ಭಾರತೀಯರು ಎಂಥ ಅಪಾಯದಲ್ಲಿದ್ದಾರೆ ಗೊತ್ತಾ? ಬರ್ಬಾದ್ ಆಗಲು ಈ ಒಂದೇ ದುರ್ಘಟನೆ ಸಾಕು ಎನ್ನುತ್ತಾರೆ ನಿತಿನ್ ಕಾಮತ್; ಏನಿದು ಎಚ್ಚರಿಕೆಯ ಕರೆಗಂಟೆ?
Zerodha CEO Nithin Kamath Speaks On Importance of Health Insurance: ಬಹುತೇಕ ಭಾರತೀಯರ ಜೀವನದಲ್ಲಿ ಒಂದೇ ಒಂದು ಗಂಭೀರವಾದ ಆರೋಗ್ಯ ದುರಂತ ಸಂಭವಿಸಿದರೆ ಅವರ ಹಣಕಾಸು ಪರಿಸ್ಥಿತಿ ಚಿಂತಾಜನಕ ಸ್ಥಿತಿ ತಲುಪುತ್ತದೆ ಎಂದು ಝೀರೋಧ ಸಹ-ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಅವರು ಎಚ್ಚರಿಸಿದ್ದಾರೆ. ಒಂದು ವರದಿ ಪ್ರಕಾರ, ಭಾರತದಲ್ಲಿ ಇನ್ಷೂರೆನ್ಸ್ ವ್ಯಾಪ್ತಿ ಬಹಳ ಸೀಮಿತವಾಗಿದೆ. ಎಲ್ಲಾ ರೀತಿಯ ಇನ್ಷೂರೆನ್ಸ್ ಸೇರಿಸಿದರೆ ಒಟ್ಟಾರೆ ಶೇ. 4ರಷ್ಟು ಜನರು ಮತ್ರ ಪಾಲಿಸಿ ಹೊಂದಿದ್ದಾರೆ. ಅದರಲ್ಲೂ ಲೈಫ್ ಇನ್ಷೂರೆನ್ಸ್ ಅಥವಾ ಜೀವ ವಿಮೆ ಹೊಂದಿರುವವರ ಸಂಖ್ಯೆ ಶೇ. 3ರಷ್ಟು ಮಾತ್ರ ಇದೆ. ಈ ಹಿನ್ನೆಲೆಯಲ್ಲಿ ಝೀರೋಧ ಸಿಇಒ ನಿತಿನ್ ಕಾಮತ್ ಹೇಳಿಕೆಯಲ್ಲಿ ಅತಿಶಯೋಕ್ತಿ ಕಾಣುವುದಿಲ್ಲ.
ಒಂದು ಪ್ರಮುಖ ಅನಾರೋಗ್ಯ ಘಟನೆ ಉದ್ಭವಿಸಿದರೆ ಅದಕ್ಕೆ ಆಗುವ ವೆಚ್ಚ ಭರಿಸಲು ನಮ್ಮ ಇಡೀ ಜೀವಮಾನದ ಉಳಿತಾಯ ಹಣ ಪೋಲಾಗಿ ಹೋಗುತ್ತದೆ. ಅದರಲ್ಲೂ ಕ್ಯಾನ್ಸರ್ ಇತ್ಯಾದಿ ಮಾರಕ ಮತ್ತು ದುಬಾರಿ ಕಾಯಿಲೆ ವಿಚಾರದಲ್ಲಿ ಇದು ನಿಜ. ಇನ್ಷೂರೆನ್ಸ್ ಇಟ್ಟುಕೊಂಡವರು ಬಚಾವ್. ಆದರೆ ವಿಮೆ ಇಲ್ಲದವರ ಕಥೆ..? ಝೀರೋಧ ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ (Zerodha CEO Nithin Kamath) ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಭಾರತೀಯರು ಕತ್ತಿನ ಅಲುಗಿನ ಮೇಲೆ ನಡೆಯುತ್ತಿರುವುದು ಅವರ ಮಾತಿನಿಂದ ವೇದ್ಯವಾಗುತ್ತದೆ. ಬಹುತೇಕ ಭಾರತೀಯರ ಜೀವನದಲ್ಲಿ ಗಂಭೀರವಾದ ಒಂದೇ ಒಂದು ಆರೋಗ್ಯ ದುರಂತ ಸಂಭವಿಸಿದರೆ ಅವರ ಹಣಕಾಸು ಪರಿಸ್ಥಿತಿ ಚಿಂತಾಜನಕ ಸ್ಥಿತಿ ತಲುಪುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಒಂದು ವರದಿ ಪ್ರಕಾರ, ಭಾರತದಲ್ಲಿ ಇನ್ಷೂರೆನ್ಸ್ ವ್ಯಾಪ್ತಿ ಬಹಳ ಸೀಮಿತವಾಗಿದೆ. ಎಲ್ಲಾ ರೀತಿಯ ಇನ್ಷೂರೆನ್ಸ್ ಸೇರಿಸಿದರೆ ಒಟ್ಟಾರೆ ಶೇ. 4ರಷ್ಟು ಜನರು ಮತ್ರ ಪಾಲಿಸಿ ಹೊಂದಿದ್ದಾರೆ. ಅದರಲ್ಲೂ ಲೈಫ್ ಇನ್ಷೂರೆನ್ಸ್ ಅಥವಾ ಜೀವ ವಿಮೆ ಹೊಂದಿರುವವರ ಸಂಖ್ಯೆ ಶೇ. 3ರಷ್ಟು ಮಾತ್ರ ಇದೆ. ಈ ಹಿನ್ನೆಲೆಯಲ್ಲಿ ಝೀರೋಧ ಸಿಇಒ ನಿತಿನ್ ಕಾಮತ್ ಹೇಳಿಕೆಯಲ್ಲಿ ಅತಿಶಯೋಕ್ತಿ ಕಾಣುವುದಿಲ್ಲ. ಅದೇ ವೇಳೆ, ಇನ್ನೂರೆನ್ಸ್ ಹೊಂದಿದ್ದರೆ ಸಾಲದು, ಇನ್ಷೂರೆನ್ಸ್ ಕ್ಲೈಮ್ಗಳು ತಿರಸ್ಕೃತಗೊಳ್ಳದಂತೆ ಎಚ್ಚರ ವಹಿಸಬೇಕಾದ ತಿಳಿವಳಿಕೆಯೂ ಅಗತ್ಯ ಎಂದು ಅವರು ತಮ್ಮ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಮಿತಿಮೀರಿ ಬಳಸಿದರೆ ಏನಾಗುತ್ತದೆ? ಬಳಕೆ ಮಾಡದೇ ಬಿಟ್ಟರೆ ಏನಾಗುತ್ತದೆ? ಈ ಮಾಹಿತಿ ತಿಳಿದಿರಿ
‘ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅವಶ್ಯಕ ಹೆಲ್ತ್ ಇನ್ಷೂರೆನ್ಸ್ ಮಾಡಿಸುವುದು ಅತ್ಯಂತ ಮುಖ್ಯ ಹಣಕಾಸು ಹೂಡಿಕೆ ಎನಿಸುತ್ತದೆ. ಒಂದು ಗಂಭೀರ ಆರೋಗ್ಯ ದುರ್ಘಟನೆಯು ಬಹುತೇಕ ಭಾರತೀಯರ ಹಣಕಾಸು ಸ್ಥಿತಿಯನ್ನು ಹದಗೆಡಿಸುತ್ತದೆ.
