ಕ್ರೆಡಿಟ್ ಕಾರ್ಡ್ ಮಿತಿಮೀರಿ ಬಳಸಿದರೆ ಏನಾಗುತ್ತದೆ? ಬಳಕೆ ಮಾಡದೇ ಬಿಟ್ಟರೆ ಏನಾಗುತ್ತದೆ? ಈ ಮಾಹಿತಿ ತಿಳಿದಿರಿ

Credit Card Utilization Tips: ಕ್ರೆಡಿಟ್ ಕಾರ್ಡ್ ತಾತ್ಕಾಲಿಕ ಅವಧಿಗೆ ಬಡ್ಡಿರಹಿತ ಸಾಲ ಕೊಡುತ್ತದೆ. ನೀವು ಸರಿಯಾಗಿ ನಿಭಾಯಿಸಿದರೆ ಬಹಳ ಅನುಕೂಲ ತರುತ್ತದೆ. ಒಂದು ವೇಳೆ ಸರಿಯಾದ ಅವಧಿಗೆ ಬಿಲ್ ಕಟ್ಟದಿದ್ದರೆ ಪೆನಾಲ್ಟಿ, ಅಧಿಕ ಬಡ್ಡಿ ಇತ್ಯಾದಿ ಹೇರಲಾಗುತ್ತದೆ. ಜನರ ಈ ದೌರ್ಬಲ್ಯವೇ ಕ್ರೆಡಿಟ್ ಕಾರ್ಡ್ ಕಂಪನಿಗಳಿಗೆ ಲಾಭದ ಹಾದಿ. ಕ್ರೆಡಿಟ್ ಕಾರ್ಡ್ ಅನ್ನು ಪೂರ್ಣವಾಗಿ ಬಳಸುತ್ತಿದ್ದರೆ ಏನಾಗುತ್ತದೆ? ಯಾವ ವಹಿವಾಟೂ ನಡೆಸದೇ ಹಾಗೇ ಇದ್ದರೆ ಏನಾಗುತ್ತದೆ? ಈ ಬಗ್ಗೆ ಕೆಲ ಇಂಟರೆಸ್ಟಿಂಗ್ ಸಂಗತಿ ತಿಳಿದಿರಿ.

ಕ್ರೆಡಿಟ್ ಕಾರ್ಡ್ ಮಿತಿಮೀರಿ ಬಳಸಿದರೆ ಏನಾಗುತ್ತದೆ? ಬಳಕೆ ಮಾಡದೇ ಬಿಟ್ಟರೆ ಏನಾಗುತ್ತದೆ? ಈ ಮಾಹಿತಿ ತಿಳಿದಿರಿ
ಕ್ರೆಡಿಟ್ ಕಾರ್ಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 02, 2023 | 11:52 AM

ಕ್ರೆಡಿಟ್ ಕಾರ್ಡ್​ಗಳು ಈಗ ಬಹಳ ಸಾಮಾನ್ಯವಾಗಿ ಹೋಗಿವೆ. ಬಹಳಷ್ಟು ಜನರು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್​ಗಳನ್ನು ಹೊಂದಿರುವುದು ಈಗ ಸಾಮಾನ್ಯ. ಕೆಲವರು ತಮ್ಮಲ್ಲಿರುವ ಎಲ್ಲಾ ಕ್ರೆಡಿಟ್ ಕಾರ್ಡ್​ಗಳನ್ನು ಯಥೇಚ್ಛವಾಗಿ ಬಳಕೆ (credit card over utilization) ಮಾಡುವುದಿದೆ. ಇನ್ನೂ ಕೆಲವರು ಕ್ರೆಡಿಟ್ ಕಾರ್ಡ್ ಬಳಸದೇ ಹಾಗೇ ಸುಮ್ಮನೆ ಇಟ್ಟುಕೊಂಡಿರುತ್ತಾರೆ. ಕ್ರೆಡಿಟ್ ಕಾರ್ಡ್ ಅನ್ನು ಪೂರ್ಣವಾಗಿ ಬಳಸುತ್ತಿದ್ದರೆ ಏನಾಗುತ್ತದೆ? ಯಾವ ವಹಿವಾಟೂ ನಡೆಸದೇ ಹಾಗೇ ಇದ್ದರೆ ಏನಾಗುತ್ತದೆ? ಈ ಬಗ್ಗೆ ಕೆಲ ಇಂಟರೆಸ್ಟಿಂಗ್ ಸಂಗತಿ ತಿಳಿದಿರಿ.

