Digital Life Certificate: ಬದುಕಿದ್ದೀರೆಂದು ಖಾತ್ರಿಪಡಿಸಲು ಆನ್​ಲೈನ್​ನಲ್ಲೇ ಲೈಫ್ ಸರ್ಟಿಫಿಕೇಟ್ ಸಲ್ಲಿಸುವ ಸುಲಭ ಕ್ರಮಗಳು

Jeevan Pramaan Patra: ಪಿಂಚಣಿದಾರ ಜೀವಂತವಾಗಿರುವುದನ್ನು ಖಾತ್ರಿಪಡಿಸಲು ಅವರು ಪಿಂಚಣಿ ವಿತರಣೆ ಅಧಿಕಾರಿಯ ಮುಂದೆ ಹಾಜರಾಗಬೇಕು. ಪ್ರಮಾಣಪತ್ರವನ್ನು ಬ್ಯಾಂಕ್, ಅಂಚೆ ಕಚೇರಿ ಇತ್ಯಾದಿ ನಿಗದಿತ ಪೆನ್ಷನ್ ವಿತರಣೆ ಕಚೇರಿಗೆ ಹೋಗಬೇಕಾಗುತ್ತದೆ. ಇದನ್ನು ತಪ್ಪಿಸಲು ಸರ್ಕಾರ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೌಲಭ್ಯ ಜಾರಿಗೆ ತಂದಿದೆ. ಕಚೇರಿಗೆ ಹೋಗದೇ ಮನೆಯಲ್ಲೇ ಕೂತು ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದು.

Digital Life Certificate: ಬದುಕಿದ್ದೀರೆಂದು ಖಾತ್ರಿಪಡಿಸಲು ಆನ್​ಲೈನ್​ನಲ್ಲೇ ಲೈಫ್ ಸರ್ಟಿಫಿಕೇಟ್ ಸಲ್ಲಿಸುವ ಸುಲಭ ಕ್ರಮಗಳು
ಪಿಂಚಣಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 03, 2023 | 6:45 PM

ನಿವೃತ್ತ ಸರ್ಕಾರಿ ನೌಕರರಿಗೆ ಸಿಗುವ ಪಿಂಚಣಿ ಮುಂದುವರಿಯಬೇಕಾದರೆ ಪ್ರತೀ ವರ್ಷವೂ ಜೀವಂತ ಇರುವುದಾಗಿ (life certificate) ಖಾತ್ರಿಪಡಿಸಬೇಕು. ಲೈಫ್ ಸರ್ಟಿಫಿಕೇಟ್ (Jeevan Pramaanpatra) ಪ್ರತೀ ವರ್ಷವೂ ಸಲ್ಲಿಸಬೇಕು. ಇಲ್ಲದಿದ್ದರೆ ಪಿಂಚಣಿ ನಿಂತುಹೋಗುತ್ತದೆ. ಪ್ರತೀ ವರ್ಷದ ನವೆಂಬರ್​ನಲ್ಲಿ ಲೈಫ್ ಸರ್ಟಿಫಿಕೇಟ್ ಸಲ್ಲಿಸುವ ಅವಕಾಶ ಕೊಡಲಾಗುತ್ತದೆ. ನವೆಂಬರ್ 30ರವರೆಗೂ ಗಡುವು ಇದೆ. 60ರಿಂದ 80 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ನವೆಂಬರ್ 1ರಿಂದ 30ರವರೆಗೂ ಅವಕಾಶ ಇದೆ. 80 ವರ್ಷ ಮೇಲ್ಪಟ್ಟ ವಯಸ್ಸಿನ ಸೂಪರ್ ಸೀನಿಯರ್​ಗಳಿಗೆ ಅಕ್ಟೋಬರ್ 1ರಿಂದಲೇ ಅವಕಾಶ ನೀಡಲಾಗಿದೆ.

ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಸಾಂಪ್ರದಾಯಿಕ ವಿಧಾನ ಹೇಗಿದೆ?

ಪಿಂಚಣಿದಾರ ಜೀವಂತವಾಗಿರುವುದನ್ನು ಖಾತ್ರಿಪಡಿಸಲು ಅವರು ಪಿಂಚಣಿ ವಿತರಣೆ ಅಧಿಕಾರಿಯ ಮುಂದೆ ಹಾಜರಾಗಬೇಕು. ಪ್ರಮಾಣಪತ್ರವನ್ನು ಬ್ಯಾಂಕ್, ಅಂಚೆ ಕಚೇರಿ ಇತ್ಯಾದಿ ನಿಗದಿತ ಪೆನ್ಷನ್ ವಿತರಣೆ ಕಚೇರಿಗೆ ಹೋಗಬೇಕಾಗುತ್ತದೆ. ನಿವೃತ್ತರಾದ ವ್ಯಕ್ತಿಗಳಿಗೆ ಈ ಪ್ರಕ್ರಿಯೆ ತ್ರಾಸ ತರಬಹುದು. ಅದರಲ್ಲೂ 80 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಹೊರಗೆ ಹೋಗಿ ಸರದಿಯಲ್ಲಿ ನಿಂತು ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದು ನಿಜಕ್ಕೂ ಕಿರಿಕಿರಿಯ ಕೆಲಸ.

ಇದನ್ನು ತಪ್ಪಿಸಲು ಸರ್ಕಾರ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೌಲಭ್ಯ ಜಾರಿಗೆ ತಂದಿದೆ. ಕಚೇರಿಗೆ ಹೋಗದೇ ಮನೆಯಲ್ಲೇ ಕೂತು ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದು.

