ಹೆಚ್ಚು ಆದಾಯ ಇಲ್ಲದೇ ಹಣ ಉಳಿಸುವುದು ಹೇಗೆಂಬ ಚಿಂತೆಯಾ? ಹಣ ಉಳಿತಾಯಕ್ಕೆ ಟಿಪ್ಸ್ ಓದಿ

Money Saving Tips: ಕೆಲ ಮಂದಿ ಬಹಳ ಕಡಿಮೆ ಸಂಬಳದಲ್ಲೂ ಬಹಳಷ್ಟು ಹಣ ಉಳಿಸಿ ಲಕ್ಷಾಂತರ ಹಣ ಕೂಡಿಟ್ಟುಕೊಳ್ಳುವುದುಂಟು. ಇವರಿಗೆ ಇದು ಹೇಗೆ ಸಾಧ್ಯ ಎನಿಸಬಹುದು. ಇವರಿಗೆ ಸಾಧ್ಯವಾಗುವುದಾದರೆ, ಅವರಿಗೂ ಅದು ಸಾಧ್ಯವಾಗಬೇಕಲ್ಲವೇ? ಕಡಿಮೆ ಸಂಬಳ ಅಥವಾ ಕಡಿಮೆ ಆದಾಯದಲ್ಲಿ ಹಣ ಉಳಿತಾಯ ಮಾಡುವುದು ಒಂದು ಕಲೆ ಮತ್ತು ಜೀವನಕ್ರಮ.

ಹೆಚ್ಚು ಆದಾಯ ಇಲ್ಲದೇ ಹಣ ಉಳಿಸುವುದು ಹೇಗೆಂಬ ಚಿಂತೆಯಾ? ಹಣ ಉಳಿತಾಯಕ್ಕೆ ಟಿಪ್ಸ್ ಓದಿ
ಹಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 07, 2023 | 5:22 PM

ಎಲ್ಲರಿಗೂ ಲಕ್ಷಗಟ್ಟಲೆ ಸಂಬಳ ಬರುವುದಿಲ್ಲ. ಭಾರತದಲ್ಲಿ 30,000 ರೂಗಿಂತ ಕಡಿಮೆ ಸಂಬಳ ಪಡೆಯುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆಂಗಳೂರಿನಂಥ ನಗರಗಳಲ್ಲಿ ಇಷ್ಟು ಸಂಬಳಕ್ಕೆ ಜೀವನ ಸಾಗಿಸುವುದು ಹೇಗೆ ಎಂದನಿಸಬಹುದು. ಅದರಲ್ಲೂ ಸಂಸಾರಸ್ಥರಾದರಂತೂ ಇನ್ನೂ ಕಷ್ಟ. ಕೆಲ ಮಂದಿ ಇಷ್ಟು ಕಡಿಮೆ ಸಂಬಳದಲ್ಲೂ ಬಹಳಷ್ಟು ಹಣ ಉಳಿಸಿ ಲಕ್ಷಾಂತರ ಹಣ ಕೂಡಿಟ್ಟುಕೊಳ್ಳುವುದುಂಟು. ಇವರಿಗೆ ಇದು ಹೇಗೆ ಸಾಧ್ಯ (money management) ಎನಿಸಬಹುದು. ಇವರಿಗೆ ಸಾಧ್ಯವಾಗುವುದಾದರೆ, ಅವರಿಗೂ ಅದು ಸಾಧ್ಯವಾಗಬೇಕಲ್ಲವೇ? ಕಡಿಮೆ ಸಂಬಳ ಅಥವಾ ಕಡಿಮೆ ಆದಾಯದಲ್ಲಿ ಹಣ ಉಳಿತಾಯ (saving money) ಮಾಡುವುದು ಒಂದು ಕಲೆ ಮತ್ತು ಜೀವನಕ್ರಮ.

ಹಣ ಉಳಿಸುವ ಕ್ರಮಗಳು

ಹಣಕಾಸು ಕಷ್ಟದಲ್ಲಿರುವ ಹೆಚ್ಚಿನ ಮಂದಿಯ ಆದಾಯಕ್ಕಿಂತ ಖರ್ಚೇ ತುಸು ಹೆಚ್ಚಿರುತ್ತದೆ. ಈ ಪರಿಸ್ಥಿತಿ ಬರಲು ಕಾರಣವೆಂದರೆ ಅದು ವೆಚ್ಚಕ್ಕೆ ನಿರ್ಬಂಧ ಹಾಕದೇ ಇರುವುದು. ನಿಮ್ಮ ಆದಾಯಕ್ಕೆ ತಕ್ಕಂತೆ ಜೀವನಶೈಲಿಯನ್ನೂ ಬದಲಿಸಿಕೊಳ್ಳುವುದು, ಅಂದರೆ ಆದಾಯಮಟ್ಟಕ್ಕೆ ಜೀವನಶೈಲಿ ಹೆಚ್ಚಿಸಿಕೊಳ್ಳುವ ಒಂದು ಪ್ರವೃತ್ತಿ ಬಹಳ ಮಂದಿಯನ್ನು ದುರ್ಬಲಗೊಳಿಸುತ್ತದೆ. ಮೊದಲು ಈ ಸ್ವಭಾವ ಬಿಡಬೇಕು.