ಕ್ರೆಡಿಟ್ ಕಾರ್ಡ್​ಗಳನ್ನು ಯಥೇಚ್ಛವಾಗಿ ಬಳಸಿದರೆ ಏನಾಗುತ್ತದೆ?

ಕ್ರೆಡಿಟ್ ಕಾರ್ಡ್ ತಾತ್ಕಾಲಿಕ ಅವಧಿಗೆ ಬಡ್ಡಿರಹಿತ ಸಾಲ ಕೊಡುತ್ತದೆ. ನೀವು ಸರಿಯಾಗಿ ನಿಭಾಯಿಸಿದರೆ ಬಹಳ ಅನುಕೂಲ ತರುತ್ತದೆ. ಒಂದು ವೇಳೆ ಸರಿಯಾದ ಅವಧಿಗೆ ಬಿಲ್ ಕಟ್ಟದಿದ್ದರೆ ಪೆನಾಲ್ಟಿ, ಅಧಿಕ ಬಡ್ಡಿ ಇತ್ಯಾದಿ ಹೇರಲಾಗುತ್ತದೆ. ಜನರ ಈ ದೌರ್ಬಲ್ಯವೇ ಕ್ರೆಡಿಟ್ ಕಾರ್ಡ್ ಕಂಪನಿಗಳಿಗೆ ಲಾಭದ ಹಾದಿ.

ಇನ್ನೊಂದು ಮುಖ್ಯ ಸಂಗತಿ ಎಂದರೆ, ಒಂದೊಂದು ಕ್ರೆಡಿಟ್ ಕಾರ್ಡ್​ಗೆ ನಿರ್ದಿಷ್ಟ ಹಣದ ಮಿತಿ ಇರುತ್ತದೆ. ಈ ಕ್ರೆಡಿಟ್ ಲಿಮಿಟ್ ಅನ್ನು ಪೂರ್ಣವಾಗಿ ಬಳಸಿದರೆ ನಿಮ್ಮ ಕ್ರೆಡಿಟ್ ಹಿಸ್ಟರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹಣಕಾಸು ತಜ್ಞರ ಪ್ರಕಾರ ನಿಮ್ಮ ಕ್ರೆಡಿಟ್ ಲಿಮಿಟ್​ನ ಶೇ. 30ರಷ್ಟು ಭಾಗ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣವನ್ನು ಬಳಸುವುದು ಉತ್ತಮ. ಕಡಿಮೆ ಬಳಸಿದಷ್ಟೂ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳುತ್ತದೆ.

ಇದನ್ನೂ ಓದಿ: ಬ್ಯಾಂಕ್​ನಲ್ಲಿ ಸಾಲ ಮಾಡಿ, ಇಎಂಐ ಕಟ್ಟಲು ಆಗುತ್ತಿಲ್ಲವೆಂದರೆ, ಈ ಕೆಲ ಸಲಹೆಗಳನ್ನು ಪಾಲಿಸಿ, ನಿಮ್ಮ ಕ್ರೆಡಿಟ್ ಸ್ಕೋರ್ ನಶಿಸದಂತೆ ನೋಡಿಕೊಳ್ಳಿ

ಕ್ರೆಡಿಟ್ ಕಾರ್ಡ್ ಬಳಕೆಯನ್ನೇ ನಿಲ್ಲಿಸಿಬಿಟ್ಟರೆ?

