NPS: ನ್ಯಾಷನಲ್ ಪೆನ್ಷನ್ ಸ್ಕೀಮ್; ಹಣ ವಿತ್ಡ್ರಾ ಮಾಡುವ ಕ್ರಮದಲ್ಲಿ ಬದಲಾವಣೆ? ಈ ಪ್ರಸ್ತಾಪ ಜಾರಿಯಾದರೆ ಪಿಂಚಣಿದಾರರಿಗೆ ಅನುಕೂಲ
National Pension System Updates: ನ್ಯಾಷನಲ್ ಪೆನ್ಷನ್ ಸಿಸ್ಟಂನ ಗ್ರಾಹಕರು ಅಥವಾ ಸಬ್ಸ್ಕ್ರೈಬರ್ಗಳು ತಮ್ಮ ಪಿಂಚಣಿ ನಿಧಿಯಲ್ಲಿ ಶೇ 60ರಷ್ಟು ಭಾಗವನ್ನು ಎಸ್ಎಲ್ಡಬ್ಲ್ಯು ವ್ಯವಸ್ಥೆ ಮೂಲಕ ತಿಂಗಳಿಗೋ, ಮೂರು ತಿಂಗಳಿಗೂ, ಅರ್ಧ ವರ್ಷಕ್ಕೋ ಅಥವಾ ವರ್ಷಕ್ಕೊಮ್ಮೆಯೋ ನಿರ್ದಿಷ್ಟ ಮೊತ್ತವನ್ನು ತಮ್ಮ 75ನೇ ವಯಸ್ಸಿನವರೆಗೂ ಹಿಂಪಡೆಯಬಹುದಾಗಿದೆ.
ಸಾರ್ವಜನಿಕರಿಗೆ ಲಭ್ಯ ಇರುವ ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ (National Pension System) ಒಂದು ಪ್ರಮುಖ ನಿಯಮ ಬದಲಾವಣೆಗೆ ಪ್ರಸ್ತಾಪ ಮಾಡಲಾಗಿದೆ. ನಿವೃತ್ತಿ ಹೊಂದಿದ ಬಳಿಕ ಎನ್ಪಿಎಸ್ ನಿಧಿಯಲ್ಲಿ ನಿರ್ದಿಷ್ಟ ಮೊತ್ತದ ಹಣವನ್ನು ಹಂತ ಹಂತವಾಗಿ ಹಿಂಪಡೆಯಲು ಅವಕಾಶ ಕೊಡುವ ಸಿಸ್ಟಮ್ಯಾಟಿಕ್ ಲಂಪ್ಸಮ್ ವಿತ್ಡ್ರಾಯಲ್ ಸೌಲಭ್ಯ (SLW- Systematic Lump Sum withdrawal facility) ಸಿಗುತ್ತದೆ. ಭಾರತದಲ್ಲಿ ಪಿಂಚಣಿ ನಿಧಿಗಳ ಪ್ರಾಧಿಕಾರವಾದ ಪಿಎಫ್ಆರ್ಡಿಎ 2023ರ ಅಕ್ಟೋಬರ್ 27ರಂದು ಈ ಪ್ರಸ್ತಾಪ ಮುಂದಿಟ್ಟಿದೆ.
ನ್ಯಾಷನಲ್ ಪೆನ್ಷನ್ ಸಿಸ್ಟಂನ ಗ್ರಾಹಕರು ಅಥವಾ ಸಬ್ಸ್ಕ್ರೈಬರ್ಗಳು ತಮ್ಮ ಪಿಂಚಣಿ ನಿಧಿಯಲ್ಲಿ ಶೇ 60ರಷ್ಟು ಭಾಗವನ್ನು ಎಸ್ಎಲ್ಡಬ್ಲ್ಯು ವ್ಯವಸ್ಥೆ ಮೂಲಕ ತಿಂಗಳಿಗೋ, ಮೂರು ತಿಂಗಳಿಗೂ, ಅರ್ಧ ವರ್ಷಕ್ಕೋ ಅಥವಾ ವರ್ಷಕ್ಕೊಮ್ಮೆಯೋ ನಿರ್ದಿಷ್ಟ ಮೊತ್ತವನ್ನು ತಮ್ಮ 75ನೇ ವಯಸ್ಸಿನವರೆಗೂ ಹಿಂಪಡೆಯಬಹುದಾಗಿದೆ.
