ಬ್ಯಾಂಕ್​ನಲ್ಲಿ ಸಾಲ ಮಾಡಿ, ಇಎಂಐ ಕಟ್ಟಲು ಆಗುತ್ತಿಲ್ಲವೆಂದರೆ, ಈ ಕೆಲ ಸಲಹೆಗಳನ್ನು ಪಾಲಿಸಿ, ನಿಮ್ಮ ಕ್ರೆಡಿಟ್ ಸ್ಕೋರ್ ನಶಿಸದಂತೆ ನೋಡಿಕೊಳ್ಳಿ

Loan EMI tips: ಒಂದು ಅಥವಾ ಹೆಚ್ಚಿನ ತಿಂಗಳು ಸಾಲದ ಕಂತುಗಳನ್ನು ಕಟ್ಟಲು ಸಾಧ್ಯವಾಗದೇ ಹೋಗಬಹುದು. ಹೀಗಾದಾಗ ನಿಮಗೆ ಬ್ಯಾಂಕ್​ನಿಂದ ನೋಟೀಸ್ ಬರುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ. ನಿಮ್ಮ ಹಣಕಾಸು ಜೀವನದಲ್ಲೊಂದು ಕಪ್ಪು ಚುಕ್ಕೆಯಾಗಿಬಿಡಬಹುದು. ನೀವು ಇಎಂಐ ಕಟ್ಟಲು ಸಾಧ್ಯವಾಗದೇ ಹೋಗುವಂತಹ ಸಂದರ್ಭ ಬಂದರೆ, ಅಥವಾ ಕಂತು ಕಟ್ಟಲು ಆಗಿಲ್ಲದೇ ಹೋದರೆ ಆಗ ನೀವು ಏನು ಮಾಡಬೇಕು? ಈ ಮುಂದಿನ ಕೆಲ ಟಿಪ್ಸ್ ಅನುಸರಿಸಿ ನೋಡಿ...

ಬ್ಯಾಂಕ್​ನಲ್ಲಿ ಸಾಲ ಮಾಡಿ, ಇಎಂಐ ಕಟ್ಟಲು ಆಗುತ್ತಿಲ್ಲವೆಂದರೆ, ಈ ಕೆಲ ಸಲಹೆಗಳನ್ನು ಪಾಲಿಸಿ, ನಿಮ್ಮ ಕ್ರೆಡಿಟ್ ಸ್ಕೋರ್ ನಶಿಸದಂತೆ ನೋಡಿಕೊಳ್ಳಿ
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 01, 2023 | 5:46 PM

ಸಾವಿಲ್ಲದ ಮನೆಯಿಂದ ಸಾಸಿವೆ ತರುವುದೂ ಒಂದೇ, ಸಾಲ ಮಾಡದ ಸಂಸಾರಸ್ಥರನ್ನು ಹುಡುಕುವುದೂ ಒಂದೇ ಎನ್ನುತ್ತಾರೆ. ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಸಾಲ (loan) ಮಾಡಿಯೇ ಮಾಡಿರುತ್ತಾರೆ. ಅದರಲ್ಲೂ ಮನೆ ಕಟ್ಟಬೇಕಾದರೆ ಸಾಲ ಪಡೆಯದಿರುವವರೇ ಇಲ್ಲ. ಬ್ಯಾಂಕುಗಳಲ್ಲಾದರೂ ಸರಿ, ಬಂಧು ಬಳಗ ಸ್ನೇಹಿತರಲ್ಲಾದರೂ ಸರಿ ಸಾಲ ಮಾಡುತ್ತೇವೆ. ಸಾಲ ಸಿಗುವುದು ಸುಲಭ, ಆದರೆ ಮರುಪಾವತಿಸುವುದಕ್ಕೆ ಶಿಸ್ತು, ಸಂಯಮ ಎಲ್ಲವೂ ಅಗತ್ಯ. ಗೃಹ ಸಾಲಗಳಂತೂ (home loan) ಸುದೀರ್ಘ ಅವಧಿ ಇರುತ್ತವೆ. ಕೆಲ ಸಂದರ್ಭಗಳಲ್ಲಿ ದಿಢೀರ್ ಖರ್ಚು ಬಂದು ಒಂದು ಅಥವಾ ಹೆಚ್ಚಿನ ತಿಂಗಳು ಸಾಲದ ಕಂತುಗಳನ್ನು (loan emi) ಕಟ್ಟಲು ಸಾಧ್ಯವಾಗದೇ ಹೋಗಬಹುದು. ಹೀಗಾದಾಗ ನಿಮಗೆ ಬ್ಯಾಂಕ್​ನಿಂದ ನೋಟೀಸ್ ಬರುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ. ನಿಮ್ಮ ಹಣಕಾಸು ಜೀವನದಲ್ಲೊಂದು ಕಪ್ಪು ಚುಕ್ಕೆಯಾಗಿಬಿಡಬಹುದು.