ಇದನ್ನೂ ಓದಿ: ವಿಷುವಲ್ ಎಫೆಕ್ಟ್ಸ್ ಕೊಡಲು ಬಾಹುಬಲಿಯಂಥ ಸಿನಿಮಾ ಬರಲಿಲ್ಲ: ಸ್ಪಿರಿಟ್ ಮೀಡಿಯಾ ಮುಚ್ಚಲು ಕಾರಣ ತಿಳಿಸಿದ ರಾನಾ ದಗ್ಗುಬಾಟಿ

ಖರ್ಚು ವೆಚ್ಚಗಳ ಪಟ್ಟಿ ಮಾಡಿ

ಮೊತ್ತಮೊದಲಿಗೆ ಮಾಡಬೇಕಾದ್ದು ನಿಮ್ಮ ಖರ್ಚು ವೆಚ್ಚಗಳ ಪಟ್ಟಿ ಮಾಡಿ, ಅನಗತ್ಯವಾದ ಖರ್ಚನ್ನು ತಗ್ಗಿಸಬೇಕು. ಅದಕ್ಕೆ ಒಂದು ಡೈರಿ ತೆಗೆದುಕೊಳ್ಳಿ. ನೀವು ಪ್ರತೀ ದಿನ ಯಾವ್ಯಾವುದಕ್ಕೆ ಎಷ್ಟೆಷ್ಟು ಖರ್ಚು ಮಾಡುತ್ತೀರಿ ಎಂದು ಆಯಾ ದಿನ ಬರೆದಿಡಿ. ಅದು ಕಾಫಿಯಾದರೂ ಆಯ್ದು, ಊಟವಾದರೂ ಆಯ್ತು, ಮನೆಗೆ ಹಾಲು ತಂದರೂ ಆಯಿತು. ಪೈಸೆ ಪೈಸೆಯ ಲೆಕ್ಕವನ್ನೂ ಬರೆಯಿರಿ. ಒಂದು ತಿಂಗಳಾದ ಬಳಿಕ ಎಲ್ಲಾ ಖರ್ಚನ್ನೂ ವರ್ಗೀಕರಿಸಿ. ಮನೆ ಅಡುಗೆ, ಹೊರಗಿನ ಊಟ, ಕಾಫಿ ಟೀ, ಬಾಡಿಗೆ, ಮೊಬೈಲ್ ರೀಚಾರ್ಜ್, ನೀರು ವಿದ್ಯುತ್ ಬಿಲ್ ಹೀಗೆ ಎಲ್ಲದರ ಪಟ್ಟಿ ಮಾಡಿ.

ಇದರಲ್ಲಿ ಯಾವುದು ಅನಗತ್ಯ ಖರ್ಚು ಎನಿಸುತ್ತದೋ, ಅಥವಾ ಯಾವುದರ ವೆಚ್ಚ ಕಡಿಮೆ ಮಾಡಬಹುದೋ ಯೋಚಿಸಿ, ಆ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಿ. ನಿಮ್ಮ ಮನಸು ಗಟ್ಟಿ ಮಾಡಿಕೊಂಡಿರಬೇಕು.

ಸಾಲವಿದ್ದರೆ ಮೊದಲು ತೀರಿಸಿ…

ನಿಮಗೆ ಸಾಲವಿದ್ದರೆ ಮೊದಲು ಅದನ್ನು ತೀರಿಸಲು ಗಮನ ಹರಿಸಿ. ಯಾಕೆಂದರೆ ಸಾಲಕ್ಕೆ ಶೇ. 10ಕ್ಕಿಂತಲೂ ಹೆಚ್ಚು ಬಡ್ಡಿ ದರ ಇರುತ್ತದೆ. ನಿಮ್ಮ ಉಳಿತಾಯ ಹಣವನ್ನು ಇದು ಖಾಲಿ ಮಾಡಬಲ್ಲುದು.