‘ಇನ್ಷೂರೆನ್ಸ್ ಹೊಂದಿದ್ದರೆ ಸಾಲದು. ನಿಮ್ಮ ಬಳಿ ಇನ್ಷೂರೆನ್ಸ್ ಇದೆ ಎಂದಾಕ್ಷಣ ನಿಮ್ಮ ಎಲ್ಲಾ ಕ್ಲೈಮ್ಗಳೂ ಸೆಟಲ್ ಆಗುವುದಿಲ್ಲ. ನಿಮ್ಮ ಕ್ಲೈಮ್ ಹಣವನ್ನು ಪೂರ್ಣವಾಗಿ ಕೊಡಬೇಕೋ, ಸ್ವಲ್ಪ ಭಾಗ ಕೊಡಬೇಕೋ ಅಥವಾ ಕ್ಲೈಮ್ ಅನ್ನೇ ಪೂರ್ಣವಾಗಿ ತಿರಸ್ಕರಿಸಬೇಕೋ ಎಂದು ನಿರ್ಧರಿಸಲು ವಿಮಾ ಸಂಸ್ಥೆಗಳು ನೂರೆಂಟು ಕಾರಣಗಳನ್ನು ಹೊಂದಿರುತ್ತವೆ. ಇನ್ಷೂರೆನ್ಸ್ ಕ್ಲೈಮ್ಗಳು ಯಾಕೆ ತಿರಸ್ಕೃತಗೊಳ್ಳುತ್ತವೆ ಎಂಬ ಸಾಮಾನ್ಯ ಕಾರಣಗಳನ್ನು ತಿಳಿದುಕೊಂಡು ಎಚ್ಚರ ವಹಿಸುವುದು ಮುಖ್ಯ,’ ಎಂದು ಝೀರೋಧ ಸಿಇಒ ನಿತಿನ್ ಕಾಮತ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
Having adequate health insurance for yourself and your family is the most important financial investment you can make. Most Indians are just one serious health incident away from financial ruin.
But having insurance alone isn’t enough. Just because you have insurance doesn’t…
— Nithin Kamath (@Nithin0dha) November 1, 2023
ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಕ್ಲೈಮ್ ತಿರಸ್ಕೃತಗೊಳ್ಳದಂತೆ ಎಚ್ಚರ ವಹಿಸುವುದು ಹೇಗೆ? ತಜ್ಞರ ಈ ಸಲಹೆ ನೋಡಿ
ನಿತಿನ್ ಕಾಮತ್ ಅವರು ಇನ್ಷೂರೆನ್ಸ್ ಬಗ್ಗೆ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಹಿಂದೆಯೂ ಅವರು ವಿಮಾ ಅಗತ್ಯತೆ ಬಗ್ಗೆ ಕೆಲವಾರು ಬಾರಿ ಸಲಹೆಗಳನ್ನು ನೀಡಿದ್ದಿದೆ. ಅವರ ಸಂಸ್ಥೆಯು ಡಿಟ್ಟೋ ಇನ್ಷೂರೆನ್ಸ್ ಎಂಬ ಇನ್ಷೂರೆನ್ಸ್ ಪ್ಲಾಟ್ಫಾರ್ಮ್ ಜೊತೆ ಸಹಭಾಗಿತ್ವ ಹೊಂದಿದೆ. ಹಿಂದೊಮ್ಮೆ ಇನ್ಷೂರೆನ್ಸ್ ಅವಶ್ಯಕತೆ ಬಗ್ಗೆ ಮಾತನಾಡುತ್ತಾ, ನಿತಿನ್ ಕಾಮತ್ ಅವರು ಭಾರತದಲ್ಲಿ ಪ್ರತೀ ವರ್ಷ ಕೋಟ್ಯಂತರ ಜನರು ಆರೋಗ್ಯ ವೆಚ್ಚದಿಂದಾಗಿ ಬಡತನಕ್ಕೆ ದೂಡಲಾಗುತ್ತಿದ್ದಾರೆ ಎಂಬ ಸಂಗತಿಯನ್ನು ಅಂಕಿ ಅಂಶಗಳ ಸಮೇತ ವಿವರಿಸಿದ್ದರು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:06 pm, Thu, 2 November 23