ಇದನ್ನೂ ಓದಿ: ಬ್ಯಾಂಕ್ ಸಾಲ ಸಿಗುತ್ತಿಲ್ಲವಾ? ಪರ್ಸನಲ್ ಲೋನ್​ಗಿಂತಲೂ ಕಡಿಮೆ ದರಕ್ಕೆ ನಿಮಗೆ ಸುಲಭವಾಗಿ ಸಿಗುತ್ತದೆ ಈ ಸಾಲ

ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವುದು ಹೇಗೆ?

  • ನಿಮ್ಮ ಬಳಿ 5ಎಂಪಿ ಫ್ರಂಟ್ ಕ್ಯಾಮರಾ ಇರುವ ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಮತ್ತು ಇಂಟರ್ನೆಟ್ ಇಟ್ಟುಕೊಳ್ಳಿ.
  • ನಿಮಗೆ ಪಿಂಚಣಿ ವಿತರಿಸುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್​ನಲ್ಲಿ ನೀಡಲಾದ ಆಧಾರ್ ನಂಬರ್ ಅನ್ನು ಇಟ್ಟುಕೊಂಡಿರಿ.
  • ಗೂಗಲ್ ಪ್ಲೇ ಸ್ಟೋರ್​ನಿಂದ ‘AadhaarFaceRD’ ಮತ್ತು ‘Jeevan Pramaan Face App’ ಈ ಆ್ಯಪ್​ಗಳನ್ನು ಡೌನ್​ಲೋಡ್ ಮಾಡಿ ಇನ್ಸ್​ಟಾಲ್ ಮಾಡಿ.
  • ಆ್ಯಪ್ ಓಪನ್ ಮಾಡಿ, ಆಪರೇಟರ್ ಅಥೆಂಟಿಕೇಶನ್ ನಡೆಸಿ. ಫೇಸ್ ಸ್ಕ್ಯಾನ್ ಮಾಡಿ.
  • ಬಳಿಕ ಪಿಂಚಣಿದಾರರ ವಿವರ ತುಂಬಿರಿ.
  • ಫ್ರಂಟ್ ಕ್ಯಾಮೆರಾದಿಂದ ಫೋಟೋ ಕ್ಲಿಕ್ಕಿಸಿ ಸಲ್ಲಿಸಿ.

ಈ ಪ್ರಕ್ರಿಯೆಗಳಾದ ಬಳಿಕ, ಜೀವನ್ ಪ್ರಮಾಣಪತ್ರವನ್ನು ಡೌನ್​ಲೋಡ್ ಮಾಡುವ ಲಿಂಕ್ ಸಮೇತ ಎಸ್ಸೆಮ್ಮೆಸ್ ನಿಮ್ಮ ಮೊಬೈಲ್ ನಂಬರ್​ಗೆ ಬರುತ್ತದೆ.

ಇದನ್ನೂ ಓದಿ: NPS: ನ್ಯಾಷನಲ್ ಪೆನ್ಷನ್ ಸ್ಕೀಮ್; ಹಣ ವಿತ್​ಡ್ರಾ ಮಾಡುವ ಕ್ರಮದಲ್ಲಿ ಬದಲಾವಣೆ? ಈ ಪ್ರಸ್ತಾಪ ಜಾರಿಯಾದರೆ ಪಿಂಚಣಿದಾರರಿಗೆ ಅನುಕೂಲ

ಬೆಂಗಳೂರಿನ ವಿವಿಧೆಡೆ ಜೀವ್ ಪ್ರಮಾಣ್ ವಿತರಣೆಗೆ ಕ್ಯಾಂಪ್​ಗಳು

ಕೇಂದ್ರ ಸರ್ಕಾರ ನವೆಂಬರ್ 1ರಿಂದ ದೇಶದ 10 ನಗರಗಳಲ್ಲಿನ 500 ಸ್ಥಳಗಳಲ್ಲಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಕ್ಯಾಂಪ್​ಗಳನ್ನು ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಎಸ್​ಬಿಐ ಮತ್ತು ಕೆನರಾ ಬ್ಯಾಂಕ್ ನೇತೃತ್ವದಲ್ಲಿ ಈ ಶಿಬಿರಗಳು ನಡೆಯುತ್ತಿವೆ.

ಎಸ್​ಬಿಐನಿಂದ ಬೆಂಗಳೂರಿನ ಇಸ್ರೋ, ಯಲಹಂಕ ನ್ಯೂ ಟೌನ್, ಏರ್ ಫೋರ್ಸ್ ಸ್ಟೇಶನ್ ಯಲಹಂಕ, ಹೆಸರಘಟ್ಟ ಇಲ್ಲಿ ಡಿಎಲ್​ಸಿ ಕ್ಯಾಂಪ್​ಗಳಿವೆ.

ಇನ್ನು, ಕೆನರಾ ಬ್ಯಾಂಕ್ ವಿಜಯನಗರ, ಬಸವೇಶ್ವರನಗರ, ಹನುಮಂತನಗರ, ಮಲ್ಲೇಶ್ವರ, ರಾಜಾಜಿನಗರ 2ನೇ ಬ್ಲಾಕ್ ಪ್ರದೇಶಗಳಲ್ಲಿ ಕ್ಯಾಂಪ್ ಹಾಕಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