ಇದನ್ನೂ ಓದಿ: ಬಡ್ಡಿದರ, ಇಎಂಐ, ದಂಡ ಎಷ್ಟು? ಬ್ಯಾಂಕ್​ನಲ್ಲಿ ವೈಯಕ್ತಿಕ ಸಾಲ ಪಡೆಯುವ ವಿಚಾರಿಸಬೇಕಾದ ಸಂಗತಿಗಳು

ಹೆಲ್ತ್ ಇನ್ಷೂರೆನ್ಸ್ ಮಾಡಿಸಿ…

ಆರೋಗ್ಯವೇ ಭಾಗ್ಯ ಎಂಬುದು ನಿಜ. ನಿಮ್ಮ ಆರೋಗ್ಯವನ್ನು ಚೆನ್ನಾಗಿಡಿ. ದಿನವೂ ವ್ಯಾಯಾಮ, ನಡಿಗೆ ಇವೆಲ್ಲವನ್ನೂ ಮಾಡಿ. ಆಹಾರ ಇತಿಮಿತಿಯಲ್ಲಿರಲಿ. ಇದರ ಜೊತೆಗೆ ನಿಮಗೆ ಮತ್ತು ಎಲ್ಲಾ ಕುಟುಂಬ ಸದಸ್ಯರಿಗೂ ಹೆಲ್ತ್ ಇನ್ಷೂರೆನ್ಸ್ ಮಾಡಿಸಿ. ಇದರಿಂದ ಅನಿರೀಕ್ಷಿತ ಆರೋಗ್ಯ ದುರಂತ ಸಂಭವಿಸಿ ನಿಮ್ಮ ಉಳಿತಾಯ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿ ಹೋಗುವುದನ್ನು ತಪ್ಪಿಸಿ.

ಚಟಗಳಿಂದ ದೂರವಿರಿ…

ಧೂಮಪಾನ, ಮದ್ಯಪಾನ ಇತ್ಯಾದಿ ಚಟಗಳಿದ್ದರೆ ಬಿಟ್ಟುಬಿಡಿ, ಅಥವಾ ಆದಷ್ಟೂ ಕಡಿಮೆ ಮಾಡಿ. ನೀವು ಒಂದು ಪ್ಯಾಕ್ ಸಿಗರೇಟು, ಜೊತೆಗೆ ಚಹಾವನ್ನು ದಿನವೂ ಸೇವಿಸುವವರಾಗಿದ್ದರೆ ಒಂದು ತಿಂಗಳಿಗೆ ನೀವು ಅದಕ್ಕಾಗಿ ಮಾಡುವ ವೆಚ್ಚ 8ರಿಂದ 10 ಸಾವಿರ ರೂ ಆಗುತ್ತದೆ. ಆ ಹಣವನ್ನು ನೀವು ಉಳಿಸಿ ಮ್ಯೂಚುವಲ್ ಫಂಡ್ ಎಸ್​ಐಪಿಯಂತಹ ಹೂಡಿಕೆಯಲ್ಲಿ ತೊಡಗಿಸಿದರೆ ಐದು ವರ್ಷದಲ್ಲಿ 8 ಲಕ್ಷ ರೂ ಮಾಡಬಹುದು.

ಇದನ್ನೂ ಓದಿ: ದೀಪಾವಳಿ, ಒಳ್ಳೆಯ ಶಾಪಿಂಗ್ ಟೈಮ್; ನಿಮ್ಮ ಕ್ರೆಡಿಟ್ ಕಾರ್ಡ್ ಸರಿಯಾಗಿ ಬಳಸಿ ಹೆಚ್ಚು ರಿವಾರ್ಡ್, ಕ್ಯಾಷ್​ಬ್ಯಾಕ್ ಪಡೆಯುವ ತಂತ್ರ

ಸಬ್​ಸ್ಕ್ರಿಪ್ಷನ್ಸ್ ಹುಷಾರ್…

ಹಾಗೆಯೇ, ಡಿಟಿಎಚ್ ಮತ್ತು ಒಟಿಟಿಗಳ ಅನಗತ್ಯ ಸಬ್​ಸ್ಕ್ರಿಪ್ಷನ್ ಇತ್ಯಾದಿ ವೆಚ್ಚವನ್ನು ಕಡಿಮೆ ಮಾಡಿ. ಯಾವುದೋ ಸೀಸನ್​ನಲ್ಲಿ ಆ ಟಿವಿಯಲ್ಲಿ ಆ ಕಾರ್ಯಕ್ರಮ ಬಂದಿತೆಂದು ಸಬ್​ಸ್ಕ್ರೈಬ್ ಮಾಡಿರುತ್ತೀರಿ. ಮುಂದಿನ ವರ್ಷ ಅದನ್ನು ನೋಡದೇ ಇರಬಹುದು. ಆದರೆ, ಸಬ್​ಸ್ಕ್ರಿಪ್ಷನ್ ಮುಂದುವರಿಯುತ್ತಲೇ ಇರುತ್ತದೆ. ನೀವು ಹಣ ಪಾವತಿ ಮಾಡುವುದು ಮುಂದುವರಿಯುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್