸಿಗಬಹುದು.
ಈಗ ಹಬ್ಬದ ಸೀಸನ್ ನಡುವಿದ್ದೇವೆ. ದಸರಾ ಮುಗಿದು, ಈ ದೀಪಾವಳಿ ಸಮೀಪಿಸಿದೆ. ಬೆಳಕಿನ ಹಬ್ಬವಾದ ದೀಪಾವಳಿ (deepavali festival) ಎಂದರೆ ದೇಶದೆಲ್ಲೆಡೆ ಸಂಭ್ರಮ. ಹೊಸ ಬಟ್ಟೆ ಬರೆ ವಗೈರೆ ಖರೀದಿಸಿ ಜನರು ಖುಷಿಪಡುವ ಸಮಯ. ರೀಟೇಲ್ ಉದ್ಯಮಕ್ಕೂ ಖುಷಿ ಸಮಯ. ಅಂತೆಯೇ, ಗ್ರಾಹಕರನ್ನು ಸೆಳೆಯಲು ಇಕಾಮರ್ಸ್ ತಾಣಗಳು (ecommerce platforms) ಸಾಕಷ್ಟು ಪೈಪೋಟಿ ನಡೆಸುತ್ತವೆ. ಡಿಸ್ಕೌಂಟ್ಗಳನ್ನು ಆಫರ್ ಮಾಡುತ್ತವೆ. ಗ್ರಾಹಕರು ಕೆಲವಿಷ್ಟು ಸಂಗತಿಗಳ ಮೇಲೆ ಕಣ್ಣಿಟ್ಟಿರಬೇಕು. ಒಂದು, ಡಿಸ್ಕೌಂಟ್ಗಳು. ಇನ್ನೊಂದು ಕಾರ್ಡ್ ಬಳಕೆಯಿಂದ ಸಿಗುವ ರಿವಾರ್ಡ್, ಕ್ಯಾಷ್ಬ್ಯಾಕ್ಗಳು. ಡಿಸ್ಕೌಂಟ್ಗಳು ನೈಜವಾದುವಾ (genuine discounts) ಅಥವಾ ಬೆಲೆ ಉಬ್ಬಿಸಿ ಬಳಿಕ ಡಿಸ್ಕೌಂಟ್ ಕೊಡಲಾಗುತ್ತಿದೆಯಾ ಎಂಬುದನ್ನು ತಿಳಿಯುವುದು ಮುಖ್ಯ.
ಇನ್ನು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಬಳಸಿದರೆ ರಿವಾರ್ಡ್ಗಳು ಸಿಗುತ್ತವೆ. ಅದರಲ್ಲೂ ಹಬ್ಬದ ಸೀಸನ್ ಶಾಪಿಂಗ್ನಲ್ಲಿ ಈ ಆಫರ್ಸ್ ಹೆಚ್ಚಿರುತ್ತವೆ. ಬ್ಯಾಂಕು ಮತ್ತು ಇಕಾಮರ್ಸ್ ಪ್ಲಾಟ್ಫಾರ್ಮ್ ಮಧ್ಯೆ ಒಪ್ಪಂದವಾಗಿರುತ್ತದೆ. ಒಂದು ಇಕಾಮರ್ಸ್ ಪ್ಲಾಟ್ಫಾರ್ಮ್ನಲ್ಲಿ ನಿರ್ದಿಷ್ಟ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡಿದರೆ ಡಿಸ್ಕೌಂಟ್ ಸಿಗುತ್ತದೆ. ಹೀಗೆ, ಬೇರೆ ಬೇರೆ ಪ್ಲಾಟ್ಫಾರ್ಮ್ನಲ್ಲಿ ಬೇರೆ ಬೇರೆ ಕಾರ್ಡ್ ಬಳಕೆಗೆ ಡಿಸ್ಕೌಂಟ್, ರಿವಾರ್ಡ್ ಇತ್ಯಾದಿ ಸಿಗಬಹುದು.
ಇದನ್ನೂ ಓದಿ: RML: ವಯಸ್ಸಾದವರಿಗೊಂದು ಹಣಕಾಸು ಅಸ್ತ್ರ; ಮನೆಪತ್ರ ಅಡ ಇಟ್ಟು ಹಣ ಪಡೆಯಿರಿ, ಸಾಯುವವರೆಗೂ ಮನೆಮಾಲೀಕರಾಗಿರಿ
ಉದಾಹರಣೆಗೆ, ಅಮೇಜಾನ್ನಲ್ಲಿ ಐಡಿಎಫ್ಸಿ ಮತ್ತು ಬ್ಯಾಂಕ್ ಆಫ್ ಬರೋಡಾದ ಕ್ರೆಡಿಟ್ ಕಾರ್ಡ್ ಬಳಸಿ ಮೊಬೈಲ್ ಫೋನ್ ಖರೀದಿ ಮಾಡಿದರೆ 1,000 ರೂವರೆಗೂ ಡಿಸ್ಕೌಂಟ್ ಪಡೆಯಬಹುದು. ಆದರೆ, ಐಸಿಐಸಿಐ ಕಾರ್ಡ್ ಬಳಸಿ ಖರೀದಿಸಿದರೆ 750 ರೂವರೆಗೆ ಮಾತ್ರ ರಿಯಾಯಿತಿ ಸಿಗಬಹುದು.