ಏನಿದು ಸಿಸ್ಟಮ್ಯಾಟಿಕ್ ಲಂಪ್ಸನ್ ವಿತ್ಡ್ರಾಯಲ್ ಫೀಚರ್?
ಮ್ಯುಚುವಲ್ ಫಂಡ್ನಲ್ಲಿ ಸಿಸ್ಟಮ್ಯಾಟಿಕ್ ವಿತ್ಡ್ರಾಯಲ್ ಪ್ಲಾನ್ ಎಂಬುದನ್ನು ನೀವು ನೋಡಿರಬಹುದು. ಅದೇ ರೀತಿಯದ್ದು ಎನ್ಪಿಎಸ್ನ ಎಸ್ಎಲ್ಡಬ್ಲ್ಯು ಸೌಲಭ್ಯ. ತಮಗೆ ಬೇಕಾದ ಮೊತ್ತವನ್ನು ತಮಗೆ ಬೇಕಾದ ಅವಧಿಯಲ್ಲಿ ಹಿಂಪಡೆಯಬಹುದಾಗಿದೆ.
ಎನ್ಪಿಎಸ್ ಸ್ಕೀಮ್ನಲ್ಲಿ 60ನೇ ವಯಸ್ಸಿನವರೆಗೂ ನಾವು ನಿಧಿ ಕೂಡಿ ಹಾಕಬಹುದು. ಅದಾದ ಬಳಿಕ ಪಿಂಚಣಿ ಕ್ರಮಗಳು ಅನ್ವಯ ಆಗುತ್ತವೆ. 60 ವರ್ಷ ದಾಟಿದ ಬಳಿಕ ಸದಸ್ಯರು ತಮ್ಮ ನಿಧಿಯಲ್ಲಿರುವ ಶೇ. 40ರಷ್ಟು ಹಣವನ್ನು ಇನ್ಷೂರೆನ್ಸ್ ಸಂಸ್ಥೆಯೊಂದರಿಂದ ಪ್ರತ್ಯೇಕ ಪಿಂಚಣಿ ಸ್ಕೀಮ್ಗೆ ವಿನಿಯೋಗಿಸಬೇಕು. ಉಳಿದ ಹಣವನ್ನು ಹಿಂಪಡೆಯಬಹುದು. ಈಗ ಈ ಹಣ ಹಿಂಪಡೆಯಲು ಎಸ್ಎಲ್ಡಬ್ಲ್ಯು ವಿಧಾನವನ್ನು ಜಾರಿಗೆ ತರುವ ಪ್ರಸ್ತಾಪ ಇದೆ.
ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆ: ತಿಂಗಳಿಗೆ 1,000 ರೂ ಕಟ್ಟಿದರೆ ಎಷ್ಟು ರಿಟರ್ನ್ ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್
ಈ ಪ್ರಸ್ತಾಪ ಜಾರಿಯಾದರೆ ಎನ್ಪಿಎಸ್ ಸದಸ್ಯರಿಗೆ ನಿಯಮಿತವಾಗಿ ಎರಡು ಆದಾಯ ಹರಿದುಬರುತ್ತಿರುತ್ತದೆ. ಇನ್ಷೂರೆನ್ಸ್ ಪಿಂಚಣಿ ಸ್ಕೀಮ್ನಿಂದ ಪ್ರತೀ ತಿಂಗಳು ನಿರ್ದಿಷ್ಟ ಪೆನ್ಷನ್ ಸಿಗುತ್ತಿರುತ್ತದೆ. ಅದರ ಜೊತೆಗೆ ಎನ್ಪಿಎಸ್ನ ಶೇ. 60ರಷ್ಟು ನಿಧಿಯಿಂದ ನೀವು ಕಾಲಕಾಲಕ್ಕೆ ಹಿಂಪಡೆಯುವ ಹಣ ನಿಮಗೆ ಹಣಕಾಸು ಅಗತ್ಯತೆಗಳನ್ನು ಪೂರೈಸಲು ಸಾಧ್ಯವಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