ಕ್ರೆಡಿಟ್ ಕಾರ್ಡ್​ಗಳನ್ನು ಹೆಚ್ಚು ಬಳಸಿದರೆ ಕ್ರೆಡಿಟ್ ಸ್ಕೋರ್​ಗೆ ಧಕ್ಕೆಯಾಗಬಹುದು ಎಂದು ಹೇಳಿ ಕ್ರೆಡಿಟ್ ಕಾರ್ಡ್ ಬಳಕೆಯನ್ನೇ ನಿಲ್ಲಿಸುವುದು ಸರಿಯಾಗುವುದಿಲ್ಲ. ಕ್ರೆಡಿಟ್ ಕಾರ್ಡ್ ಬಳಸದೇ ಇರುವ ಬದಲು, ಮಿತವಾಗಿ ಕಾರ್ಡ್ ಬಳಕೆ ಮಾಡುವುದು ಉತ್ತಮ. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಬಳಕೆ ಮಾಡದೇ ಹಾಗೆ ಬಿಟ್ಟುಬಿಟ್ಟರೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗುವುದಿಲ್ಲವಾದರೂ ಸ್ಕೋರ್ ಉತ್ತಮಪಡಿಸಿಕೊಳ್ಳುವ ಅವಕಾಶ ತಪ್ಪುತ್ತದೆ.

ಮುಂದೆ ನೀವು ಎಲ್ಲಿಯಾದರೂ ಸಾಲ ಪಡೆಯಬೇಕಾದರೆ ಬ್ಯಾಂಕುಗಳು ನಿಮ್ಮ ಕ್ರೆಡಿಟ್ ಹಿಸ್ಟರಿ ಗಮನಿಸುತ್ತಾರೆ. ನಿಮ್ಮ ಸಾಲ ನಿರ್ವಹಣೆ, ಶಿಸ್ತು ಹೇಗಿದೆ ಎಂಬುದನ್ನು ಪರಿಗಣಿಸಿ, ಅದಕ್ಕೆ ತಕ್ಕಂತೆ ಸಾಲ ಮಂಜೂರು ಮಾಡುತ್ತದೆ. ಹೀಗಾಗಿ, ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಹಿಸ್ಟರಿ ಚೆನ್ನಾಗಿದ್ದರೆ ಸಾಲದ ಪ್ರಮಾಣ ಹೆಚ್ಚು ಸಿಗುತ್ತದೆ, ಸಾಲ ಕೂಡ ಬಹಳ ಸುಲಭವಾಗಿ ಸಿಗುತ್ತದೆ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಕ್ಲೈಮ್ ತಿರಸ್ಕೃತಗೊಳ್ಳದಂತೆ ಎಚ್ಚರ ವಹಿಸುವುದು ಹೇಗೆ? ತಜ್ಞರ ಈ ಸಲಹೆ ನೋಡಿ

ಹೀಗಾಗಿ, ನಿಮ್ಮಲ್ಲಿ ಕ್ರೆಡಿಟ್ ಕಾರ್ಡ್​ಗಳು ಇದ್ದಲ್ಲಿ ಅವುಗಳನ್ನು ಸಕ್ರಿಯವಾಗಿಟ್ಟುಕೊಂಡಿರಿ. ಮಿತವಾಗಿ ಬಳಸಿ. ಒಂದು ಕ್ರೆಡಿಟ್ ಕಾರ್ಡ್​ನಲ್ಲಿ ನಿಗದಿ ಮಾಡಿರುವ ಮಿತಿಯಲ್ಲಿ ಶೇ. 10ರಷ್ಟು ಮಾತ್ರ ಬಳಕೆ ಮಾಡಿ. ಉದಾಹರಣೆಗೆ ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ 60,000 ರೂ ಇದ್ದರೆ ನೀವು 6,000 ರೂಗಿಂತ ಹೆಚ್ಚು ಮೊತ್ತವನ್ನು ಆ ಕಾರ್ಡ್​ನಿಂದ ಬಳಕೆ ಮಾಡಬೇಡಿ. ಹೀಗಾದರೆ ನಿಮ್ಮ ಕ್ರೆಡಿಟ್ ಸ್ಕೋರ್ ಬಹಳ ಉತ್ತಮವಾಗಿರುತ್ತದೆ ಎಂಬುದ ತಜ್ಞರ ಸಲಹೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್