ನೀವು ಇಎಂಐ ಕಟ್ಟಲು ಸಾಧ್ಯವಾಗದೇ ಹೋಗುವಂತಹ ಸಂದರ್ಭ ಬಂದರೆ, ಅಥವಾ ಕಂತು ಕಟ್ಟಲು ಆಗಿಲ್ಲದೇ ಹೋದರೆ ಆಗ ನೀವು ಏನು ಮಾಡಬೇಕು? ಈ ಮುಂದಿನ ಕೆಲ ಟಿಪ್ಸ್ ಅನುಸರಿಸಿ ನೋಡಿ…

ಸಾಲದ ಕಂತು ಕಟ್ಟಲು ಆಗದಿದ್ದಾಗ ಮ್ಯಾನೇಜರ್ ಜೊತೆ ಮಾತನಾಡಿ

ಅಕಸ್ಮಾತ್ತಾಗಿ ನೀವು ಸಾಲದ ಕಂತು ಕಟ್ಟಲು ವಿಫಲರಾಗಿದ್ದರೆ ಕೂಡಲೇ ಬ್ಯಾಂಕ್​ಗೆ ಹೋಗಿ ಮ್ಯಾನೇಜರ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸಿ. ನೀವು ಪ್ರಾಮಾಣಿಕರಾಗಿದ್ದರೆ, ಮ್ಯಾನೇಜರ್ ನಿಮಗೆ ನಯವಾಗಿ ಎಚ್ಚರಿಕೆ ಕೊಟ್ಟು ಕಳುಹಿಸಬಹುದು.

ಇದನ್ನೂ ಓದಿ: ಇದಕ್ಕಿಂತ ಕಡಿಮೆಗೆ ಸಿಕ್ಕರೆ ಎರಡು ಪಟ್ಟು ಹಣ ರೀಫಂಡ್; ಪೇಟಿಎಂನಲ್ಲಿ ಪ್ರೈಸ್ ಗ್ಯಾರಂಟಿ ಆಫರ್

ಹಾಗೆಯೇ, ನೀವು ಒಂದು ಅಥವಾ ಅದಕ್ಕಿಂತ ಹೆಚ್ಚು ಕಾಲ ಸಾಲದ ಕಂತು ಕಟ್ಟಲು ಆಗುವುದಿಲ್ಲ ಎಂದು ಮುಂಚಿತವಾಗಿ ತೋರಿದಲ್ಲಿ ಬ್ಯಾಂಕ್ ಮ್ಯಾನೇಜರ್ ಜೊತೆ ಮಾತನಾಡಿ ನಿರ್ದಿಷ್ಟ ಅವಧಿಯವರೆಗೆ ಕಂತು ಕಟ್ಟಲು ವಿನಾಯಿತಿ ಕೋರಿ ನೋಡಿ. ಮ್ಯಾನೇಜರ್ ಸಮ್ಮತಿಸುವುದು ಬಹುತೇಕ ಖಚಿತವಾಗಿರುತ್ತದೆ.

ಅರಿಯರ್ ಇಎಂಐ ಅವಕಾಶ ಕೇಳಿ

ಒಂದು ವೇಳೆ ನಿಮ್ಮ ಸಂಬಳ 10ನೇ ತಾರೀಖು ಇದ್ದು, ಇಎಂಐ ದಿನಾಂಕ 7ನೇ ತಾರೀಖು ಇದ್ದರೆ ಆಗ ಕಂತು ಕಟ್ಟಲು ಕಷ್ಟವಾಗಬಹುದು. ಈ ಸಂದರ್ಭದಲ್ಲಿ ಮುಂಗಡವಾಗಿ ಇಎಂಐ ಕಟ್ಟುವ ಅವಕಾಶವನ್ನು ಕೇಳಿ ಪಡೆಯಬಹುದು.

ಕ್ರೆಡಿಟ್ ರಿಪೋರ್ಟ್ ಬಗ್ಗೆ ಹುಷಾರ್

ನೀವು ಯಾವುದೇ ಪೂರ್ವಸೂಚನೆ ಇಲ್ಲದೇ ಸತತ ಮೂರು ತಿಂಗಳು ಸಾಲದ ಕಂತು ಕಟ್ಟಲು ವಿಫಲರಾಗಿದ್ದರೆ ಆಗ ಆ ಸಾಲವನ್ನು ಎನ್​ಪಿಎ ಅಥವಾ ಅನುತ್ಪಾದಕ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಆ ಸಂದರ್ಭದಲ್ಲಿ ಸಿಬಿಲ್ ಅಥವಾ ಇತರ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳಿಗೆ ಬ್ಯಾಂಕು ರಿಪೋರ್ಟ್ ಮಾಡಬಹುದು.

ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆ: ತಿಂಗಳಿಗೆ 1,000 ರೂ ಕಟ್ಟಿದರೆ ಎಷ್ಟು ರಿಟರ್ನ್ ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್

ಒಂದು ಅಥವಾ ಎರಡು ಬಾರಿ ಕಂತು ಕಟ್ಟುವುದನ್ನು ತಪ್ಪಿಸಿಕೊಂಡಿದ್ದರೆ ನೀವು ಬ್ಯಾಂಕ್ ಮ್ಯಾನೇಜರ್ ಜೊತೆ ಮಾತನಾಡಿ, ಕ್ರೆಡಿಟ್ ಸ್ಕೋರ್ ಸಂಸ್ಥೆಗಳಿಗೆ ನೆಗಟಿವ್ ರಿಪೋರ್ಟ್ ಕಳುಹಿಸದಂತೆ ಕೋರಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