ಮಿನ್ತ್ರಾದಲ್ಲಿ 3,500 ರೂ ಮೌಲ್ಯದಷ್ಟು ವಸ್ತುಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 1,000 ರೂವರೆಗೂ ಡಿಸ್ಕೌಂಟ್ ಸಿಗಬಹುದು. ಇದೇ ಮಿನ್ತ್ರಅದಲ್ಲಿ ಎಚ್ಡಿಎಫ್ಸಿ ಡೈನರ್ಸ್ ಕ್ಲಬ್ ಬ್ಯಾಕ್ ಕ್ರೆಡಿಟ್ ಕಾರ್ಡ್ ಬಳಸಿ 5,000 ರೂ ಮೌಲ್ಯದ ಶೂಗಳನ್ನು ಖರೀದಿಸಿದರೆ ತತ್ಕ್ಷಣವೇ 500 ರೂ ಡಿಸ್ಕೌಂಟ್ ಸಿಗುತ್ತದೆ. ಅಷ್ಟೇ ಅಲ್ಲ, ನಿಮ್ಮ ಕಾರ್ಡ್ಗೆ ಶೇ. 3.3ರಷ್ಟು ರಿವಾರ್ಡ್ ಹಾಗೂ 100ರಿಂದ 400ರಷ್ಟು ಹೆಚ್ಚುವರಿ ಕೂಪನ್ ಡಿಸ್ಕೌಂಟ್ ಕೂಡ ಬರುತ್ತದೆ. ಆದರೆ, ಎಚ್ಡಿಎಫ್ಸಿಯ ಡೆಬಿಟ್ ಕಾರ್ಡ್ ಅನ್ನು ಮಿನ್ತ್ರಾದಲ್ಲಿ ಬಳಸಿದರೆ ಹೆಚ್ಚು ಡಿಸ್ಕೌಂಟ್ ಸಿಗದೇ ಹೋಗಬಹುದು.
ಇದನ್ನೂ ಓದಿ: Money Tricks: ಹಣ ಉಳಿತಾಯಕ್ಕೆ ಈ ಉಪಾಯಗಳು ಬೆಸ್ಟ್; ಭವಿಷ್ಯ ಭದ್ರ ಮಾಡಿಕೊಳ್ಳುವ ಟ್ರಿಕ್ಸ್ ಇವು
ಕೂಪನ್ ಸೈಟ್ಗಳ ಮೂಲಕ ಶಾಪಿಂಗ್ ಮಾಡಿ
ಕ್ಯಾಷ್ಕರೋ, ಗೋಪೈಸಾ, ಕೂಪನ್ದುನಿಯಾ ಇತ್ಯಾದಿ ಕ್ಯಾಷ್ಬ್ಯಾಕ್ ವೆಬ್ಸೈಟ್ಗಳ ಬಗ್ಗೆ ನೀವು ಕೇಳಿರಬಹುದು. ಇವೂ ಕೂಡ ವಿವಿಧ ಇಕಾಮರ್ಸ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುತ್ತವೆ. ಈ ಕ್ಯಾಷ್ಬ್ಯಾಕ್ ವೆಬ್ಸೈಟ್ಗಳ ಮೂಲಕ ನಿಮಗೆ ಬೇಕಾದ ಇಕಾಮರ್ಸ್ ತಾಣಗಳಲ್ಲಿ ಶಾಪಿಂಗ್ ಮಾಡಬಹುದು. ಸಾಕಷ್ಟು ಕ್ಯಾಷ್ಬ್ಯಾಕ್, ರಿವಾರ್ಡ್ ಪಾಯಿಂಟ್ಸ್ಗಳು ಸಿಗುತ್ತವೆ. ಇಕಾಮರ್ಸ್ ಕಂಪನಿಗಳಿಂದ ಇವು ಕಮಿಷನ್ ಪಡೆಯುತ್ತವೆ. ಅದರಲ್ಲಿ ಒಂದು ಭಾಗವನ್ನು ಕ್ಯಾಷ್ಬ್ಯಾಕ್, ರಿವಾರ್ಡ್ ಪಾಯಿಂಟ್ ಆಗಿ ಗ್ರಾಹಕರಿಗೆ ವರ್ಗಾಯಿಸುತ್ತವೆ.
ನಿಮ್ಮ ಬಳಿ ಯಾವ ರೀತಿಯ ಕ್ರೆಡಿಟ್ ಕಾರ್ಡ್ ಇದೆ, ಅದಕ್ಕೆ ಎಲ್ಲೆಲ್ಲಿ ಎಷ್ಟೆಷ್ಟು ಡಿಸ್ಕೌಂಟ್ ಸಿಗುತ್ತದೆ ಎಂಬುದನ್ನು ತಿಳಿದಿರಿ. ಬಹಳಷ್ಟು ಸಂದರ್ಭಗಳಲ್ಲಿ ಇ-ಕೂಪನ್ಗಳು ಸಿಗುತ್ತವೆ. ಆದರೆ, ಕೂಪನ್ ಸಿಕ್ಕಿದೆ ಎಂದು ನಿಮಗೆ ಬೇಡದ ವಸ್ತುಗಳನ್ನು ಖರೀದಿಸಲು ಮುಂದಾಗದಿರಿ ಅಷ್ಟೇ. ಕ್ರೆಡಿಟ್ ಕಾರ್ಡ್ ಅನ್ನು ಸದುಪಯೋಗಿಸಿಕೊಂಡರೆ ಲಾಭ, ದುರುಪಯೋಗಿಸಿಕೊಂಡರೆ ದುರ್ಲಾಭ, ನೆನಪಿರಲಿ…
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